Monday, February 29, 2016

ಅಕ್ರಮ ಮರಳು ಸಾಗಾಟ ಆರೋಪಿ ಬಂಧನ::

     ಅಕ್ರಮವಾಗಿ ಮರಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ 27-2-2016 ರಂದು ಸಮಯ ಬೆಳಿಗ್ಗೆ 6-00 ಗಂಟೆಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾನೂರು ರಸ್ತೆಯಲ್ಲಿ ಆರೋಪಿ ಹುಣಸೂರು ತಾಲೋಕು ರತ್ನಪುರಿ ನಿವಾಸಿ ರವಿ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ತೆಗೆದು ಮಾರಾಟ ಮಾಡಲು ಕೆಎ12 ಎ5741 ರ ಸ್ವರಾಜ್ ಮಜ್ದಾ ಮಿನಿ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಮರಳು ತುಂಬಿದ ವಾಹನ ಸಮೇತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿತ್ರಾಣಗೊಂಡು ಕೂಲಿ ಕಾರ್ಮಿಕ ಸಾವು:

      ಸುಂಟಿಕೊಪ್ಪ ಠಾಣಾ ಸರಹದ್ದಿನ ಮಹಾಲಕ್ಷ್ಮಿ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡ್ಡಿದ್ದ ಒರಿಸ್ಸಾ ಮೂಲದ ವ್ಯಕ್ತಿ 36 ವರ್ಷ ಪ್ರಾಯದ ಕೈಲಾಸ್ ಎಂಬವರು ದಿನಾಂಕ 27-2-2016 ರಂದು ತುಂಬಾ ನಿತ್ರಾಣಗೊಂಡು ಅಸ್ವಸ್ಥಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆ ಸಂದರ್ಭದಲ್ಲಿ ಸದರಿ ವ್ಯಕ್ತಿ ಮೃತಪಟ್ಟಿದ್ದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಆರೋಪಿ ಬಂಧನ:

           ಅಕ್ರಮವಾಗಿ ಮರಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ 27-2-2016 ರಂದು ಸಮಯ ಬೆಳಿಗ್ಗೆ 6-00 ಗಂಟೆಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನಪ್ಪಸಂತೆ ಜಂಕ್ಷನ್ ನಲ್ಲಿ ಆರೋಪಿಗಳಾದ ಹೆಬ್ಬಾಲೆ ದೇವರಪುರ ಗ್ರಾಮದ ನಿವಾಸಿ ಪಿ.ಎಸ್. ಸೋಮಶೇಖರ್ ಹಾಗು ಹುಣಸೂರು ತಾಲೋಕು ರತ್ನಪುರಿ ನಿವಾಸಿ ರವಿ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ತೆಗೆದು ಮಾರಾಟ ಮಾಡಲು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್. ಜಯರಾಮ್ ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚಿ ಆರೋಪಿಗಳನ್ನು ಮರಳು ತುಂಬಿದ ವಾಹನ ಸಮೇತವಾಗಿ ವಶಕ್ಕೆ ಪಡೆದು ಪ್ರತ್ಯೇಕವಾಗಿ ಎರಡು ಪ್ರಕರಣಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಲಾರಿ ಅವಘಡ ಕ್ಲೀನರ್ ಗೆ ಗಾಯ:

      ದಿನಾಂಕ 28-2-2016 ರಂದು ಸಮಯ ಸಂಜೆ 5-45 ಗಂಟೆಗೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನ್ಯಾಯದಳ್ಳ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಲಾರಿ ಚಾಲಕ ಮಹೇಂದ್ರ ಎಂಬವರು ಚಾಲಿಸುತ್ತಿದ್ದ ಮಣ್ಣು ತುಂಬಿದ ಟಿಪ್ಪರ್ ಲಾರಿ ಅಪಘಾತಕ್ಕೀಡಾಗಿ ಲಾರಿಯಲ್ಲಿದ್ದ ಕ್ಲೀನರ್ ಸೋಮವಾರಪೇಟೆ ತಾಲೂಕು ಬೆಸೂರು ಗ್ರಾಮದ ನಿವಾಸಿ ವೀರೂಪಾಕ್ಷ ಎಂಬ ವ್ಯಕ್ತಿಗೆ ಗಾಯಗಳಾಗಿದ್ದು, ಸದರಿ ವೀರೂಪಾಕ್ಷ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, February 27, 2016

ವ್ಯಕ್ತಿ ಮೇಲೆ ಮರದ ಕೊಂಬೆ ಬಿದ್ದು ಸಾವು:

     ದಿನಾಂಕ 25-02-2016 ರಂದು ಸಮಯ 04.30 ಪಿ.ಎಂ.ಗೆ ಸಿದ್ಧಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗ್ರಾಮದ ಮೂಡುಬೈಲು ಮಾಚಯ್ಯನವರ ಕಾಫಿ ತೋಟದಲ್ಲಿ ಪ್ರಕಾಶ ಎಂಬುವವರು ಕೆಲಸ ಮಾಡುತ್ತಿದ್ದು, ಅದೇ ಸಮಯದಲ್ಲಿ ಮಳೆ ಬಂದಿದ್ದರಿಂದ ಪ್ರಕಾಶರವರು ಮರದ ಕೆಳಗೆ ನಿಂತುಕೊಂಡಿದ್ದಾಗ, ಮರದ ಕೊಂಬೆಯೊಂದು ಆಕಸ್ಮಿಕವಾಗಿ ಪ್ರಕಾಶನ ಮೇಲೆ ಬಿದ್ದು ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲೂ ಸದರಿಯವರು ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾರುಗಳ ನಡುವೆ ಅಪಘಾತ ಒಬ್ಬನಿಗೆ ಗಾಯ:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಹಿತ್ತಲಕೇರಿ ಗ್ರಾಮದಲ್ಲಿ ಎನ್.ಎನ್. ಚಂದ್ರಶೇಖರ ಎಂಬವರು ದಿನಾಂಕ 26-2-2016 ರಂದು ತಮ್ಮ ಕಾರಿನಲ್ಲಿ ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರಶೇಖರರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚಂದ್ರಶೇಖರರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, February 26, 2016

ಅಕ್ರಮ ಮರಳು ಸಾಟಾಟ ಪತ್ತೆ:
     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಶಾಂತಳ್ಳಿ ಗ್ರಾಮದಲ್ಲಿ ಆರೋಪಿ ಬೆಟ್ಟದಳ್ಳಿ ಗ್ರಾಮದ ಶಿವಕುಮಾರ್ ರವರು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ತಮ್ಮ ಟ್ಟಿಪ್ಪರ್ ಲಾರಿಯಲ್ಲಿ ಮರಳನ್ನು ತುಂಬಿಸಿ ಮಾರಾಟಕ್ಕೆ ಸಾಗಿಸುತ್ತಿದ್ದನ್ನು ಪತ್ತೆಹಚ್ಚಿದ ಸೋಮವಾರಪೇಟೆ ಠಾಣಾಧಿಕಾರಿ ಶ್ರೀ ನಂದೀಶ್ ಕುಮಾರ್ ಹಾಗು ಸಿಬ್ಬಂದಿಗಳು ಮರಳು ತುಂಬಿದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಯುವತಿ ಕಾಣೆ, ಪ್ರಕರಣ ದಾಖಲು:
     ವಿರಾಜಪೇಟೆ ತಾಲೋಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಭಾಷ ಎಂಬವರ ಮಗಳು ಎಂ.ಬಿ. ಅಪ್ಸನಾ ರವರು ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 19-02-16ರಂದು ಬೆಳಿಗ್ಗೆ 8-30ಗಂಟೆಗೆ ಅಪ್ಸನಾ ಳು ಕಾಲೇಜಿಗೆ ಹೋಗು ವುದಾಗಿ ಹೇಳಿ ಹೋದವಳು ಸಂಜೆಯಾದರೂ ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ಯುವತಿ ಸಾವು:
      ದಿನಾಂಕ 24-02-2016 ರಂದು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಾಲ್ಕೇರಿ ಗ್ರಾಮದ ಅಲ್ಲುಮಾಡ ನವೀನ್ ರವರಲ್ಲಿ ಕೆಲಸಮಾಡಿಕೊಂಡಿರುವ ನಂಜನಗೂಡು ತಾಲೂಕು ಹಳೇಪುರ ಗ್ರಾಮದ ವಾಸಿ ಮಾದಶೆಟ್ಟಿರವರ ಮಗಳಾದ ಸವಿತಳು 13.30 ಗಂಟೆಗೆ ಬರ್ಹಿದೆಸೆಗೆ ಹೋಗಿ ಕೆರೆಗೆ ಇಳಿದವಳು ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಳಲಾಗಿದೆ

Vartika Katiyar, IPS

Thursday, February 25, 2016

 
ಮದುವೆ ವಿಚಾರದಲ್ಲಿ ವ್ಯಕ್ತಿಯೊಬ್ಬರಿಂದ ಚಿನ್ನಾಭರಣ ಮತ್ತು ಹಣ ದರೋಡೆ:

     ವ್ಯಕ್ತಿಯೊಬ್ಬರಿಗೆ 2ನೇ ಮದುವೆಗೆ ಒಪ್ಪಿಸಿ ಅವರಿಂದ ಚಿನ್ನಾಭರಣ ಮತ್ತು ಹಣವನ್ನು ದೋಚಿದ ಘಟನೆ ಮಡಿಕೇರಿ ನಗರದ ರಾಜಾಸೀಟ್ ಬಳಿ ನಡೆದಿದೆ. ಕೇರಳ ರಾಜ್ಯ ಮಲಪುರಂ ಜಿಲ್ಲೆಯ ಕೋಟೆಕಲ್ ನಿವಾಸಿ ಅಹ್ಮದ್ ಎಂಬ ವ್ಯಕ್ತಿಗೆ ಮದುವೆ ಮಾಡಿಸುದಾಗಿ ಆರೋಪಿಗಳಾದ ರೆಹಮಾನ್, ಮುಜೀಬ್, ಹನೀಫ್ ಮತ್ತು ಬಾಬು ಎಂಬವರು ಹುಡುಗಿಯನ್ನು ತೋರಿಸಿ ಅದರಂತೆ ಫಿರ್ಯಾದಿ ಅಹ್ಮದ್ ಒಪ್ಪಿ ಮದುವೆಯಾಗುವ ಹುಡುಗಿಗೆ 121 ಗ್ರಾಂ ಚಿನ್ನದ ಬಳೆಗಳನ್ನು ಖರೀದಿಸಿ ಹುಡುಗಿ ಮನೆಗೆ ಹೋದಾಗ ಆರೋಪಿಗಳನ್ನು ಸದರಿ ಚಿನ್ನಾಭರಣಗಳನ್ನು ದೋಚಿಕೊಂಡಿದ್ದು ಅಲ್ಲದೆ ಆಹ್ಮದ್ ರವರಲ್ಲಿದ್ದ 35,000-00 ರೂಗಳನ್ನು ಸಹ ದೋಚಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ, ಒಬ್ಬನ ಸಾವು ನಾಲ್ವರಿಗೆ ಗಾಯ:

    ಮಂಗಳೂರು ಕಡೆಯಿಂದ ಬಂದ ಕಾರೊಂದಕ್ಕೆ ಲಾರಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡು ಒಬ್ಬ ದುರ್ಮರಣ ಗೊಂಡ ಘಟನೆ ನಡೆದಿದೆ. ಮಂಗಳೂರುನಿಂದ ನೌಫಲ್ ಎಂಬವರು ತಮ್ಮ ಸ್ನೇಹಿತರಾದ ಆಶ್ವನ್‌, ಮೊಹಮ್ಮದ್‌ ಶಫೀಕ್‌, ಶಮೀರ್‌, ಇರ್ಪಾನ್‌ ಹಾಗೂ ಶಮೀರ್‌ ರವರೊಂದಿಗೆ ಮಡಿಕೇರಿಗೆ ದಿನಾಂಕ 24-2-2016 ರಂದು ಕಾರಿನಲ್ಲಿ ಬರುತ್ತಿದ್ದಾಗ ಮಡಿಕೇರಿ ಸಮೀಪದ ಕಾಟಕೇರಿ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿ ನೌಫಲ್ ಮತ್ತು ಸಂಗಡಿಗರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಮೊಹಮ್ಮದ್ ಶಫೀಕ್ ರವರು ಸಾವನಪ್ಪಿದ್ದು, ಉಳಿದ ನಾಲ್ಕು ಜನರಿಗೆ ಗಾಯಗಳಾಗಿದ್ದು, ಕಾರು ಸಹ ಸಂಪೂರ್ಣ ಜಖಂಗೊಂಡಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳು ತುಂಬಿಸಲು ಹೋದ ವ್ಯಕ್ತಿ ಮೇಲೆ ಇಬ್ಬರಿಂದ ಹಲ್ಲೆ:

     ಪರವಾನಗಿ ಪಡೆದುಕೊಂಡು ಮರಳು ತುಂಬಿಸಲು ವಾಹನದೊಂದಿಗೆ ಸ್ಟಾಕ್ ಯಾರ್ಡ್ ಗೆ ಹೋದ ವ್ಯಕ್ತಿಯ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೆಳಕೊಡ್ಲಿ ಮರಳು ಸ್ಟಾಕ್ ಯಾರ್ಡ್ ಗೆ ಮರಳನ್ನು ತುಂಬಿಸಲು ದಿನಾಂಕ 24-2-2016 ರಂದು ಹಾಸನ ಜಿಲ್ಲೆಯ ಬೆಂಗಿತಿಮ್ಮಯ್ಯನಕೊಪ್ಪಲು ಗ್ರಾಮದ ನಿವಾಸಿ ಶಶಿಕುಮಾರ್ ರವರು ತಮ್ಮ ಟಿಪ್ಪರ್ ಲಾರಿಯಲ್ಲಿ ಹೋದಾಗ ಕೆ.ಕೆ. ಭರತ್ ಕುಮಾರ್ ಮತ್ತು ಕೆ.ಬಿ. ದಿವಾಕರ್ ರವರುಗಳು ಶಶಿಕುಮಾರ್ ರವರ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಳೆಯ ದ್ವೇಷ ವ್ಯಕ್ತಿ ಮೇಲೆಹಲ್ಲೆ:

    ಹಳೆಯ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಠಾಣಾ ಸರಹದ್ದಿನ ಬಸವನಳ್ಳಿ ಚೆನ್ನಂಗಿ ಗ್ರಾಮದ ನಿವಾಸಿ ಜೇನುಕುರುಬರ ಅಯ್ಯಪ್ಪನವರು ದಿನಾಂಕ 24-2-2016 ರಂದು ಸಂಜೆ 5-00 ಗಂಟೆ ಸಮಯದಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ಅರೋಪಿಗಳಾದ ಅಪ್ಪು ಮತ್ತು ಇಬ್ಬರು ಸೇರಿ ಹಳೆಹ ದ್ವೇಷದಿಂದ ಅಯ್ಯಪ್ಪನವರ ಮೇಲೆಹ ಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ:

    ಕುಶಾಲನಗರ ಠಾಣಾ ಸರಹದ್ದಿನ ಭುವನಗಿರಿ ನಿವಾಸಿ ಜಗದೀಶ್ ಎಂಬವತ ಪತ್ನಿ ಸವಿತಾ (28) ರವರು ದಿನಾಂಕ 23-2-2015 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

Tuesday, February 23, 2016

ಕೆಲಸಗಾರನಿಂದ ಕರಿಮೆಣಸು ಕಳವು:

     ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ ಸುಮಾರು 10000 ರೂ. ಬೆಲೆಬಾಳುವ ಕರಿಮೆಣಸು ಕಳ್ಳತನ ಮಾಡಿದ ಘಟನೆ ಕುಟ್ಟ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 22-2-2016 ರಂದು ಕುಟ್ಟ ಠಾಣಾ ಸರಹದ್ದಿನ ಕೆ. ಬಾಡಗ ಗ್ರಾಮದ ನಿವಾಸಿ ಶ್ರೀಮತಿ ಕಮಲ ಎಂಬವರು ತಮ್ಮ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸು ಪೈಕಿ 18 ಕೆ.ಜಿ. ಕರಿಮೆಣಸನ್ನು ಅವರ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಬ್ರಮಣಿ ಎಂಬಾತ ಕಳವು ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

    ಹಣದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕು ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಎಂ.ಬಿಪಿನ್ ಎಂಬವರು ದಿನಾಂಕ 22-02-2016 ರಂದು ಸಮಯ 20.00 ಗೆ ಮಡಿಕೇರಿ ಕಡೆಗೆ ತಮ್ಮ ಪಿಕ್ ಅಪ್ ವಾಹನದಲ್ಲಿ ಹೋಗುತ್ತಿದ್ದಾಗ ಮುಕ್ಕೋಡ್ಲು ಗ್ರಾಮದ ದಿನೇಶ್ ಎಂಬವರು ಅವರ ಪಿಕ್ ಅಫ್ ಜೀಪಿನಲ್ಲಿ ಬಂದು ಎಂ.ಬಿಪಿನ್ ರವರು ಓಡಿಸುತ್ತಿದ್ದ ಪಿಕ್ ಅಫ್ ಜೀಪಿಗೆ ಅಡ್ಡ ತಂದು ನಿಲ್ಲಿಸಿ, ಹಣದ ವಿಚಾರದಲ್ಲಿ ಜಗಳ ಮಾಡಿ ಕೈ ಯಿಂದ ಹೊಡೆದು, ದೊಣ್ಣೆಯಿಂದ ಹಲ್ಲೆಮಾಡಿದ್ದು, ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಂದೆ ಮೇಲೆ ಮಗನಿಂದ ಹಲ್ಲೆ:

    ವಿನಾಕಾರಣ ವ್ಯಕ್ತಿಯೊಬ್ಬ ತನ್ನ ತಂದೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.  ದಿನಾಂಕ 22-1-2016 ರಂದು ಬೆಳಗ್ಗೆ 9-45 ಗಂಟೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪುತ್ಯ ಪೆರಾಜೆ ಗ್ರಾಮದ ನಿವಾಸಿ ನಿಡ್ಯಮನೆ ಶಿವರಾಮ್ ಎಂಬವರ ಮೇಲೆ ಅವರ ಮಗ ಗೋವರ್ಧನ ಎಂಬಾತ ವಿನಾಕಾರಣ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
Vartika Katiyar, IPS

Monday, February 22, 2016

ಮನುಷ್ಯ ಕಾಣೆ, ಪ್ರಕರಣ ದಾಖಲು:
ಹಾಸನ ಮೂಲದ ವ್ಯಕ್ತಿಯೊಬ್ಬರು ವಿರಾಜಪೇಟೆ ತಾಲೋಕು ತೋರಗ್ರಾಮದ ಕೋದಂಡ ಅಜಿತ್ ಎಂಬವರ ಲೈನುಮನೆಯಿಂದ ಕಾಣೆಯಾದ ಘಟನೆ ನಡೆದಿದೆ. ಮೂಲತ: ಹಾಸನದ ಹೊಳೆನರಸೀಪುರ ತಾಲೂಕು ಮಾದನಾಯ್ಕನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ರಾಜಮ್ಮ ಮತ್ತು ಅವರ ಗಂಡ 48 ವರ್ಷಪ್ರಾಯದ ರಾಜೇಗೌಡ ರವರು ಸುಮಾರು 2 ತಿಂಗಳಿಂದ ವಿರಾಜಪೇಟೆ ತಾಲೂಕು ತೋರ ಗ್ರಾಮದ ನಿವಾಸಿ ಕೋದಂಡ ಅಜಿತ್ ಮಾಚಯ್ಯ ಎಂಬವರ ಲೈನುಮನೆಯಲ್ಲಿ ವಾಸವಾಗಿ ಕೂಲಿ ಕೆಲಸ ಮಾಡಿ ಕೊಂಡಿದ್ದು, ಸದರಿ ರಾಜೇಗೌಡ ದಿನಾಂಕ 11-2-2016 ರಂದು ಸಂಜೆ ಲೈನುಮನೆಯಿಂದ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ನಂತರ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ಶ್ರೀಮತಿ ರಾಜಮ್ಮನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

    ಹುಣಸೂರು ತಾಲೋಕು ಬೀರನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪ್ರಮಿಳ (40) ಎಂಬಾಕೆ ಕೆಲವು ವರ್ಷದಿಂದ ಕಾರ್ಮಿಕರನ್ನು ಹುಣಸೂರಿನಿಂದ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದು, ದಿನಾಂಕ 19-2-2016 ರಂದು ಹುಣಸೂರಿನಿಂದ ಕಾರ್ಮಿಕರನ್ನು ಕೊಡಗು ಜಿಲ್ಲೆಯ ಬಿರುನಾಣಿ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬವರ ಮನೆಗೆ ಕರೆದುಕೊಂಡು ಬಂದಿದ್ದು, ನಂತರ ಅಂದು ಸುಬ್ಬಯನವರ ಲೈನುಮನೆಯಲ್ಲಿ ಉಳಿದುಕೊಂಡು ಲೈನುಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-2-2016 ರಂದು ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Tuesday, February 16, 2016

ಮಾರುತಿ ವ್ಯಾನ್ ಡಿಕ್ಕಿ ಬಾಲಕಿಗೆ ಗಾಯ
                ರಸ್ತೆಯ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಮಾರುತಿ ವ್ಯಾನ್ ಡಿಕ್ಕಿಯಾಗಿ ಬಾಲಕಿ ಗಾಯಗೊಂಡ ಘಟನೆ ಸುಂಟಿಕೊಪ್ಪದ ಕೊಡಗರಳ್ಳಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ   15-2-2016 ರಂದು ಕೊಡಗರಳ್ಳಿ ಗ್ರಾಮದ ನಿವಾಸಿ ರಮೇಶ್ ಎಸ್.ಕೆ. ತನ್ನ ಪತ್ನಿ ಹಾಗು 4 ವರ್ಷದ ಕೃತಿಕಾ ಕೊಡಗರಳ್ಳಿ ಗ್ರಾಮದ ಮಾರುತಿ ನಗರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರ ಕಡೆಯಿಂದ ಬಂದ ಮಾರುತಿ ವ್ಯಾನ್ ಬಾಲಕಿ ಕೃತಿಕಾಳಿಗೆ ಡಿಕ್ಕಿಯಾಗಿ ತಲೆಗೆ ಗಾಯವಾಗಿದ್ದು, ಆಕೆಯನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ ಪ್ರಕರಣ ದಾಖಲು
               ಯುವತಿಯೊಬ್ಬಳು ಮನೆಯಿಂದ ಕಾಣೆಯಾದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 15/02/2015 ರಂದು ಗೋಣಿಕೊಪ್ಪ ನಗರದ ಬೈಪಾಸ್ ರಸ್ಎಯ ವೆಂಕಟಪ್ಪ ಬಡಾವನಣೆಯ ನಿವಾಸಿ  ಕೋಳೆರ ಸರಳ  ಎಂಬುವವರು ಎಂದಿನಂತೆ  ಕೆಲಸದ ನಿಮಿತ್ತ ಅತ್ತೂರುನಲ್ಲಿರುವ ಫಾಮ್ ವ್ಯಾಲಿ ರಿಸಾರ್ಟ್ ನಲ್ಲಿ  ಕೆಲಸ ಮಾಡಿಕೊಂಡಿದ್ದು ಸಂಜೆ 17-30 ಗಂಟೆಗೆ ಮನೆಗೆ ಹೋದಾಗ ಮನೆಗ ಬೀಗ ಹಾಕಿದ್ದು ಕೈಯಿಲ್ಲದ್ದ ಇನ್ನೂಂದು ಕೀಲಿಯಿಂದ ಬೀಗವನ್ನು ತೆರೆದು ಓಳಗೆ ಹೋಗಿ ನೋಡಲಾಗಿ ಅವರ ಮಗಳು ಪಾವನ ಮನೆಯಲ್ಲಿ ಕಾಣದೇ ಇದ್ದು ಮನೆಯ ಟೀಪಾಯಿ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಮಗಳು ಪಾವನ ತನ್ನ ಸ್ವ ಅಕ್ಷರದಲ್ಲಿ ಇಂಗ್ಲೀಷ್ ನಲ್ಲಿ ತಾನು ಮುಂಬೈಗೆ ಹೋಗಿರುವುದಾಗಿಯೂ ತನ್ನ  ಗುರಿ ಸಾಧನೆ ಮುಗಿದ ನಂತರ ವಾಪಾಸ್ಸು ಬರುವುದಾಗಿ ಪತ್ರ ಬರೆದಿರುವುದಾಗಿ ಣಿಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವೃದ್ದ ಮಹಿಳೆ ಕಾಣೆ
              ಮನೆಯಲ್ಲಿದ್ದ ವೃದ್ದ ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ಹೆಗ್ಗಳದ ಬೂದಿಮಾಳ ನಿವಾಸಿ ವಿನೋದ್ ಎಂಬವರ ತಾಯಿ ತಿಲೋತಮ ಎಂಬವರು  ಆಗಾಗ್ಗೆ ದೇವಸ್ಥಾನ ಹಾಗೂ ನೆಂಟರಿಷ್ಟರ ಮನೆಗೆ ಹೇಳದೇ ಕೇಳದೇ ಹೊಗುತ್ತಿದ್ದು, ನಂತರ 2 ದಿವಸ ಕಳೆದು ಮನೆಗೆ ಬರುತ್ತಿದ್ದು, ದಿನಾಂಕ; 13-02-16ರಂದು ವಿನೋದ್ ರವರು ಸಮಯ ಬೆಳಿಗ್ಗೆ ಪೈಂಟಿಂಗ್ ಕೆಲಸಕ್ಕೆ ಹೋಗುವಾಗ ಅವರ ತಾಯಿ ತಿಲೋತಮರವರು ಮನೆಯಲ್ಲಿದ್ದು,  ನಂತರ ಸಂಜೆ ವಾಪಾಸ್ಸು ಮನೆಗೆ ಬಂದಾಗ ತಾಯಿ ಮನೆಯಲ್ಲಿ ಕಾಣಲಿಲ್ಲ.  ಈ ವಿಚಾರವನ್ನು ಅಣ್ಣ ವಿಜುರವರನ್ನು ವಿಚಾರಿಸಿದಾಗ  ತಾನು ಕಂಡಿಲ್ಲ ಎಂದು ಹೇಳಿದ್ದು, ನಂತರ ತಾಯಿ ತಿಲೋತಮರವರನ್ನು ಸುತ್ತಮುತ್ತ ಹಾಗೂ ನೆಂಟರಿಷ್ಟರ ಮನೆಯಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿಯ ಸಾವು
          ಮರಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಮರದಿಂದ ಬಿದ್ದು ಸಾವಿಗೀಡಾದ ಘಟನೆ  ವಿರಾಜಪೇಟೆ ಬಳಿಯ ಅರಪಟ್ಟು ಗ್ರಾಮದಲ್ಲಿ ನಡೆದಿದೆ. ದಿನಾಂಕ 15-02-16ರಂದು ಅರಪಟ್ಟು ಗ್ರಾಮದ ಪೊದ್ದಮಾನಿ ನಿವಾಸಿ ಅನ್ನಂಬಿರ ಭೀಮಯ್ಯ ಎಂಬವರಲ್ಲಿ  ಸಿದ್ದರಾಜು, ರಮೇಶ್ ಹಾಗೂ ಶೇಟು ಎಂಬವರು ಭೀಮಯ್ಯರವರ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಸಿದ್ದರಾಜು ಮತ್ತು ರಮೇಶ್ರವರು  ಕಾಫಿ ಕುಯ್ಯುವ ಕೆಲಸವನ್ನು ಮಾಡಿಕೊಂಡಿದ್ದು, ಶೇಟುರವರು ಹಲಸಿನ ಮರದ ಕೊಂಬೆಯನ್ನು  ಕಪಾತು ಮಾಡುತ್ತಿದ್ದಾಗ ಅಪರಾಹ್ನ ಶೇಟುರವರು ಸುಮಾರು 30 ಅಡಿ ಎತ್ತರದಿಂದ ಮರದಿಂದ ಕೈ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಹಣ ವಂಚನೆ

              ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ವಿರಾಜಪೇಟೆ ನಗರದ ನೆಹರು ನಗರದಲ್ಲಿ ವಾಸವಾಗಿರುವ ಸಿ.ಕೆ.ರೆಹಮತ್ ಎಂಬ ಯುವತಿಯನ್ನು ಕೇರಳ ರಾಜ್ಯದ ಕಲ್ಪೆಟ್ಟ ನಿವಾಸಿ ಅನ್ವರ್ ಎಂಬುವನು ಕಳೆದ ಸಾಲಿನಲ್ಲಿ ವಿರಾಜಪೇಟೆಗೆ ಬಂದು ಮದುವೆಯಾಗುವುದಾಗಿ ನಂಬಿಸಿ ದಿನಾಂಕ 27-9-2015 ರಂದು ನಿಶ್ಚಿತಾರ್ಥ ಮಾಡಿಕೊಂಡು 50 ಸಾವಿರ ರೂಗಳನ್ನು ಮದುವೆಯ ಖರ್ಚಿಗಾಗಿ ಆತನ ಸ್ನೇಹಿತನ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ದಿನಾಂಕ 14-2-2016 ರಂದು ಎ. ಅನ್ವರ್ ಕಲ್ಯಾಣ ಮಂಟಪ, ವಿರಾಜಪೇಟೆಯಲ್ಲಿ ಮದುವೆಗೆ ದಿನಾಂಕ ಗೊತ್ತುಪಡಿಸಿ ಸದರಿ ದಿನಾಂಕದಂದು ಮದುವೆಗೆ ಬಾರದೇ ಪಿರ್ಯಾದಿಯವರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುವುದಾಗಿ ಮತ್ತು ಆರೋಪಿಯು ಈ ಹಿಂದೆ ಮದುವೆಯಾಗಿದ್ದನ್ನು ಮುಚ್ಚಿಟ್ಟು ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, February 15, 2016

ರಸ್ತೆ ಅಪಘಾತ ವ್ಯಕ್ತಿ ಸಾವು:

     ಮೋಟಾರ್ ಸೈಕಲ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಆನೆಕಾಡು ಹೆದ್ದಾರೆ ರಸ್ತೆಯಲ್ಲಿ ನಡೆದಿದೆ. ಸುಳ್ಯ ತಾಲೋಕು ಕೊಡಿಯಾಲ ಗ್ರಾಮದ ನಿವಾಸಿ ರಾಘವೇಂದ್ರ ಎಂಬವರು ದಿನಾಂಕ 13-2-2016 ರಂದು ರಾತ್ರಿ 21-45 ಗಂಟೆಯ ಸಮಯದಲ್ಲಿ ತಮ್ಮ ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಆನೆಕಾಡು ಹೆದ್ದಾರಿ ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನ ರಾಘವೇಂದ್ರರವರು ಚಾಲಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಸದರಿಯವರನ್ನು ಚಿಕಿತ್ಸೆಗೆ ಕುಶಾಲನಗರ ಆಸ್ಪತ್ರೆಗೆ ಸಾಗಿಸುವಾಗ ಸದರಿಯವರು ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

    ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸೋಮಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಎನ್.ಬಿ. ಸುಬ್ಬಯ್ಯ ಎಂಬವರು ಹರಪಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13-2-2016 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ಕೂಲಿ ಕಾರ್ಮಿಕನ ಸಾವು:

     ಹೊಳೆಯಲ್ಲಿ ಸ್ನಾನಕ್ಕೆ ಹೋದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ಠಾಣಾ ಸರಹದ್ದಿನ ಚಿಕ್ಕತ್ತೂರು ಗ್ರಾಮದ ನಿವಾಸಿ ಸುಬ್ರಮಣಿ ಎಂಬ ವ್ಯಕ್ತಿ ದಿನಾಂಕ 10-2-2016 ರಂದು ಸ್ನಾನಕ್ಕೆಂದು ಕೂಡುಮಂಗಳೂರು ಕಾವೇರಿ ಹೊಳೆಗೆ ಹೋಗಿದ್ದು ಆಕಸ್ಮಿಕ ವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಸಾವನಪ್ಪಿದ್ದು ಈ ಸಂಬಂಧ ದಿನಾಂಕ 14-2-2016 ರಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕ್ ಗೆ ಆಟೋ ಡಿಕ್ಕಿ, ಬೈಕ್ ಸವಾರನ ದುರ್ಮರಣ:

    ಮೋಟಾರ್ ಸೈಕಲ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಮೋಟಾರ್ ಸೈಕಲ್ ಸವಾರ ಸಾವನಪ್ಪಿದ ಘಟನೆ ಮಡಿಕೇರಿ ತಾಲೋಕು ಕೋಪಟ್ಟಿಯಲ್ಲಿ ಸಂಭವಿಸಿದೆ. ಮಡಿಕೇರಿ ತಾಲೂಕು ಚೇರಂಬಾಣಿ ನಿವಾಸಿ ಶ್ರೀಮತಿ ಜಯಂತಿ ಎಂಬವರ ಪತಿ ಬಸಪ್ಪ ಎಂಬವರು ದಿನಾಂಕ 13-2-2016 ರಂದು ಸಂಜೆ 7-20 ಗಂಟೆಗೆ ತಮ್ಮ ಮೋಟಾರ್ ಸೈಕಲ್ ನಲ್ಲಿ ಭಾಗಮಂಡಲ ಕಡೆಯಿಂದ ಚೇರಂಬಾಣೆ ಕಡೆಗೆ ಬರುತ್ತಿದ್ದಾಗ ಆಟೋ ರಿಕ್ಷಾವೊಂದು ಮೋಟಾರ್ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಸವಾರ ಬಸಪ್ಪನವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನಪ್ಪಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, February 14, 2016

ರಸ್ತೆಯ ವಿಚಾರ ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

     ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದ ನಿವಾಸಿ ಪಿರ್ಯಾದಿ ಸಿ.ಎ ಸುಬೇರ್ ರವರು ದಿನಾಂಕ 12-02-2016 ರಂದು ಸಮಯ 9-45 ಎ.ಎಂ ಗೆ ಅಶ್ರಫ್‌ ಎಂಬವರೊಂದಿಗೆ ಎಮ್ಮೆಮಾಡು ಗ್ರಾಮದ ಪಿರ್ಯಾದಿ ಸಿ.ಎ ಸುಬೇರ್ ಅಕ್ಕ ಆಮೀನಾರವರ ಮನೆಯ ಮುಂದೆ ನಿಂತು ಮಾತನಾಡಿಕೊಂಡಿರುವಾಗ್ಗೆ ಆರೋಪಿ ಇಬ್ರಾಹಿಂರವರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಅಲ್ಲಿಗೆ ಬಂದು ಕಾಳೇರ ಉಮ್ಮರ್‌ಗೆ ರಸ್ತೆಯನ್ನು ಬಿಟ್ಟುಕೊಟ್ಟ ವಿಚಾರದಲ್ಲಿ ಜಗಳ ಮಾಡಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ತಲೆಯ ಎಡಭಾಗಕ್ಕೆ, ಬೆನ್ನಿಗೆ, ಎಡಭಾಗದ ಕಾಲಿನ ತೊಡೆಗೆ ಕತ್ತಿಯಿಂದ ಕಡಿದು ರಕ್ತಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Vartika Katiyar, IPS

Saturday, February 13, 2016

  ದುಷ್ಕರ್ಮಿಗಳಿಂದ ಇಬ್ಬರ ಕೊಲೆ:

    ಯಾರೋ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಹಾಗು ಅವರ ಮೊಮ್ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಚೌಡ್ಲು ಗ್ರಾಮದ ನಿವಾಸಿ ಫಿರ್ಯಾದಿ ಜಯಪ್ರಕಾಶ್ ಎಂಬವರ ಮಾವ ಕೊಚ್ಚುಣ್ಣಿ ಹಾಗು ಸದರಿ ಕೊಚ್ಚುಣ್ಣಿರವರ ಮೊಮ್ಮಗ ಅಮೃತಾನಂದ ರವರನ್ನು ದಿನಾಂಕ 11-2-2016 ರ ರಾತ್ರಿಯಿಂದ 12-2-2016ರ ಬೆಳಗೆ 8-30 ಗಂಟೆಯ ಅವದಿಯೊಳಗೆ ಮಲ್ಲೇನಹಳ್ಳಿಯಲ್ಲಿರುವ ಕೊಚ್ಚುಣ್ಣಿರವರ ವಾಸದ ಮನೆಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಆಯುಧವನ್ನು ಬಳಸಿ ಕೊಲೆ ಮಾಡಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯುವತಿ ಕಾಣೆ ಪ್ರಕರಣ ದಾಖಲು:

    ಯುವತಿಯೊಬ್ಬಳು ತಮ್ಮ ಮನೆಯಿಂದ ಕಾಣೆಯಾಗಿರುವುದಾಗಿ ವ್ಯಕ್ತಿಯೊಬ್ಬರು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಪೇಟೆ ಹೊಸಮುನಿಲಿಪಾಲಿಟಿ ರಸ್ತೆಯ ನಿವಾಸಿ ಸದಾಶಿವಚಾರ್ ರವರ ಮಗಳಾದ ಗಾಯತ್ರಿ ಎಂಬವಳು ದಿನಾಂಕ 9-2-2016 ರಂದು ತಮ್ಮ ಮನೆಯಿಂದ ಕಾಣೆಯಾಗಿರುವುದಾಗಿ ಶನಿವಾರಸಂತೆ ಠಾಣೆಗೆ ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, February 12, 2016

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆನಡೆಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ಕಲ್ಲುಕೋರೆಯಲ್ಲಿ ನಡೆದಿದೆ. ದಿನಾಂಕ: 11-02-2016 ರಂದು ಸಮಯ ಸಂಜೆ 07:30 ಗಂಟೆಗೆ ದಿನೇಶ ಎಂಬವರು 7ನೇ ಹೊಸಕೋಟೆ ಗ್ರಾಮದ ರಾಜು ರವರ ಮನೆಯಲ್ಲಿ ಗಾರೆಕೆಲಸ ಮಾಡಿಕೊಂಡಿರುವಾಗ್ಗೆ ಅದೇ ಗ್ರಾಮದ ವಾಸಿಗಳಾದ ಸಲಾಂ ಮತ್ತು ಹರೀಶ ಎಂಬುವವರು ಅಲ್ಲಿಗೆ ಬಂದು ವಿನಾ ಕಾರಣ ಜಗಳ ತೆಗೆದು ಸಲಾಂ ಎಂಬುವವರು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ದಿನೇಶರವರ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದ್ದು ಅದೇ ಸಮಯದಲ್ಲಿ ಅವನ ಜೊತೆಯಲ್ಲಿದ್ದ ಹರೀಶ ಎಂಬುವವನು ತನ್ನ ಕೈಯ್ಯಲ್ಲಿ ತಂದಿದ್ದ ದೊಣ್ಣೆಯಿಂದ ಹೊಡೆದು ಶರೀರದ ಬಾಗಗಳಿಗೆ ನೋವುಪಡಿಸಿರುತ್ತಾರೆಂದು ಹಾಗು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಮೇಲೆ ಆಕೆಯ ದೊಡ್ಡಪ್ಪನಿಂದ ಹಲ್ಲೆ:

     ದಿನಾಂಕ 11-02-2016 ರಂದು ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ 19 ವರ್ಷದ ಕೃಪ ಎಂಬವರು ಪೊನ್ನಂಪೇಟೆ ಸಾಯಿ ಶಂಕರ ಕಾಲೇಜಿಗೆ ಹೋಗಲೆಂದು ಸಮಯ ಬೆಳೀಗ್ಗೆ 08.45 ಗಂಟೆಗೆ ಕೃಷ್ಣಕುಟ್ಟಿ ರವರ ಅಂಗಡಿಯ ಹತ್ತಿರ ಬಂದು ನಿಂತುಕೊಂಡಿದ್ದಾಗ ಅವರ ದೊಡಪ್ಪ ಸತೀಶ ರವರು ಅಲ್ಲಿಗೆ ಬಂದು ಕೃಪಾಳನ್ನು ಕಂಡು ವಿನಾಃಕಾರಣ ತಳ್ಳಿದ್ದು, ಪಿರ್ಯಾಧಿಯವರು ಅಲ್ಲಿ ಏನು ಮಾತನಾಡದೆ ವಾಪಾಸ್ಸು ಮನೆಗೆ ಹೋಗಿ ಸಮಯ ಬೆಳಿಗ್ಗೆ 10:30 ಗಂಟೆಗೆ ಮನೆಯ ಪಕ್ಕದಲ್ಲಿರುವ ಕೆರೆಯ ಹತ್ತಿರ ಹೋಗಿ ಪೇಪರ್ ಓದುತ್ತಿದ್ದಾಗ ಆಕೆಯ ದೊಡಪ್ಪ ಸತೀಶ ರವರು ಪುನಃ ಅಲ್ಲಿಗೆ ಬಂದು ವಿನಾಃಕಾರಣ ಜಗಳ ತೆಗೆದು ಅವರ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಕೃಪಾರವರ ಎಡಕಾಲಿನ ತೊಡೆಯ ಭಾಗಕ್ಕೆ ಹೊಡೆದು ನೋವು ಪಡಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿರುವುದಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೋದರಿಯಿಂದ ಸಹೋದರನ ಬ್ಯಾಂಕ್ ಠೇವಣಿ ಹಣ ದುರುಪಯೋಗ: 
    ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನಿವಾಸಿ ಫಿರ್ಯಾದಿ ನೆಲ್ಲಮಕ್ಕಡ ರಂಜನ್ ಚಿನ್ನಪ್ಪ ರವರ ಹೆಸರಿನಲ್ಲಿ ಅಮ್ಮತ್ತಿ ಒಂಟಿಯಂಗಡಿ ವಿಜಯ ಬ್ಯಾಂಕಿನಲ್ಲಿ 15,00,000/- ರೂಪಾಯಿ ಸ್ಥಿರ ಖಾತೆ ಇದ್ದು, ಸದ್ರಿ ಮೊತ್ತವು ಅವರ ಸ್ಥಿರಾಸ್ಥಿಯಿಂದ ಬಂದ ಫಸಲನ್ನು ಮಾರಾಟ ಮಾಡಿದ್ದಾಗಿರುತ್ತದೆ. ಶ್ರೀಮತಿ ಶೈಲಾ ದೇವಯ್ಯ ರವರು ಫಿರ್ಯಾದಿಯ ತಂಗಿಯಾಗಿದ್ದು, ಸದ್ರಿ ಸ್ಥಿರ ಖಾತೆಯಿಂದ ಬಂದ ಬಡ್ಡಿಯ ಹಣವನ್ನು ಫಿರ್ಯಾದಿಯವರು ತಮ್ಮ ಮಕ್ಕಳ ವ್ಯಾಸಾಂಗ ಹಾಗೂ ತಿಂಗಳ ಖರ್ಚಿಗೆ ಉಪಯೋಗಿಸಿಕೊಳ್ಳು ತ್ತಿದ್ದರು. ಸದ್ರಿ ಸ್ಥಿರಾಸ್ಥಿಯ ವಿರುದ್ದ ಫಿರ್ಯಾದಿಯ ತಂಗಿ ಶೈಲಾ ದೇವಯ್ಯ ನ್ಯಾಯಾಲಯ ದಲ್ಲಿ ದಾವೆ ಹೂಡಿದಲ್ಲದೇ ಹಾಗೂ ಸ್ಥಿರ ಠೇವಣಿಯ ಬಡ್ಡಿ ಹಾಗೂ ಸ್ಥಿರ ಠೇವಣಿಯನ್ನು ಫಿರ್ಯಾದಿಗೆ ಬಿಡುಗಡೆ ಮಾಡದಂತೆ ದಾವೆ ಹೂಡಿ ಫಿರ್ಯಾದಿಯವರ ಖಾತೆಯಿಂದ 30,375/- ರನ್ನು ಎರಡು ಬಾರಿ ಡ್ರಾ ಮಾಡಿ ತನ್ನ ಸ್ವಂತಕ್ಕೆ ಬಳಸಿಕೊಂಡು, ಅಮ್ಮತ್ತಿ ಒಂಟಿಯಂಗಡಿಯ ವಿಜಯಾ ಬ್ಯಾಂಕ್ ಮೇನೇಜರ್ ರವರು ಈ ಪ್ರಕರಣದಲ್ಲಿ ಶಾಮೀಲಾಗಿ ದ್ರೋಹ ಎಸಗಿ, ಮೋಸ ಮಾಡಿರುವುದಾಗಿ ಈ ದಿನ ದಿನಾಂಕ: 11-02-16ರಂದು ನ್ಯಾಯಾಲಯ ನಿರ್ದೇಶಿತ ದೂರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, February 11, 2016

ಅಂಗಡಿ ಬೀಗ ಮುರಿದು ಕಳ್ಳತನ:

     ಸಿದ್ದಾಪುರ ಠಾಣಾ ಸರಹದ್ದಿನ ವಾಲ್ನೂರು ಗ್ರಾಮದ ನಿವಾಸಿ ದರ್ಶನ್ ಎಂಬವರಿಗೆ ವಾಲ್ನೂರು ಗ್ರಾಮದಲ್ಲಿ ಒಂದು ದಿನಸಿ ಅಂಗಡಿಯಿದ್ದು . ದಿನಾಂಕ: 10/02/2016 ರಂದು ಎಂದಿನಂತೆ ರಾತ್ರಿ ಸಮಯ 8.00 ಗಂಟೆಗೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಿದ್ದು ರಾತ್ರಿ ಅಂಗಡಿ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ನುಗ್ಗಿ ಮಾರಾಟಕ್ಕೆ ಅಂಗಡಿಯಲ್ಲಿಟ್ಟಿದ್ದ ಎಸ್.ವಿ.ಟಿ ಬ್ರಾಂಡ್ ನ 25 ಕೆಜಿ ತೂಕದ 8 ಚೀಲ ಕುಶಲಕ್ಕಿ , 25 ಕೆಜಿ ತೂಕದ 7 ಚೀಲ ಬೆಳ್ತಕ್ಕಿ, ಹಾಗೂ 50 ಕೆಜಿ ತೂಕದ ಒಂದು ಚೀಲ ಸಕ್ಕರೆಯನ್ನು ಹಾಗೂ ಅಂಗಡಿಯಲ್ಲಿಟ್ಟಿದ್ದ 1200/- ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು,  ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ದನ ದಾಳಿ ವ್ಯಕ್ತಿ ದುರ್ಮರಣ:
     ದಿನಾಂಕ 11-02-2016 ರಂದು ಸಮಯ ಅಂದಾಜು ಬೆಳಿಗ್ಗೆ 8-00 ಗಂಟೆಗೆ ಮಡಿಕೇರಿ ತಾಲೋಕು ಕೆಗದಾಳು ಗ್ರಾಮದ ನಿವಾಸಿ ಸೋಮಣ್ಣ ಯಾನೆ ವಿಠಲನವರಿಗೆ ದನವು ಹಾಯ್ದು ತೀವ್ರವಾಗಿ ಗಾಯಗೊಂಡು ಅಸ್ವಸ್ಥಗೊಂಡ ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಸದರಿಯವರು ಸಾವನಪ್ಪಿದ್ದು ಈ ಸಂಬಂಧ ಕಡಗದಾಳು ಗ್ರಾಮದ ಮಾದೇಟಿರ ದೇವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, February 10, 2016

ಅಪರಿಚಿತ ವ್ಯಕ್ತಿಯಿಂದ ಹಲ್ಲೆ:

    ಯುವಕನೋರ್ವ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ದಾಸವಾಳ ರಸ್ತೆಯಲ್ಲಿ ನಡೆದಿದೆ. ಮಡಿಕೇರಿ ನಗರದ ದಾಸವಾಳ ರಸ್ತೆ ನಿವಾಸಿ ಫರ್ಧಿನ್ ಎಂಬ ಯುವಕ ದಿನಾಂಕ 9-2-2016 ರಂದು ಸಮಯ 20-30 ಗಂಟೆಗೆ ನಗರದ ದಾಸವಾಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಸದರಿ ಫರ್ಧೀನ್ ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕಪಕ್ಕ ಮೆನೆಯವರ ನಡುವೆ ಜಗಳ:

   ಸಿದ್ದಾಪುರ ಠಾಣಾ ಸರಹದ್ದಿನ ಅಂಬೇಡ್ಕರ್ ನಗರದ ನಿವಾಸಿ ಶ್ರೀಮತಿ ಭಾಗ್ಯ ಹಾಗು ಅವರ ಮನೆಯ ಪಕ್ಕದ ನಿವಾಸಿ ಪ್ರಕಾಶ ಮತ್ತು ಅವರ ಮನೆಯವರು ದಿನಾಂಕ 9-2-20126 ರಂದು ಸಮಯ 19-00 ಗಂಟೆಗೆ ಶ್ರೀಮತಿ ಭಾಗ್ಯರವರ ಮನೆಯ ಒಳಗಡೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿ ಮನೆಯೊಳಗಿದ್ದ ಮಂಚವನ್ನು ಜಖಂಗೊಳಿಸಿದ್ದಲ್ಲದೇ ಮನೆಯ ಹೆಂಚನ್ನು ಸಹ ಆರೋಪಿಗಳು ಒಡೆದು ಹಾಕಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹಳೇ ದ್ವೇಷ, ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

   ಅನೀಸ್ ಕುಮಾರ್ ಎಂಬ ವ್ಯಕ್ತಿ ಪೊನ್ನಂಪೇಟೆ ಠಾಣಾ ಸರಹದ್ದಿನ ಅರುವತ್ತೊಕ್ಕಲು ಗ್ರಾಮದ ಮಲ್ಲಂಡ ಪ್ರಣಯ್ ಪೊನ್ನಣ್ಣನವರ ಲಾರಿ ಚಾಲಕನಾಗಿದ್ದು ದಿನಾಂಕ 9-2-206 ರಂದು ಬೇಂಗೂರು ಗ್ರಾಮದಲ್ಲಿರುವ ಪೊನ್ನಣ್ಣನವರ ಕಾಫಿ ತೋಟದಿಂದ ಕಾಫಿ ತರಲು ಹೋದಾಗ ಆರೋಪಿ ಮಲ್ಲಂಡ ಎನ್. ಪ್ರಕಾಶ್ ಎಂಬವರು ಕಾಫಿಯನ್ನು ಲಾರಿಯಲ್ಲಿ ತುಂಬಿಸಲು ಬಿಡದೆ ಲಾರಿ ಚಾಲಕ ಅನೀಸ್ ರವರನ್ನು ಓಡಿಸಿದ್ದು , ನಂತರ ಅಲ್ಲಿಗೆ ಬಂದ ಮಲ್ಲಂಡ ಪ್ರಣಯ್ ಪೊನ್ನಣ್ಣನವರರ ವಾಹನವನ್ನು ಆರೋಪಿ ಮಲ್ಲಂಡ ಎನ್. ಪ್ರಕಾಶ್ ತಡೆದು ನಿಲ್ಲಿಸಿ ವಾಹನವನ್ನು ಹೋಗಲು ಬಿಡದೆ ಚಾಲಕ ಅನೀಸ್ ರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಂಗಡಿಗೆ ನುಗ್ಗಿ ನಗದು ಮತ್ತು ಅಡಿಕೆ ಕಳವು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕುಂಬಳಚೇರಿ ಪೆರಾಜೆ ಗ್ರಾಮದ ನಿವಾಸಿ ಕಮಲಾಕ್ಷ ಎಂಬವರು ದಿನಾಂಕ 08.02.2016 ರಂದು ರಾತ್ರಿ ಸುಮಾರು 12:00 ಗಂಟೆಗೆ ಕೆಲಸ ಮುಗಿಸಿ ತಮ್ಮ ಅಂಗಡಿಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 09.02.2016 ರಂದು ಬೆಳಿಗ್ಗೆ 11:00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿ ಬಾಗಿಲಿನ ಶೆಲ್ಟರ್ ನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಮುರಿದು ಒಳ ನುಗ್ಗಿ ಅಂಗಡಿಯಲ್ಲಿಟ್ಟಿದ್ದ 6 ಚಿಕ್ಕ ಚೀಲ, 10 ದೊಡ್ಡ ಚೀಲದಲ್ಲಿ ತುಂಬಿದ್ದ ಸುಲಿಯದ ಅಡಿಕೆಯನ್ನು ಮತ್ತು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟಿದ್ದ ನಗದು 13,000/- ಹಣ, ಅಂದಾಜು ಮೌಲ್ಯ 23,000/- ವನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಿಂದ ಮೊಬೈಲ್ ಕಳವು: 

     ಶನಿವಾರಸಂತೆ ಠಾಣಾ ಸರಹದ್ದಿನ ಸುಳುಗಳಲೆ ಗ್ರಾಮದ ನಿವಾಸಿ ಎಸ್.ಎಸ್. ಈರಪ್ಪ ನವರು ದಿನಾಂಕ 9-2-2016 ರಂದು ಸಮಯ ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಮನೆಯಲ್ಲಿ ಇದ್ದು ಬಾಗಿಲನ್ನು ಹಾಕದೇ ಒಳಗಡೆ ಇದ್ದ ಸಂದರ್ಭದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಅವರ ಮನೆಯ ಒಳಗೆ ಬಂದು ದಿವಾನ್‌ಕಾಟ್‌ನ ಮೇಲೆ ಇಟ್ಟಿದ್ದ ಮೊಬೈಲ್‌ನ್ನು ತೆಗೆದು ಜೇಬಿಗೆ ಹಾಕಿಕೊಂಡು ಹೊರಗೆ ಓಡಲು ಯತ್ನಿಸಿದಾಗ ಅದನ್ನು ಕಂಡು ತಕ್ಷಣ ಆರೋಪಿಯನ್ನು ಅಕ್ಕಪಕ್ಕದವರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ನಂತರ ಆತ ಶಾಂತಳ್ಳಿ ಕಟ್ಟೆ ಗ್ರಾಮದ ಸುಧೀಪ್‌ ಎಂದು ತಿಳಿದು ಬಂದಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Tuesday, February 9, 2016

ಬೆಂಕಿ ಅಪಘಾತದಲ್ಲಿ ಮಹಿಳೆ ಸಾವು:

      ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಬೆಂಕಿ ತಾಗಿ ತೀವ್ರಗಾಯಗೊಂಡು ಮೃತಪಟ್ಟ ಘಟನೆ ಮಡಿಕೇರಿ ತಾಲೋಕು ಕುಂದಚೇರಿ ಗ್ರಾಮದಲ್ಲಿ ನಡೆದಿದೆ. ಕುಂದಚೇರಿ ಗ್ರಾಮದಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 33 ವರ್ಷ ಪ್ರಾಯದ ಮಲ್ಲಿಗೆ ದಿನಾಂಕ 6-2-2016 ರಂದು ರಾತ್ರಿ ಬೆಂಕಿಯತ್ತಿರ ಕುಳಿತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿತಗುಲಿ ಗಾಯಗೊಂಡು ತೀವ್ರವಾಗಿ ಗಾಯಗೊಂಡು ದಿನಾಂಕ 8-2-2015 ರಂದು ಆಕೆಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದು, ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತೋಟಕ್ಕೆ ಅಕ್ರಮ ಪ್ರವೇಶ, ಕರಿಮೆಣಸು ಕಳವು:

      ದಿನಾಂಕ 8-2-2016 ರಂದು ಸಮಯ ಸಂಜೆ ಸಮಯ 4-00 ಗಂಟೆಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ನಿವಾಸಿ ಶ್ರೀಮತಿ ಕೆ.ಎಸ್. ಲತಾ ಎಂಬವರ ಬಾಪ್ತು ಸರ್ವೆ ನಂ 65/23 ರಲ್ಲಿ 3.50 ಸೆಂಟ್ , 65/17 ಪಿ2 ರಲ್ಲಿ 50 ಸೆಂಟ್ ಜಾಗಕ್ಕೆ ಆರೋಪಿಗಳಾದ 1) ಕಳ್ಳಿಚಂಡ ನಯನ ಚಂಗಪ್ಪ 2) ರೈಟರ್ ಅಜಿತ್, 3) ಮಲ್ಲಂಗಡ ಕಮಲಾಕ್ಷಿ 4) ಕಾಟಿಮಾಡ ಶರೀನ್ ಮುತ್ತಣ್ಣ, 5)ಮೇಚಂಡ ವಾಸು ಸೋಮಯ್ಯ 6))ಅಳಮೇಂಗಡ ಬೋಸ್ ಮಂದಣ್ಣ 7)ಪಟ್ಟಡ ಶಬರಿ ಸುಬ್ರಮಣಿ ಮಲ್ಲಂಗಡ ಕಮಲಾಕ್ಷಿರವರ ಕುಮ್ಮಕ್ಕಿನಿಂದ ಅಕ್ರಮ ಪ್ರವೇಶ ಮಾಡಿ ತೋಟದಿಂದ ಸುಮಾರು 1000 ದಿಂದ 1200 ಕರಿಮೆಣಸು ಬಳಿಯಿಂದ 20 ರಿಂದ 25 ಕ್ವಿಂಟಾಲ್ ಕರಿಮೆಣಸನ್ನು ಕೊಯ್ದು ಕೆ ಎ 11 ಟಿ 935 ರಲ್ಲಿ ಮಹೇಂದ್ರ ಜೀಪಿನಲ್ಲಿ ಜೊತೆಗೆ 5 ಕಬ್ಬಿಣದ ಏಣಿ ಹಾಗೂ 7 ಬಿದಿರಿನ ಏಣಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮತ್ತು ಈ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಕೊಲೆ ಬೆದರಿಕೆ ಹಾಕಿರುವುದಾಗಿ ಫಿರ್ಯಾದಿ ಶ್ರೀಮತಿ ಕೆ.ಎಸ್. ಲತಾರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ, ಪ್ರಕರಣ ದಾಖಲು:

  ಪೊನ್ನಂಪೇಟೆ ನಗರದ ನಿವಾಸಿ ಶ್ರೀಮತಿ ಹೆಚ್.ಎನ್. ಜಯಲಕ್ಷ್ಮಿ ರವರು ಕೆಲವು ಸಮಯದಿಂದ ಮೈಸೂರಿನಲ್ಲಿ ವಾಸವಾಗಿದ್ದು, ಅವರ ಮಗ 26 ವರ್ಷ ಪ್ರಾಯದ ದರ್ಶನ್ ಎಂಬಾತ ಕೆಲವು ದಿನಗಳಿಂದ ಪೊನ್ನಂಪೇಟೆಯಲ್ಲಿ ವಾಸವಾಗಿದ್ದು ದಿನಾಂಕ 8-2-2016 ರಿಂದ ಕಾಣೆಯಾಗಿರುತ್ತಾನೆಂದು ಸದರಿ ಹೆಚ್.ಎನ್. ಜಯಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಅಪಘಾತ ವ್ಯಕ್ತಿ ಸಾವು:

    ದಿನಾಂಕ 07.02.2016 ರಂದು ಪಿರ್ಯಾದಿ ನೌಶದ್ ಹಾಗೂ ಮೃತ ಮಹಮ್ಮದ್ ರಫೀಕ್‌ ರವರು ಸಿದ್ದಾಪುರದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸು ಜ್ಯೋತಿ ನಗರಕ್ಕೆ ಕೆಎ-12ಬಿ-0793 ರ ಅಜೀಜ್‌ ರವರ ಆಟೋವನ್ನು ಬಾಡಿಗೆಗೆ ಪಡೆದು ಬರುವಾಗ ಸಮಯ ರಾತ್ರಿ 09:30 ಪಿ.ಎಂ.ಗೆ ಸಿದ್ದಾಪುರ - ಕುಶಾಲನಗರ ರಸ್ತೆಯ ಜ್ಯೋತಿನಗರ ತಲುಪುವಾಗ್ಗೆ ಆರೋಪಿ ಅಜೀಜ್‌ ರವರು ಆಟೋವನ್ನು ಅತೀವಾಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ಮಗುಚಿ ಕೆಳಗೆ ಬಿದ್ದ ಪರಿಣಾಮ ಆಟೋದಲ್ಲಿದ್ದ ಪಿರ್ಯಾದಿಯವರಿಗೆ ಎಡಕೈನ ಅಂಗೈಗೆ ಗಾಯವಾಯಿತು ಮತ್ತು ರಫೀಕ್‌ ರವರಿಗೆ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಆತ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, February 7, 2016

ಬದಲಿ ಚೆಕ್ ನೀಡಿ ವ್ಯಕ್ತಿಯಿಂದ ವಂಚನೆ:

ವಿರಾಜಪೇಟೆ ತಾಲೂಕು, ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಕೆ.ಎಸ್. ಅರ್ಜುನ ರವರಿಂದ ಕಂಡಂಗಾಲ ಗ್ರಾಮದ ನಿವಾಸಿ ಜೀವನ್ ಎಂಬವರು ದಿನಾಂಕ 11-7-2015 ರಂದು ಹಣದ ಅವಶ್ಯಕತೆ ಇರುವುದಾಗಿ ಹೇಳಿ ರೂ. 1,00,000/- ಹಣವನ್ನು ಸಾಲವಾಗಿ ಪಡೆದು ಜೀವನ್ ರವರ ಬಾಪ್ತು ಒಂದು ಚೆಕ್ನ್ನು ನೀಡಿದ್ದು ಅದರಂತೆ ಸದರಿ ಚೆಕ್ ನ್ನು ದಿನಾಂಕ: 18-01-16ರಂದು ಪಿರ್ಯಾದಿ ಕೆ.ಎಸ್. ಅರ್ಜುನ ಡ್ರಾ ಮಾಡಲು ವಿರಾಜಪೇಟೆಯ ವಿಜಯ ಬ್ಯಾಂಕ್ ನಲ್ಲಿ ಪ್ರಯತ್ನಿಸಿದಾದ ಅವರಿಗೆ ನೀಡಿದ ಚೆಕ್ ಜೀವನ್ ರವರದಾಗಿರದೆ ಅವರ ತಂದೆ ವಿ.ಟಿ. ನಾಣಯ್ಯ, ರವರಿಗೆ ಸಂಬಂಧಪಟ್ಟಿದ್ದು, ಅಲ್ಲದೆ ಅವರ ತಂದೆ ಮೃತಪಟ್ಟಿರುವುದರಿಂದ ಸದರಿಯವರ ಖಾತೆಯು ಮುಕ್ತಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಫಿರ್ಯಾದಿಗೆ ಸದರಿ ಜೀವನ್ ಬದಲಿ ಚೆಕ್ ನೀಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಮೇಕೇರು ಹೊಸ್ಕೇರಿ ಗ್ರಾಮದ ನಿವಾಸಿ 30 ವರ್ಷ ಪ್ರಾಯದ ರಾಜೇಶ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 6-2-2016 ರಂದು ತಾನು ವಾಸವಾಗಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ತಾಯಿ ಶ್ರೀಮತಿ ಲೀಲಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ ಪತ್ತೆ:

     ವ್ಯಕ್ತಿಯೊಬ್ಬರು ಅಕ್ರಮವಾಗಿ ವಾಹನದಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.ದಿನಾಂಕ 6-2-2016 ರಂದು ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆಯಿಂದ ವ್ಯಕ್ತಿಯೊಬ್ಬರು ಸ್ವರಾಜ್ ಮಜ್ದಾ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಕುಟ್ಟ ಠಾಣಾಧಿಕಾರಿ ಹಾಗು ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ಕೊಲೆ ಬೆದರಿಕೆ:

     ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದ ತಾಲೂಕು ಪಂಚಾಯ್ತಿ ಅಭ್ಯರ್ಥಿ ಹಾಗು ಅವರ ಜೊತೆಯಲ್ಲಿದ್ದ ವ್ಯಕ್ತಿಗಳ ದಾರಿ ತಡೆದು ಕೊಲೆ ಮಾಡುವುದಾಗಿ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ ಘಟನೆ ಬೆಟ್ಟದಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಟ್ಟದಳ್ಳಿ ಗ್ರಾಮದಲ್ಲಿ ಶಾಂತಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿ.ಪಿ. ಅನಿಲ್ ಕುಮಾರ್ ರವರು ದಿನಾಂಕ 06-02-2016 ರಂದು ಸಮಯ 21.00 ಗಂಟೆಗೆ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಹೆಚ್.ಎಂ. ಪ್ರಕಾಶ್, ಶಾಂತಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತ್ರಿಶೂಲ್, ಬಿ.ಎಂ. ಹರೀಶ್, ಹರಗ ಪ್ರಕಾಶ್, ಬಿ.ಸಿ. ಪ್ರಮೋದ್ ರವರೊಂದಿಗೆ ಚುನಾವಣಾ ಪ್ರಚಾರ ಮುಗಿಸಿ ಬೀಕನಳ್ಳಿಯಿಂದ ಸೋಮವಾರಪೇಟೆಗೆ ಜೀಪಿನಲ್ಲಿ ವಾಪಾಸ್ಸು ಬರುತ್ತಿರುವಾಗ್ಗೆ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಎಂಬುವರು ಅವರ ಮನೆಯ ಹತ್ತಿರ ರಸ್ತೆಗೆ ಕೋವಿ ಹಿಡಿದುಕೊಂಡು ಬಂದು ಜೀಪನ್ನು ತಡೆದು ನಿಲ್ಲಿಸಿ ಕೋವಿಯನ್ನು ತೋರಿಸಿ ನೀವುಗಳು ಚುನಾವಣಾ ಪ್ರಚಾರ ಮಾಡಲು ಬೀಕನಳ್ಳಿ ಮತ್ತು ಬೆಟ್ಟದಳ್ಳಿ ಗ್ರಾಮಕ್ಕೆ ಬರಬಾರದು. ಇನ್ನು ಮುಂದೆ ಬಂದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Saturday, February 6, 2016

ನಕಲಿ ಕೀ ಬಳಸಿ ಮನೆಯಿಂದ ಹಣ ಚಿನ್ನಾಭರಣ ಕಳವು:

     ದಿನಾಂಕ 4-2-2016 ರಂದು ಸೋಮವಾರಪೇಟೆ ತಾಲೋಕು ಕಾಗಡಿಕಟ್ಟೆ ಗ್ರಾಮದ ನಿವಾಸಿ ಶ್ರೀಮತಿ ಸಫಿಯಾ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರ ಮನೆಯ ಮುಂದಿನ ಬಾಗಿಲನ್ನು ನಕಲಿ ಕೀ ಮೂಲಕ ತೆರೆದು ಒಳ ಪ್ರವೇಶಿಸಿ ಅವರ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್ ಬೀರುವಿನಿಂದ 15,000=00 ರೂ ನಗದು ಹಣ ಮತ್ತು ಮುಕ್ಕಾಲು ಪೌನಿನ ತಾಳಿ,ಅರ್ಧ ಪೌನಿನ ಓಲೆ ಹ್ಯಾಂಗಿಂಗ್ಸ್, 4 ಗ್ರಾಮ ತೂಕವಿರುವ ಮಕ್ಕಳ ಚಿಕ್ಕ ಉಂಗುರ,ತಲಾ 4 ಪೌನ್ ತೂಕವಿರುವ 4 ಓಲೆಗಳು,ಅರ್ದ ಪೌನ್ ತೂಕವಿರುವ ತುಂಡಾಗಿರುವ ಓಲೆ,ಅರ್ಧ ಪೌನ್ ನ 2 ಸೈಡ್ ಮಾಟಿ, ಒಟ್ಟು ಅಂದಾಜು 30 ಗ್ರಾಂ ತೂಕದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ಜಗಳ ಹಲ್ಲೆ:

    ಸೋಮವಾರಪೇಟೆ ತಾಲೂಕು ಬಾಣಾವರ ಗ್ರಾಮದ ನಿವಾಸಿ ಪಿರ್ಯಾದಿ ಕು: ಶಿಲ್ಪ ರವರು ದಿನಾಂಕ 5-2-2016 ರಂದು ರಾತ್ರಿ ಸಮಯ 08:00 ಗಂಟೆಗೆ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಅವರ ಪಕ್ಕದ ಮನೆಯ ವಾಸಿ ಕೆಂಚ ಆತನ ಹೆಂಡತಿ ಸುಬ್ಬಿ ಮತ್ತು ಮಗಳು ಸೀತುರವರು ಅಲ್ಲಿಗೆ ಬಂದು ಫಿರ್ಯಾದಿಯ ತಂದೆಯವರ ಬಗ್ಗೆ ವಿಚಾರಿಸಿ ಅವರು ಮನೆಯಲ್ಲಿ ಇಲ್ಲ ಎಂದು ತಿಳಿಸಿದ ಕಾರಣಕ್ಕೆ ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂವರು ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟರ್ ನಲ್ಲಿಟ್ಟಿದ್ದ ಹಣ ಕಳವು:

    ಮಡಿಕೇರಿ ನಗರದ ನಿವಾಸಿ ವಿಜಯ ಕುಮಾರ್ ಎಂಬವರು ಮಡಿಕೇರಿಯ ಅರವಿಂದ್ ಜುವೆಲರ್ಸ್ ನಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡಿಕೊಂಡಿದ್ದು, ಅಂಗಡಿಯ ಮಾಲೀಕರು ನೀಡಿದ ಹಣವನ್ನು ಪ್ರತಿದಿನ ಬ್ಯಾಂಕ್‌ ಗೆ ಕಟ್ಟುತ್ತಿದ್ದು, ಅದರಂತೆ ಈ ದಿನ ದಿ: 05-02-2016 ರಂದು ಸಮಯ ಮದ್ಯಾಹ್ನ 1.20 ಗಂಟೆಗೆ ಅಂಗಡಿಯಿಂದ ಮಡಿಕೇರಿಯ ಎಸ್.ಬಿ.ಎಂ ಬ್ಯಾಂಕ್ ಗೆ ಹಣ ಕಟ್ಟಲು ರೂ 1,71,600/- ಮತ್ತು ಸಿಂಡಿಕೇಟ್ ಬ್ಯಾಂಕಿಗೆ ಕಟ್ಟಲು 1,00,000/- ರೂ ಹಣವನ್ನು ಚಲನ್ ಭರ್ತಿ ಮಾಡಿ ತನ್ನ ಬಾಪ್ತು ಸ್ಕೂಟರ್‌ ನ ಸೀಟಿನ ಕೆಳಗೆ ಬಾಕ್ಸಲ್ಲಿ ಹಾಕಿಕೊಂಡು ಕಾಲೇಜು ರಸ್ತೆಯ ಎಸ್.ಬಿ.ಎಂ ಬ್ಯಾಂಕಿನ ಬಳಿ ಹೋಗಿ ವಾಹನವನ್ನು ನಿಲ್ಲಿಸಿ ರೂ 1,71,600/- ತೆಗೆದುಕೊಂಡು, 1,00,000/- ರೂವನ್ನು ವಾಹನದ ಸೀಟಿನ ಕೆಳಗೆ ಇಟ್ಟು, ಹಣ ಕಟ್ಟಲು ಬ್ಯಾಂಕಿನೊಳಗೆ ಹೋಗಿ ಹಣ ಕಟ್ಟಿ ವಾಪಾಸು ಸಮಯ 1.40 ಗಂಟೆಗೆ ಬಂದು ವಾಹನವನ್ನು ನೋಡಿದಾಗ ಸೀಟಿನ ಕ್ಯಾರಿಯರ್ ನಲ್ಲಿಟ್ಟಿದ್ದ ಹಣ ರೂ.1,00,000/- ಇಲ್ಲದೆ ಇರುವುದು ಕಂಡುಬಂದಿದ್ದು, ಸದರಿ ಹಣವನನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
Vartika Katiyar, IPS

Friday, February 5, 2016

 
ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

    ದಿನಾಂಕ 04-02-2016 ರಂದು ನರಿಯಂದಡ ಗ್ರಾಮದ ನಿವಾಸಿ ಕೃಷ್ಣೇಗೌಡ ಎಂಬವರು ಚೆಯ್ಯಂಡಾಣೆಯ ನದೀನಾ ಬಾರ್ ನಲ್ಲಿ ಎಂದಿನಂತೆ ಕ್ಲೀನಿಂಗ್ ಕೆಲಸ ಮಾಡಿಕೊಂಡಿರುವಾಗ್ಗೆ ಚೇಲಾವಾರ ಗ್ರಾಮದ ನಿವಾಸಿ ಪಟ್ಟಚೆರವಂಡ ನಿಕಿನ್‍ರವರು ಅಲ್ಲಿಗೆ ಬಂದು ಕೃಷ್ಣೇಗೌಡ ರವರೊಂದಿಗೆ ಜಗಳ ಮಾಡಿ ಚೂರಿಯಿಂದ ತಲೆಯ ಹಿಂಭಾಗಕ್ಕೆ ಹಾಗೂ ಎಡ ಕೈಯ ಭುಜದ ಭಾಗಕ್ಕೆ ಚುಚ್ಚಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಮಡಿದ್ದಾರೆ.

ಬೈಕ್ ಅವಘಡ ಇಬ್ಬರಿಗೆ ಗಾಯ:
    ಕುಟ್ಟ ಠಾಣಾ ಸರಹದ್ದಿನ ಕುಟ್ಟ ನಗರದಲ್ಲಿ ಬೈಕೊಂದು ಅಪಘಾತಕ್ಕೀಡಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ದಿನಾಂಕ 2-2-2016 ರಂದು ಪಣಿಎರವರ ಸಿಮಣಿ ಎಂಬ ವ್ಯಕ್ತಿ ಕುಟ್ಟ ನಗರದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದು ಅವಘಡ ಸಂಭವಿಸಿ ಬೈಕ್ ಸವಾರ ಮತ್ತು ಪಾದಚಾರಿ ಪಣಿಎರವರ ಸಿಮಣಿ ರವರುಗಳು ಗಾಯಗೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿಗೆ ಬಿದ್ದು ವ್ಯಕ್ತಿ ದುರ್ಮರಣ:

    ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಮಾಳೇಟ್ಟಿರ ಸುಬ್ಬಯ್ಯರವರ ಲೈನ್ ಮನೆಯಲ್ಲಿ ಸುಮಾರು 17ವರ್ಷ ಗಳಿಂದ ವಾಸ ಮಾಡಿಕೊಂಡು ತೋಟ ಕೆಲಸ ಮಾಡಿಕೊಂಡಿದ್ದ ನಾರಾಯಣ ಎಂಬ ವ್ಯಕ್ತಿ ದಿನಾಂಕ 04-02-16 ರಂದು 18-00 ಗಂಟೆ ಸಮಯದಲ್ಲಿ ಮನೆಯ ಹತ್ತಿರವಿರುವ ಕೆರೆಗೆ ಸ್ನಾನ ಮಾಡಿ ಬರುತ್ತೇನೆಂದು ಹೋದವನು ವಾಪಾಸ್ಸು ಬಾರದೇ ಇದ್ದು ಮರುದಿನ ದಿನಾಂಕ 5-1-2016 ರಂದು ಬೆಳಿಗ್ಗೆ ನೋಡಲಾಗಿ ಕೆರೆಯಲ್ಲಿ ನಾರಾಯಣನ ಮೃತ ದೇಹವು ತೇಲುತ್ತಿದ್ದುದು ಕಂಡುಬಂದಿದ್ದು, ಸದರಿ ನಾರಾಯಣ ಕೆರೆಗೆ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆಂದು ಅವರ ಅಣ್ಣ ಟಿ.ಕೆ. ವಾಸುರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, February 2, 2016

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ, ಸ್ಥಳದಲ್ಲೇ ಸಾವು:

     ಬೈಕ್ ವೊಂದಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಕಣದಹಳ್ಳಿ ಗ್ರಾಮದ ನಿವಸಿ ಮಹೇಶ ಎಂಬ ವ್ಯಕ್ತಿ ದಿನಾಂಕ 1-2-2016 ರಂದು ತಮ್ಮ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕೊಡ್ಲಿಪೇಟೆಯ ಬಳಿ ಶಿವರಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಯಾವದೋ ಅಪರಿಚಿತ ವಾಹನ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದು, ಡಿಕ್ಕಿ ಪಡಿಸಿದ ವಾಹನವನ್ನು ನಿಲ್ಲಿಸದೇ ಅದರ ಚಾಲಕ ಹೋಗಿದ್ದು, ಶಿವರಳ್ಳ ಗ್ರಾಮದ ನಿವಾಸಿ ಹೆಚ್. ಲೋಕೇಶ ಎಂಬವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾರದಲ್ಲಿ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

    ಸೋಮವಾರಪೇಟೆ ಠಾಣಾ ಸರಹದ್ದಿನ ಸಜ್ಜಳ್ಳಿ ಗ್ರಾಮದ ನಿವಾಸಿ ಜೆ.ಕೆ. ಗಣೇಶ ಎಂಬವರು ದಿನಾಂಕ 24.01.2016 ರಂದು ಸಮಯ 06:00 ಪಿ.ಎಂಗೆ ಗರ್ವಾಲೆ ಗ್ರಾಮದ ಅಪ್ಪಣ್ಣರವರವ ಅಂಗಡಿಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಸಜ್ಜಳ್ಳಿ ಗ್ರಾಮದ ನಿವಾಸಿಗಳಾದ ಕುಶಾಲ ಹಾಗು ರಾಜು ಎಂಬವರು ಆಸ್ತಿ ವಿಚಾರದಲ್ಲಿ ವೈಷಮ್ಯದಿಂದ ದಾರಿ ತಡೆದು, ಕೈಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಚಾಲಕನ ನಿರ್ಲಕ್ಷ್ಯ ಟಿಪ್ಪರ್ ಲಾರಿ ಹರಿದು ಗಾಯಗೊಂಡ ಬಾಲಕಿ:

     ದುಡುಕು ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಲಾರಿಯೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಘಟನೆ ಮಡಿಕೇರಿ ತಾಲೂಕು ನೆಲಜಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ನಿವಾಸಿ ಎಂ.ಯು.ಮುದ್ದಪ್ಪ ರವರು ಅವರ ಹೆಂಡತಿ ಹಾಗು ಮಗಳು ದಿವ್ಯಳೊಂದಿಗೆ ದಿನಾಂಕ 15-01-2016 ರಂದು ಸಮಯ ಬೆಳಿಗ್ಗೆ 8-45 ಗಂಟೆಗೆ ಮನೆಯಿಂದ ಸಂಕ್ರಾತಿ ಹಬ್ಬ ಮುಗಿಸಿಕೊಂಡು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ತೋಟಕ್ಕೆ ಹೋಗುತ್ತಿರುವಾಗ ನೆಲಜಿ ಗ್ರಾಮದ 2ನೇ ಪರ್ಲಾಂಗ್ ಕಲ್ಲಿನ ರಸ್ತೆ ದುರಸ್ಥಿ ಕೆಲಸ ನಡೆಯುತ್ತಿದ್ದು ಸದರಿ ರಸ್ತೆಯ ಕೆಲಸಕ್ಕೆ ಬಂದಿದ್ದ ಕೆಎ-12-ಎ-7684 ರ ಖಾಲಿ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ಕೆ.ಎ ಹಂಸ ಎಂಬುವರು ಹಿಂಬದಿಗೆ ಚಾಲಿಸುತ್ತಾ ಬಲಗಡೆ ಚಲಾಯಿಸುವ ಬದಲು ಎಡಭಾಗಕ್ಕೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಎಂ.ಯು. ಮುದ್ದಪ್ಪರವರ ಮಗಳು ದಿವ್ಯಳ ಬಲಕಾಲಿನ ಮೇಲೆ ಟಿಪ್ಪರ್ ಲಾರಿಯ ಚಕ್ರವು ಹರಿದು ಮಂಡಿಯಿಂದ ಕೆಳಭಾಗದವರೆಗೆ ಮೂಳೆಗೆ ತೀವ್ರವಾದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ, ಇಬ್ಬರಿಗೆ ಗಾಯ:

    ದಿನಾಂಕ 31-1-2016 ರಂದು ನೆಲಜಿ ಗ್ರಾಮದ ಸಿ.ಎಂ. ಉತ್ತಯ್ಯ ಎಂಬವರು ತನ್ನ ಮಗ ಮೊಣ್ಣಪ್ಪನನ್ನು ನಾಪೋಕ್ಲುವಿನಲ್ಲಿರುವ ಹಾಸ್ಟೇಲ್ ಗೆ ಬಿಡುವ ಉದ್ದೇಶದಿಂದ ತಮ್ಮ ಮೋಟಾರ್ ಸೈಕಲ್ ನಲ್ಲಿ ನೆಲಜಿ ಕಡೆಯಿಂದ ನಾಪೋಕ್ಲು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಆರೋಪಿ ಸಯ್ಯದ್ ಎಂಬವರು ತಮ್ಮ ಬಾಪ್ತು ಗೂಡ್ಸ್ ಆಟೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಉತ್ತಯ್ಯ ಹಾಗು ಮೊಣ್ಣಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Posted by Vartika Katiyar, IPS at 6:58 PM
Monday, February 1, 2016
ಆಕಸ್ಮಿಕ ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು:
     ವ್ಯಕ್ತಿಯೊರ್ವ ದನಗಳನ್ನು ಮೇಯಲು ಬಿಡುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನಪ್ಪಿದ ಘಟನೆವಿರಾಜಪೇಟೆ ಸಮೀಲಕ ಕುಕ್ಲೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ ಕುಕ್ಲೂರು ಗ್ರಾಮದ ನಿವಾಸಿ 55 ವರ್ಷ ಪ್ರಾಯದ ರಾಮು ಎಂಬ ವ್ಯಕ್ತಿ ದಿನಾಂಕ 31-1-2016 ರಂದು ಬೆಳಿಗ್ಗೆ ದನಗಳನ್ನು ಮೇಯಲು ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಕೆರೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಸದರಿ ರಾಮುರವರ ಪತ್ನಿ ಶ್ರೀಮತಿ ಸರಸ್ವತಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ  ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳೆ ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:
     ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರು ಸಾವಿನ ಮನೆಯಲ್ಲಿ ಬಂದ  ವ್ಯಕ್ತಿಯ ಮೇಲೆ  ಹಲ್ಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯ ಪಡಿಸಿದ ಘಟನೆ ಮುರ್ನಾಡು ಹತ್ತಿರದ ಬಾಡಗ ಗ್ರಾಮದಲ್ಲಿ ನಡೆದಿದೆ.   ಕಿಗ್ಗಾಲು ಗ್ರಾಮದ ನಿವಾಸಿ ಶಿವರಾಮ ಎಂಬ ವ್ಯಕ್ತಿ ದಿನಾಂಕ 31-1-2016 ರಂದು  ಆನಂದ ಎಂಬವರ ಮೃತ ದೇಹವನ್ನು ನೋಡುವ ಸಲುವಾಗಿ ಬಾಡಗ ಗ್ರಾಮದಕ್ಕೆ ಹೋಗಿದ್ದು  ಸಾವಿನ ಮನೆಯಲ್ಲಿದ್ದ ಬಾಡಗ ಗ್ರಾಮದ ನಿವಾಸಿಗಳಾದ ಮಹೇಶ ಹಾಗು ಸುಂದರ ರವರುಗಳು ಹಳೇ ದ್ವೇಷದಿಂದ ಶಿವರಾಮ ರವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.