Thursday, January 14, 2016

ವೇಗದ ಚಾಲನೆ ಅಪಘಾತಕ್ಕೀಡಾಗಿ ಬೈಕ್ ಸವಾರ ಸಾವು:

    ಸೋಮವಾರಪೇಟೆ ತಾಲೂಕು ಕಾನ್ ಬೈಲು ನಿವಾಸಿ ಜಗದೀಶ ಎಂಬಾತ ದಿನಾಂಕ : 12-01-2016 ರಂದು ನಾಕೂರು ಗ್ರಾಮದಿಂದ ಯಡವಾರೆ ಗ್ರಾಮದ ಅಶೋಕ ಎಂಬವರ ಮನೆಗೆ ಻ದೇ ಗ್ರಾಮದ ವೇಣು ರವರ ಬಾಪ್ತು ಮೋಟಾರು ಸೈಕಲ್ ನಂ : ಕೆಎ-12, ಇ-7061 ರ ಯಮಹಾ ಮೋಟಾರು ಸೈಕಲ್‌ ಲ್ಲಿ ರಾತ್ರಿ ಸಮಯ 21.15 ಗಂಟೆಗೆ ಯಡವಾರೆಯಿಂದ ಹೊರಟು ಸೋಮವಾರಪೇಟೆ ಕಡೆಗೆ ಬರುತ್ತಿದ್ದಾಗ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಯಡವಾರೆ ಗ್ರಾಮದ ಬಳಿಯ ನಾಂಗಾರು ಚಿನ್ನಪ್ಪ ರವರ ಬಾಪ್ತು ಕಾಫಿ ತೋಟದ ಹತ್ತಿರ ವಿದ್ಯುತ್ ಕಂಬಕ್ಕೆ ಮೋಟಾರು ಸೈಕಲನ್ನು ಡಿಕ್ಕಿ ಪಡಿಸಿಕೊಂಡಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸದರಿಯವರು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಗಿದೆ. 

ಅಪ್ರಾಪ್ತ ಬಾಲಕ ಕಾಣೆ: 

    ಶಾಲೆಗೆ ಹೋದ ಬಾಲಕನೋರ್ವ ಕಾಣೆಯಾದ ಘಟನೆ ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದಿಂದ ವರದಿಯಾಗಿದೆ. ವಿರಾಜಪೇಟೆ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದ ಕಲ್ಲುಬಾಣೆಯ ಬದ್ರಿಯಾ ಶಾಲೆಗೆ ಫಿರ್ಯಾದಿ ಶ್ರೀಮತಿ ನಸೀರ ಎಂಬವರ ಮಗನಾದ ನಿಯಾಜ್, ಪ್ರಾಯ 16 ವರ್ಷ ಈತ ದಿನಾಂಕ 12.01.2016 ರಂದು ಬೆಳಗ್ಗೆ ಶಾಲೆಗೆಂದು ಹೋದವನು ವಾಫಸ್ಸು ಮನೆಗೂ ಬಾರದೆ ಹಾಗೂ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದು, ಶ್ರೀಮತಿ ನಸೀರರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

ಕಾರಿಗೆ ಬಸ್ಸು ಡಿಕ್ಕಿ, ಕಾರು ಚಾಲಕನ ಸಾವು:

   ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕುಶಾಲನಗರದ ಬಸವನಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 13-01-2016ರಂದು ಸಮಯ 11:00ಗಂಟೆಗೆ ಕುಶಾಲನಗರದ ಬಸವನಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಒಂದು ನೊಂದಣೆ ಇಲ್ಲದ ಖಾಸಗಿ ಬಸ್ ಅದರ ಚಾಲಕ ಬಸ್ಸನ್ನು ಅತಿವೇಗ ಹಾಗು ಅಜಾಗರುಕತೆಯಿಂದ ಚಾಲಿಸಿಕೊಂಡು ಹೋಗಿ ಮಡಿಕೇರಿಯಿಂದ ಕುಶಲನಗರ ಕಡೆಗೆ ಬರುತ್ತಿದ್ದ ಕಾರ್ ನಂ ಕೆಎ 18 ಎಂ 5259ರ ಪೋರ್ಡ್ ಐಕಾನ್ ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಬಸ್ಸಿನ ಒಳಗೆ ನುಸುಳಿ ಹೋಗಿದ್ದು , ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಚಾಲಕ ಕೊಣನೂರು ನಿವಾಸಿ ಕುಮಾರ ಎಂಬವರು ಮೃತಪಟ್ಟಿದ್ದು ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಜಗಳ, ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ:


    ಸೋಮವಾರಪೇಟೆ ತಾಲೋಕು, ಕೊಡ್ಲಿಪೇಟೆ ನಿವಾಸಿ ಫಿರ್ಯಾದಿ ಸಿ.ಬಿ. ಸೋಮನಾಥ ಎಂಬವರು ದಿನಾಂಕ 12-01-2016 ರಂದು ಸಂಜೆ 06-00 ಗಂಟೆಗೆ ಅವರ ಹೆಂಡತಿ ಮತ್ತು ತಮ್ಮ ಗುರುಮೂರ್ತಿ ರವರೊಂದಿಗೆ ಮಾತನಾಡಿಕೊಂಡಿರುವಾಗ್ಗೆ ಆರೋಪಿಗಳಾದ ಸಿ.ಟಿ. ಸುನಿಲ್ ಕುಮಾರ್ ಮತ್ತು ಸಿ.ಬಿ. ತಮ್ಮಯ್ಯ ರವರುಗಳು ಆಸ್ತಿಯ ಪಾಲು ಪಾರಿಕತ್ತಿನ ವಿಚಾರದಲ್ಲಿ ದ್ವೇಷ ಇಟ್ಟುಕೊಂಡು ಕಲ್ಲಿನಿಂದ ಫಿರ್ಯಾದಿಯವರ ಮನೆಯ ಬಾಗಿಲನ್ನು ಹೊಡೆದು ಮುರಿದು ಹಾಕಿ, ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯ ವಸ್ತುಗಳನ್ನು ಹಾಳು ಮಾಡಿ ಫಿರ್ಯಾದಿ ಅವರ ಹೆಂಡತಿ ಮತ್ತು ತಮ್ಮನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಅತಿಯಾದ ಸಾಲ ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ತಾಲೂಕು ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ಬಿ.ಕೆ. ರವಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12-1-2016 ರಂದು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮುದಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರು ಹಲವು ಬ್ಯಾಂಕುಗಳಲ್ಲಿ ಮತ್ತು ವ್ಯಕ್ತಿಗಳಿಂದ ಸಾಲವನ್ನು ಪಡೆದು ಅದನ್ನು ತೀರಿಸಲು ಅಸಾಧ್ಯವಾದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಸವಿತ ರವಿ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Posted byVartika Katiyar, IPS
Wednesday, January 13, 2016

ಮಾರುತಿ ವ್ಯಾನ್ - ಮಹೇಂದ್ರ ಮ್ಯಾಕ್ಸಿಮೋ ನಡುವೆ ಡಿಕ್ಕಿ: 
    ಮಾರುತಿ ವ್ಯಾನ್ ಮತ್ತು ಮಹೇಂದ್ರ ಮ್ಯಾಕ್ಸಿಮೋ ನಡುವೆ ಅಪಘಾತ ಸಂಭವಿಸಿ ಮಾರುತಿ ವ್ಯಾನ್ ಚಾಲಕ ಗಾಯಗೊಂಡ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಚೆರಿಯಪರಂಬು ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಆಲಿ ಎಂಬವರು ದಿನಾಂಕ 12-01-2016 ರಂದು ಕೆಲಸದ ನಿಮಿತ್ತ ಕುಂಜಿಲ ಗ್ರಾಮಕ್ಕೆ ಚೆಟ್ಟಳ್ಳಿಯ ಅಬ್ದುಲ್ ಸಲೀಂರವರನ್ನು ಕರೆದುಕೊಂಡು ತನ್ನ ಬಾಪ್ತು ಕೆಎ-12-ಪಿ-8973 ರ ಮಾರುತಿ ಓಮಿನಿ ವ್ಯಾನ್‍ನ್ನು ನಾಪೋಕ್ಲು ಕಡೆಗೆ ಬರುತ್ತಿರುವಾಗ್ಗೆ ಚೆರಿಯಪರಂಬು ರಸ್ತೆ ಕ್ರಾಸ್‍ನಲ್ಲಿ ಸಮಯ 08-30 ಎ.ಎಂ ಗೆ ನಾಪೋಕ್ಲು ಕಡೆಯಿಂದ ಕೆಎ-12-ಬಿ-1763 ರ ವಾಹನವನ್ನು ಅದರ ಚಾಲಕ ಗಿರೀಶ್‍ರವರು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಓಮಿನಿ ವ್ಯಾನ್‍ಗೆ ಡಿಕ್ಕಿ ಪಡಿಸಿದ ಪರಿಣಾಮ ವ್ಯಾನ್‍ ಜಖಂಗೊಂಡು ಮೊಹಮ್ಮದ್ ಆಲಿ ರವರ ಎರಡೂ ಕಾಲಿನ ಮಂಡಿಗೆ, ಮೂಗಿಗೆ, ಹಾಗೂ ಅವರ ಜೊತೆಯಲ್ಲಿದ್ದ ಅಬ್ದುಲ್ ಸಲೀಂರವರ ಬಲಕಣ್ಣಿನ ಹತ್ತಿರ ಹಾಗೂ ಬಲಕೈಯ ಅಂಗೈಗೆ ಗಾಯವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ:

     ಶಾಲೆಯಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಗೆ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 12-01-2016 ರಂದು ಸಮಯ 4-30 ಪಿ.ಎಂ.ಗೆ ವಿರಾಜಪೇಟೆ ನಗರದ ಶಾಂತಿನಗರದ ನಿವಾಸಿ ಅಸ್ಲಾಂ ಎಂಬವರು ತನ್ನ ಕಿರಿಯ ಮಗಳಾದ 8 ವರ್ಷ ಪ್ರಾಯದ ಐಶಳನ್ನು ಶಾಲೆಯಿಂದ ಕರೆದುಕೊಂಡು ಗೋಣಿಕೊಪ್ಪ ರಸ್ತೆಯ ಶಕ್ತಿ ಡೀಸಲ್ ಮುಂಭಾಗೆ ಎಡಭಾಗದಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ಸಿದ್ದಾಪುರ ಕಡೆಯಿಂದ ಆರೋಪಿ ತನ್ನ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಐಶಳಿಗೆ ಡಿಕ್ಕಿಪಡಿಸಿದ ಪರಿಣಾಮ ಆಕೆಯ ಬಲದ ಕೈಗೆ, ಮಂಡಿ ಹಾಗೂ ಕಾಲಿಗೆ ಗಾಯವಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಮನೆ ಬೋಗ್ಯದ ವಿಚಾರದಲ್ಲಿ ಜಗಳ, ಮಹಿಳೆ ಮೇಲೆ ಹಲ್ಲೆ:
      ದಿನಾಂಕ 08-01-2015ರಂದು ಸಮಯ 08:00ಪಿ ಎಂ ಗೆ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಪಿರ್ಯಾದಿ ಕೆ.ಕೆ. ಪ್ರೇಮ ಎಂಬವರು ತಾನು ಬೋಗ್ಯಕ್ಕೆ ಪಡೆದು ವಾಸವಿರುವ ಮನೆಯ ಬೀಗವನ್ನು ತೆರೆಯುವ ಸಂದರ್ಭ ಆರೋಪಿ ಪದ್ಮರವರು ಅಲ್ಲಿಗೆ ಬಂದು ನೀನು ಮನೆಯನ್ನು ಖಾಲಿ ಮಾಡು, ನಿನ್ನ ಬೋಗ್ಯದ ಹಣವನ್ನು ನಾನು ಬಿಸಾಡುತ್ತೇನೆ. ಎಂದು ಜಗಳ ತೆಗೆದು ಕೈಯಲ್ಲಿದ್ದ ಒಂದು ದೊಣ್ಣೆಯಿಂದ ಕೆ.ಕೆ. ಪ್ರೇಮರವರ ಎರಡು ಕೈಗಳಿಗೆ ಹೊಡೆದಿದ್ದಲ್ಲದೇ ಕೈಯಿಂದ ಮುಖಕ್ಕೆ ಗುದ್ದಿ ,ಕಾಲಿನಿಂದ ಮೈಗೆ ಒದ್ದು ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.