Saturday, February 6, 2016

ನಕಲಿ ಕೀ ಬಳಸಿ ಮನೆಯಿಂದ ಹಣ ಚಿನ್ನಾಭರಣ ಕಳವು:

     ದಿನಾಂಕ 4-2-2016 ರಂದು ಸೋಮವಾರಪೇಟೆ ತಾಲೋಕು ಕಾಗಡಿಕಟ್ಟೆ ಗ್ರಾಮದ ನಿವಾಸಿ ಶ್ರೀಮತಿ ಸಫಿಯಾ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರ ಮನೆಯ ಮುಂದಿನ ಬಾಗಿಲನ್ನು ನಕಲಿ ಕೀ ಮೂಲಕ ತೆರೆದು ಒಳ ಪ್ರವೇಶಿಸಿ ಅವರ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್ ಬೀರುವಿನಿಂದ 15,000=00 ರೂ ನಗದು ಹಣ ಮತ್ತು ಮುಕ್ಕಾಲು ಪೌನಿನ ತಾಳಿ,ಅರ್ಧ ಪೌನಿನ ಓಲೆ ಹ್ಯಾಂಗಿಂಗ್ಸ್, 4 ಗ್ರಾಮ ತೂಕವಿರುವ ಮಕ್ಕಳ ಚಿಕ್ಕ ಉಂಗುರ,ತಲಾ 4 ಪೌನ್ ತೂಕವಿರುವ 4 ಓಲೆಗಳು,ಅರ್ದ ಪೌನ್ ತೂಕವಿರುವ ತುಂಡಾಗಿರುವ ಓಲೆ,ಅರ್ಧ ಪೌನ್ ನ 2 ಸೈಡ್ ಮಾಟಿ, ಒಟ್ಟು ಅಂದಾಜು 30 ಗ್ರಾಂ ತೂಕದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ಜಗಳ ಹಲ್ಲೆ:

    ಸೋಮವಾರಪೇಟೆ ತಾಲೂಕು ಬಾಣಾವರ ಗ್ರಾಮದ ನಿವಾಸಿ ಪಿರ್ಯಾದಿ ಕು: ಶಿಲ್ಪ ರವರು ದಿನಾಂಕ 5-2-2016 ರಂದು ರಾತ್ರಿ ಸಮಯ 08:00 ಗಂಟೆಗೆ ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಅವರ ಪಕ್ಕದ ಮನೆಯ ವಾಸಿ ಕೆಂಚ ಆತನ ಹೆಂಡತಿ ಸುಬ್ಬಿ ಮತ್ತು ಮಗಳು ಸೀತುರವರು ಅಲ್ಲಿಗೆ ಬಂದು ಫಿರ್ಯಾದಿಯ ತಂದೆಯವರ ಬಗ್ಗೆ ವಿಚಾರಿಸಿ ಅವರು ಮನೆಯಲ್ಲಿ ಇಲ್ಲ ಎಂದು ತಿಳಿಸಿದ ಕಾರಣಕ್ಕೆ ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೂವರು ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟರ್ ನಲ್ಲಿಟ್ಟಿದ್ದ ಹಣ ಕಳವು:

    ಮಡಿಕೇರಿ ನಗರದ ನಿವಾಸಿ ವಿಜಯ ಕುಮಾರ್ ಎಂಬವರು ಮಡಿಕೇರಿಯ ಅರವಿಂದ್ ಜುವೆಲರ್ಸ್ ನಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡಿಕೊಂಡಿದ್ದು, ಅಂಗಡಿಯ ಮಾಲೀಕರು ನೀಡಿದ ಹಣವನ್ನು ಪ್ರತಿದಿನ ಬ್ಯಾಂಕ್‌ ಗೆ ಕಟ್ಟುತ್ತಿದ್ದು, ಅದರಂತೆ ಈ ದಿನ ದಿ: 05-02-2016 ರಂದು ಸಮಯ ಮದ್ಯಾಹ್ನ 1.20 ಗಂಟೆಗೆ ಅಂಗಡಿಯಿಂದ ಮಡಿಕೇರಿಯ ಎಸ್.ಬಿ.ಎಂ ಬ್ಯಾಂಕ್ ಗೆ ಹಣ ಕಟ್ಟಲು ರೂ 1,71,600/- ಮತ್ತು ಸಿಂಡಿಕೇಟ್ ಬ್ಯಾಂಕಿಗೆ ಕಟ್ಟಲು 1,00,000/- ರೂ ಹಣವನ್ನು ಚಲನ್ ಭರ್ತಿ ಮಾಡಿ ತನ್ನ ಬಾಪ್ತು ಸ್ಕೂಟರ್‌ ನ ಸೀಟಿನ ಕೆಳಗೆ ಬಾಕ್ಸಲ್ಲಿ ಹಾಕಿಕೊಂಡು ಕಾಲೇಜು ರಸ್ತೆಯ ಎಸ್.ಬಿ.ಎಂ ಬ್ಯಾಂಕಿನ ಬಳಿ ಹೋಗಿ ವಾಹನವನ್ನು ನಿಲ್ಲಿಸಿ ರೂ 1,71,600/- ತೆಗೆದುಕೊಂಡು, 1,00,000/- ರೂವನ್ನು ವಾಹನದ ಸೀಟಿನ ಕೆಳಗೆ ಇಟ್ಟು, ಹಣ ಕಟ್ಟಲು ಬ್ಯಾಂಕಿನೊಳಗೆ ಹೋಗಿ ಹಣ ಕಟ್ಟಿ ವಾಪಾಸು ಸಮಯ 1.40 ಗಂಟೆಗೆ ಬಂದು ವಾಹನವನ್ನು ನೋಡಿದಾಗ ಸೀಟಿನ ಕ್ಯಾರಿಯರ್ ನಲ್ಲಿಟ್ಟಿದ್ದ ಹಣ ರೂ.1,00,000/- ಇಲ್ಲದೆ ಇರುವುದು ಕಂಡುಬಂದಿದ್ದು, ಸದರಿ ಹಣವನನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
Vartika Katiyar, IPS

Friday, February 5, 2016

 
ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

    ದಿನಾಂಕ 04-02-2016 ರಂದು ನರಿಯಂದಡ ಗ್ರಾಮದ ನಿವಾಸಿ ಕೃಷ್ಣೇಗೌಡ ಎಂಬವರು ಚೆಯ್ಯಂಡಾಣೆಯ ನದೀನಾ ಬಾರ್ ನಲ್ಲಿ ಎಂದಿನಂತೆ ಕ್ಲೀನಿಂಗ್ ಕೆಲಸ ಮಾಡಿಕೊಂಡಿರುವಾಗ್ಗೆ ಚೇಲಾವಾರ ಗ್ರಾಮದ ನಿವಾಸಿ ಪಟ್ಟಚೆರವಂಡ ನಿಕಿನ್‍ರವರು ಅಲ್ಲಿಗೆ ಬಂದು ಕೃಷ್ಣೇಗೌಡ ರವರೊಂದಿಗೆ ಜಗಳ ಮಾಡಿ ಚೂರಿಯಿಂದ ತಲೆಯ ಹಿಂಭಾಗಕ್ಕೆ ಹಾಗೂ ಎಡ ಕೈಯ ಭುಜದ ಭಾಗಕ್ಕೆ ಚುಚ್ಚಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಮಡಿದ್ದಾರೆ.

ಬೈಕ್ ಅವಘಡ ಇಬ್ಬರಿಗೆ ಗಾಯ:
    ಕುಟ್ಟ ಠಾಣಾ ಸರಹದ್ದಿನ ಕುಟ್ಟ ನಗರದಲ್ಲಿ ಬೈಕೊಂದು ಅಪಘಾತಕ್ಕೀಡಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ದಿನಾಂಕ 2-2-2016 ರಂದು ಪಣಿಎರವರ ಸಿಮಣಿ ಎಂಬ ವ್ಯಕ್ತಿ ಕುಟ್ಟ ನಗರದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದು ಅವಘಡ ಸಂಭವಿಸಿ ಬೈಕ್ ಸವಾರ ಮತ್ತು ಪಾದಚಾರಿ ಪಣಿಎರವರ ಸಿಮಣಿ ರವರುಗಳು ಗಾಯಗೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿಗೆ ಬಿದ್ದು ವ್ಯಕ್ತಿ ದುರ್ಮರಣ:

    ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಮಾಳೇಟ್ಟಿರ ಸುಬ್ಬಯ್ಯರವರ ಲೈನ್ ಮನೆಯಲ್ಲಿ ಸುಮಾರು 17ವರ್ಷ ಗಳಿಂದ ವಾಸ ಮಾಡಿಕೊಂಡು ತೋಟ ಕೆಲಸ ಮಾಡಿಕೊಂಡಿದ್ದ ನಾರಾಯಣ ಎಂಬ ವ್ಯಕ್ತಿ ದಿನಾಂಕ 04-02-16 ರಂದು 18-00 ಗಂಟೆ ಸಮಯದಲ್ಲಿ ಮನೆಯ ಹತ್ತಿರವಿರುವ ಕೆರೆಗೆ ಸ್ನಾನ ಮಾಡಿ ಬರುತ್ತೇನೆಂದು ಹೋದವನು ವಾಪಾಸ್ಸು ಬಾರದೇ ಇದ್ದು ಮರುದಿನ ದಿನಾಂಕ 5-1-2016 ರಂದು ಬೆಳಿಗ್ಗೆ ನೋಡಲಾಗಿ ಕೆರೆಯಲ್ಲಿ ನಾರಾಯಣನ ಮೃತ ದೇಹವು ತೇಲುತ್ತಿದ್ದುದು ಕಂಡುಬಂದಿದ್ದು, ಸದರಿ ನಾರಾಯಣ ಕೆರೆಗೆ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆಂದು ಅವರ ಅಣ್ಣ ಟಿ.ಕೆ. ವಾಸುರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.