Tuesday, February 9, 2016

ಬೆಂಕಿ ಅಪಘಾತದಲ್ಲಿ ಮಹಿಳೆ ಸಾವು:

      ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಬೆಂಕಿ ತಾಗಿ ತೀವ್ರಗಾಯಗೊಂಡು ಮೃತಪಟ್ಟ ಘಟನೆ ಮಡಿಕೇರಿ ತಾಲೋಕು ಕುಂದಚೇರಿ ಗ್ರಾಮದಲ್ಲಿ ನಡೆದಿದೆ. ಕುಂದಚೇರಿ ಗ್ರಾಮದಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 33 ವರ್ಷ ಪ್ರಾಯದ ಮಲ್ಲಿಗೆ ದಿನಾಂಕ 6-2-2016 ರಂದು ರಾತ್ರಿ ಬೆಂಕಿಯತ್ತಿರ ಕುಳಿತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿತಗುಲಿ ಗಾಯಗೊಂಡು ತೀವ್ರವಾಗಿ ಗಾಯಗೊಂಡು ದಿನಾಂಕ 8-2-2015 ರಂದು ಆಕೆಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದು, ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತೋಟಕ್ಕೆ ಅಕ್ರಮ ಪ್ರವೇಶ, ಕರಿಮೆಣಸು ಕಳವು:

      ದಿನಾಂಕ 8-2-2016 ರಂದು ಸಮಯ ಸಂಜೆ ಸಮಯ 4-00 ಗಂಟೆಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ನಿವಾಸಿ ಶ್ರೀಮತಿ ಕೆ.ಎಸ್. ಲತಾ ಎಂಬವರ ಬಾಪ್ತು ಸರ್ವೆ ನಂ 65/23 ರಲ್ಲಿ 3.50 ಸೆಂಟ್ , 65/17 ಪಿ2 ರಲ್ಲಿ 50 ಸೆಂಟ್ ಜಾಗಕ್ಕೆ ಆರೋಪಿಗಳಾದ 1) ಕಳ್ಳಿಚಂಡ ನಯನ ಚಂಗಪ್ಪ 2) ರೈಟರ್ ಅಜಿತ್, 3) ಮಲ್ಲಂಗಡ ಕಮಲಾಕ್ಷಿ 4) ಕಾಟಿಮಾಡ ಶರೀನ್ ಮುತ್ತಣ್ಣ, 5)ಮೇಚಂಡ ವಾಸು ಸೋಮಯ್ಯ 6))ಅಳಮೇಂಗಡ ಬೋಸ್ ಮಂದಣ್ಣ 7)ಪಟ್ಟಡ ಶಬರಿ ಸುಬ್ರಮಣಿ ಮಲ್ಲಂಗಡ ಕಮಲಾಕ್ಷಿರವರ ಕುಮ್ಮಕ್ಕಿನಿಂದ ಅಕ್ರಮ ಪ್ರವೇಶ ಮಾಡಿ ತೋಟದಿಂದ ಸುಮಾರು 1000 ದಿಂದ 1200 ಕರಿಮೆಣಸು ಬಳಿಯಿಂದ 20 ರಿಂದ 25 ಕ್ವಿಂಟಾಲ್ ಕರಿಮೆಣಸನ್ನು ಕೊಯ್ದು ಕೆ ಎ 11 ಟಿ 935 ರಲ್ಲಿ ಮಹೇಂದ್ರ ಜೀಪಿನಲ್ಲಿ ಜೊತೆಗೆ 5 ಕಬ್ಬಿಣದ ಏಣಿ ಹಾಗೂ 7 ಬಿದಿರಿನ ಏಣಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಮತ್ತು ಈ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಕೊಲೆ ಬೆದರಿಕೆ ಹಾಕಿರುವುದಾಗಿ ಫಿರ್ಯಾದಿ ಶ್ರೀಮತಿ ಕೆ.ಎಸ್. ಲತಾರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ, ಪ್ರಕರಣ ದಾಖಲು:

  ಪೊನ್ನಂಪೇಟೆ ನಗರದ ನಿವಾಸಿ ಶ್ರೀಮತಿ ಹೆಚ್.ಎನ್. ಜಯಲಕ್ಷ್ಮಿ ರವರು ಕೆಲವು ಸಮಯದಿಂದ ಮೈಸೂರಿನಲ್ಲಿ ವಾಸವಾಗಿದ್ದು, ಅವರ ಮಗ 26 ವರ್ಷ ಪ್ರಾಯದ ದರ್ಶನ್ ಎಂಬಾತ ಕೆಲವು ದಿನಗಳಿಂದ ಪೊನ್ನಂಪೇಟೆಯಲ್ಲಿ ವಾಸವಾಗಿದ್ದು ದಿನಾಂಕ 8-2-2016 ರಿಂದ ಕಾಣೆಯಾಗಿರುತ್ತಾನೆಂದು ಸದರಿ ಹೆಚ್.ಎನ್. ಜಯಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಅಪಘಾತ ವ್ಯಕ್ತಿ ಸಾವು:

    ದಿನಾಂಕ 07.02.2016 ರಂದು ಪಿರ್ಯಾದಿ ನೌಶದ್ ಹಾಗೂ ಮೃತ ಮಹಮ್ಮದ್ ರಫೀಕ್‌ ರವರು ಸಿದ್ದಾಪುರದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸು ಜ್ಯೋತಿ ನಗರಕ್ಕೆ ಕೆಎ-12ಬಿ-0793 ರ ಅಜೀಜ್‌ ರವರ ಆಟೋವನ್ನು ಬಾಡಿಗೆಗೆ ಪಡೆದು ಬರುವಾಗ ಸಮಯ ರಾತ್ರಿ 09:30 ಪಿ.ಎಂ.ಗೆ ಸಿದ್ದಾಪುರ - ಕುಶಾಲನಗರ ರಸ್ತೆಯ ಜ್ಯೋತಿನಗರ ತಲುಪುವಾಗ್ಗೆ ಆರೋಪಿ ಅಜೀಜ್‌ ರವರು ಆಟೋವನ್ನು ಅತೀವಾಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ಮಗುಚಿ ಕೆಳಗೆ ಬಿದ್ದ ಪರಿಣಾಮ ಆಟೋದಲ್ಲಿದ್ದ ಪಿರ್ಯಾದಿಯವರಿಗೆ ಎಡಕೈನ ಅಂಗೈಗೆ ಗಾಯವಾಯಿತು ಮತ್ತು ರಫೀಕ್‌ ರವರಿಗೆ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಆತ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.