Monday, February 29, 2016

ಅಕ್ರಮ ಮರಳು ಸಾಗಾಟ ಆರೋಪಿ ಬಂಧನ::

     ಅಕ್ರಮವಾಗಿ ಮರಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ 27-2-2016 ರಂದು ಸಮಯ ಬೆಳಿಗ್ಗೆ 6-00 ಗಂಟೆಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾನೂರು ರಸ್ತೆಯಲ್ಲಿ ಆರೋಪಿ ಹುಣಸೂರು ತಾಲೋಕು ರತ್ನಪುರಿ ನಿವಾಸಿ ರವಿ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ತೆಗೆದು ಮಾರಾಟ ಮಾಡಲು ಕೆಎ12 ಎ5741 ರ ಸ್ವರಾಜ್ ಮಜ್ದಾ ಮಿನಿ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಮರಳು ತುಂಬಿದ ವಾಹನ ಸಮೇತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿತ್ರಾಣಗೊಂಡು ಕೂಲಿ ಕಾರ್ಮಿಕ ಸಾವು:

      ಸುಂಟಿಕೊಪ್ಪ ಠಾಣಾ ಸರಹದ್ದಿನ ಮಹಾಲಕ್ಷ್ಮಿ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡ್ಡಿದ್ದ ಒರಿಸ್ಸಾ ಮೂಲದ ವ್ಯಕ್ತಿ 36 ವರ್ಷ ಪ್ರಾಯದ ಕೈಲಾಸ್ ಎಂಬವರು ದಿನಾಂಕ 27-2-2016 ರಂದು ತುಂಬಾ ನಿತ್ರಾಣಗೊಂಡು ಅಸ್ವಸ್ಥಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆ ಸಂದರ್ಭದಲ್ಲಿ ಸದರಿ ವ್ಯಕ್ತಿ ಮೃತಪಟ್ಟಿದ್ದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಆರೋಪಿ ಬಂಧನ:

           ಅಕ್ರಮವಾಗಿ ಮರಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ 27-2-2016 ರಂದು ಸಮಯ ಬೆಳಿಗ್ಗೆ 6-00 ಗಂಟೆಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನಪ್ಪಸಂತೆ ಜಂಕ್ಷನ್ ನಲ್ಲಿ ಆರೋಪಿಗಳಾದ ಹೆಬ್ಬಾಲೆ ದೇವರಪುರ ಗ್ರಾಮದ ನಿವಾಸಿ ಪಿ.ಎಸ್. ಸೋಮಶೇಖರ್ ಹಾಗು ಹುಣಸೂರು ತಾಲೋಕು ರತ್ನಪುರಿ ನಿವಾಸಿ ರವಿ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ತೆಗೆದು ಮಾರಾಟ ಮಾಡಲು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್. ಜಯರಾಮ್ ಮತ್ತು ಸಿಬ್ಬಂದಿಯವರು ಪತ್ತೆ ಹಚ್ಚಿ ಆರೋಪಿಗಳನ್ನು ಮರಳು ತುಂಬಿದ ವಾಹನ ಸಮೇತವಾಗಿ ವಶಕ್ಕೆ ಪಡೆದು ಪ್ರತ್ಯೇಕವಾಗಿ ಎರಡು ಪ್ರಕರಣಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಲಾರಿ ಅವಘಡ ಕ್ಲೀನರ್ ಗೆ ಗಾಯ:

      ದಿನಾಂಕ 28-2-2016 ರಂದು ಸಮಯ ಸಂಜೆ 5-45 ಗಂಟೆಗೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನ್ಯಾಯದಳ್ಳ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಲಾರಿ ಚಾಲಕ ಮಹೇಂದ್ರ ಎಂಬವರು ಚಾಲಿಸುತ್ತಿದ್ದ ಮಣ್ಣು ತುಂಬಿದ ಟಿಪ್ಪರ್ ಲಾರಿ ಅಪಘಾತಕ್ಕೀಡಾಗಿ ಲಾರಿಯಲ್ಲಿದ್ದ ಕ್ಲೀನರ್ ಸೋಮವಾರಪೇಟೆ ತಾಲೂಕು ಬೆಸೂರು ಗ್ರಾಮದ ನಿವಾಸಿ ವೀರೂಪಾಕ್ಷ ಎಂಬ ವ್ಯಕ್ತಿಗೆ ಗಾಯಗಳಾಗಿದ್ದು, ಸದರಿ ವೀರೂಪಾಕ್ಷ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.