Friday, January 22, 2016

ವರದಕ್ಷಿಣೆ ಕಿರುಕುಳ ಪತಿ ವಿರುದ್ಧ ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ತಾವಳಗೇರಿ ಗ್ರಾಮದ ಟಿ.ಶೆಟ್ಟಿಗೇರಿಯಲ್ಲಿ ನಡೆದಿದೆ. ತಾವಳಗೇರಿ ಗ್ರಾಮದ ನಿವಾಸಿ ಶ್ರೀಮತಿ ಸೋನಿ ಎಂಬವರು ದಿನಾಂಕ 15/12/2009 ರಂದು ಕುಟುಂಬದವರ ಒಪ್ಪಿಗೆಯಂತೆ ಸಂಪ್ರದಾಯ ಬದ್ದವಾಗಿ ತಾವಳಗೇರಿ ಗ್ರಾಮದ ಮುರಗೇಶ ಎಂಬುವವರನ್ನು ವಿವಾಹವಾಗಿದ್ದು ವಿವಾಹವಾದ 6 ತಿಂಗಳ ನಂತರ ಶ್ರೀಮತಿ ಸೋನಿಗೆ ಗಂಡ ಮುರುಗೇಶ ಮದ್ಯ ಕುಡಿದು ವಿನಾಕಾರಣ ಜಗಳ ಮಾಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿ ಹಣ ನೀಡುವಂತೆ ಪೀಡಿಸುತ್ತಿದ್ದು ಆಕೆಯ ಚಿನ್ನಾಭರಣಗಳನ್ನು ಕಿತ್ತೊಯ್ದು ಕೆಲವನ್ನು ಮಾರಿ ಕೆಲವನ್ನು ಬ್ಯಾಂಕಿನಲ್ಲಿ ಅಡವಿಟ್ಟಿದ್ದು, ಅಲ್ಲದೇ ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಪದೇ,ಪದೇ ಹಲ್ಲೆ ನಡೆಸಿ ಶ್ರೀಮತಿ ಸೋನಿರವರ ತವರು ಮನೆಗೆ ಕಳುಹಿಸುತ್ತಿದ್ದು, ದಿನಾಂಕ 14/02/2015 ರಂದು ಸದರಿ ಮುರಗೇಶ ಏಕಾಏಕಿ ಪತ್ನಿ ಸೋನಿಯನ್ನು ಕೊಲ್ಲಲ್ಲು ಪ್ರಯತ್ನಿಸಿದ್ದು ನಂತರ ಆಕೆ ತನ್ನ ರವರು ಮನೆಯಲ್ಲಿ ಆಶ್ರಯ ಪಡಿಡೆದುಕೊಂಡಿದ್ದು, ಅಲ್ಲಿಗೂ ಸಹ ಮುರಗೇಶ ಬಂದು ಅವಾಚ್ಯ ಶಬ್ದಗಳಿಂದ ಬೈದು ಹಣ ತರುವಂತೆ ಸೂಚಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಿಲ್ಲಿಸಿದ್ದ ಕಾರಿನ ಟಯರ್ಗಳ ಕಳ್ಳತನ:

     ವ್ಯಕ್ತಿಯೊಬ್ಬರು ತಮ್ಮ ಮನೆಯ ಹತ್ತಿರ ನಿಲ್ಲಿಸಿದ ಕಾರಿನ ಚಕ್ರಗಳನ್ನು ಕಳ್ಳರು ಕಳವುಮಾಡಿದ ಘಟನೆ ಕುಶಾಲನಗರದ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ನಿವಾಸಿ ಎನ್. ಕೆ. ಚಂದ್ರಶೇಖರ ಎಂಬವರು ದಿನಾಂಕ 18-1-2016 ರಂದು ಸಮಯ 10-00 ಪಿ.ಎಂಗೆ ತಮ್ಮ ಬಾಪ್ತು ಮಾರುತಿ ಸುಜುಕಿ ಸ್ವಿಪ್ಟ್ ಕಾರು ನಂ ಕೆಎ 03 ಎಂ 7599 ಕಾರನ್ನು ತಮ್ಮ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ 19-1-2016 ರಂದು ಸಮಯ 07-00 ಎ.ಎಂಗೆ ನೋಡಲಾಗಿ ಅಂದಾಜು ಮೌಲ್ಯ 20,000/- ಬೆಲೆಬಾಳುವ ಕಾರಿನ ನಾಲ್ಕು ಚಕ್ರಗಳನ್ನು ಯಾರೋ ಕಳ್ಳರು ಮ್ಯಾಗ್ ವೀಲ್ ಡಿಸ್ಕ್ ಸಮೇತ ಕಳ್ಳತನ ಮಾಡಿಕೊಂಡು ಹೋಗಿದ್ದು, ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಯಿಂದ ಸಿದ್ದಾಪುರ ಪೊಲೀಸರು ಲಾರಿಯನ್ನು ಜಪ್ತಿ ಮಾಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಿನ ದಿನಾಂಕ 22-1-2016 ರಂದು ಬೆಳಗಿನ ಜಾವ 6-00 ಗಂಟೆಯ ಸಮಯದಲ್ಲಿ ಗೋಣಿಕೊಪ್ಪದ ಚೆನ್ನಂಗೊಲ್ಲಿ ಪೈಸಾರಿ ನಿವಾಸಿ ಅನುಕುಮಾರ್ ಎಂಬವರು ತಮ್ಮ ಬಾಪ್ಸು ನಂ.ಕೆ.ಎಲ್. 17 ಡಿ 7230 ರ ಸ್ವರಾಜ್ ಮಜ್ದಾ ವಾಹನದಲ್ಲಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಗಿ ಇಲ್ಲದೇ ಮರಳನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ಸಿದ್ದಾಪುರ ಠಾಣಾ ಪಿ.ಎಸ್. ಐ ರವರಾದ ಬಿ.ಜಿ. ಕುಮಾರ್ ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ವಾಹನ ಹಾಗೂ ಆರೋಪಿಗಳಾದ ಅನುಕುಮಾರ್ ಮತ್ತು ರೋಷನ್ ರವರನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿರುತ್ತಾರೆ.