Monday, January 4, 2016

ರಿಕ್ಷಾ ಡಿಕ್ಕಿ; ಮಹಿಳೆಯರಿಬ್ಬರಿಗೆ ಗಾಯ
                     ರಿಕ್ಷಾವೊಂದು ಡಿಕ್ಕಿಯಾದ ಪರಿಣಾಮ ಪಾದಚಾರಿ ಮಹಿಳೆಯರಿಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರದ ಬ್ಲೂಮೂನ್‌ ಪೆಟ್ರೋಲ್‌ ಬಂಕ್‌ ಬಳಿ ನಡೆದಿದೆ. ದಿನಾಂಕ 1-1-2016 ರಂದು ಕುಶಾಲನಗರದ ಗಂಧದಕೋಠಿ ಬಳಿಯ ನಿವಾಸಿ ಸುಮಿತ್ರ ಹಾಗೂ ಪಕ್ಕದ ಮನೆಯಜಯಲಕ್ಷ್ಮೀ ಮತ್ತು ಕಮಲ ಎಂಬವರುಗಳು ನಡೆದುಕೊಂಡು ಹೋಗುತ್ತಿರುವಾಗ ಬ್ಲೂಮೂನ್‌  ಪೆಟ್ರೋಲ್ ಬಂಕ್ ಹತ್ತಿರ  ಗುಡ್ಡೆಹೊಸೂರು ಕಡೆಯಿಂದ ಒಂದು ಆಟೋ ರಿಕ್ಷಾವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸುಮಿತ್ರ ಹಾಗೂ ಜಯಲಕ್ಷ್ಮೀರವರಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ  ಪೊಲೀಸರು  ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಾನು ಡಿಕ್ಕಿ ; ಗಾಯ
                             ಮಾರುತಿ ವ್ಯಾನೊಂದು ಕೆಇಬಿ ಕಚೇರಿಯ ಗೇಟಿಗೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರಿಗೆ ಗಾಯಗಳಾದ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ. ದಿನಾಂಕ 03-12-2015 ರಂದು ಸಿದ್ಧಾಪುರ ನಗರದ ಕೆ.ಇ.ಬಿ. ಮುಂದಿನ ರಸ್ತೆಯಲ್ಲಿ ನೆಲ್ಲಿಹುದಿಕೇರಿ ನಿವಾಸಿ ಜಮಾಲ್‌ ಎಂಬವರ ಸಂಬಂಧಿಕರಾದ ಅಬ್ದುಲ್ ಕರೀಂ ಮತ್ತು  ಅಬ್ದುಲ್ಲಾ ಎಂಬುವವರೊಂದಿಗೆ ಕೆಎ 12 ಪಿ 7915 ರ ಮಾರುತಿ ಓಮಿನಿ ವ್ಯಾನಿನಲ್ಲಿ ಕ್ಯಾಲಿಕಟ್‌‌ನಿಂದ ಸಿದ್ಧಾಪುರಕ್ಕೆ ಬರುತ್ತಿರುವಾಗ ಅಬ್ದುಲ್ ಕರೀಂರವರು ಮಾರುತಿ ಓಮಿನಿ ವ್ಯಾನನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಿದ್ದಾಪುರದ ಕೆ.ಇ.ಬಿ. ಕಚೇರಿಯ ಮುಂಭಾಗದ ಗೇಟಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೇಟಿಗೆ ಜಖಂ ಉಂಟುಮಾಡಿದ್ದು, ಅಬ್ದುಲ್ಲ ಮತ್ತು ಅಬ್ದುಲ್‌ ಕರೀಂ ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ, ಓರ್ವನ ಬಂಧನ
                      ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ. ತಾವಳಗೇರಿ ಗ್ರಾಮದಲ್ಲಿ ನೂರೇರ ಮಿಥುನ್ ಎಂಬುವವನು ಆತನ ಮನೆಯ ಪಕ್ಕ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವಾಗುವಂತೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ದೊರೆತ ದೂರವಾಣಿ ಮಾಹಿತಿಯ ಮೇರೆಗೆ ದಿನಾಂಕ 03/01/2016ರಂದು ಶ್ರೀಮಂಗಲ ಪೊಲೀಸ್‌ ಉಪ ನಿರೀಕ್ಷಕರಾದ ಬಿ.ಎಸ್‌.ಶ್ರೀಧರ್‌ರವರು ಸಿಬ್ಬಂದಿಗಳೊಂದಿಗೆ ತಾವಳಗೇರಿ ಗ್ರಾಮದಲ್ಲಿರುವ ನೂರೇರ ಮಿಥುನ್‌ರವರ ಮನೆ ಹಿಂಬಾಗ ತಾವಳಗೇರಿಯಿಂದ ಬೆಳ್ಳೂರು ಗ್ರಾಮದ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಚ್ಚಾ ರಸ್ತೆಯಲ್ಲಿ ನೂರೇರ ಮಿಥುನ್‌ರವರು ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತಿದ್ದು ಈತನ ಪಕ್ಕ ಇನ್ನಿಭ್ಬರು ಕಾರ್ಮಿಕರು ಮದ್ಯವನ್ನು ಸೇವಿಸುತ್ತಿದ್ದುದನ್ನು ಕಂಡು ಸ್ಥಳಕ್ಕೆ ಧಾವಿಸಿ ಸರ್ಕಾರದ ರಹದಾರಿಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ನೂರೇರ ಮಿಥುನ್‌ರವರನ್ನು ಬಂಧಿಸಿ ರೂ.252 /- ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 
 
ಪಾದಚಾರಿಗೆ ರಿಕ್ಷಾ ಡಿಕ್ಕಿ
                ಪಾದಚಾರಿಯೊಬ್ಬರಿಗೆ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಭಾಗಮಂಡಲ ಬಳಿಯ ಪದಕಲ್ಲು ಎಂಬಲ್ಲಿ ನಡೆದಿದೆ. ದಿನಾಂಕ 03/01/2016ರಂದು ಪದಕಲ್ಲು ನಿವಾಸಿ ಮಂಜು ಎಂಬವರು ಅವರ ಮಗಳೊಂದಿಗೆ ಮನೆಯ ಪಕ್ಕದಲ್ಲಿರುವ ಹ್ಯಾರೀಸ್ ಎಂಬುವರ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ವಾಪಾಸು ಬರುತ್ತಿರುವಾಗ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ಹಿಂಬದಿಯಿಂದ ಬಂದ ಒಂದು ಸಂಖ್ಯೆ ಕೆಎ-12-ಎ-7782ರ ಟಾಟಾ ಮ್ಯಾಜಿಕ್  ಆಟೋವನ್ನು ಅದರ ಚಾಲಕ ನರೇಂದ್ರ ಎಂಬಾತನು ಅತೀ ವೇಗವಾಗಿ ಓಡಿಸಿಕೊಂಡು ಬಂದು ಮಂಜುರವರ ಮಗಳು ಜಿತಿಕಾಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಮಗಳು ಜಿತಿಕಾಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.