Wednesday, January 20, 2016

ಅಪ್ರಾಪ್ತ ಹುಡುಗ ಕಾಣೆ, ಅಪಹರಣ ಶಂಕೆ:
     ಶಾಲೆಗೆ ಹೋದ ಅಪ್ರಾಪ್ತ ಹುಡುಗ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಡೆದಿದೆ. ಅಮ್ಮತ್ತಿ ನಗರದ ನಿವಾಸಿ ಫಿರ್ಯಾದಿ ಬ್ರಿಜಿಟ್ ರೀಟಾ ಎಂಬವರ ಮಗ ಪ್ರಾಯ 10 ವರ್ಷದ ಸ್ಕೇಶಿತ್ ಎಂಬುವವರು ಅಮ್ಮತ್ತಿಯ ಪ್ರೌಢ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಾಂಗ ಮಾಡಿಕೊಂಡಿದ್ದು, ದಿನಾಂಕ 18-01-16 ರಂದು ಬೆಳಿಗ್ಗೆ ಸಮಯ 9-00ಗಂಟೆಗೆ ಶಾಲೆಗೆ ಹೋಗಿದ್ದು, ಸಂಜೆ 5-00 ಗಂಟೆ ಯಾದರೂ ವಾಪಾಸ್ಸು ಮನೆಗೆ ಬಾರದೆ, ಪಿರ್ಯಾದಿಯವರು ಆತನನ್ನು ಅಕ್ಕಪಕ್ಕದಲ್ಲಿ, ನೆಂಟರಿಷ್ಟರಲ್ಲಿ ಎಲ್ಲಾ ಕಡೆ ಹುಡು ಕಾಡಿದಲ್ಲು ಪತ್ತೆಯಾಗದೇ ಇದ್ದು ಸ್ನೇಶಿತ್ ನನ್ನು ಯಾರೋ ಅಪಹರಣ ಮಾಡಿರುವ ಸಂಶಯವಿರುವುದಾಗಿ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ಹೊಗೆ ಸೊಪ್ಪಿನ ಮನೆಯ ಖಾತೆಯನ್ನು ಬದಲಾಯಿಸಿ ವಂಚನೆ:

    ಕುಶಾಲನಗರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದ ನಿವಾಸಿ ಪಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರ ಸ್ವಾದೀನದಲ್ಲಿರುವ ಹೊಗೆ ಸೊಪ್ಪಿನ ಬ್ಯಾರಲ್ ಮನೆಯನ್ನು ಅವರ ಅಣ್ಣನಾದ ಎಸ್.ಎ.ಚನ್ನರಾಜಪ್ಪವರು ಕಳೆದು ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಕುಮಾರ್ ರವರ ಸಹಾಯದಿಂದ ಫಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರ ಪಾಲಿನ ಅರ್ಧ ಬಾಗ ಹೊಗೆಸೊಪ್ಪಿನ ಮನೆಯನ್ನು ಒಳಗೊಂಡಂತೆ ನಕಲಿ ದಾಖಲೆ ಸೃಷ್ಠಿಸಿ ಹೊಗೆ ಸೊಪ್ಪಿನ ಮನೆಯನ್ನು ಚನ್ನರಾಜಪ್ಪನವರ ಮಗಳಾದ ಪೊನ್ನಮ್ಮ.ಎಸ್.ಸಿ ರವರಿಗೆ ಖಾತೆ ಮಾಡಿಸಿ ಕೊಟ್ಟು ವಂಚಿಸಿರುತ್ತಾರೆಂದು ಫಿರ್ಯಾದಿ ಎಸ್. ಎ. ಕೃಷ್ಣಪ್ಪ, ನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:

    ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಮಂಗಲ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದ ನಿವಾಸಿ ಮಾಚಿಮಾಡ ಸುರೇಶ ಎಂಬವರು ತಮ್ಮ ಮನೆಯ ಮುಂದುಗಡೆ ಅಕ್ರಮವಾಗಿ ಮದ್ಯವನ್ನು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ದಾಳಿ ನಡೆಸಿ ಆರೋಪಿ ಮಾಚಿಮಾಡ ಸುರೇಶರವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಟೆಂಪೋ ಟ್ರಾವ್ಲರ್ ಗೆ ಕಾರು ಡಿಕ್ಕಿ, ಪ್ರಕರಣ ದಾಖಲು:

    ಕಾರು ಮತ್ತು ಟೆಂಪೋ ಟ್ರಾವ್ಲರ್ ನಡುವೆ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಮೈಲಿನ ಕೆದಕಲ್ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರುವಿನಂದ ಪ್ರಭು ಎಂಬವರು ತಮ್ಮ ವಾಹನ ಸಂಖ್ಯೆ ಟಿ.ಎನ್ 50 ಎಫ್ 5934 ರ ಟೆಂಪೋ ಟ್ರಾವಲಸ್ ನಲ್ಲಿ ದಿನಾಂಕ 19.01.2016 ರಂದು ಸಮಯ 04.30 ಗಂ<ಟೆಗೆ ಕುಶಾಲನಗರದ ಗೊಲ್ಡನ್ ಟೆಂಪಲ್ನಿಂದ ಮಡಿಕೇರಿಗೆ ಹೋಗುತ್ತಿದ್ದಾಗ ಸುಂಟಿಕೊಪ್ಪದ 7ನೇ ಮೇಲಿಗೆ ತಲುಪುವಾಗ್ಯೇ ಎದುರುಕಡೆಯಿಂದ ಬಂದು ಕಾರು ನಂ ಕೆಎ 04 ಎಂ.ಹೆಚ್ 4370 ರ ಕಾರಿನ ಚಾಲಕನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಭುರವರು ಚಾಲಯಿಸುತ್ತೀದ ವಾಹನಕ್ಕೆ ಡಿಕ್ಕಿಪಡಿಸಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕತ್ತಿಯಿಂದ ಹಲ್ಲೆನಡೆಸಿ ಮಹಿಳೆ ಕೊಲೆ:

    ದಿನಾಂಕ 19-1-20125 ರಂದು ಕುಶಾಲನಗರ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಕವಿತಾ ರವರೊಂದಿಗೆ ಜಾನ್ಸನ್ ಹಾಗೂ ಜಗ ಎಂಬವರು ತಮ್ಮ ಮನೆಯ ಹಿಂಬಾಗದ ಅವರ ಹೊಲದಲ್ಲಿ ಗಲಾಟೆ ಮಾಡಿಕೊಂಡು ಜಗನು ಕವಿತಾಳನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು ಜಾನ್ಸನ್ ಯಾನೆ ಜಾನಿ ತನ್ನ ಅಕ್ರಮ ಸಂಬಂದಕ್ಕೆ ಕವಿತಾ ಅಡ್ಡಿಪಡಿಸುತಿದ್ದ ವಿಚಾರದಲ್ಲಿ ಸದರಿ ಕವಿತಾಳನ್ನು ಕೊಲೆ ಮಾಡಿರುತ್ತಾರೆಂದು ಗುಮ್ಮನಕೊಲ್ಲಿ ನಿವಶಿ ರಾಜೀವ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ:

    ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ನಗರದ ನಿವಾಸಿ ರಾಜು ಎಂಬವರ ಪತ್ನಿ ಪಾರ್ವತಿ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-1-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಮಾರಿ ಆರ್. ತುಳಸಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.