Friday, February 12, 2016

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆನಡೆಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದ ಕಲ್ಲುಕೋರೆಯಲ್ಲಿ ನಡೆದಿದೆ. ದಿನಾಂಕ: 11-02-2016 ರಂದು ಸಮಯ ಸಂಜೆ 07:30 ಗಂಟೆಗೆ ದಿನೇಶ ಎಂಬವರು 7ನೇ ಹೊಸಕೋಟೆ ಗ್ರಾಮದ ರಾಜು ರವರ ಮನೆಯಲ್ಲಿ ಗಾರೆಕೆಲಸ ಮಾಡಿಕೊಂಡಿರುವಾಗ್ಗೆ ಅದೇ ಗ್ರಾಮದ ವಾಸಿಗಳಾದ ಸಲಾಂ ಮತ್ತು ಹರೀಶ ಎಂಬುವವರು ಅಲ್ಲಿಗೆ ಬಂದು ವಿನಾ ಕಾರಣ ಜಗಳ ತೆಗೆದು ಸಲಾಂ ಎಂಬುವವರು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ದಿನೇಶರವರ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದ್ದು ಅದೇ ಸಮಯದಲ್ಲಿ ಅವನ ಜೊತೆಯಲ್ಲಿದ್ದ ಹರೀಶ ಎಂಬುವವನು ತನ್ನ ಕೈಯ್ಯಲ್ಲಿ ತಂದಿದ್ದ ದೊಣ್ಣೆಯಿಂದ ಹೊಡೆದು ಶರೀರದ ಬಾಗಗಳಿಗೆ ನೋವುಪಡಿಸಿರುತ್ತಾರೆಂದು ಹಾಗು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಮೇಲೆ ಆಕೆಯ ದೊಡ್ಡಪ್ಪನಿಂದ ಹಲ್ಲೆ:

     ದಿನಾಂಕ 11-02-2016 ರಂದು ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ 19 ವರ್ಷದ ಕೃಪ ಎಂಬವರು ಪೊನ್ನಂಪೇಟೆ ಸಾಯಿ ಶಂಕರ ಕಾಲೇಜಿಗೆ ಹೋಗಲೆಂದು ಸಮಯ ಬೆಳೀಗ್ಗೆ 08.45 ಗಂಟೆಗೆ ಕೃಷ್ಣಕುಟ್ಟಿ ರವರ ಅಂಗಡಿಯ ಹತ್ತಿರ ಬಂದು ನಿಂತುಕೊಂಡಿದ್ದಾಗ ಅವರ ದೊಡಪ್ಪ ಸತೀಶ ರವರು ಅಲ್ಲಿಗೆ ಬಂದು ಕೃಪಾಳನ್ನು ಕಂಡು ವಿನಾಃಕಾರಣ ತಳ್ಳಿದ್ದು, ಪಿರ್ಯಾಧಿಯವರು ಅಲ್ಲಿ ಏನು ಮಾತನಾಡದೆ ವಾಪಾಸ್ಸು ಮನೆಗೆ ಹೋಗಿ ಸಮಯ ಬೆಳಿಗ್ಗೆ 10:30 ಗಂಟೆಗೆ ಮನೆಯ ಪಕ್ಕದಲ್ಲಿರುವ ಕೆರೆಯ ಹತ್ತಿರ ಹೋಗಿ ಪೇಪರ್ ಓದುತ್ತಿದ್ದಾಗ ಆಕೆಯ ದೊಡಪ್ಪ ಸತೀಶ ರವರು ಪುನಃ ಅಲ್ಲಿಗೆ ಬಂದು ವಿನಾಃಕಾರಣ ಜಗಳ ತೆಗೆದು ಅವರ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಕೃಪಾರವರ ಎಡಕಾಲಿನ ತೊಡೆಯ ಭಾಗಕ್ಕೆ ಹೊಡೆದು ನೋವು ಪಡಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿರುವುದಾಗಿ ಕುಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹೋದರಿಯಿಂದ ಸಹೋದರನ ಬ್ಯಾಂಕ್ ಠೇವಣಿ ಹಣ ದುರುಪಯೋಗ: 
    ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನಿವಾಸಿ ಫಿರ್ಯಾದಿ ನೆಲ್ಲಮಕ್ಕಡ ರಂಜನ್ ಚಿನ್ನಪ್ಪ ರವರ ಹೆಸರಿನಲ್ಲಿ ಅಮ್ಮತ್ತಿ ಒಂಟಿಯಂಗಡಿ ವಿಜಯ ಬ್ಯಾಂಕಿನಲ್ಲಿ 15,00,000/- ರೂಪಾಯಿ ಸ್ಥಿರ ಖಾತೆ ಇದ್ದು, ಸದ್ರಿ ಮೊತ್ತವು ಅವರ ಸ್ಥಿರಾಸ್ಥಿಯಿಂದ ಬಂದ ಫಸಲನ್ನು ಮಾರಾಟ ಮಾಡಿದ್ದಾಗಿರುತ್ತದೆ. ಶ್ರೀಮತಿ ಶೈಲಾ ದೇವಯ್ಯ ರವರು ಫಿರ್ಯಾದಿಯ ತಂಗಿಯಾಗಿದ್ದು, ಸದ್ರಿ ಸ್ಥಿರ ಖಾತೆಯಿಂದ ಬಂದ ಬಡ್ಡಿಯ ಹಣವನ್ನು ಫಿರ್ಯಾದಿಯವರು ತಮ್ಮ ಮಕ್ಕಳ ವ್ಯಾಸಾಂಗ ಹಾಗೂ ತಿಂಗಳ ಖರ್ಚಿಗೆ ಉಪಯೋಗಿಸಿಕೊಳ್ಳು ತ್ತಿದ್ದರು. ಸದ್ರಿ ಸ್ಥಿರಾಸ್ಥಿಯ ವಿರುದ್ದ ಫಿರ್ಯಾದಿಯ ತಂಗಿ ಶೈಲಾ ದೇವಯ್ಯ ನ್ಯಾಯಾಲಯ ದಲ್ಲಿ ದಾವೆ ಹೂಡಿದಲ್ಲದೇ ಹಾಗೂ ಸ್ಥಿರ ಠೇವಣಿಯ ಬಡ್ಡಿ ಹಾಗೂ ಸ್ಥಿರ ಠೇವಣಿಯನ್ನು ಫಿರ್ಯಾದಿಗೆ ಬಿಡುಗಡೆ ಮಾಡದಂತೆ ದಾವೆ ಹೂಡಿ ಫಿರ್ಯಾದಿಯವರ ಖಾತೆಯಿಂದ 30,375/- ರನ್ನು ಎರಡು ಬಾರಿ ಡ್ರಾ ಮಾಡಿ ತನ್ನ ಸ್ವಂತಕ್ಕೆ ಬಳಸಿಕೊಂಡು, ಅಮ್ಮತ್ತಿ ಒಂಟಿಯಂಗಡಿಯ ವಿಜಯಾ ಬ್ಯಾಂಕ್ ಮೇನೇಜರ್ ರವರು ಈ ಪ್ರಕರಣದಲ್ಲಿ ಶಾಮೀಲಾಗಿ ದ್ರೋಹ ಎಸಗಿ, ಮೋಸ ಮಾಡಿರುವುದಾಗಿ ಈ ದಿನ ದಿನಾಂಕ: 11-02-16ರಂದು ನ್ಯಾಯಾಲಯ ನಿರ್ದೇಶಿತ ದೂರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.