Sunday, February 14, 2016

ರಸ್ತೆಯ ವಿಚಾರ ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

     ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದ ನಿವಾಸಿ ಪಿರ್ಯಾದಿ ಸಿ.ಎ ಸುಬೇರ್ ರವರು ದಿನಾಂಕ 12-02-2016 ರಂದು ಸಮಯ 9-45 ಎ.ಎಂ ಗೆ ಅಶ್ರಫ್‌ ಎಂಬವರೊಂದಿಗೆ ಎಮ್ಮೆಮಾಡು ಗ್ರಾಮದ ಪಿರ್ಯಾದಿ ಸಿ.ಎ ಸುಬೇರ್ ಅಕ್ಕ ಆಮೀನಾರವರ ಮನೆಯ ಮುಂದೆ ನಿಂತು ಮಾತನಾಡಿಕೊಂಡಿರುವಾಗ್ಗೆ ಆರೋಪಿ ಇಬ್ರಾಹಿಂರವರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಅಲ್ಲಿಗೆ ಬಂದು ಕಾಳೇರ ಉಮ್ಮರ್‌ಗೆ ರಸ್ತೆಯನ್ನು ಬಿಟ್ಟುಕೊಟ್ಟ ವಿಚಾರದಲ್ಲಿ ಜಗಳ ಮಾಡಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ತಲೆಯ ಎಡಭಾಗಕ್ಕೆ, ಬೆನ್ನಿಗೆ, ಎಡಭಾಗದ ಕಾಲಿನ ತೊಡೆಗೆ ಕತ್ತಿಯಿಂದ ಕಡಿದು ರಕ್ತಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Vartika Katiyar, IPS

Saturday, February 13, 2016

  ದುಷ್ಕರ್ಮಿಗಳಿಂದ ಇಬ್ಬರ ಕೊಲೆ:

    ಯಾರೋ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಹಾಗು ಅವರ ಮೊಮ್ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಚೌಡ್ಲು ಗ್ರಾಮದ ನಿವಾಸಿ ಫಿರ್ಯಾದಿ ಜಯಪ್ರಕಾಶ್ ಎಂಬವರ ಮಾವ ಕೊಚ್ಚುಣ್ಣಿ ಹಾಗು ಸದರಿ ಕೊಚ್ಚುಣ್ಣಿರವರ ಮೊಮ್ಮಗ ಅಮೃತಾನಂದ ರವರನ್ನು ದಿನಾಂಕ 11-2-2016 ರ ರಾತ್ರಿಯಿಂದ 12-2-2016ರ ಬೆಳಗೆ 8-30 ಗಂಟೆಯ ಅವದಿಯೊಳಗೆ ಮಲ್ಲೇನಹಳ್ಳಿಯಲ್ಲಿರುವ ಕೊಚ್ಚುಣ್ಣಿರವರ ವಾಸದ ಮನೆಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಆಯುಧವನ್ನು ಬಳಸಿ ಕೊಲೆ ಮಾಡಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯುವತಿ ಕಾಣೆ ಪ್ರಕರಣ ದಾಖಲು:

    ಯುವತಿಯೊಬ್ಬಳು ತಮ್ಮ ಮನೆಯಿಂದ ಕಾಣೆಯಾಗಿರುವುದಾಗಿ ವ್ಯಕ್ತಿಯೊಬ್ಬರು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಪೇಟೆ ಹೊಸಮುನಿಲಿಪಾಲಿಟಿ ರಸ್ತೆಯ ನಿವಾಸಿ ಸದಾಶಿವಚಾರ್ ರವರ ಮಗಳಾದ ಗಾಯತ್ರಿ ಎಂಬವಳು ದಿನಾಂಕ 9-2-2016 ರಂದು ತಮ್ಮ ಮನೆಯಿಂದ ಕಾಣೆಯಾಗಿರುವುದಾಗಿ ಶನಿವಾರಸಂತೆ ಠಾಣೆಗೆ ದೂರನ್ನು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.