Sunday, January 31, 2016

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

    ಮಡಿಕೇರಿ ನಗರದ ಮಂಗಳ ದೇವಿ ನಗರದ ನಿವಾಸಿ ಚಂದ್ರಶೇಖರ್ ಎಂಬವರು ಆಟೋ ಚಾಲಕರಾಗಿದ್ದು ಇವರಿಗೆ ವಿಪರೀತ ಸಾರಾಯಿ ಕುಡಿಯುವ ಹವ್ಯಾಸವಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30-01-2016 ರಂದು ಮಧ್ಯಾಹ್ನ ಸಮಯ 14-45 ಗಂಟೆಗೆ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿಗೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಮತ್ತೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ತಾಲೂಕು ಮಾದಾಪುರದಲ್ಲಿ ನಡೆದಿದೆ. ದಿನಾಂಕ 29.01.2015 ರಂದು ಸಮಯ 06:30 ಪಿ.ಎಂಗೆ ಜಂಬೂರು ಗ್ರಾಮದ ನಿವಾವಿ ಕೆ. ರಾಜು ಎಂಬವರು ಮಾದಾಪುರದ ಹಳೆ ಸೇತುವೆ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿಗೆ ಬಂದ ಬಿಪಿನ್ ಎಂಬ ವ್ಯಕ್ತಿ ಕೆ.ರಾಜುರವರು ಏಕೆ ವಚನದಲ್ಲಿ ಮಾತನಾಡಿದ ವಿಚಾರದಲ್ಲಿ ಜಗಳ ಮಾಡಿ ಕಲ್ಲಿನಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Posted by Vartika Katiyar, IPS at 6:39 PM
Saturday, January 30, 2016

ವ್ಯಕ್ತಿಯ ಮೇಲೆ ಗುಂಪಿನಿಂದ ಹಲ್ಲೆ:
     ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಅಕ್ರಮಕೂಟ ಸೇರಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ನಡೆದಿದೆ. ದಿನಾಂಕ 29-01-2016 ರಂದು ರಾತ್ರಿ 20.00 ಗಂಟೆಗೆ ಮಡಿಕೇರಿ ನಗರದ ಎ.ವಿ ಶಾಲೆ ಪಕ್ಕದ ಮುತ್ತಪ್ಪ ದೇವಸ್ಥಾನದ ಜಂಕ್ಷನ್ ಬಳಿ ಪಿರ್ಯಾಧಿ ಶಾಸ್ರ್ತಿನಗರದ ನಿವಾಸಿ ಎಂ.ಹೆಚ್. ಇಬ್ರಾಹಿಂ ಎಂಬವರು ಕಾರಿನಲ್ಲಿ ಬರುತ್ತಿದ್ದಾಗ ಅಲ್ಲಿ ಗಲಾಟೆ ನಡೆಯುತ್ತಿದ್ದು, ಪಿರ್ಯಾಧಿಯವರು ಗಲಾಟೆ ಬಿಡಿಸಲು ಹೋದಾಗ ಗಭವತಿ ನಗರದ ನಿವಾಸಿಗಳಾದ ಸುಜಿತ್, ಜಗದೀಶ್, ಭರತ್, ಅರ್ಜುನ್, ಸುಪ್ರೀತ್, ಸುಜನ್ ಶಿವು ಹಾಗು ಮಣಿ ಎಂಬವರು ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡುಗಳಿಂದ ಮತ್ತು ಕೈಗಳಿಂದ ಪಿರ್ಯಾಧಿಯವರ ಎಡ ಕಣ್ಣಿನ ಭಾಗಕ್ಕೆ, ತಲೆಯ ಬಲ ಭಾಗಕ್ಕೆ, ತಲೆಯ ನೆತ್ತಿಯ ಹಿಂಭಾಗಕ್ಕೆ ಮತ್ತು ಶರೀರಕ್ಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:
     ಅಕ್ರಮವಾಗಿ ಎರಡು ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿ ಡಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 29-1-2016 ರಂದು ನಾಲ್ಕೇರಿ ಗ್ರಾಮ ಬೇತ್ರಿ ಹೊಳೆಯ ಹತ್ತಿರ ಆರೋಪಿಗಳಾದ ಕುಂಞರಾಮ, ರಶೀದ್, ಅಶೋಕ್ ಮತ್ತು ಪಿ.ಟಿ. ರಮೇಶ್ ರವರುಗಳು ಎರಡು ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದು, ಮಡಿಕೇರಿ ಡಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಲಾರಿಗಳ ಮೇಲೆ ದಾಳಿ ನಡೆಸಿ ಲಾರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣದ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯುತ್ ಕಂಬ ಬಿದ್ದು ವ್ಯಕ್ತಿಯ ದುರ್ಮರಣ:
     ವಿದ್ಯುತ್ ಕಂಬವನ್ನು ಟ್ರಾಕ್ಟರ್ ನಲ್ಲಿ ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವ್ಯಕ್ತಿ ಮೇಲೆ ಬಿದ್ದು ಸದರಿ ವ್ಯಕ್ತಿ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ನಿವಾಸಿ ಮರುಲಿಂಗಯ್ಯ ಎಂಬವರ ಎರಡನೇ ಮಗ ರವೀಂದ್ರ ದಿನಾಂಕ 28/01/2016 ರಂದು ಕೂಲಿ ಕೆಲಸಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಸಂಜು @ ಅಯ್ಯಪ್ಪ ರವರಲ್ಲಿಗೆ ಬಂದಿದ್ದು, ದಿನಾಂಕ 28/01/2016 ರಂದು ಸಮಯ ಸುಮಾರು 9:30 ಪಿ.ಎಂ.ಗೆ ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಸುರೇಶ ರವರ ತೋಟಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಸಿಮೆಂಟ್ ವಿದ್ಯುತ್ ಕಂಬ ಇದ್ದ ಟ್ರಾಕ್ಟರ್ ನಂ KA 45 T-3018 ಮತ್ತು ಟ್ರೆಲರ್ ನಂ KA 45 T-3019 ಚಾಲನೆಯಲ್ಲಿದ್ದು, ಮುಂದಕ್ಕೆ ಹತ್ತದೆ ಇದ್ದ ಕಾರಣ ರವೀಂದ್ರನು ಟ್ರೈಲರ್ ಅನ್ನು ತಳ್ಳುತ್ತಿದ್ದ ಸಂಧರ್ಭದಲ್ಲಿ ಟ್ರೈಲರ್ ನಲ್ಲಿದ್ದ ಸಿಮಂಟ್ ವಿದ್ಯುತ್ ಕಂಬ ಆಕಸ್ಮಿಕವಾಗಿ ರವೀಂದ್ರನ ಮೇಲೆ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸದರಿಯವರನ್ನು ಚಿಕಿತ್ಸೆ ಬಗ್ಗೆ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ರವೀಂದ್ರ ಮೃತಪಟ್ಟಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿ ಕಳವು, ಪ್ರಕರಣ ದಾಖಲು:
     ಮಡಿಕೇರಿ ಗ್ರಾಮಾಂತ್ರ ಠಾಣಾ ಸರಹದ್ದಿನ ಕಾಂತೂರು ಮುರ್ನಾಡು ಗ್ರಾಮದ ನಿವಾಸಿ ಶ್ರೀಮತಿ ರತಿ ಸೋಮಯ್ಯ ರವರ ಮನೆಯ ಮುಂದು ದಾಸ್ತಾನು ಇಟ್ಟಿದ್ದ ಸುಮಾರು 40,000 ರೂ ಬೆಲೆಬಾಳುವ ಹಸಿ ಕಾಫಿಯನ್ನು ದಿನಾಂಕ 21-1-2016 ರ ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ದಿನಾಂಕ ಶ್ರೀಮತಿ ರತಿ ಸೋಮಯ್ಯನವರು ದಿನಾಂಕ 29-1-2016 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.