Sunday, February 7, 2016

ಬದಲಿ ಚೆಕ್ ನೀಡಿ ವ್ಯಕ್ತಿಯಿಂದ ವಂಚನೆ:

ವಿರಾಜಪೇಟೆ ತಾಲೂಕು, ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಕೆ.ಎಸ್. ಅರ್ಜುನ ರವರಿಂದ ಕಂಡಂಗಾಲ ಗ್ರಾಮದ ನಿವಾಸಿ ಜೀವನ್ ಎಂಬವರು ದಿನಾಂಕ 11-7-2015 ರಂದು ಹಣದ ಅವಶ್ಯಕತೆ ಇರುವುದಾಗಿ ಹೇಳಿ ರೂ. 1,00,000/- ಹಣವನ್ನು ಸಾಲವಾಗಿ ಪಡೆದು ಜೀವನ್ ರವರ ಬಾಪ್ತು ಒಂದು ಚೆಕ್ನ್ನು ನೀಡಿದ್ದು ಅದರಂತೆ ಸದರಿ ಚೆಕ್ ನ್ನು ದಿನಾಂಕ: 18-01-16ರಂದು ಪಿರ್ಯಾದಿ ಕೆ.ಎಸ್. ಅರ್ಜುನ ಡ್ರಾ ಮಾಡಲು ವಿರಾಜಪೇಟೆಯ ವಿಜಯ ಬ್ಯಾಂಕ್ ನಲ್ಲಿ ಪ್ರಯತ್ನಿಸಿದಾದ ಅವರಿಗೆ ನೀಡಿದ ಚೆಕ್ ಜೀವನ್ ರವರದಾಗಿರದೆ ಅವರ ತಂದೆ ವಿ.ಟಿ. ನಾಣಯ್ಯ, ರವರಿಗೆ ಸಂಬಂಧಪಟ್ಟಿದ್ದು, ಅಲ್ಲದೆ ಅವರ ತಂದೆ ಮೃತಪಟ್ಟಿರುವುದರಿಂದ ಸದರಿಯವರ ಖಾತೆಯು ಮುಕ್ತಾಯಗೊಂಡಿರುವುದಾಗಿ ತಿಳಿದು ಬಂದಿದ್ದು ಫಿರ್ಯಾದಿಗೆ ಸದರಿ ಜೀವನ್ ಬದಲಿ ಚೆಕ್ ನೀಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಮೇಕೇರು ಹೊಸ್ಕೇರಿ ಗ್ರಾಮದ ನಿವಾಸಿ 30 ವರ್ಷ ಪ್ರಾಯದ ರಾಜೇಶ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 6-2-2016 ರಂದು ತಾನು ವಾಸವಾಗಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ತಾಯಿ ಶ್ರೀಮತಿ ಲೀಲಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ ಪತ್ತೆ:

     ವ್ಯಕ್ತಿಯೊಬ್ಬರು ಅಕ್ರಮವಾಗಿ ವಾಹನದಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.ದಿನಾಂಕ 6-2-2016 ರಂದು ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆಯಿಂದ ವ್ಯಕ್ತಿಯೊಬ್ಬರು ಸ್ವರಾಜ್ ಮಜ್ದಾ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಕುಟ್ಟ ಠಾಣಾಧಿಕಾರಿ ಹಾಗು ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ಕೊಲೆ ಬೆದರಿಕೆ:

     ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದ ತಾಲೂಕು ಪಂಚಾಯ್ತಿ ಅಭ್ಯರ್ಥಿ ಹಾಗು ಅವರ ಜೊತೆಯಲ್ಲಿದ್ದ ವ್ಯಕ್ತಿಗಳ ದಾರಿ ತಡೆದು ಕೊಲೆ ಮಾಡುವುದಾಗಿ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ ಘಟನೆ ಬೆಟ್ಟದಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಟ್ಟದಳ್ಳಿ ಗ್ರಾಮದಲ್ಲಿ ಶಾಂತಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿ.ಪಿ. ಅನಿಲ್ ಕುಮಾರ್ ರವರು ದಿನಾಂಕ 06-02-2016 ರಂದು ಸಮಯ 21.00 ಗಂಟೆಗೆ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಹೆಚ್.ಎಂ. ಪ್ರಕಾಶ್, ಶಾಂತಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತ್ರಿಶೂಲ್, ಬಿ.ಎಂ. ಹರೀಶ್, ಹರಗ ಪ್ರಕಾಶ್, ಬಿ.ಸಿ. ಪ್ರಮೋದ್ ರವರೊಂದಿಗೆ ಚುನಾವಣಾ ಪ್ರಚಾರ ಮುಗಿಸಿ ಬೀಕನಳ್ಳಿಯಿಂದ ಸೋಮವಾರಪೇಟೆಗೆ ಜೀಪಿನಲ್ಲಿ ವಾಪಾಸ್ಸು ಬರುತ್ತಿರುವಾಗ್ಗೆ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಎಂಬುವರು ಅವರ ಮನೆಯ ಹತ್ತಿರ ರಸ್ತೆಗೆ ಕೋವಿ ಹಿಡಿದುಕೊಂಡು ಬಂದು ಜೀಪನ್ನು ತಡೆದು ನಿಲ್ಲಿಸಿ ಕೋವಿಯನ್ನು ತೋರಿಸಿ ನೀವುಗಳು ಚುನಾವಣಾ ಪ್ರಚಾರ ಮಾಡಲು ಬೀಕನಳ್ಳಿ ಮತ್ತು ಬೆಟ್ಟದಳ್ಳಿ ಗ್ರಾಮಕ್ಕೆ ಬರಬಾರದು. ಇನ್ನು ಮುಂದೆ ಬಂದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.