Thursday, February 11, 2016

ಅಂಗಡಿ ಬೀಗ ಮುರಿದು ಕಳ್ಳತನ:

     ಸಿದ್ದಾಪುರ ಠಾಣಾ ಸರಹದ್ದಿನ ವಾಲ್ನೂರು ಗ್ರಾಮದ ನಿವಾಸಿ ದರ್ಶನ್ ಎಂಬವರಿಗೆ ವಾಲ್ನೂರು ಗ್ರಾಮದಲ್ಲಿ ಒಂದು ದಿನಸಿ ಅಂಗಡಿಯಿದ್ದು . ದಿನಾಂಕ: 10/02/2016 ರಂದು ಎಂದಿನಂತೆ ರಾತ್ರಿ ಸಮಯ 8.00 ಗಂಟೆಗೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಿದ್ದು ರಾತ್ರಿ ಅಂಗಡಿ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ನುಗ್ಗಿ ಮಾರಾಟಕ್ಕೆ ಅಂಗಡಿಯಲ್ಲಿಟ್ಟಿದ್ದ ಎಸ್.ವಿ.ಟಿ ಬ್ರಾಂಡ್ ನ 25 ಕೆಜಿ ತೂಕದ 8 ಚೀಲ ಕುಶಲಕ್ಕಿ , 25 ಕೆಜಿ ತೂಕದ 7 ಚೀಲ ಬೆಳ್ತಕ್ಕಿ, ಹಾಗೂ 50 ಕೆಜಿ ತೂಕದ ಒಂದು ಚೀಲ ಸಕ್ಕರೆಯನ್ನು ಹಾಗೂ ಅಂಗಡಿಯಲ್ಲಿಟ್ಟಿದ್ದ 1200/- ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು,  ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ದನ ದಾಳಿ ವ್ಯಕ್ತಿ ದುರ್ಮರಣ:
     ದಿನಾಂಕ 11-02-2016 ರಂದು ಸಮಯ ಅಂದಾಜು ಬೆಳಿಗ್ಗೆ 8-00 ಗಂಟೆಗೆ ಮಡಿಕೇರಿ ತಾಲೋಕು ಕೆಗದಾಳು ಗ್ರಾಮದ ನಿವಾಸಿ ಸೋಮಣ್ಣ ಯಾನೆ ವಿಠಲನವರಿಗೆ ದನವು ಹಾಯ್ದು ತೀವ್ರವಾಗಿ ಗಾಯಗೊಂಡು ಅಸ್ವಸ್ಥಗೊಂಡ ಚಿಕಿತ್ಸೆ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಸದರಿಯವರು ಸಾವನಪ್ಪಿದ್ದು ಈ ಸಂಬಂಧ ಕಡಗದಾಳು ಗ್ರಾಮದ ಮಾದೇಟಿರ ದೇವಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.