Sunday, January 24, 2016

ಆಟೋರಿಕ್ಷಾಕ್ಕೆ ಲಾರಿ ಡಿಕ್ಕಿ ಇಬ್ಬರಿಗೆ ಗಾಯ:
     ಆಟೋ ರಿಕ್ಷಾಕ್ಕೆ ಲಾರಿಯೊಂದು ಡಿಕ್ಕಿಯಾಗಿ ರಿಕ್ಷಾ ಚಾಲಕ ಹಾಗು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಕೊಡ್ಲಿಪೇಟೆ ಯಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಕಲ್ಲಳ್ಳಿ ಗ್ರಾಮದ ನಿವಾಸಿ ಆಟೋ ಚಾಲಕ ಕೆ.ಜೆ. ಹರೀಶ ಎಂಬವರು ದಿನಾಂಕ 23-01-2016 ರಂದು ಸಮಯ ಮಧ್ಯಾಹ್ನ 12:00 ಗಂಟೆಗೆ ತನ್ನ ಬಾಪ್ತು ಆಟೋ ನಂ ಕೆಎ-12-ಎ-8410 ರಲ್ಲಿ ಶಾಂತಪುರ ಗ್ರಾಮದ ನಿವಾಸಿ ಸವಿತಾ ಹಾಗು ಆಕೆಯ ಮಗಳು ಜ್ಯೋತಿ ಮತ್ತು ಚಿಕ್ಕ ಮಗುವಿನೊಂದಿಗೆ ಕೊಡ್ಲೀಪೇಟೆ ಕಡೆಗೆ ಹೋಗುತ್ತಿದ್ದಾಗ ಕೊಡ್ಲಿಪೇಟೆ ಸಾರ್ವಜನಿಕ ರಸ್ತೆಯಲ್ಲಿ ಮಧು, ಲಾರಿ ನಂ ಕೆಎ-46-855 ರ ಚಾಲಕ ಸದರಿ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆಟೋರಿಕ್ಷಾಗೆ ಡಿಕ್ಕಿಪಡಿಸಿದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂಗೊಂಡಿಲ್ಲದೆ ಆಟೋ ಚಾಲಕ ಕೆಳಗೆ ಬಿದ್ದು ಆಟೋದಲ್ಲದ್ದ ಸವಿತ ರವರಿಗೆ ಸೊಂಟ ಮತ್ತು ಬೆನ್ನು ಕುತ್ತಿಗೆ ಬಾಗಕ್ಕೆ ಗಾಯ ಉಂಟಾಗಿ ಹಾಗೆ ಜ್ಯೋತಿ ರವರಿಗೆ ಶರೀರದ ಭಾಗಕ್ಕೆ ನೋವುಂಟಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಕಿ ಹಣದ ವಿಚಾರದಲ್ಲಿ ಜಗಳ, ವ್ಯಕ್ತಿಯಿಂದ ಗಂಡ-ಹೆಂಡತಿ ಮೇಲೆ ಹಲ್ಲೆ:
ಹೊಟೇಲ್ ನಡೆಸುತ್ತಿದ್ದ ದಂಪತಿ ಮೇಲೆ ಬಾಕಿ ಹಣ ಕೇಳಿದ ವಿಚಾರದಲ್ಲಿ ವ್ಯಕ್ತಿಯೋರ್ವ ಅವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಶನಿವಾರಸಂತೆ ಠಾಣಾ ಸರದಹ್ದಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದಲ್ಲಿ ಶ್ರೀಮತಿ ಕವಿತಾ ಹಾಗು ಆಕೆಯ ಪತಿ ಜಗದೀಶ ರವರು ದಿನಾಂಕ 23-01-2016 ರಂದು ತಮ್ಮ ಹೊಟೇಲ್ ನಲ್ಲಿದ್ದಾಗ ಅದೇ ಗ್ರಾಮದ ಲೋಕೇಶ ಎಂಬ ವ್ಯಕ್ತಿ ಅಲ್ಲಿಗೆ ಬಂದ್ದಿದ್ದು ಆತನು ನೀಡಬೇಕಾದ ಹಳೇ ಬಾಕಿ ಹಣವನ್ನು ಕೊಡುವಂತೆ ಕವಿತಾರವರು ಕೇಳಿದ ಕಾರಣಕ್ಕೆ ಲೋಕೇಶ ಕೋಪಗೊಂಡು ಕವಿತಾರವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕವಿತಾರವರ ಪತಿ ಜಗದೀಶರವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ರಿಕ್ಷಾ – ಕಾರು ನಡುವೆ ಅಪಘಾತ, ಚಾಲಕರು ಸಹಿತ ಇಬ್ಬರು ಮಕ್ಕಳಿಗೆ ಗಾಯ: 

    ರಿಕ್ಷಾವನ್ನು ತಿರುವು ಪಡೆದುಕೊಳ್ಳುವ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಆಲ್ಟೋ ಕಾರಿಗೆ ಅಪ್ಪಳಿಸಿ ಚಾಲಕರಿಬ್ಬರು ಮತ್ತು ಮಕ್ಕಳಿಬ್ಬರು ಗಾಯಗೊಂಡ ಘಟನೆ ಕುಶಾಲನಗರದ ನಿಸರ್ಗಧಾಮ ಬಳಿ ನಡೆದಿದೆ. ದಿನಾಂಕ 23-1-2016 ರಂದು ಕುಶಾಲನಗರದ ಶಕ್ತಿ ಬಡಾವಣೆ ನಿವಾಸಿ ಎಂ.ಎಸ್. ದಿನೇಶ ಎಂಬವರು ತಮ್ಮ ಆಲ್ಟೋ ಕಾರಿನಲ್ಲಿ ತಮ್ಮ ಚಿಕ್ಕ ಮಕ್ಕಳೊಂದಿಗೆ ಕುಶಾಲನಗರದ ನಿಸರ್ಗಧಾಮದ ಕಡೆಗೆ ಹೊಗುತ್ತಿದ್ದಾಗ ನಿಸರ್ಗಧಾಮದ ಬಳಿ ತಲುಪುವಾಗ್ಗೆ ಆಟೋ ರಿಕ್ಷಾ ನಂ ಕೆ ಎ 12 ಬಿ 1602 ಎ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ತಕ್ಷಣದಲ್ಲಿ ಅಜಾಗರುಕತೆಯಿಂದ ರಸ್ತೆಯ ಎಡಬದಿಯಿಂದ ರಸ್ತೆಯ ಮಧ್ಯಭಾಗಕ್ಕೆ ತಿರುವ ಪಡೆದುಕೊಳ್ಳುವ ಸಲುವಾಗಿ ಬಂದು ಎಂ.ಎಸ್. ದಿನೇಶಯವರ ಆಲ್ಟೋ ಕಾರಿಗೆ ಅಪ್ಪಳಿಸಿದ್ದು , ಪರಿಣಾಮ ವಾಹನವು ತೀವ್ರವಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ದಿನೇಶ ಹಾಗು ಮಕ್ಕಳಾದ ಚಿರಂತನ ರಾವ್ ಮತ್ತು ಪ್ರಣೀತಾ ರಾವ್ ರವರಿಗೂ ಗಾಯನೋವಾಗಿದ್ದು ಮತ್ತು ಆಟೋ ಚಾಲಕ ರಾಯಪ್ಪನವರಿಗೂ ಗಾಯಗಳಾಗಿದ್ದು ಸದರಿಯವರುಗಳು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು , ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.