Saturday, February 27, 2016

ವ್ಯಕ್ತಿ ಮೇಲೆ ಮರದ ಕೊಂಬೆ ಬಿದ್ದು ಸಾವು:

     ದಿನಾಂಕ 25-02-2016 ರಂದು ಸಮಯ 04.30 ಪಿ.ಎಂ.ಗೆ ಸಿದ್ಧಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗ್ರಾಮದ ಮೂಡುಬೈಲು ಮಾಚಯ್ಯನವರ ಕಾಫಿ ತೋಟದಲ್ಲಿ ಪ್ರಕಾಶ ಎಂಬುವವರು ಕೆಲಸ ಮಾಡುತ್ತಿದ್ದು, ಅದೇ ಸಮಯದಲ್ಲಿ ಮಳೆ ಬಂದಿದ್ದರಿಂದ ಪ್ರಕಾಶರವರು ಮರದ ಕೆಳಗೆ ನಿಂತುಕೊಂಡಿದ್ದಾಗ, ಮರದ ಕೊಂಬೆಯೊಂದು ಆಕಸ್ಮಿಕವಾಗಿ ಪ್ರಕಾಶನ ಮೇಲೆ ಬಿದ್ದು ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲೂ ಸದರಿಯವರು ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾರುಗಳ ನಡುವೆ ಅಪಘಾತ ಒಬ್ಬನಿಗೆ ಗಾಯ:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಹಿತ್ತಲಕೇರಿ ಗ್ರಾಮದಲ್ಲಿ ಎನ್.ಎನ್. ಚಂದ್ರಶೇಖರ ಎಂಬವರು ದಿನಾಂಕ 26-2-2016 ರಂದು ತಮ್ಮ ಕಾರಿನಲ್ಲಿ ಶನಿವಾರಸಂತೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರಶೇಖರರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚಂದ್ರಶೇಖರರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.