Tuesday, January 5, 2016

ಹೊಳೆಯಲ್ಲಿ ಮುಳುಗಿ ಯುವಕನ ಸಾವು
                     ಹೊಳೆಯಲ್ಲಿ ಮುಳುಗಿದ ಯುವಕನೋರ್ವ ಸಾವಿಗೀಡಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 3-1-2016 ರಂದು ಬೈಲಕುಪ್ಪೆಯ ಟಿಬೆಟಿಯನ್‌ ಕ್ಯಾಂಪ್‌ ನಿವಾಸಿ 17 ವರ್ಷ ಪ್ರಾಯದ ಲೋಬೋಸಾಂಗ್ ಸಿಂಪ ಎಂಬವರು ಸ್ನೇಹಿತರೊಂದಿಗೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಪಕ್ಕ ಕಾವೇರಿ ನದಿಯಲ್ಲಿ ಈಜಾಡಲು ಬಂದಿದ್ದು, ಲೋಬೋಸಾಂಗ್ ಸಿಂಪ ರವರಿಗೆ ಸ್ನೇಹಿತರು ತುಂಬಾ ಆಳ ಇದ್ದು ಈಜಾಡಲು ಹೋಗದಂತೆ ತಿಳಿಸಿದರೂ ಕೂಡಾ  ಲೋಬೋಸಾಂಗ್ ಸಿಂಪರವರು ಈಜಾಡಲು ಹೋಗಿ ಆಕಸ್ಮಿಕವಾಗಿ ಮುಳುಗಿರುವುದಾಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ.
                ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ದಿನಾಂಕ 3-1-2015 ರಂದು ಗೊಂದಿಬಸವನಹಳ್ಳಿ ನಿವಾಸಿ ಜಾನ್ಸನ್ ಎಂಬುವರು ಅದೇ ಗ್ರಾಮದ ನಿವಾಸಿ ಕವಿತಾ ಎಂಬ ಮಹಿಳೆಯನ್ನು ಬೈಕಿನಲ್ಲಿ ಸ್ನೇಹಿತನ ಮನೆಗೆ ಹೋಗೋಣವೆಂದು ಹೇಳಿ ಕರೆದುಕೊಂಡು ಕೂಡ್ಲೂರು ಗ್ರಾಮದ ಉಮಾರವರ ಮನೆಯ ಹತ್ತಿರ ಮುಂದುಗಡೆ ಕವಿತಾರವರೊಂದಿಗೆ ಮದುವೆಯ ವಿಚಾರವಾಗಿ ಜಗಳ ತೆಗೆದು ಜಾನ್ಸನ್ ಅಲ್ಲೇ ಬಿದ್ದಿದ್ದ ಒಂದು ಸೈಜು ಕಲ್ಲನ್ನು ಕವಿತಾರವರ ಎಡಕಾಲಿನ ಮೇಲೆ ಎತ್ತಿ ಹಾಕಿ ನೋವುಪಡಿಸಿದ್ದಲ್ಲದೆ ಜಾನ್ಸನ್ ಮತ್ತು ಉಮಾ ಇಬ್ಬರು ಸೇರಿಕೊಂಡು ಕೈಗಳಿಂದ ಕವಿತಾರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಿಲ್ಲಿಸಿದ್ದ ಕಾರಿಗೆ ಬಸ್‌ ಡಿಕ್ಕಿ
                  ನಿಲ್ಲಿಸಿದ್ದ ಕಾರಿಗೆ ಬಸ್‌ ಒಂದು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.ಚೆಟ್ಟಳ್ಳಿ ನಿವಾಸಿ ಬಿ.ಸಿ.ಗಣಪತಿ ಎಂಬವರು ಖಾಸಗಿ  ಬಸ್ಸೊಂದರಲ್ಲಿ  ಏಜೆಂಟರಾಗಿ ಕೆಲಸ  ಮಾಡುತ್ತಿದ್ದು ದಿನಾಂಕ 04/01/2016ರಂದು ಎಂದಿನಂತೆ ಅವರ ಕಾರು ಸಂಖ್ಯೆ ಕೆಎ-03-ಎಂ-3716ನ್ನು ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಇರುವ ಸುರಭಿ ಹೋಟೆಲಿನ ಮುಂಭಾಗದಲ್ಲಿ ನಿಲ್ಲಿಸಿ ಕರ್ತವ್ಯ ನಿರತರಾಗಿರುವಾಗ ಅಂಚೆ ಕಚೇರಿ ಕಡೆಯಿಂದ ಕೆಎ-55-99ರ ಬಸ್ಸನ್ನು ಅದರ ಚಾಲಕ ಸಹೀರ್‌ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣಪತಿಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಮಡಿದ್ದು, ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ಕಬೀರ್‌ ಎಂಬವರಿಗೆ ಡಿಕ್ಕಿಯಾಗಿ ಅವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.