Monday, January 25, 2016

ಹಳೆ ದ್ವೇಷ ವ್ಯಕ್ತಿ ಮೇಲೆ ಹಲ್ಲೆ: 

     ಹೊಡೆದಾಟದ ಕೇಸಿನಲ್ಲಿ ಆರೋಪಿತರ ವಿರುದ್ದ ವ್ಯಕ್ತಿಯೊಬ್ಬರು ಸಾಕ್ಷಿ ನೀಡಿದ ವಿಚಾರದಲ್ಲಿ ದ್ವೇಷ ಇಟ್ಟುಕೊಂಡು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. , ದಿನಾಂಕ 24.01.2016 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಈರಣ್ಣ ಕಾಲೋನಿಯಲ್ಲಿ ಸಮಯ 20.30 ಗಂಟೆಗೆ ಆರೋಪಿಗಳಾದ ಸತೀಶ್ ಮತ್ತು ಅಯ್ಯಪ್ಪ ನವರು ಕೆ 12 ಬಿ-0511 ಆಟೋ ರಿಕ್ಷಾದಲ್ಲಿ ಬಂದು, ವಿರಾಜಪೇಟೆ ತಾಲೂಕು ತುಚಮಕೇರಿ ನಿವಾಸಿ ಪಿರ್ಯಾದಿ ಪಿ.ಜಿ. ಪೆಮ್ಮಯ್ಯ ರವರು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿ, ಹೊಡೆದಾಟ ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಚಿ ನುಡಿದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದ ಮೇಲೆ ಸಾಲ ಪಡೆದು ವಂಚನೆ:

     ದಿನಾಂಕ 16-01-2016ರ ಹಿಂದಿನ ದಿನಗಳಲ್ಲಿ ರಂದು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಾಲ್ಕೇರಿ ಗ್ರಾಮದ ವಿ.ವಿ. ಸುನಂದ, ವಿ.ವಿ. ಮಂಜುಳ, ಕೆ.ಆರ್. ಮೋಹನ್ ವಿ.ವಿ. ವಂದನ ಮತ್ತು ಯತೀರಾಜ್ ರವರು ಮಡಿಕೇರಿ ನಗರದ ಬ್ರಾಹ್ಮಣಬೀದಿ ನಿವಾಸಿ ಶಂಕರ್ ರಾವ್ ರವರಿಗೆ ಸೇರಿದ ನಾಲ್ಕೇರಿ ಗ್ರಾಮದಲ್ಲಿರುವ 7-00 ಏಕ್ರೆ ಕಾಫಿ ತೋಟದ ಮೇಲೆ ಶಂಕರ್ ರಾವ್ ರವರ ಗಮನಕ್ಕೆ ತಾರದೇ ಶ್ರೀಮಂಗಲದ ಪಿಎಸಿಸಿ ಸೊಸೈಟಿ ಲಿ. ಬ್ಯಾಂಕ್ ನಿಂದ ರೂ 1,13,000 ಹಣವನ್ನು ಸಾಲ ಪಡೆದಿದ್ದು. ಇದಕ್ಕೆ ಬ್ಯಾಂಕ್ ನ ಸಿ.ಇ.ಓ ಸಹಕರಿಸಿದ್ದು, ಪಾರ್ಟೀಶನ್ ಒಪ್ಪಂದದ ನಿಯಮಗಳನ್ನು ಪಾಲಿಸದೆ ವಂಚಿಸಿರುವುದಾಗಿ ಮಾನ್ಯ ಪೊನ್ನಂಪೇಟೆ ನ್ಯಾಯಾಯದಲ್ಲಿ ದೂರು ನೀಡಿದ್ದು ನ್ಯಾಯಾಲಯದ ನಿರ್ದೇಶನದ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.