Saturday, January 16, 2016

ಬ್ಯಾಂಕ್‌ ಸಿಬ್ಬಂದಿಗಳಿಂದ ಹಣ ದುರುಪಯೋಗ
               ಬ್ಯಾಂಕ್‌ ಸಿಬ್ಬಂದಿಗಳು ಬ್ಯಾಂಕ್‌ ಚಲನ್‌ಗಳ ಮೂಲಕ ಹಣವನ್ನು ದುರುಪಯೋಗಪಡಿಸಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಅನಂತಮೂರ್ತಿ ಎಂಬವರು ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶಾಖೆಯಲ್ಲಿ  ಒಂದು ವರ್ಷದಿಂದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಕಳೆದ 2015 ನೇ ವರ್ಷದ ಕೊನೆಯ ತಿಂಗಳು ತಮ್ಮ ಬ್ಯಾಂಕಿನ ವ್ಯವಹಾರದ ರಿಜಿಸ್ಟರ್ ಮತ್ತು ಚೆಕ್ಕು ಮತ್ತು ಇತರ ವ್ಯವಹಾರದ ಪತ್ರಗಳನ್ನು ಪರಿಶೀಲಿಸಿ ನೋಡಿದಾಗ ಹಣದ ಲೆಕ್ಕದಲ್ಲಿ ರೂ. 7,77,886 ಗಳಷ್ಟು ವ್ಯತ್ಯಾಸವಾಗಿದ್ದು, ತಮ್ಮ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗಳು ಬ್ಯಾಂಕ್ ನ ಚಲನ್ ಗಳನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿ ಮಹಿಳೆಗೆ ಮೋಟಾರು ಬೈಕ್‌ ಡಿಕ್ಕಿ
                   ಪಾದಚಾರಿಗೆ ಮೋಟಾರು ಬೈಕ್‌ ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 14-1-2016 ರಂದು ವಿರಾಜಪೇಟೆಯ ವಿಜಯನಗರ ನಿವಾಸಿ ಎಂ.ಎಸ್‌.ಸಿರಿನ್‌ ಎಂಬವರು ವಿರಾಜಪೇಟೆ ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸು ಮನೆಗೆ ಹೋಗಲೆಂದು ವಿರಾಜಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದ ಮುಂಭಾಗದ ನೀಲಿಮಾ ಸ್ಟೋರ್ ಮುಂದೆ ಸಾರ್ವಜನಿಕರ ರಸ್ತೆಯನ್ನು ಅಡ್ಡ ದಾಟುತ್ತಿರುವಾಗ, ರಸ್ತೆಯ ಮೇಲ್ಭಾಗದ ಕಡೆಯಿಂದ ಮೋಟಾರು ಸೈಕಲ್ ನಂಬರ್ ಕೆಎ-27-ಹೆಚ್.-1829 ರ ಚಾಲಕ ವಿಜು ಎಂಬಾತನು ಮೋಟಾರು ಸೈಕಲನ್ನು ಅತೀ ವೇಗದಿಂದ ಓಡಿಸಿಕೊಂಡು ಬಂದು ಸಿರಿನ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಟಿವಿ ವಾಹಿನಿಯ ಅನಧಿಕೃತ ಪ್ರಸಾರ
                 ಅನಧಿಕೃತವಾಗಿ ಟಿ.ವಿ.ವಾಹಿನಿಯ ಪ್ರಸಾರ ಮಾಡುತ್ತಿದ್ದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.ಸಿದ್ದಾಪುರ ವಿಭಾಗದಲ್ಲಿ  ಕೊಡಗು ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯು ದಿನಾಂಕ 01/04/2015ರಿಂದ ಝೀ ವಾಹಿನಿಯ 26 ಚಾನಲ್‌ಗಳು ಮತ್ತು ಇತರೆ 4 ಸ್ಥಳೀಯ ಚಾನಲ್‌ಗಳನ್ನು ಝೀ ವಾಹಿನಿಯ ಪ್ರಸಾರದ ಹಕ್ಕನ್ನು ಹೊಂದಿರುವ ತಾಜ್‌ ಟೆಲಿವಿಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಯಾವುದೇ ಸಂಭಾವನೆಯನ್ನು ಪಾವತಿಸದೆ ಅನಧಿಕೃತವಾಗಿ ಪ್ರಸಾರ ಮಾಡುತ್ತಿರುವುದಾಗಿ ಸಂಸ್ಥೆಯ ಅಧೀಕಾರಿ ಮುಂಬೈನ ಉಪೇಂದ್ರ ನಮೋಡಿ ಜಲ್ಗಾವಕರ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಕೊಡಗು ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಸಂಸ್ಥೆಯ ದೀಪಕ್‌ ದೇವಯ್ಯ ಎಂಬವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಸಾಗಿಸದೆ ಮೋಸ
                  ಒಪ್ಪಂದಂತೆ ಕಾಫಿ ಸಾಗಿಸದೆ ಮೋಸ ಮಾಡಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಲಕ್ಷ್ಮೀಕಾಂತ್‌ ಎಂಬವರು ಕಾಫಿ ಸಪ್ಲೈ ಎಂಜೆಂಟ್‌ ಆಗಿ ಕೆಲಸ ಮಾಡುತ್ತಿದ್ದು, ತಮಿಳು ನಾಡಿನ ಹೊಸೂರಿಗೆ 10,000 ಕೆ.ಜಿ ರೋಬಸ್ಟಾ ಚೆರಿ ಕಾಫಿಯನ್ನು ಸಾಗಾಟ ಮಾಡುವ ಬಗ್ಗೆ ಮೈಸೂರಿನ ಮುರಳಿ ಅಂಡ್‌ ಕೋ ಸಂಸ್ಥೆಯ ಅಧಿಕಾರಿಗಳಾದ ನಂದಗೋಪಾಲ್‌ ಎಂಬವರೊಡನೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ದಿನಾಂಕ 01/01/2016ರಂದು ಕುಶಾಲನಗರದ ಕೂಡ್ಲೂರುವಿನ ರಾಯಲ್‌ ಟ್ರೇಡರ್ಸ್‌ ಸಂಸ್ಥೆಯ ವತಿಯಿಂದ ಕಾಫಿಯನ್ನು ಹೊಸೂರಿಗೆ ಕಳುಹಿಸಿಕೊಟ್ಟಿದ್ದು ದಿನಾಂಕ 07/01/2016ರ ವರೆಗೂ ಲಾರಿ ಹೊಸೂರು ತಲುಪದ ಕಾರಣ ಮುರಳಿ ಅಂಡ್‌ ಕೋ ಸಂಸ್ಥೆಯ ನಂದಗೋಪಾಲ್‌ ಮತ್ತು ಶಿವಣ್ಣರವರನ್ನು ವಿಚಾರಿಸಿದಾಗ ಅವರು ಲಾರಿ ಹಾನಿಗೊಳಗಾಗಿದ್ದು ತಡವಾಗಿ ಲಾರಿ ತಲುಪಬಹುದೆಂದು ತಿಳಿಸಿದ್ದು ದಿನಾಂಕ 14/01/2016 ಕಳೆದರೂ ಕಾಫಿ ತಲುಪದ ಕಾರಣ ನಂದಗೋಪಾಲ್‌ ಮತ್ತು ಶಿವಣ್ಣರವರ ಮೇಲೆ ದೂರು ನೀಡಿದ್ದು ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಡಿಕ್ಕಿ, ಸವಾರ ಸಾವು 
              ಪಾದಚಾರಿಗೆ ಬೈಕೊಂದು ಡಿಕ್ಕಿಯಾಗಿ ಬೈಕ್‌ ಸವಾರ ಸಾವಿಗೀಡಾದ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 14/1/16 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಜಕ್ರಿಯಾ ಎಂಬವರು ಕುಶಾಲನಗರದ ರೈತ ಭವನದ ರಸ್ತೆಯಲ್ಲಿರುವ ತನ್ನ ಕಛೇರಿಯಿಂದ ಇಂದಿರಾ ಬಡಾವಣೆಯಲ್ಲಿರುವ ಮನೆಗೆ ಹೋಗುತ್ತಿರುವಾಗ ಕುಶಾಲನಗರದ ಕಾಳೇಘಾಟ್ ಹೊಟೇಲ್ ಮುಂಭಾಗದ ಬಿ.ಎಂ.ರಸ್ತೆಯಲ್ಲಿ ಬೈಚನಳ್ಳಿ ಕಡೆಯಿಂದ ಕೆಎ-12-ಜೆ-9227ರ ಮೋಟಾರ್ ಸೈಕಲೊಂದನ್ನು ಅದರ ಸವಾರ ರವಿ ಎಂಬಾತನು ಅತಿವೇಗದಿಂದ ಚಾಲಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ವ್ಯಕ್ತಿಯ ಹಿಂಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯಾದ ರಭಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕಾಲಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದು ಹೋಗಿದ್ದು, ಬೈಕ್ ಸವಾರ ರವಿ ಸಹ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು ಜಕ್ರಿಯಾ ಮತ್ತು ಇತರರು ಸೇರಿ  ಬೈಕ್ ಸವಾರ ರವಿ ಮತ್ತು ಬೈಕ್ ಡಿಕ್ಕಿಯಾದ ವ್ಯಕ್ತಿಯನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಾಗ ವೈದ್ಯರು ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ರವಿಯು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿನೀಡಿದದೂರಿನಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.