Saturday, January 23, 2016

ಅಕ್ರಮ ಕರ್ಪಚಕ್ಕೆ ದಾಸ್ತಾನು, ಪ್ರಕರಣ ದಾಖಲು:

      ಅಕ್ರಮವಾಗಿ ದಾಸ್ತಾನಿಟ್ಟಿದ್ದ ಕರ್ಪಚಕ್ಕೆಯನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಕಳಕೂರು ಗ್ರಾಮದ ಬಿರುಣಾಣಿ ಎಂಬಲ್ಲಿ ನಾಪೋಕ್ಲು , ಚೆರಿಯಪರಂಬು ನಿವಾಸಿ ಕೆ.ಎ. ಹಂಸ ಹಾಗು ಬಿರುನಾಣಿ ಗ್ರಾಮದ ನಿವಾಸಿ ಗುಡ್ಡಮಾಡ ಸುಧಿ @ ಸೋಮಯ್ಯ ರವರುಗಳು ಅಕ್ರಮವಾಗಿ ಚಕ್ಕೆ ಮರದಿಂದ ಸುಮಾರು 30 ಚೀಲದಲ್ಲಿ ಕರ್ಪಚಕ್ಕೆಯನ್ನು ತುಂಬಿಸಿ ದಾಸ್ತಾನು ಇಟ್ಟಿದ್ದನ್ನು ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ. ಸಿ.ಎನ್. ದಿವಾಕರ್ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ, ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಜೂಜು, ಪ್ರಕರಣ ದಾಖಲು:

     ಅಕ್ರಮ ಜೂಜು ಅಡ್ಡಮೇಲೆ ದಾಳಿ ಮಾಡಿದ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣದ ದಾಖಲಿಸಿದ್ದಾರೆ. ದಿನಾಂಕ 22-01-2016 ರಂದು ಸಮಯ 20.00 ಗಂಟೆಗೆ ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿರುವ ಮೂಕಾಂಬಿಕ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ವ್ಯಕ್ತಿಗಳಾದ ವಿ.ಜಿ. ಸತೀಶ, ತೇಜಸ್, ಪಿ. ಗಣೇಶ, ಹೆಚ್. ಎಸ್. ಕುಮಾರ ಪಿ. ರವಿಕುಮಾರ್, ಎಸ್.ಟಿ. ರೆಹಮಾನ್, ಮತ್ತು ಕೆ. ಆದರ್ಶ ಎಂಬವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶ್ರೀ ಎಂ.ಎಂ. ಭರತ್ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಜೂಜಾಟಕ್ಕೆ ಬಳಲಿಸಿದ ರೂ.5400-00 ಗಳನ್ನು ಹಾಗು 7 ಮೊಬೈಲ್ ಫೋನ್ ಉಪಕರಣಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.