Thursday, March 31, 2016

ಪಾದಚಾರಿಗೆ ಬೈಕ್ ಡಿಕ್ಕಿ ಗಾಯ:

     ಪಾದಚಾರಿಯೊಬ್ಬರಿಗೆ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಬಾಣಾವರ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಎಸ್.ಎನ್. ರಮೇಶ ಎಂಬವರು ದಿನಾಂಕ 30-03-2016 ರಂದು ಬೆಳಿಗ್ಗೆ ಸಮಯ 08.30 ಗಂಟೆಗೆ ಎಂದಿನಂತೆ ಕೆಲಸಕ್ಕೆ ಬಾಣಾವಾರ ಗ್ರಾಮದ ಶಿವಣ್ಣ ರವರ ಅಂಗಡಿಯ ಮುಂದೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಾಣಾವಾರ ಕಡೆಯಿಂದ ಕೆಎ-12, ಎಂ.ಬಿ-8001 ರ ಮಾರುತಿ ವ್ಯಾನ್‌ ಚಾಲಕನು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಸ್.ಎನ್. ರಮೇಶ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಾರ್ವಜನಿಕ ಸ್ಥಳ ವಿರೂಪ ಪ್ರಕರಣ ದಾಖಲು:


     ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಜಾಗದ ಸರಹದ್ದಿಗೆ ನಿರ್ಮಿಸಿದ ಕಪೌಂಡ್ ಗೆ ಕಾನೂನಿಗೆ ವಿರುದ್ಧವಾಗಿ ಬ್ಯಾನರ್ ಅನ್ನು ಕಟ್ಟಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿರುತ್ತಾರೆ ಹಾಗೂ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿರುವ ಕಾರಣ ಸೋಮವಾರಪೇಟೆ ಠಾಣಾಧಿಕಾರಿಯವರು ಆರೋಪಿಗಳಾದ ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಲ್ಲಿರುವ ಹನಫಿ ಜಾಮೀಯ ಮಸೀದಿಯ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿ ಪಟ್ಟಣ ಪಂಚಾಯಿತಿ ಸೋಮವಾರಪೇಟೆ ಇವರು ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Wednesday, March 30, 2016

ಮಹಿಳೆ ಕಾಣೆ:

    ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಮಣಜೂರು ಗ್ರಾಮದ ನಿವಾಸಿ ಪಿರ್ಯಾದಿ ನಂಜುಂಡಪ್ಪ ಎಂಬವರ ಅಳಿಯ ದಿನಾಂಕ 27/3/16 ರಂದು ರಾತ್ರಿ ಮದ್ಯಪಾನ ಮಾಡಿ ಬಂದು ಗಲಾಟೆ ಮಾಡಿದ್ದಲ್ಲದೇ ಮಾರನೇ ದಿನ ಪಂಚಾಯ್ತಿಗೆ ಕರೆಯಿಸಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ನಿಂಧಿಸಿದ್ದರಿಂದ ಬೇಸರಗೊಂಡಿದ್ದ ಪಿರ್ಯಾದಿಯವರ ಪತ್ನಿ ಶ್ರೀಮತಿ ಸತ್ಯಮ್ಮರವರು ದಿನಾಂಕ 28/3/16 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಚುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:
     ವಿರಾಜಪೇಟೆ ತಾಲ್ಲೂಕು ದೇವನೂರು ಗ್ರಾಮದ ನಿವಾಸಿ ಹೆಚ್.ಸಿ. ರಾಜು ಎಂಬವರು ದಿನಾಂಕ 28-03-2016 ರಂದು ಸಮಯ 7.15 ಗಂಟೆಗೆ ತನ್ನ ಮನೆಯಲ್ಲಿ ರುವಾಗ್ಗೆ ಅದೇ ಊರಿನವರಾದ ಹೆಚ್.ಸಂತೋಷ್ ಎಂಬವರು ಅಲ್ಲಿಗೆ ಬಂದಿದ್ದು ಆತನನ್ನು ಏಕೆ ನೀನು ಬಂದೆ ಎಂದು ಕೇಳಿದ ವಿಚಾರದಲ್ಲಿ ಹೆಚ್.ಸಂತೋಷ್ ಫಿರ್ಯಾದಿ ಹೆಚ್.ಸಿ. ರಾಜುರವರೊಂದಿಗೆ ಜಗಳ ಮಾಡಿ ಅಲ್ಲೇ ಪಕ್ಕದ ಬೇಲಿಯಲ್ಲಿದ್ದ ಒಂದು ಕಾಡು ಮರದ ದೊಣ್ಣೆಯಿಂದ ಫಿರ್ಯಾದಿಯ ತಲೆಗೆ ಮತ್ತು ಎರಡು ಕೈಗಳಿಗೆ ಹಲ್ಲೆ ಮಾಡಿ ನೊವು ಪಡಿಸಿ ನಂತರ ಹೊಟ್ಟೆ ಭಾಗಕ್ಕೆ ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು ಸದರಿ ಹೆಚ್.ಸಿ. ರಾಜುರವರು ಚಿಕಿತ್ಸೆ ಸಂಬಂಧ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಹೇಳಿಕೆ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಗೆ ಇನೋವಾ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ದಿನಾಂಕ 29-03-2016 ರಂದು ಸಮಯ೨೨.೦೦ ಗಂಟೆಗೆ ಫಿರ್ಯಾದಿ ವೆಳ್ಳಸ್ವಾಮಿ ಎಂಬವರು ಸತ್ಯರಾಜುರವರ ಜೊತೆಯಲ್ಲಿ ಮೊಟಾರ ಸೈಕಲ ನಂ ಟಿಎನ್ 55ಎಸ್ ೦೦೯೧ರಲ್ಲಿ ಗೋಣಿಕೊಪ್ಪದಿಂದ ಶ್ರೀಮಂಗಲಕ್ಕೆ ಹೋಗುತ್ತಿರುವಾಗ್ಗೆ ಜೋಡುಬಿಟ್ಟಿ ಎಂಬಲ್ಲಿ ಎದುರಿನಿಂದ ಬಂದ ಇನೋವಾ ಕಾರ್ ವೊಂದು ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ವೆಳ್ಳಸ್ವಾಮಿ ಮತ್ತು ಸತ್ಯರಾಜುರವರು ಗಾಯಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

    ವಿರಾಜಪೇಟೆ ತಾಲ್ಲೂಕು ಕಡಂಗ ಗ್ರಾಮದ ನಿವಾಸಿ 33 ವರ್ಷ ಪ್ರಾಯದ ಕುಮಾರ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-3-2016 ರಂದು ಅವರ ಸಂಬಂಧಿಕರಾದ ಫಿರ್ಯಾದಿ ಪುನೀತ್ ಎಂಬವರ ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ದಾಳಿ ವೃದ್ದೆಯ ಸಾವು:

    ಶನಿವಾರಸಂತೆ ಠಾಣಾ ಸರಹದ್ದಿನ ಬೆಂಬಳೂರು ಗ್ರಾಮದ ನಿವಾಸಿ ಶ್ರೀಮತಿ ಜಯಮ್ಮ (80) ರವರು ದಿನಾಂಕ 29-03-2016 ರಂದು ಬೆಳಗಿನ ಜಾವ ಮನೆಯ ಮುಂಬಾಗದಿಂದ ಹಿಂದಿನ ಭತ್ತದ ಕಣದವರೆಗೆ ಎಂದಿನಂತೆ ವಿಹಾರ ಮಾಡುತ್ತಿರುವಾಗ ಸಮಯ 07-05 ಗಂಟೆಗೆ ಜಯಮ್ಮ ನವರ ಮೇಲೆ ಆನೆಯೊಂದು ದಾಳಿ ಮಾಡಿದ್ದು ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಜಯಮ್ಮನವರು ಮೃತಪಟ್ಟಿರುತ್ತಾರೆ. ಈ ಸಂಬಂಧ ಮೃತರ ಸೊಸೆ ಶ್ರೀಮತಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, March 29, 2016

ಮೂವರು ಅಪ್ರಾಪ್ತ ಮಕ್ಕಳು ಕಾಣೆ, ಪ್ರಕರಣ ದಾಖಲು:

     ಟ್ಯೂಷನ್ ಗೆ ಹೋಗಿದ್ದ ಇಬ್ಬರು ಅಪ್ರಾಪ್ತ ಹುಡುಗಿಯರು ಮತ್ತು ಒಬ್ಬ ಅಪ್ರಾಪ್ತ ಹುಡುಗ ಕಾಣೆಯಾಗಿರುವ ಘಟನೆ ಸೋಮವಾರಪೇಟೆ ನಗರದಿಂದ ವರದಿಯಾಗಿದೆ. ದಿನಾಂಕ 26-3-2016 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಸೋಮವಾರಪೇಟೆ ವಿಶ್ವೇಶ್ವರ ರಸ್ತೆಯ ವಾಸಿ ಫಿರ್ಯಾದಿ ಬಿ.ಪಿ ರಾಜುರವರ ಮಗಳಾದ 17 ವರ್ಷ ಪ್ರಾಯದ ಮಂಜುಶ್ರೀ, 11 ವರ್ಷ ಪ್ರಾಯದ ಪ್ರಸೀದ್‌, ಮತ್ತು ಫಿರ್ಯಾದಿಯವರ ಪಕ್ಕದ ಮನೆಯ 17 ವರ್ಷ ಪ್ರಾಯದ ಹರಿಣಿ ಸೋಮವಾರಪೇಟೆ ನಗರಕ್ಕದೆ ಟ್ಯೂಷನ್ ಗೆಂದು ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಕಳವು, ಪ್ರಕರಣ ದಾಖಲು:

     ಕಚೇರಿ ಹತ್ತಿರ ನಿಲ್ಲಿಸಿದ್ದ ಸ್ಕೂಟರ್ ವೊಂದು ಕಳವುವಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 27-03-2016 ರಂದು ಸಮಯ 16.15 ಗಂಟೆಗೆ ಫಿರ್ಯಾದಿ ಶ್ರೀಮತಿ ಹರಿಣಾಕ್ಷಿ, ಮುಖ್ಯೋಪಾದ್ಯಾಯರು, ಗೂನಡ್ಕ ಪ್ರೌಢಶಾಲೆ, ಇವರು ಕೆಲಸದ ನಿಮಿತ್ತ ಸ್ಕೂಟರ್‌‌ನ್ನು ತೆಗೆದುಕೊಂಡು ಕೊಯನಾಡಿನ ಅರಣ್ಯ ಕಛೇರಿ ಬಳಿ ನಿಲ್ಲಿಸಿ ಹೋಗಿದ್ದು, ಸುಮಾರು ¼ ಗಂಟೆ ಸಮಯ ಬಿಟ್ಟು ವಾಪಾಸ್ಸು ಬಂದು ನೋಡಿದಾಗ, ಸ್ಕೂಟರ್‌ ನಿಲ್ಲಿಸಿದ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಬೆಲೆ ರೂ.48,000/- ಆಗುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮರಳು ಸಂಗ್ರಹ, ಮಾರಾಟ:

     ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ವ್ಯಕ್ತಿಗಳ ವಿರುದ್ದ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿ.ಸಿ. ಚಂದ್ರನ್, ಕಂದಾಯ ನಿರೀಕ್ಷಕರು, ಬಾಳೆಲೆ ಹೋಬಳಿ ಇವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಬಗ್ಗೆ 1)ಅಡ್ಡೆಂಗಡ ಸಜನ್‌ 2)ಅಡ್ಡೆಂಗಡ ನವೀನ್‌ 3) ಅಡ್ಡಂಗಡ ಅರುಣ್‌ 4)ಅಡ್ಡೆಂಗಡ ವಿಷ್ಣು ಮತ್ತು ನಿಟ್ಟೂರು ಗ್ರಾಮದ 5) ಆಲೇಮಾಡ ಕಿರಣ್ ರವರುಗಳು ಬಾಳೆಲೆ ಹೋಬಳಿ ದೇವನೂರು ಗ್ರಾಮದ ಮಲ್ಲೂರು ಭಾಗದಲ್ಲಿ ಅಡ್ಡೆಂಗಡ ಕುಟುಂಬದ ಭೂಮಿ ಆಸ್ತಿನ ಹೊತ್ತಿನ ಲಕ್ಷ್ಮಣ ತೀರ್ಥ ನದಿಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ದಾಸ್ತಾನು ಮಾಡಿ ಕದ್ದು ಮಾರಾಟ ಮಾಡುತ್ತಿರುವ ಕೃತ್ಯದ ಬಗ್ಗೆ ಸ್ಥಳ ತನಿಖೆ ಮಹಜರಿನಿಂದ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ದಿನಾಂಕ 28-3-2016 ರಂದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಕಾರು ಮಾರಾಟ ಮಾಡಿದ ವಿಚಾರದಲ್ಲಿ ಜಗಳ ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 28-3-2016 ರಂದು ಸಂಜೆ ಸಮಯ 7-00 ಗಂಟೆಗೆ ತಿತಿಮತಿ ಗ್ರಾಮದ ನಿವಾಸಿ ಪಿರ್ಯಾಧಿ ಪಿ.ಆರ್. ವಿನೋದ್ ರವರು ತಿತಿಮತಿ ನಗರದ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಇರುವಾಗ್ಗೆ ಅವರಿಗೆ ಕಾರು ಮಾರಾಟ ಮಾಡಿದ ವ್ಯಕ್ತಿಯಾದ ಮಣಿ ಎಂಬವರು ಅಲ್ಲಿಗೆ ಬಂದಿದ್ದು, ಮಣಿರವರಿಗೆ ನೀನು ಕೊಟ್ಟ ಕಾರು ಯಾವಾಗಲೂ ರಿಪೇರಿಯಾಗುತ್ತಿರುತ್ತದೆ ಎಂದು ಹೇಳಿದ್ದು ಇದರಿಂದ ಕೋಪಗೊಂಡ ಮಣಿರವರು ನಾನು ಕೊಟ್ಟ ಕಾರು ಚೆನ್ನಾಗೆ ಇದೆ ನಿನಗೆ ಓಡಿಸಲು ಗೊತ್ತಿಲ್ಲ ಎಂದು ಹೇಳಿ ಜಗಳ ಮಾಡಿ ನೀನು ಇಲ್ಲಿಯೇ ಇರು ಬರುತ್ತೇನೆ ಎಂದು ಹೇಳಿ ಹೋದವನು ಸಮಯ 7-30 ಪಿ.ಎಂ ಗೆ ಮಣಿ,ಮತ್ತು ಅಭಿ ಸತೀಶ್ ಹಾಗೂ ಇತರರನ್ನು ಅಲ್ಲಿಗೆ ಕರೆದುಕೊಂಡು ಬಂದು ಏಕಾಏಕಿ ಕಬ್ಬಿಣದ ರಾಡಿನಿಂದ ಮೂಗಿನ ಮೇಲ್ಬಾಗಕ್ಕೆ ಹೊಡೆದಿದ್ದು ಹಾಗೂ ಜೊತೆಯಲ್ಲಿ ಬಂದವರು ಕೈಯಿಂದ ಎದೆಯ ಭಾಗಕ್ಕೆ ಹಾಗೂ ಶರೀರಕ್ಕೆ ಹೊಡೆದು ನೋವು ಪಡಿಸಿದ್ದು ಪಿರ್ಯಾಧಿಯವರು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Monday, March 28, 2016

ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಗೆ ಯತ್ನ:

     ದಿನಾಂಕ 27.03.2016 ರಂದು ಸಮಯ 01:00 .ಎಂಗೆ ಸೋಮವಾರಪೇಟೆ ತಾಲೂಕು ಜಂಬೂರು ಗ್ರಾಮದ ಫಿರ್ಯಾಧಿ ಎಂ.ಇ. ಶಬೀರ್ ಎಂಬವರು ಅವರ ಸಹೋದರ ಸಮೀರ್ ರವರ ಕಾರಿನಲ್ಲಿ ಮಡಿಕೇರಿಗೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಸಮಯ 03:30 ಪಿ.ಎಂಗೆ ಅವರ ಮನೆಯ ಹತ್ತಿರ ರಸ್ತೆಯಲ್ಲಿ ಕಾರನ್ನು ಮನೆಗೆ ತಿರುಗಿಸಲು ಇಂಡಿಕೇಟರ್ ಹಾಕಿ ಮನೆ ಕಡೆ ತಿರುಗಿಸುವಾಗ ಹಿಂದಿನಿಂದ ಬಂದ ಇಬ್ಬರು ಆಟೋ ಚಾಲಕರು ಆಟೋ ನಿಲ್ಲಿಸಿ ಅದರಲ್ಲಿ ದ್ದ ಶರಣು, ತೀರ್ಥಕುಮಾರ್, ಹರೀಶ, ಶಿವದಾಸ್ ಬವರು ಫಿರ್ಯಾದಿಯವರ ಬಳಿ ಬಂದು ಸಿಗ್ನಲ್ ಹಾಕಲು ಆಗುವುದಿಲ್ಲವಾ ಎಂದಾಗ ನಾನು ಸ್ವಾರಿ ನಾನು ಇಂಡಿಕೇಟರ್ ಹಾಕಿದ್ದೆ ನೀವು ಸರಿಯಾಗಿ ಗಮನಿಸಿಲ್ಲ ಎಂದಿದ್ದು ಅಷ್ಟರಲ್ಲಿ ಅವರೆಲ್ಲರೂ ಏಕಾಏಕಿ ಫಿರ್ಯಾದಿಯವರನ್ನು ಕಾರಿನಿಂದ ಹೊರಗೆ ಎಳೆದು ಆಟೋದಿಂದ ಕತ್ತಿ ದೊಣ್ಣೆ, ಕಬ್ಬಿಣದ ರಾಡು ಕತ್ತಿ ತೆಗೆದುಕೊಂಡು ಬಂದು ಅದರಲ್ಲಿ ಒಬ್ಬಾತ ಕತ್ತಿಯಿಂದ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾಧಿಯವರ ತಲೆಯ ಎಡ ಭಾಗಕ್ಕೆ ಕಡಿದು ಗಾಯಗೊಳಿಸಿದ್ದು ಉಳಿದ ಮೂವರು ರಾಡು ಮತ್ತು ದೊಣ್ಣೆಯಿಂದ ಹೊಡೆದಿರುರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ಸು ಚಾಲಕನ ಮೇಲೆ ಹಲ್ಲೆ:

     ಫಿರ್ಯಾದಿ ರಂಗಸ್ವಾಮಿಯವರು ಕೆ.ಎಸ್.ಆರ್.ಟಿ.ಸಿ. ಚಾಲಕನಾಗಿದ್ದು, ಧರ್ಮಸ್ಥಳ ಡಿಪೋದ ಮಡಿಕೇರಿ-ಧರ್ಮಸ್ಥಳ ಮಾರ್ಗದ ಬಸ್ಸಿನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ದಿನಾಂಕ: 27-03-2016 ರಂದು ಬೆಳಿಗ್ಗೆ 06-30 ಗಂಟೆಗೆ ಎಂದಿನಂತೆ ಕೆ.ಎಸ್.ಆರ್.ಟಿ.ಸಿ. ಬಸ್ಸು ನಂ:ಕೆಎ-19 ಎಫ್-2955ರಲ್ಲಿ ಬಸವರಾಜು ಎಂಬ ಕಂಡಕ್ಟರ್ ನೊಂದಿಗೆ ಧರ್ಮಸ್ಥಳದಿಂದ ಹೊರಟು ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು 10-30 ಎ.ಎಂ.ಗೆ ಜೋಡುಪಾಲ ಎಂಬಲ್ಲಿ ತಲುಪುವಾಗ್ಗೆ ಮುಂಭಾಗದಲ್ಲಿ ಕಾಸರಗೋಡುವಿನಿಂದ ಮಡಿಕೇರಿ ಕಡೆಗೆ ಕೆಎ-19ಸಿ2333 ಸಂಖ್ಯೆಯ “ಸುಶ್ಮಿತಾ” ಎಂಬ ಖಾಸಗಿ ಬಸ್ಸು ಹೋಗುತ್ತಿದ್ದು, ಅದನ್ನು ಹಿಂದಿಕ್ಕಿಕೊಂಡು ಮುಂದೆ ಹೋಗಿದ್ದು, ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಖಾಸಗಿ ಬಸ್ಸಿನ ಮುಂದೆ ಹೋಗಿ ನಿಲ್ಲಿಸಿದ ಸಂದರ್ಭದಲ್ಲಿ ಖಾಸಗಿ ಬಸ್ಸಿನ ಚಾಲಕ, ಕಂಡಕ್ಟರ್ ಮತ್ತು ಕ್ಲೀನರ್ ಮೂವರು ಬಸ್ಸಿನಿಂದ ಇಳಿದು ಬಂದು ಫಿರ್ಯಾದಿಯವರಿಗೆ ಬಸ್ಸಿನಿಂದ ಇಳಿಯುವಂತೆ ತಿಳಿಸಿ, ಬಸ್ಸಿನಿಂದ ಕೆಳಗೆ ಎಳೆದು ನಮ್ಮ ಬಸ್ಸಿಗೆ ಬರುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೀರಾ ಎಂದು ಹೇಳಿ ಕೈಗಳಿಂದ ಶರೀರದ ಭಾಗಗಳಿಗೆ ಹೊಡೆದು ನೋವುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅನಾರೋಗ್ಯ ದಿಂದ ಬೇಸತ್ತ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ:

     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲುಹುದಿಕೇರಿ ಗ್ರಾಮದ ನಿವಾಸಿ ಆರ್.ಎಂ. ಅನಿಲ್ ಎಂಬವರ ಸಹೋದರ 28 ವರ್ಷ ಪ್ರಾಯದ ಗಿರೀಶ ಎಂಬಾತ ಅನಾರೋಗ್ಯದಿಂದ ಬಳಲುತ್ತಿದ್ದ, ದಿನಾಂಕ 27-3-2016 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಮೈಮೇಲೆ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 26-03-2016 ರಂದು ಸಮಯ 9-30 ಪಿ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿಳಹ ಗ್ರಾಮದ ವಾಸಿ ಪವನ್ ರವರಿಗೆ ಶನಿವಾರಸಂತೆಯ ಅಚ್ಚು ಎಂಬವನು ಮೊಬೈಲಿನಲ್ಲಿ ಯಾರೊಂದಿಗೋ ಕೆಟ್ಟ ಬಾಷೆಯಲ್ಲಿ ಮಾತನಾಡುತ್ತಿದ್ದು, ಇದನ್ನು ಕೇಳಿದ ವಿಚಾರದಲ್ಲಿ ಸದರಿ ಅಚ್ಚು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಪನವ್ ರವರನ್ನು ಬೈದು ಅಲ್ಲಿಗೆ ಬಂದ ಫಿರ್ಯಾದಿ ಪವನ್ ರವರ ಅಣ್ಣ ಕರ್ಣ, ತಂದೆ ನಾಗಯ್ಯ, ತಾಯಿ ನಿಂಗಮ್ಮ ರವರಿಗೆ ಅಚ್ಚು ದೊಣ್ಣೆಯಿಂದ ಹೊಡೆದು ನೋವುಪಡಿಸಿದ್ದು, ಈ ಸಂಬಂಧ ಪವನ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, March 24, 2016

ಕುಡಿದ ಅಮಲಿನಲ್ಲಿ ವ್ಯಕ್ತಿ ಆತ್ಮಹತ್ಯೆ

    ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ  ವೈ.ಎಸ್. ಪುಷ್ಪ  ಎಂಬುವವರ ಗಂಡನಿಗೆ ಅತಿಯಾದ ಮದ್ಯಪಾನ ಮಾಡುವ ಚಟವಿದ್ದು  ದಿನಾಂಕ  23-3-20-2016 ರಂದು ರಾತ್ರಿ ಫಿರ್ಯಾದಿಯವರ  ಪತಿ ಸಿದ್ದು ಲೈನು ಮನೆಯ ಮಲಗುವ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇವರು ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿರುವುದಾಗಿ ಸದರಿಯವರ  ಪತ್ನಿ ಶ್ರೀಮತಿ ವೇ.ಎಸ್. ಪುಷ್ಪ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, March 23, 2016

ಅಕ್ರಮ ಮರಳು ಕಳ್ಳಸಾಗಾಣೆ, ಪ್ರಕರಣ ದಾಖಲು:

    ಅಕ್ರಮವಾಗಿ ಮರಳನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ವ್ಯಕ್ತಿವ ವಿರುದ್ದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 22.03.2016 ರಂದು ಸಮಯ 04.30 ಎ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಜನಾರ್ಧನ ಹಳ್ಳಿ ಗ್ರಾಮದಲ್ಲಿರುವ ಹೇಮಾವತಿ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್ ನಲ್ಲಿ ಮರಳನ್ನು ತುಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವೃದ್ದೆ:
    ವಿರಾಜಪೇಟೆ ತಾಲೂಕು ನಾಲ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಉಮ್ಮವ್ವ (88) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-3-2016 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟರ್ ಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

    ಕುಶಾಲನಗರದ ಬಾಪೂಜಿ ಬಡಾವಣೆ ನಿವಾಸಿ ವೆಂಕಟೇಶ್ ಎಂಬವರು ದಿನಾಂಕ 19-3-2016 ರಂದು ಕುಶಾಲನಗರದಿಂದ ಮಡಿಕೇರಿಗೆ ತಮ್ಮ ಸ್ಕೂಟರ್ ನಲ್ಲಿ ತಮ್ಮ ಮಗಳೊಂದಿಗೆ ಹೋಗುತ್ತಿದ್ದಾಗ ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಕೂಕಟ್ ಸವಾರ ವೆಂಟೇಶ ಮತ್ತು ಅವರ ಮಗಳಿಗೆ ತೀವ್ರ ತರಹದ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ಕಲಾರೆ ಗ್ರಾಮದ ನಿವಾಸಿ ಶ್ರೀಮತಿ ಅರ್ಶಿಯ ರವರಿಗೆ ಆಕೆಯ ಪತಿ ಸಾದಿಕ್ ಪಾಷಾ ಮತ್ತು ಅತ್ತೆ ಅಖ್ತಾರ್ ಬಾನು ರವರುಗಳು ತವರು ಮನೆಯಿಂದ ಒಂದು ಲಕ್ಷ ರೂ. ಹಣವನ್ನು ತರುವಂತೆ ಪ್ರತಿ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ದಿನಾಂಕ 19-3-2016 ರಂದು ಫಿರ್ಯಾದಿ ಶ್ರೀಮತಿ ಅರ್ಶಿಯರವರು ತಮ್ಮ ತವರು ಮನೆಯಿಂದ ಹಣ ತಾರದೇ ಇರುವ ಕಾರಣಕ್ಕೆ ಆಕೆಯ ಪತಿ ಸಾದಿಕ್ ಪಾಷಾ ಮತ್ತು ಅತ್ತೆ ಅಖ್ತಾರ್ ಬಾನು ರವರುಗಳು ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, March 22, 2016

ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರ:
    ವ್ಯಕ್ತಿ ಯೊಬ್ಬರು ಅಪ್ರಾಪ್ತ ಸಾಕು ಮಗಳ ಮೇಲೆ ಅತ್ಯಾಚಾರ ಮಾಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದ ಮುಕ್ಕಾಟಿರ ವಿಕ್ಕಿ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಚಿತ್ರ ಎಂಬವರು ತನ್ನ ರವಿಯ ಅಕ್ಕನ ಮಗಳನ್ನು 1 ವರ್ಷವಾದಗಿನಿಂದಲೇ ಸಾಕುತ್ತಿದ್ದು ಇದೀಗ ಆ ಮಗು ಕಾವ್ಯಳಿಗೆ 11 ವರ್ಷ ಪ್ರಾಯವಾಗಿದ್ದು ದಿನಾಂಕ 21-3-2016 ರಂದು ಫಿರ್ಯಾದಿ ಶ್ರೀಮತಿ ಚಿತ್ರ ರವರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆಕೆಯ ಗಂಡ ರವಿ ಕಾವ್ಯಳನ್ನು ತೋಟಕ್ಕೆ ಸೌದೆಗೆಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದು, ಈ ಸಂಬಂಧ ಆತನ ಪತ್ನಿ ಫಿರ್ಯಾದಿ ಶ್ರೀಮತಿ ಚಿತ್ರ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ :

     ಸೋಮವಾರಪೇಟೆ ತಾಲೂಕು ಕುಸುಬೂರು ಗ್ರಾಮದ ನಿವಾಸಿ ಪಿರ್ಯಾದಿ ಕೆ.ಪಿ. ಹರೀಶ್ ಎಂಬವರು ದಿನಾಂಕ 21-3-2016 ರಂದು ಸಂಜೆ 6.40 ಗಂಟೆಗೆ ತನ್ನ ಹೆಂಡತಿ ತೀರ್ಥ ರವರೊಂದಿಗೆ ಕುಸುಬೂರಿನ ತೋಟಕ್ಕೆ ಅವರ ಜೀಪಿನಲ್ಲಿ ಹೋಗಿ ವಾಪಾಸ್ಸು ಮನೆಗೆ ಬರುತ್ತಿದ್ದಾಗ ಕೆ ಸಿ ಹೂವಯ್ಯ ರವರು ಹಳೇ ದ್ವೇಶದಿಂದ ಅವರ ಹಳೆ ಮನೆಯ ಹತ್ತಿರ ಬಂದು ಫಿರ್ಯಾದಿಯ ಜೀಪನ್ನು ತಡೆದು ವಿನಃ ಕಾರಣ ಅವಾಚ್ಯವಾಗಿ ಬೈದು ಕತ್ತಿಯಿಂದ ಕೊಚ್ಚಿ ಹಾಕುತ್ತೇನೆ ಎಂದು ಹೇಳಿ, ಕತ್ತಿಯನ್ನು ತೆಗೆದು ಬೀಸಿದ್ದು ಪರಿಣಾಮವಾಗಿ ಜೀಪಿನ ಬಾಗಿಲಿಗೆ ಹಾನಿಯಾಗಿದ್ದು ಅಲ್ಲದೆ ಜೀಪಿಗೆ ಕಲ್ಲು ತೂರಿ ಜಖಂ ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರಿಗೆ ಮಿನಿ ಲಾರಿ ಡಿಕ್ಕಿ ಸವಾರನ ದುರ್ಮರಣ:

      ದಿನಾಂಕ 21.03.2016 ರಂದು ಪಿರ್ಯಾದಿಯವರ ತಮ್ಮ ಸುಂಟಿಕೊಪ್ಪದ ಕಾನ್ ಬೈಲ್ ನಿವಾಸಿ ಕೆ.ಎನ್.ಲೋಕನಾಥ ಎಂಬವರು ಸ್ವಂತ ಕೆಲಸದ ನಿಮಿತ್ತ ತಮ್ಮ ಬಾಪ್ತು KA 12 Q 1708ರ ಹೋಂಡಾ ಆಕ್ಟಿವಾದಲ್ಲಿ ಕುಶಾಲನಗರಕ್ಕೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 1.00 ಗಂಟೆಗೆ ಕೊಡಗರಹಳ್ಳಿ ಗ್ರಾಮದ ಕಬ್ಬಿಣ ಕೆಲಸ ಮಾಡುವವರ ಮನೆಯ ಮುಂಭಾಗ ತಲುಪುವಾಗ ಎದುರುಗಡೆಯಿಂದ ಬಂದ KL 14 N 9284 ರ 407 ಮಿನಿ ಲಾರಿಯ ಚಾಲಕನು ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಂಡಾ ಆಕ್ಟಿವಾ ಕ್ಕೆ ಡಿಕ್ಕಿಪಡಿಸಿದ ಪರಿಣಾಮ ಚಾಲನೆ ಮಾಡುತ್ತಿದ್ದ ಲೋಕನಾಥರವರ ತಲೆ ಹಾಗೂ ಮೈಕೈಗೆಲ್ಲಾ ಗಾಯಗಳಾಗಿ ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Monday, March 21, 2016

ಕಾರು ಮತ್ತು ಪಿಕ್ ಅಪ್ ಮುಖಾಮುಖಿ ಇಬ್ಬರಿಗೆ ಗಾಯ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಲ್ಲಲೆಕಾಡು ಎಂಬಲ್ಲಿ ದಿನಾಂಕ 19-3-2016 ರಂದು ಅರೆಕಾಡು ಗ್ರಾಮದ ನಿವಾಸಿ ಸಿ.ಜಿ ಸಂಬಯ್ಯನವರು ಚಲಾಯಿಸುತ್ತಿದ್ದ ಕಾರಿಗೆ ಕೆಎ-12-8544ಎ ಪಿಕ್ ಅಪ್ ವಾಹನ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಸಿ.ಜೆ. ಸಂಬಯ್ಯ ಮತ್ತು ಅರುಣ ಎಂಬವರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಹಲ್ಲೆಯ ಬೆದರಿಕೆ:

 ದಿನಾಂಕ 15-03-2016 ರಂದು ವಿರಾಜಪೇಟೆ ತಾಲೋಕು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾಡಗ ಗ್ರಾಮದ ವಾಸಿ ಪಿರ್ಯಾಧಿ ಶ್ರೀಮತಿ ಲೀಲಾ ಕುಟ್ಟಪ್ಪನವರ ಕಾಫಿ ತೋಟಕ್ಕೆ ಆರೋಪಿಗಳಾದ ಬಿ.ಕೆ. ಅಪ್ಪಯ್ಯ ಮತ್ತು ನಂಜಪ್ಪ ಎಂಬವರು ಅಕ್ರಮ ಪ್ರವೇಶ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಆಳುಗಳನ್ನು ಬೆದರಿಸಿ ಓಡಿಸಿದ್ದು, ಅಲ್ಲದೆ ಕೆಲಸದವರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಗಳ ಮುಖಾಮುಖಿ ಡಿಕ್ಕಿ:

     ಸೋಮವಾರಪೇಟೆ ತಾಲೂಕು ಕಿರಗಂದೂರು ಗ್ರಾಮದ ನಿವಾಸಿ ಹೆಚ್.ಎಸ್. ದೇವಯ್ಯ ನವರ ಮಗ 19 ವರ್ಷದ ಪ್ರಮೋದ್ ದಿನಾಂಕ 19-3-2016 ರಂದು ರಾತ್ರಿ 7.30 ಗಂಟೆಗೆ ತನ್ನ ಬಾಪ್ತು ಕೆಎ 12 ಕ್ಯೂ 6383 ರ ಬೈಕ್ ನಲ್ಲಿ ಮನೆಯ ಕಡೆಗೆ ಹೋಗುತ್ತಿರುವಾಗ ಸೋಮವಾರಪೇಟೆಯ ಜೆಸಿ ವೇದಿಕೆಯ ಬಳಿ ಎದುರಿನಿಂದ ಬಂದ ಕೆಎ 12 ಈ 8479 ರ ಬೈಕ್ ನ್ನು ಅದರ ಸವಾರ ಅತಿವೇಗದಿಂದ ಓಡಿಸಿಕೊಂಡು ಬಂದು ಪ್ರಮೋದ್ ಚಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರಮೋದ್ ಗೆ ತಲೆಗೆ, ಮೂಗಿನ ಭಾಗಕ್ಕೆ, ಹಣೆಯ ಭಾಗಕ್ಕೆ ರಕ್ರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗುಂಪೊಂದರಿಂದ ಮೇಲೆ ಹಲ್ಲೆ ಕೊಲೆಗೆ ಯತ್ನ:

     ದಿನಾಂಕ 19-03-2016 ರಂದು ಪಿರ್ಯಾದಿ ಪಿ.ಬಿ ಶಾಹಿದ್ ತನ್ನ ಸ್ನೆಹಿತರಾದ ರಾಶೀದ್, ನೌಷಾದ್ ಮತ್ತು ನಿಸ್ಸಾರ್ ರವರುಗಳೊಂದಿಗೆ ಚೆರಿಯಪರಂಬುವಿನಲಿ ನಡೆಯುತ್ತಿದ್ದ ಉರೂಸ್ ಹೋಗಿ ವಾಪಾಸು ಬಂದು ನಿಸ್ಸಾರ್ ಎಂಬಾತನನ್ನು ಆತನ ಮನೆಗೆ ಬಿಡಲು ಅವರ ಸ್ನೇಹಿತನ ಆಟೋ ನಂ. ಕೆಎ-12-ಎ-0477 ರಲ್ಲಿ ಕೆನರಾ ಬ್ಯಾಂಕ್ ಬಳಿ ರಾತ್ರಿ 10-30 ಗಂಟೆಯಲ್ಲಿ ಹೋಗುತ್ತಿದ್ದಾಗ ಒಂದು ಆಟೋ ಮತ್ತು ಪಿಕ್ಅಪ್ನಲ್ಲಿದ್ದ ಪ್ರದೀಪ ಮತ್ತು ಇತರ 10-ರಿಂದ 15 ಜನರು ಕೂಗಿದ್ದು ಏನು ಎಂದು ಕೇಳಿದಾಗ ಏಕಾಏಕಿ ಲಾಂಗ್ ಮತ್ತು ದೊಣ್ಣೆಗಳಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಫಿರ್ಯಾದಿಯ ಬಲ ಹೆಬ್ಬೆರಳಿಗೆ ಮತ್ತು ರಾಶೀದ್ನ ಹಣೆ, ಎಡ ಮೊಣಕೈ, ಎರಡು ಕಾಲುಗಳಿಗೆ ಹೊಡೆದು ಗಾಯಗೊಳಿಸಿರುತ್ತಾರೆ ಮತ್ತು
ನೌಷಾದ್ ಎಂಬಾತನ ಬಲ ಮೊಣಕೈಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಕೊಟ್ಟಿಗೆಯಿಂದ ಎತ್ತು ಕಳವು:

      ನಾಪೋಕ್ಲು ಠಾಣಾ ಸರಹದ್ದಿನ ಕೈಕಾಡು ಗ್ರಾಮದ ಎನ್.ಎಸ್ ಬೆಳ್ಯಮ್ಮಯ್ಯ ಎಂಬವರು 2 ಹಸು, 2 ಎತ್ತು ಸಾಕಿದ್ದು ದಿನಾಂಕ 13-03-2016 ರಂದು ಸಂಜೆ 17-00 ಗಂಟೆಗೆ ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟಿ ಹಾಕಿದ್ದು, ದಿನಾಂಕ 14-03-2016 ರಂದು ಬೆಳಿಗ್ಗೆ 08-00 ಗಂಟೆಗೆ ದನ ಬಿಚ್ಚಲು ಹೋದಾಗ 2 ಹಸು ಮತ್ತು ಒಂದು ಎತ್ತು ಇದ್ದು ಮತ್ತೊಂದು ಎತ್ತು ಕಾಣೆಯಾಗಿರುವುದು ಕಂಡು ಬಂದಿದ್ದು, ಸದರಿ ಎತ್ತನ್ನು ಪಾರಾಣೆ ನಿವಾಸಿಗಳಾದ ಗಿರೀಶ ಮತ್ತು ಪೂವಯ್ಯ ಎಂಬವರು ಕದ್ದು ಮಾರಾಟ ಮಾಡಿರುವುದಾಗಿ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೊಬೈಲ್ ಅಂಗಡಿಯಿಂದ ಹಣ ಮತ್ತು ಮೋಬಲ್ ಗಳ ಕಳವು:

     ದಿನಾಂಕ 19-03-2016ರಂದು ರಾತ್ರಿ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ಹೆಚ್,ಬಿ. ಲೋಕೇಶ್ ಎಂಬವರಿಗೆ ಸೇರಿದ ಅಂಗಡೆಯ ಮೇಲ್ಛಾವಣಿಗೆ ಅಳವಡಿಸಿದ ಶೀಟ್ ಗಳನ್ನು ಒಡೆದು ಅಂಗಡಿಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಶೋ ಕೇಸ್ ನಲ್ಲಿ ಇಟ್ಟಿದ್ದ ನೋಕಿಯಾ ಮತ್ತು ಕಾರ್ಬನ್ ಕಂಪೆನಿಯ ಸುಮಾರು ಹತ್ತು ಮೊಬೈಲ್ ಗಳು ಹಾಗು ಕಾಶ್ ಕೌಂಟರ್ ನಲ್ಲಿ ಇದ್ದ ಚಿಲ್ಲರೆ ಹಾಗು 1500/ ರೂಗಳು ಕಳವು ಮಾಡಿದ್ದು ಅವುಗಳ ಒಟ್ಟು ಮೊತ್ತ 24,500/ ರೂ ಆಗಬಹುದು ಎಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Thursday, March 17, 2016
ಹುಡುಗ ಕಾಣೆ:


      ನಾಪೋಕ್ಲು ಠಾಣಾ ಸರಹದ್ದಿನ ಅಜ್ಜಿಮುಟ್ಟ ಗ್ರಾಮದ ನಿವಾಸಿ ಎಂ.ಎ. ಸಂಷುದ್ದೀನ್ ಎಂಬವರ ಮಗ ಎಂ.ಎಸ್. ಇಶ್ರಾದ್ (20) ಎಂಬಾತ ಕಾಸರುಗೋಡುವಿನ ಮೊಹಿಮಾತ್ ಅರಬ್ಬಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಎಮ್ಮೆಮಾಡು ಉರೂಸ್ ಗೆ ಬಂದಿದ್ದು ದಿನಾಂಕ 6-3-2016 ರಂದು ಕಾಸರಗೋಡಿಗೆ ಹೋಗುತ್ತೇನೆಂದು ಹೇಳಿ ಹೋದವನು ಕಾಸರಗೋಡಿಗೆ ಹೋಗದೆ ಕಾಣೆಯಾಗಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ ಇಬ್ಬರಿಗೆ ಗಾಯ:

     ದಿ: 15-3-2016 ರಂದು ಸಂಜೆ ಪಿರ್ಯಾದಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಅರ್ಷದ್ ಹಾಗೂ ಶಿಯಾಬ್ ಮೋಟಾರ್ ಸೈಕಲ್ ನಂ ಕೆ.ಎಲ್. 58ಇ 5410 ರಲ್ಲಿ ಟಾಟಾ ಕಾಫೀ ವಸತಿ ಗೃಹದಿಂದ ಪಾಲಿಬೆಟ್ಟ ಬಸ್ ನಿಲ್ದಾಣದ ಹತ್ತಿರ ಬರುತ್ತಾ ಟಾಟಾ ಕಾಫಿ ತೋಟದ ಗೇಟಿನ ಬಳಿ ಮುಂಭಾಗದ ರಸ್ತೆಗೆ ತಲುಪುವಾಗ್ಗೆ ಆರೋಪಿ ಶಿಯಾಬ್ ಮೋಟಾರ್ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗೂರೂಕತೆಯಿಂದ ಚಾಲನೆ ಮಾಡಿ ಟಾಟಾ ಕಾಫಿ ತೋಟದ ಗೇಟಿನ ಪಕ್ಕದಲ್ಲಿ ಕಟ್ಟೆಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕೀಯ ಹಿನ್ನೆಲೆ ವ್ಯಕ್ತಿಗೆ ಕೊಲೆ ಬೆದರಿಕೆ:

      ದಿನಾಂಕ 15-03-2016 ರಂದು ಸಮಯ 16-00 ಗಂಟೆಗೆ ಶನಿವಾರಸಂತೆ ಠಾಣಾ ಸರಹದ್ದಿನ ಹಂಡ್ಲಿ ಗ್ರಾಮದ ನಿವಾಸಿ ಫಿರ್ಯಾದಿ ಲಕ್ಷ್ಮಿಕಾಂತ್ ಎಂಬವರು ಶನಿವಾರಸಂತೆಯ ಗುಡುಗಳಲೆಯಲ್ಲಿರುವ ಮಲ್ನಾಡ್ ಕಬ್ಬಿಣದ ಅಂಗಡಿಯ ಎದುರು ತಮ್ಮ ಸ್ನೇಹಿತ ಪ್ರದೀಪ್ ರವರೊಂದಿಗೆ ಮಾತನಾಡಿಕೊಂಡು ನಿಂತುಕೊಂಡಿರುವಾಗ್ಗೆ ಮೇಲ್ಕಂಡ ಆರೋಪಿ ಆದಿತ್ಯ ಎಂಬವರು ತನ್ನ ಬಾಫ್ತು ಹೋಂಡಾ ಸಿಟಿ ಕಾರಿನಲ್ಲಿ ಅಲ್ಲಿಗೆ ಬಂದು ಫಿರ್ಯಾದಿಯವರನ್ನು ಉದ್ದೇಶಿಸಿ ‘’ ನೀನು ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸಹಾಯ ಮಾಡದೇ ಬಿ.ಜೆ.ಪಿ ಯವರೊಂದಿಗೆ ಸೇರಿ ಮೆರೆಯುತ್ತಿದ್ದೀಯಾ ‘’ ಎಂದು ಹೇಳಿ ಆರೋಪಿಯು ತನ್ನ ಕಾರಿನಲ್ಲಿದ್ದ ಪಿಸ್ತೂಲನ್ನು ತೋರಿಸಿ ಫಿರ್ಯಾದಿಯವರಿಗೆ ಬೆದರಿಸಿದ್ದು, ಅಲ್ಲೇ ಅಂಗಡಿಯ ಮುಂದೆ ಇದ್ದ ಕಬ್ಬಿಣದ ರಾಡಿನಿಂದ ಫಿರ್ಯಾದಿಯವರ ಬಲಗೈ ಅಂಗೈಗೆ ಹಾಗೂ ಬಲ ಮಂಡಿಯ ಹತ್ತಿರ ಹೊಡೆದು ಅಲ್ಲದೆ ಪಿಸ್ತೂಲಿನಿಂದ ಗುಂಡು ಹೊಡೆದು ಕಲ್ಲುವುದಾಗಿ’’ ಬೆದರಿಕೆ ಹಾಕಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, March 16, 2016

ವ್ಯಕ್ತಿಯ ದಾರಿ ತಡೆದು ಕೊಲೆಗೆ ಯತ್ನ:

      ಸೋಮವಾರಪೇಟೆ ತಾಲೂಕು ಐಗೂರು ಗ್ರಾಮದ ನಿವಾಸಿ ಪಿರ್ಯಾದಿ ಎಸ್. ಭರತ್ ಮತ್ತು ಇತರರು ಕೆಎ 09 ಜೆಡ್ 6767 ಕಾರಿನಲ್ಲಿ ದಿನಾಂಕ 14/03/2016 ರಂದು ಸಮಯ 09:30 ಪಿ ಎಂ ಗೆ ಯಡವಾರೆ ಗ್ರಾಮದ ಇಬ್ರಾಹಿಂ ರವರ ಅಂಗಡಿಯ ಹತ್ತಿರ ಬರುತ್ತಿರುವಾಗ್ಗೆ ಐಗೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ರಾಯ್ ಯಡವನಾಡು ಗ್ರಾಮದ ವರದ ಮತ್ತು ಕಾಜೂರು ಗ್ರಾಮದ ವಿಶ್ವನಾಥರವರು ಅಲ್ಟೋ ಕಾರು ಮತ್ತು ಮಾರುತಿ ಓಮಿನಿ ಕಾರಿನಲ್ಲಿ ಬಂದು ಪಿರ್ಯಾದಿಯವರನ್ನು ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ‘ ನಿನ್ನನ್ನು ಕೊಚ್ಚಿ ಕೊಲೆ ಮಾಡುತ್ತೇನೆ’ ಎಂದು ಹೇಳಿ ರಾಯ್ ರವರು ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ಹಾಗು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು:

     ದಿನಾಂಕ 15/03/16 ರಂದಉ ಕಲ್ಕಂದೂರು ಗ್ರಾಮದ ನಿವಾಸಿ ರಮೇಶ ಎಂಬವರು ಅಕ್ರಮವಾಗಿ ಮರಳನ್ನು ಕದ್ದು ಟಿಪ್ಪರ್ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಶಾಂತಳ್ಳಿ ಗ್ರಾಮದ ಕಾಲೇಜ್ ಮುಂದೆ ಸೋಮವಾಋಪೇಟೆ ಪೊಲೀಸರು ದಾಳಿಮಾಡಿ ಕೆಎ 12 ಬಿ 0241 ರ ಮರಳು ತುಂಬಿದ ಲಾರಿಯನ್ನು ಅಮಾನತ್ತು ಪಡಿಸಿಕೊಂಡಿದ್ದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿನಿಗೆ ವ್ಯಾನ್ ಡಿಕ್ಕಿ:

     ಮೂರ್ನಾಡುವಿನ ಕೊಡಂಬೂರು ಗ್ರಾಮದ ನಿವಾಸಿ ಎಂ.ಸಿ. ಕುಮಾರ್ ಎಂಬವರ ಮಗಳಾದ ಅಂತಿಮ ವರ್ಷ ಬಿ.ಎ. ವಿದ್ಯಾರ್ಥಿ ಎಂ.ಕೆ. ಭವಾನಿ ಎಂಬವರು ದಿನಾಂಕ 11-3-2016 ರಂದು 4-45 ಪಿ.ಎಂ. ಗೆ ಮಡಿಕೇರಿಯ ಕಾರ್ಯಪ್ಪ ಕಾಲೇಜಿನಿಂದ ಹೋಗುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಠಾಣೆಯ ಮುಂದುಗಡೆ ಮಾರುತಿ ವ್ಯಾನೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆಗೆ ಯತ್ನ:

     ವಿರಾಜಪೇಟೆ ತಾಲ್ಲುಕು, ಕಣ್ಣಂಗಾಲ ಗ್ರಾಮದ ನಿವಾಸಿ ಫಿರ್ಯಾದಿ ವಿ.ಸಿ. ಕಾಳಪ್ಪ, ನವರು ದಿನಾಂಕ 14-32-2016 ರಂದು ಕಂಡಂಗಾಲ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಆರೋಪಿಗಳಾದ ವಿ. ಪ್ರಕಾಶ ಮತ್ತು ವಿ.ಎ. ವೆಂಕಟೇಶ ರವರುಗಳು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯನ್ನು ಬೀಸಿ ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ನಾಪೋಕ್ಲು ಠಾಣಾ ಸರಹದ್ದಿನ ಚೆಯ್ಯಂಡಾಣೆ ಗ್ರಾಮದ ನಿವಾಸಿ ಶಾಂತಪ್ಪ ರೈ ಎಂಬವರು ದಿನಾಂಕ 13-03-2016 ರಂದು ರಾತ್ರಿ 8-30 ಗಂಟೆಗೆ ಪಿಕ್‌ಅಪ್ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಆನಂದ ಎಂಬ ವ್ಯಕ್ತಿಯು ಕೊಡಲಿಕ್ಕಿರುವ ಸಾಲದ ಹಣದ ವಿಚಾರದಲ್ಲಿ ಆರೋಪಿಗಳಾದ   ಹರೀಶ, ಆನಂದ, ಕಿಶು, ಗಣಪತಿ ಮತ್ತು ಸತೀಶ ರವರುಗಳು ಮಾರುತಿ ಓಮ್ನಿಯಲ್ಲಿ ಬಂದಉ ದಾರಿ ತಡೆದು ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, March 15, 2016

 ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಚಾಲಕನಿಗೆ ಗಾಯ:

     ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಮಲ್ಲಮಟ್ಟಿ ಎಂಬಲ್ಲಿ ಸಂಭವಿಸಿದೆ. . . ದಿನಾಂಕ: 13-03-16ರಂದು ಹೆಚ್.ಕೆ. ಲೋಕೇಶ ಎಂಬವರು ತಮ್ಮ ಬಾಪ್ತು ಕೆಎ.12.ಬಿ.1618ರ ಆಟೋ ರಿಕ್ಷಾದಲ್ಲಿ ಬೇತ್ರಿ ಕಡೆಯಿಂದ ವಿರಾಜಪೇಟೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು ರಾತ್ರಿ 10-30ಗಂಟೆಗೆ ಮಲ್ಲಮಟ್ಟಿ ಬಳಿ ತಲುಪುವಾಗ್ಗೆ, ವಿರಾಜಪೇಟೆ ಕಡೆಯಿಂದ ಕೆಎ.20.ಎಂ.5747ರ ಕಾರಿನ ಚಾಲಕನು ಸದ್ರಿ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಯವರ ತಲೆಗೆ ಹಾಗು ಶರೀರದ ಇತರೆ ಭಾಗಗಳಿಗೆ ರಕ್ತಗಾಯವಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿದ್ಯುತ್ ಸ್ಪರ್ಷ, ಕಾರ್ಮಿಕ ಸಾವು: 

     ವ್ಯಕ್ತಿಯೊಬ್ಬರು ಕರಿಮೆಣಸು ಕುಯ್ಯಲು ಅಲ್ಯುಮಿನಿಯಂ ಏಣಿ ಬಳಸುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಷ್ಪರ್ಷಗೊಂಡು ಸಾವಿಗೀಡಾದ ಘಟನೆ ನಡೆದಿದೆ. ದಿನಾಂಕ: 14-03-16ರಂದು ಕೇರಳ ರಾಜ್ಯದ ಇರಟ್ಟಿ ನಿವಾಸಿ ವರ್ಗೀಸ್ ಯಾನೆ ಬಾಬು (49) ರವರು ವಿರಾಜಪೇಟೆ ತಾಲ್ಲೂಕಿನ ಅರಮೇರಿ ಗ್ರಾಮದ ಕಳಂಚೇರಿ ಮಠದ ಕಾಫಿ ತೋಟಕ್ಕೆ ಒಳ್ಳೆಮೆಣಸನ್ನು ಕುಯ್ಯಲು ಮರಕ್ಕೆ ಅಲ್ಯುಮಿನಿಯಂ ಏಣಿ ಇಟ್ಟು ಹತ್ತಲು ಏಣಿಯನ್ನು ಮರಕ್ಕೆ ಇಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ವರ್ಶವಾಗಿ ಕೆಳಗೆ ಬಿದ್ದು ಸಾವನಪ್ಪಿದ್ದು ಈ ಸಂಬಂಧ ಮೃತರ ಮಗನಾದ ವಿಪಿನ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬೈಕ್ ಅಪಘಾತ, ಗಾಯಗೊಂಡ ಸವಾರ:

     ದಿನಾಂಕ 13-3-2016 ರಂದು ಆನಂದ ಎಂಬಾತ ತನ್ನ ಬಾಪ್ತು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕದನೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬಿದ್ದು ಸವಾರ ಆನಂದ ಗಾಯಗೊಂಡಿದ್ದು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಕಡಂಗ ಗ್ರಾಮದ ಮೈಲಾರಿ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ಕೊಲೆ ಬೆದರಿಕೆ:

    ದಿನಾಂಕ 13-03-2016 ರಂದು ಸಮಯ 5.30 ಗಂಟೆಗೆ ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಫಿರ್ತಾದಿ ಕಾಳಚಂಡ ದಿಲೀಪ್ ನವರು ಅವರ ತೋಟದಿಂದ ತಂದೆ ಕಾರ್ಯಪ್ಪ, ತಮ್ಮನಾಣ್ಣಯ್ಯ ರವರೊಂದಿಗೆ ಮನೆಗೆ ಹೋಗುತ್ತಿದ್ದಾಗ ಹಚ್ಚಿನಾಡು ಗ್ರಾಮದ ತಂಬುಕುತ್ತಿರ ಗಣೇಶ್ ಎಂಬವರು ಅವರ ಜೀಪು ನಂ ಕೆಎ-12-ಎಂ-1830 ಅನ್ನು ಫಿರ್ಯಾದಿಯವರ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ನನ್ನ ಮೇಲೆ ಮತ್ತು ನನ್ನ ಜೀಪಿನ ನಂಬರ್ ಅನ್ನು ಅರಣ್ಯ ಇಲಾಖೆಗೆ ಕೊಟ್ಟರೆ ನಿಮ್ಮನ್ನು ಕೊಲ್ಲುತ್ತೇನೆಂದು ಕೋವಿ ತೋರಿಸಿ ಬೆದರಿಕೆ ಹೊಡ್ಡಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ನಿವಾಸಿ ಬೋಳಿಯಂಡ್ರ ಎಸ್.ಪೂಣಚ್ಚ ಎಂಬವರ ಮಗಳಾದ ಧನ್ಯ(19) ಬಾಕೆ ದಿನಾಂಕ 13-03-16ರಂದು ರಾತ್ರಿ 9-30 ಗಂಟೆಗೆ ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿತ್ತಾಳೆಂದು ಫಿರ್ಯಾದಿ ಬಿ.ಎಸ್. ಪೂಣಚ್ಚನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದ ನಿವಾಸಿ ಎಂ.ಬಿ. ಚಂದ್ರು ಎಂಬವರ ಮಗ ಪ್ರವೀಣ ಎಂಬಾತನು ದಿನಾಂಕ 12-3-2016 ರಂದು ಕಿರಗೂರು ಗ್ರಾಮದ ಅಲೆಮಾಡ ಸುದೀರ್ ಎಂಬವರ ತೋಟಕ್ಕೆ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸದರಿಯಾತನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-3-2015 ರಂದು ಸದರಿ ಪ್ರವೀಣ ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, March 14, 2016

ಬೆಂಕಿ ಹಚ್ಚಿ  ಪತ್ನಿಯ ಕೊಲೆಗೆ ಯತ್ನಿಸಿದ ಪತಿ:

      ದಿನಾಂಕ 11-03-2016 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾದ್ರೆಕೊಪ್ಪಲು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ದಾಕ್ಷಾಯಿಣಿ ಮತ್ತು ಆಕೆಯ ಗಂಡ ಲಕ್ಷ್ಮಣ ರವರ ಮದ್ಯೆ ಜಗಳವಾಗಿ ಇಬ್ಬರೂ ಪರಸ್ಪರ ನಿಂದಿಸಿಕೊಂಡಿದ್ದು, ಆರೋಪಿ ಲಕ್ಷ್ಮಣ ರವರು ಮನೆಯಲ್ಲಿದ್ದ ಸೀಮೆ ಎಣ್ಣೆ ಕ್ಯಾನ್ ಅನ್ನು ತಂದು ಖುರ್ಚಿಯ ಮೇಲೆ ಕುಳಿತಿದ್ದ ಫಿರ್ಯಾದಿಯವರ ಮೈ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಕೊಟ್ಟು ಕೊಲೆಗೆ ಯತ್ನಿಸಿದ್ದು ಈ ಘಟನೆಯಲ್ಲಿ ದಾಕ್ಷಾಯಿಣಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ದಂಪತಿ ಮೇಲೆ ಹಲ್ಲೆ:
   
      ದ್ವೇಷದ ಹಿನ್ನಲೆಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿ ದಂಪತಿಗಳು ಹೋಗುತ್ತಿದ್ದ ವಾಹವನ್ನು ತಡೆದು ಹಲ್ಲೆ ನಡೆಸಿದ ಘಟನೆ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 13-3-2016 ರಂದು ಅಯ್ಯಂಗೇರಿ ಗ್ರಾಮದ ರಫೀಕ್ ಮತ್ತು ಅಬ್ಬಾಸ್ ಎಂಬವರುಗಳು ಹೊದವಾಡ ಗ್ರಾಮದ ನಿವಾಸಿ ಮಹಮೂದ್ ಹಾಗೂ ಅವರ ಪತ್ನಿ ಸೌರ ಹೋಗುತ್ತಿದ್ದ ಪಿಕ್ ಅಪ್ ವಾಹನವನ್ನು ತಡೆದು ನಿಲ್ಲಿಸಿ ದಿನಾಂಕ 12-3-2016 ರಂದು ಸಂಜೆ ಆರೋಪಿಗಳು ಫಿರ್ಯಾದಿಯವರ ಮನೆಯ ಬಾಗಿಲನ್ನು ಬಡಿದ ವಿಚಾರದಲ್ಲಿ ಜಗಳ ಮಾಡಿ ಕಬ್ಬಿಣದ ರಾಡಿನಿಂದ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀರು ತನಿಖೆ ಕೈಗೊಂಡಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ, ಗಾಯ:

     ದಿನಾಂಕ 13.03.2016 ರಂದು ಸಮಯ 10-45 ಗಂಟೆಗೆ ಪಿರ್ಯಾದಿ ಶ್ರೀಮತಿ ಟಿ.ಬಿ. ಪೊನ್ನಕ್ಕಿ ಎಂಬವರು ವಿರಾಜಪೇಟೆ ನಗರಕ್ಕೆ ಸ್ವಂತ ಕೆಲಸದ ಮೇರೆ ಬಂದು ನಗರದ ಬದ್ರಿಯಾ ಹೋಟೇಲ್ ಪಕ್ಕ ಬಲಬಾಗದ ರಸ್ತೆಯ ಬಲ ಬದಿಯಲ್ಲಿ ನಡೆದುಕೊಂಡು ಖಾಸಗೀ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ್ಗೆ ಹಿಂದುಗಡೆಯಿಂದ ಬಂದ ಮೋಟಾರ್ ಸೈಕಲ್ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾಧಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯವರು ಕೆಳಗೆ ಬಿದ್ದು ಪಿರ್ಯಾದಿಯವರ ಬಲ ಕೈಗೆ ಹಾಗೂ ಬಲ ಬಾಗದ ಪಾದಕ್ಕೆ ರಕ್ತಗಾಯವಾಗಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vartika Katiyar, IPS

Sunday, March 13, 2016


ಮೋಟಾರ್ ಸೈಕಲ್ ಗೆ ಜೀಪು ಡಿಕ್ಕಿ ಇಬ್ಬರಿಗೆ ಗಾಯ:

     ಮೋಟಾರ್ ಸೈಕಲ್ ಗೆ ಟಾಟಾ ಸುಮೋ ಜೀಪು ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರರಿಬ್ಬರಿಗೆ ಗಾಯಗಳಾದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ದಿನಾಂಕ 10-3-2016 ರಂದು ಪಿರಿಯಾಪಟ್ಣ ತಾಲೋಕು ಚೆನ್ನಕಲ್ ಕಾವಲ್ ಗ್ರಾಮದ ರಮೇಶ ಎಂಬವರು ಶೇಖರ್ ಎಂಬವರೊಂದಿಗೆ ಕುಶಾಲನಗರದಿಂದ ಕೊಪ್ಪದ ಕಡೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಟಾಟಾ ಸುಮೋ ವಾಹನ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರರಿಬ್ಬರು ಗಾಯಗೊಂಡಿದ್ದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

    ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೋರ್ವಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ, ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಕೆಪಿಟಿಸಿಎಲ್ ವಸತಿ ಗೃಹದಲ್ಲಿ ವಾಸವಾಗಿರುವ ಶಿವರಾಮು ರವರ ಪತ್ನಿ ಶ್ರೀಮತಿ ಕೌಸಲ್ಯ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12-3-2016 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ ಪಾದಚಾರಿಗೆ ಗಾಯ:

    ವ್ಯಕ್ತಿಯೊಬ್ಬರು ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಸೈಕಲ್ ವೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದ ಮಣಜೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 11-3-2016 ರಂದು ಸಂಜೆ 8-15 ಗಂಟೆಯ ಸಮಯದಲ್ಲಿ ಮಣಜೂರು ಗ್ರಾಮದ ನಿವಾಸಿ ಪ್ರಶಾಂತ್ ಎಂಬವರು ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಜೆ. ಮಂಜುನಾಥ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರಶಾಂತ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಶಾಂತ್ ರವರಿಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಗೆ ಅವಾಚ್ಯ ನಿಂದನೆ, ಹಲ್ಲೆ:

    ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೋಕು ಹೆರವನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 9-3-2016 ರಂದು ಸಂಜೆ 7-30 ಗಂಟೆಗೆ ಆರೋಪಿಗಳಾದ ತಿರುಮಲ ಮತ್ತು ಸುನೀತ ಎಂಬವರುಗಳು ಫಿರ್ಯಾದಿ ಹೆರವನಾಡು ಗ್ರಾಮದ ಶ್ರೀಮತಿ ಕಾವೇರಿ ಎಂಬವರ ಮನೆಯ ಹತ್ತಿರ ಬಂದು ದಾರಿಯ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಾಡುಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೋದಾಮಿನಿಂದ ಕರಿಮೆಣಸು ಕಳವು:

   ಗೋದಾಮಿನ ಚಿಲಕವನ್ನು ಮುರಿದು ಒಂದುವರೆ ಲಕ್ಷ ಮೌಲ್ಯದ ಕರಿಮೆಣಸು ಕಳುವಾದ ಘಟನೆ ವಿರಾಜಪೇಟೆ ತಾಲೋಕು ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಳುಗುಂದ ಗ್ರಾಮದ ನಿವಾಸಿ ಅಬ್ದುಲ್ ಹಫೀಜ್ ಎಂಬವರಿಗೆ ಸೇರಿದ ಗೋದಾಮಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 1.5 ಲಕ್ಷ ಮೌಲ್ಯದ ಒಣ ಮತ್ತು ಹಸಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು:

    ವಿರಾಜಪೇಟೆ ತಾಲೋಕು ಬಿಟ್ಟಂಗಾಲ ಗ್ರಾಮದ ನಿವಾಸಿ ಪಿರ್ಯಾದಿ ಶ್ರೀಮತಿ ಭವ್ಯ ಕುಮಾರಿರವರು ಸುಮಾರು 5 ವರ್ಷಗಳಿಂದ ಪುನೀತ್ ರವರನ್ನು ಪರಸ್ವರ ಪ್ರೀತಿಸಿ ದಿನಾಂಕ 05-07-15 ರಂದು ಉಭಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಕೈಕೇರಿಯ ಭಗವತಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ಕೆಲವು ಸಮಯದ ನಂತರ ಗಂಡ ಪುನೀತ್ ‘ನಿನ್ನ ಮನೆಯವರು ಮದುವೆ ಸಂದರ್ಭದಲ್ಲಿ ಏನನ್ನು ಕೊಡಲಿಲ್ಲ. ನೀನು ಮನೆಯಿಂದ ಹಣ ತೆಗೆದುಕೊಂಡು ಬಂದು ಊಟ ಮಾಡು, ಎಂದು ಕೇವಲವಾಗಿ ಮಾತನಾಡುವುದಲ್ಲದೆ , ಗಂಡ ಪುನೀತ್ ನೊಂದಿಗೆ ಮಾವ ಕುಂಞಪ್ಪ, ಅತ್ತೆ ಸರೋಜ ಹಾಗೂ ಮೈದುನ ದಿನೇಶ್ ರವರು ಸೇರಿ ಪಿರ್ಯಾದಿಗೆ ಸಿಕ್ಕಾಬಟ್ಟೆ ಹೊಡೆದು ಬಡಿದು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿರುವುದಾಗಿ ಕೊಟ್ಟ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Saturday, March 12, 2016

ವಿದ್ಯುತ್ ಸ್ಪರ್ಷ ವ್ಯಕ್ತಿ ಸಾವು:

     ದಿನಾಂಕ 11-03-2016 ರಂದು ಸಮಯ 11.30 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೋತೂರು ಗ್ರಾಮದಲ್ಲಿ ಪಿರ್ಯಾದಿ ಸಿ.ಕೆ. ಕೇಳು ಎಂಬವರ ತಮ್ಮ ಸುಂದರರವರು ಟೆಲಿಫೋನ್ ಕಂಬದಲ್ಲಿ ಟೆಲಿಫೋನ್ ವೈರ್ ಎಳೆಯುವಾಗ ಆಕಸ್ಮಿಕವಾಗಿ 20 ಅಡಿ ಅಂತರದಲ್ಲಿರುವ 11 ಕೆ.ವಿ. ವಿದ್ಯತ್ ಹರಿಯುತ್ತಿರುವ ವಿದ್ಯುತ್ ವೈರ್ ಮೇಲೆ ಟೆಲಿಫೋನ್ ವೈರ್ ಬಿದ್ದು, ಅದರಿಂದ ವಿದ್ಯುತ್ ಹರಿದು ಸುಂದರರವರು ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದು ಮೃತಪಟ್ಟಿದ್ದು ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ವಂಚನೆ:

     ದಿನಾಂಕ 28/5/2015 ರಿಂದ 30/11/2015 ರ ಮಧ್ಯ ಅವಧಿಯಲ್ಲಿ ಆರೋಪಿತ ಚೆನ್ನಯ್ಯನಕೋಟೆ ನಿವಾಸಿ ಕಾಳಯ್ಯ ಎಂಬವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿರುವ ರೋತಿಕಾ ಸೋಮಣ್ಣ ಎಂಬವರಿಗೆ ಪೇಸ್ ಬುಕ್ ಮೆಸೆಂಜರ್ ಮೂಲಕ ಮಾತನಾಡಿ ತಾನು ಅಮೇರಿಕಾದಲ್ಲಿ ಎಪ್.ಬಿ.ಐ ನಲ್ಲಿಕೆಲಸ ಮಾಡುತ್ತಿರುವುದಾಗಿ ತಾನು ರೋಹನ್, ವಿನಯ್, ಗೌರವ್ ಗಿಲ್ಲ್ ಎಂಬುದಾಗಿ ಪರಿಚಯಿಸಿಕೊಂಡು ಅಮೇರಿಕಾದಿಂದ ಮಾತನಾಡುತ್ತಿರುವುದಾಗಿ ನಂಬಿಸಿ ಪಿರ್ಯಾದಿ ರೋತಿಕಾ ಸೋಮಣ್ಣನವರ ಅಣ್ಣನ ಮಗನನ್ನು ಅಮೇರಿಕಾದಲ್ಲಿ ವಿಧ್ಯಾಭ್ಯಾಸ ಮಾಡಿಸುವುದಾಗಿಯೂ, ಇದಕ್ಕೆ ಹಣ ಕೊಡಬೇಕೆಂದು ಹೇಳಿ ಪಿರ್ಯಾದಿಯವರನ್ನು ನಂಬಿಸಿ ಗೋಣಿಕೊಪ್ಪ ಎಸ್.ಬಿ.ಐ. ಬ್ಯಾಂಕಿನ ಅಕೌಂಟ್ ನಂ 20253418442 ಕ್ಕೆ ಬೆಂಗಳೂರಿನ ಸಿಟಿ ಬ್ಯಾಂಕ್ ಎಸ್.ಬಿ ಖಾತೆ ಸಂಖ್ಯೆ 5712984807 ರಿಂದ ಒಟ್ಟು ರೂ 12,45,500/- ಗಳನ್ನು ಗೋಣಿಕೊಪ್ಪ ಎಸ್.ಬಿ.ಐ ಬ್ಯಾಂಕಿನ ಮುಖಾಂತರ ಡ್ರಾ ಮಾಡಿ ಹಣವನ್ನು ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯನ್ನು ಹೆದರಿಸಿ ಕಾಫಿ ಮತ್ತು ಕರಿಮೆಣಸು ಸಾಗಾಟ:

      ನಾಲ್ಕು ಜನರ ಗುಂಪೊಂದು ವ್ಯಕ್ತಿಯೊಬ್ಬರ ಕಾಫಿಕಣದಿಂದ ಬಲತ್ಕಾರವಾಗಿ ವಾಹನದಲ್ಲಿ ಕಾಫಿಯನ್ನು ತುಂಬಿಸಿ ಸಾಗಿಸಿದ ಘಟನೆ ನಡೆದಿದೆ. ದಿನಾಂಕ 07-03-2016 ರಂದು ಸಮಯ 7.30 ಗಂಟೆಗೆ ನಾಪೋಕ್ಲು ಠಾಣಾ ಸರಹದ್ದಿನ ನರಿಯಂದಡ ಗ್ರಾಮದ ನಿವಾಸಿ ಪಿರ್ಯಾದಿ ಟಿ.ಡಿ. ರವೀಂದ್ರ ರವರು ತಮ್ಮ ಸಂಸಾರದೊಂದಿಗೆ ಊಟ ಮಾಡುತ್ತಿರುವಾಗ್ಗೆ ಕಾಫಿ ಒಣಗಿಸುವ ಕಣದಲ್ಲಿ ಏನೋ ಶಬ್ದ ಕೇಳಿ ಕಿಟಕಿಯಿಂದ ನೋಡಲಾಗಿ ಆರೋಪಿಗಳಾದ ನರಿಯಂದಡ ಗ್ರಾಮದ ನಿವಾಸಿಗಳಾದ ಾನಂದ @ವೇಣು, ಪ್ರೇಮ, ತ್ರಿಶೂಲ್ ಮಂಥನ್, ಟಿ.ಸಿ. ವಾಣಿ ಎಂಬವರಗಳು ಮಹೀಂದ್ರ ಪಿಕ್ಅಪ್ ಗೆ ಕಾಫಿ ಚೀಲವನ್ನು ತುಂಬುತ್ತಿದ್ದು. ಇದನ್ನು ನೋಡಿ ಪಿರ್ಯಾದಿಯು ಶಾಕ್ ಆಗಿ ಸಹಾಯಕ್ಕೆ ಕಿರುಚಿಕೊಂಡಾಗ ಆರೋಪಿತನು ಗಾಳಿಯಲ್ಲಿ ಗುಂಡು ಹಾರಿಸಿ 14 ಚೀಲ ಒಣಗಿದ ಕಾಫಿ ಮತ್ತು 1 ಚೀಲ ಕರಿಮೆಣಸನ್ನು ಪಿಕ್ಅಪ್ನಲ್ಲಿ ತುಂಬಿಕೊಂಡು ಹೋಗಿರುವುದಾಗಿ ಮಾನ್ಯ ನ್ಯಾಯಲಯದಲ್ಲಿ ದಾಖಲಿಸಿದ ಖಾಸಗಿ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೇ ದ್ವೇಷ ವ್ಯಕ್ತಿಯೊಬ್ಬರ ವಾಹನಕ್ಕೆ ಹಾನಿ, ಕೊಲೆ ಬೆದರಿಕೆ:

     ಮಡಿಕೇರಿ ನಗರದ ಗಣಪತಿ ಬೀದಿಯ ನಿವಾಸಿ ಪಿರ್ಯಾದಿ ಶ್ರೀ ರಾಮಪ್ರಸಾದ್ ರವರು ತನ್ನ ಬಾಪ್ತು ಕೆಎ-12-ಕ್ಯೂ-6083 ರ ಹೊಂಡಾ ಆಕ್ಟೀವಾ ವಾಹನವನ್ನು ಅವರ ಮನೆಯ ಬಳಿ ಇರುವ ಮಿಲ್ ನ ಮುಂಭಾಗದಲ್ಲಿ ನಿಲ್ಲಿಸಿದ್ದು, ದಿನಾಂಕ 11-03-2016 ರಂದು ಸಮಯ 15.50 ಗಂಟೆಗೆ ಆರೋಪಿಗಳಾದ ಸುಬ್ರಮಣಿ ಹಾಗು ಕುಮಾರ ಎಂಬವರುಗಳು ಹಳೆ ದ್ವೇಷದಿಂದ ಸದರಿ ವಾಹನವನ್ನು ಬೀಳಿಸಿ ಕಲ್ಲನ್ನು ಎತ್ತಿ ಹಾಕಿ ಜಖಂ ಪಡಿಸಿ ಸುಮಾರು 10,000/- ರೂ ನಷ್ಟಪಡಿಸಿದ್ದು, ಇದನ್ನು ಕಂಡ ಪಿರ್ಯಾದಿಯವರು ಆರೋಪಿಗಳನ್ನು ಕೇಳಿದಾಗ ಪಿರ್ಯಾದಿಯವರ ಮನೆಯ ಜಗುಲಿಗೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, March 11, 2016

ವಿಪರೀತ ಮದ್ಯಪಾನ ವ್ಯಕ್ತಿ ಸಾವು:
       ಗೋಣಿಕೊಪ್ಪ ನಗರದ ನಿವಾಸಿ ತಮಿಳರ ಸಿದ್ದು ಎಂಬವರ ತಂದೆ ಪ್ರಾಯ ಸುಮಾರು 45 ವರ್ಷದ ಕೃಷ್ಣ ಎಂಬುವವರು ಗೋಣಿಕೊಪ್ಪ ನಗರದಲ್ಲಿ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು ಇವರಿಗೆ ದಿನಂಪ್ರತಿ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 09/03/2016 ರಂದು ಲೋಡಿಂಗ್ ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಾರದೇ ಉಮಾ ಮಹೇಶ್ವರಿ ದೇವಸ್ಥಾನದ ಪಕ್ಕದ ಸಿಮೆಂಟ್ ಅಂಗಡಿಯ ಹಿಂಭಾಗದಲ್ಲಿ ಮಲಗಿದ್ದವರು ಮೃತ ಪಟ್ಟಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

      ದಿನಾಂಕ 10.03.2016 ರಂದು ಸಮಯ 02.00 ಎ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಎಸ್.ಎಸ್ ರವಿಕಿರಣ್ ಪಿಎಸ್ಐರವರು ಆರೋಪಿಯಾದ ಹೇಮಗಿರೀಶ್ ಎಂಬವರು ತಮ್ಮ ಬಾಪ್ತು ಕೆಎ-12 ಬಿ-2982 ರ ಮಿನಿ ಟಿಪ್ಪರ್ ನಲ್ಲಿ ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೇ ಮರಳನ್ನು ಕಳವು ಮಾಡಿ ಟಿಪ್ಪರಿನಲ್ಲಿ ತುಂಬಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಶನಿವಾರಸಂತೆ ನಗರದ ಸಂತೆಮಾಳದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಗೆ ಕಾರು ದಿಕ್ಕಿ:

      ಮೋಟಾರ್ ಸೈಕಲ್ ಗೆ ಕಾರೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 9-3-2016 ರಂದು ಪೊನ್ನಂಪೇಟೆ ನಗರದ ನಿವಾಸಿ ವಿ.ವಿ. ಸುನಿಲ್ ಎಂಬವರು ತನ್ನ ಬಾಪ್ತು ಕೆಎ-12-ಎಲ್-7190 ರ ಬೈಕಿನಲ್ಲಿ ಪೊನ್ನಂಪೇಟೆ ಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುತ್ತಿರುವಾಗ್ಗೆ ಕೈಕೇರಿ ಲಯನ್ಸ್ ಶಾಲೆಯ ಹತ್ತಿರ ತಲುಪುವಾಗ್ಗೆ ಎದುರುಗಡೆಯಿಂದ ಕೆಎಲ್-46-ಎಂ-5579 ಸಿಪ್ಟ್ ಕಾರಿನ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುನಿಲ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಬಿದ್ದು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೀಗ ಒಡೆದು ಚಿನ್ನಾಭರಣ ಕಳವು:

    ಮನೆಯ ಹಿಂಬಾಗಿಲ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ವಿರಾಜಪೇಟೆ ಹತ್ತಿದ ಪಾಲೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರದಹ್ದಿನ ಪಾಲಂಗಾಲ ಗ್ರಾಮದ ನಿವಾಸಿ ಮೇಚುರ ಡಿ. ಚೇತನ್ ರವರು ದಿನಾಂಕ: 10-03-16ರಂದು ಅವರ ತಂದೆ ದೇವಯ್ಯ ಹಾಗೂ ತಾಯಿ ಕಾವೇರಮ್ಮ, ರವ ರೊಂದಿಗೆ ಸಮಯ ಬೆಳಿಗ್ಗೆ 10-30ಗಂಟೆಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೋಟದಲ್ಲಿ ಕಾಳುಮೆಣಸು ಕುಯ್ಯ ಲೆಂದು ಮನೆಗೆ ಬೀಗ ಹಾಕಿ ಹೋಗಿದ್ದು, ಸಮಯ 11-30ಎ.ಎಂ.ಗೆ ಫಿರ್ಯಾದಿ ಚೇತನ್ ರವರು ನೀರು ಕುಡಿಯಲು ಮನೆಗೆ ಬಂದಾಗ ಮನೆಯ ಹಿಂಭಾಗ ಬಾಗಿಲಿನ ಬೀಗವು ಮುರಿದು ಕೆಳಗೆ ಬಿದ್ದಿದ್ದು, ಒಂದು ಬಾಗಿಲು ತೆರೆದಿದ್ದು,ಒಳಗೆ ಸದ್ದು ಕೇಳಿದಾಗ ಪಿರ್ಯಾದಿ ಯವರು ಯಾರು ಮನೆಯ ಒಳಗೆ ಎಂದು ಕೇಳುವಾಗ ಒಬ್ಬ ಆಸಾಮಿಯು ಮಲಗುವ ಕೋಣೆಯಿಂದ ಹೊರಗೆ ಬಂದು ಪಿರ್ಯಾದಿಯವರನ್ನು ದೂಡಿಕೊಂಡು ಓಡಿ ಹೋಗಿದ್ದು, ಮಲಗುವ ಕೋಣೆಗೆ ಹೋಗಿ ನೋಡಿ ದಾಗ ಸದರಿ ಆಸಾಮಿಯು ಗಾಡ್ರೇಜ್ ಬಾಗಿಲನ್ನು ಹಾಗೂ ಲಾಕರ್ ಬಾಗಿಲನ್ನು ತೆರೆದು ಸದರಿ ಲಾಕರ್ ನಲ್ಲಿಟ್ಟಿದಂತಹ ಒಂದು ಪವನಿನ ಒಂದು ಚೈನ್, 3/4 ಪವನಿನ ಒಂದು ರಿಂಗ್ ಹಾಗೂ 1/4 ಪವನಿನ ಒಂದು ಉಂಗುರ ವನ್ನು ಹಾಗೂ ಪರ್ಸಿನಲ್ಲಿದ್ದ 500/- ರೂಗಳ ಎರಡು ನೋಟುಗಳನ್ನು ಕಳವು ಮಾಡಿಕೊಂಡು ಹೋಗಿ ರುವುದಾಗಿ ಸದರಿ ಚಿನ್ನಾಭರಣ ಹಾಗೂ ಹಣದ ಒಟ್ಟು ಮೌಲ್ಯ 35,000/- ರೂಗಳು ಆಗಬಹು ದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜು, ಪೊಲೀಸ್ ದಾಳಿ:

     ಅಕ್ರಮ ಜೂಜು ಅಡ್ಡೆಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಮುಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕ ಮರವೊಂದರ ಕೆಳಗೆ ಕೆಲವು ವ್ಯಕ್ತಿಗಳು ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿದ್ದುದವರ ಮೇಲೆ ಶನಿವಾರಸಂತೆ ಪೊಲೀಸರು ಪಿ.ಎಸ್.ಐ. ಎಸ್.ಎಸ್. ರವಿಕಿರಣ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆರ.
 

Vartika Katiyar, IPS

Thursday, March 10, 2016ವ್ಯಕ್ತಿ ಕಾಣೆ ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ಸರದಹ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಸೌಮ್ಯ ಎಂಬವರ ಗಂಡ ದೇವ (27) ಎಂಬವರು ದಿನಾಂಕ 05-03-2016 ರಂದು ಸಮಯ 6 ಪಿ.ಎಂ. ಗೆ ಅಮತ್ತಿ ಹೊಸೂರು ಗ್ರಾಮಕ್ಕೆ ಹೋಗಿದ್ದು, ಅಲ್ಲಿಂದ ನೆಲ್ಲಿಹುದಿಕೇರಿಗೆ ಬಂದಿದ್ದು, ನೆಲ್ಲಿಹುದಿಕೇರಿಯಿಂದ ಎಲ್ಲಿಗೋ ಹೋಗಿದ್ದು, ಇದುವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮರಣ:

     ದಿನಾಂಕ 6-3-2016 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ಸ್ಕೂಟರ್ ಮತ್ತು ಟಾಟಾ ಏಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಅಣ್ಣಪ್ಪ ಎಂಬವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್, ಆಸ್ಪತ್ರೆಗೆ ದಾಖಲುಪಡಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 8-3-2016 ರಂದು ಮೃತಪಟ್ಟಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹತೋಟಿ ತಪ್ಪಿ ಮಗುಚಿಕೊಂಡ ಲಾರಿ ಇಬ್ಬರಿಗೆ ಗಾಯ:

    ದಿನಾಂಕ 09.03.2016 ರಂದು ಬೆಳಿಗ್ಗೆ 04-50 ಸಮಯದಲ್ಲಿ ಮಡಿಕೇರಿ ತಾಲೋಕು, ಬೋಯಿಕೇರಿ ಇಬ್ನಿವಳವಾಡಿ ಗ್ರಾಮದ ನಿವಾಸಿ ಕೆ.ಕೆ.ತುಳಸೀದಾಸ್ ರವರು ತಮ್ಮ ಮನೆಯಲ್ಲಿದ್ದ ಸಮಯದಲ್ಲಿ ಮಡಿಕೇರಿ ಕಡೆಯಿಂದ ಕೆಎ-01 ಡಿ-8068ರ ಲಾರಿ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದು ಕೆ.ಕೆ.ತುಳಸೀದಾಸ್ ರವರ ಮನೆಯ ಬಳಿ ಲಾರಿಯು ಹತೋಟಿ ತಪ್ಪಿ ಮಗುಚಿಕೊಂಡು ಮನೆ ಹಾಗೂ ಅವರ ಪಕ್ಕದ ಎಂ.ಕೆ.ಖಾದರ್ ರವರ ಮನೆಯ ಮುಂಭಾಗದ ಶೀಟಿಗೆ ಢಿಕ್ಕಿಪಡಿಸಿ ಜಖಂ ಉಂಟಾಗಿದ್ದು, ಲಾರಿಯಲ್ಲಿದ್ದ ರಘುಪತಿ ಹಾಗೂ ಶಿವರಾಮ್ ರವರಿಗೆ ಗಾಯಗಳಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, March 9, 2016

ಕಲಹ; ಶಾಂತಿಭಂಗ
                    ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿನಾ ಕಾರಣ ಕಲಹವುಂಟು ಮಾಡುತ್ತಿದ್ದ ಪ್ರಕರಣ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 07/03/2016 ರಂದು ಗೋಣಿಕೊಪ್ಪ ಠಾಣೆಯ ಎಎಸ್‌ಐ ಎನ್‌.ಬಿ.ಪ್ರಕಾಶ್‌ರವರು ರಾತ್ರಿ ಗಸ್ತಿನಲ್ಲಿರುವಾಗ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಶಿವರಾತ್ರಿ ಹಬ್ದದ ಪ್ರಯುಕ್ತ ಆರ್ಕೆಸ್ಟ್ರಾ ಹಾಗೂ ನೃತ್ಯ ಕಾರ್ಯಕ್ರದಲ್ಲಿ ಚೆನ್ನಂಗೊಲ್ಲಿ ಪೈಸಾರಿ ನಿವಾಸಿಗಳಾದ ಪ್ರಸನ್ನ, ಅಪ್ಪು, ಬೈಜು, ರಂಜಿತ್‌ ಮತ್ತು ಅಶ್ರಫ್‌ ಎಂಬವರುಗಳು ವಿನಾ ಕಾರಣ ಒಬ್ಬರಿಗೊಬ್ಬರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಶಾಂತಿ ಭಂಗ ಮಾಡುತ್ತಿದ್ದುದ್ದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                       ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯಲ್ಲಿ ನಡೆದಿದೆ. ಕಂಬಿಬಾಣೆ ನಿವಾಸಿ ಪೊನ್ನಪ್ಪ ಎಂಬವರ ಪತ್ನಿಯು ಇತ್ತೀಚೆಗೆ ತೀರಿಕೊಂಡಿದ್ದು, ನಂತರ ಪೊನ್ನಪ್ಪನವರು ವಿಪರೀತ ಮದ್ಯಪಾನ ಮಾಡುತ್ತಿದ್ದರೆನ್ನಲಾಗಿದ್ದು ದಿನಾಂಕ 08/03/2016ರಂದು ಮುಂಜಾನೆ ವೇಳೆ ಪೊನ್ನಪ್ಪನವರು ಮನೆಯಲ್ಲಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ನರಳುತ್ತಿದ್ದವರನ್ನು ಆತನ ಮಗ ಜೀವನ್‌ರವರು ಸುಂಟಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮಹಿಳೆಗೆ ರಿಕ್ಷಾ ಡಿಕ್ಕಿ
                    ಪಾದಚಾರಿ ಮಹಿಳೆಯೊಬ್ಬರಿಗೆ ರಿಕ್ಷಾ ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 08/03/2016ರಂದು ನಗರದ ಜಿಲ್ಲಾ ಆರೋಗ್ಯ ಇಲಾಖಾಧಿಕಾರಿಯವರ ಕಚೇರಿಯ ಉದ್ಯೋಗಿ ಪುಷ್ಪಲತಾ ಎಂಬವರು ನಗರದ ಗೌಳಿಬೀದಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಎ-3975ರ ರಿಕ್ಷಾದ ಚಾಲಕ ರಿಜ್ವಾನ್‌ ಎಂಬಾತನು ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪುಷ್ಪಲತಾರವರಿಗೆ ಡಿಕ್ಕಿಪಡಿಸಿದ ಪರಿಣಾಮ ಪುಷ್ಪಲತಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗುಂಡು ಹಾರಿಸಿ ಕೊಲೆ  ಯತ್ನ 
                    ಗುಂಡು ಹಾರಿಸಿ ವ್ಯಕ್ತಿಯೊಬ್ಬರ ಕೊಲೆ ಯತ್ನ ಮಾಡಿದ ಘಟನೆ ಸೋಮವಾರಪೇಟೆ  ಬಳಿಯ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 07/03/2016ರ ರಾತ್ರಿ ವೇಳೆ ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆ ನಿವಾಸಿ ಸುರೇಂದ್ರ ಎಂಬವರು ಅವರ ಸ್ನೇಹಿತರೊಂದಿಗೆ ಶಿವರಾತ್ರಿ ಹಬ್ಬದ ಆಚರಣೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ಮನೋಜ್‌ ಕುಮಾರ್‌ ಎಂಬವರು ಬಂದು ಅವರನ್ನು ಪೂಜೆಗೆ ಕರೆಯದ ಬಗ್ಗೆ ಆಕ್ಷೇಪಿಸಿ ಮನೆಗ ಹೋಗಿ ಕೋವಿಯನ್ನು ತಂದು ಸುರೇಂದ್ರರವರನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸುವ ಸಂದರ್ಭ ಶಶಿಕುಮಾರ್‌ ಎಂಬವರು ತಡೆದಿದ್ದು ಗುಂಡು ಸುರೇಂದ್ರರವರಿಗೆ ತಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ ಪ್ರಕರಣ 
                      ಮಹಿಳೆಯ ಮೇಲೆ ಹಲ್ಲೆ ಮಾಡಿದ ಪ್ರಕರಣ ಗೋಣಿಕೊಪ್ಪ ಬಳಿಯ ಅರುತೊಕ್ಲುವಿನಲ್ಲಿ ನಡೆದಿದೆ. ದಿನಾಂಕ 07/03/2016ರ ರಾತ್ರಿ 11.30 ಗಂಟೆಗೆ ಅರುವತೊಕ್ಲುವಿನ ನೆಹರು ಕಾಲೋನಿ ನಿವಾಸಿ ಆಶಾ ಎಂಬವರು ಮನೆಯ ಬಳಿ ಇರುವಾಗ ಅದೇ ಕಾಲೊನಿಯ  ನಿವಾಸಿ  ಪ್ರದೀಪ ಎಂಬಾತನು ಕಾವ್ಯ  ಎಂಬ ಯುವತಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದನ್ನು ತೋರಿಸಿದ ಬಗ್ಗೆ ಆಶಾರವರೊಂದಿಗೆ ಜಗಳವಾಡಿ ಪ್ರದೀಪ, ಅನಿಲ್‌ ಮತ್ತು ಸುನಿಲ್‌ ಎಂಬವರು ಸೇರಿಕೊಂಡು ಆಶಾರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
                     ಹೊಳೆಯಲ್ಲಿ ಮುಳುಗಿ ಸಾವಿಗೀಡಾದ  ವಿದ್ಯಾರ್ಥಿಯೊಬ್ಬನ ಶವ ಕೊಂಡಂಗೇರಿ ಬಳಿ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿದೆ. ದಿನಾಂಕ 04/03/2016ರಂದು ವಿರಾಜಪೇಟೆಯ ಸೈಂಟ್‌ ಆನ್ಸ್‌ ಶಾಲೆಯ ವಿದ್ಯಾರ್ಥಿ ದರ್ಶನ್‌ ಪೊನ್ನಣ್ಣ ಎಂಬಾತನು ಪರೀಕ್ಷೆ ಮುಗಿಸಿಕೊಂಡು ತಾಯಿಯ ಮನೆಗೆ ಹೈಸೊಡ್ಲೂರು ಗ್ರಾಮಕ್ಕೆ ಹೋಗುವುದಾಗಿ ತಿಳಿಸಿ ಹೋದವನು ಮನೆಗೆ ಹೋಗದೆ ಕಾಣೆಯಾಗಿದ್ದು ದಿನಾಂಕ 08/03/2016ರಂದು ಆತನ ಶವವು ಸಿದ್ದಾಪುರ ಬಳಿಯ  ಕೊಂಡಂಗೇರಿ ಗ್ರಾಮದ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿರುವುದಾಗಿ ಸಿದ್ದಾಪುರ ಪೊಲೀಸ್‌ ಸಿಬ್ಬಂದಿಗಳು ತಿಳಿಸಿದ ಮೇರೆಗೆ ಹೈಸೊಡ್ಲೂರು ಗ್ರಾಮದ ನಿವಾಸಿ ಕೊಡಂಗಡ ನಳಂದ ಕಾರ್ಯಪ್ಪ ಮತ್ತು ಮೃತ ದರ್ಶನ್‌ ಪೊನ್ನಣ್ಣನ ಸೋದರ ಹೋಗಿ ಶವವನ್ನು ಗುರುತಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, March 8, 2016

ಬೈಕ್ ಅಪಘಾತ ಹಿಂಬದಿ ಸವಾರ ಸಾವು:

     ಬೈಕೊಂದು ಅಪಘಾತಕ್ಕೀಡಾಗಿ  ಹಿಂಬದಿ ಸವಾರ ಸಾವನಪ್ಪಿದ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.  ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಹಿಪ್ಪುಗಳಲೆ ಬೆಸೂರು ಗ್ರಾಮದ ನಿವಾಸಿ ಹೆಚ್.ಇ. ಸುರೇಶ ಎಂಬವರು ದಿನಾಂಕ 6-3-2016 ರಂದು ಹೊಳೆನರಸಿಪುರ ತಾಲೋಕು ಹಳ್ಳಿಮೈಸೂರು ವಾಸಿ ಕವಿ ಎಂಬವರೊಂದಿಗೆ ಮೋಟಾರ್ ಸೈಕಲ್ ನಲ್ಲಿ  ಪ್ರಯಾಣಿಸುತ್ತಿದ್ದಾಗ ಹೆಬ್ಬಾಲೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಸವಾರ ಬೈಕಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮೋಟಾರ್ ಸೈಕಲ್ ರಸ್ತೆ ಮೇಲೆ ಮಗುಚಿ ಬಿದ್ದ ಪರಿಣಾಮ ಹಿಂಬದಿ ಸವಾರ ಕವಿಯವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 7-3-2016 ರಂದು ಸದರಿಯವರು ಸಾವನಪ್ಪಿದ್ದು ಕುಶಾನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಗೆ ಟಾಟಾ ಏಸ್ ಡಿಕ್ಕಿ ಸವಾರನಿಗೆ ಗಾಯ:
     ಕುಶಾಲನಗರದ ಮಾರುತಿ ಬಡಾವಣೆ ನಿವಾಸಿ ಎಸ್.ಎಸ್. ದರ್ಶನ್ ರವರು ದಿನಾಂಕ 6-3-2016 ರಂದು ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ  ಎಂ.ಸಿ. ಸೋಮಯ್ಯ ಎಂಬವರು ಚಲಾಯಿಸುತ್ತಿದ್ದ ಟಾಟಾ ಏಸ್ ವಾಹನ  ಡಿಕ್ಕಿಯಾದ ಪರಿಣಾಮ ಸದರಿ ಎಸ್.ಎಸ್. ದರ್ಶನ್ ರವರು  ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ ಸವಾರರಿಬ್ಬರಿಗೆ ಗಾಯ:
     ಅತೀ ವೇಗದ ಚಾಲನೆಯ ಪರಿಣಾಮ ಮೋಟಾರ್ ಸೈಕಲ್ ಕಾರಿಗೆ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 5-3-2016 ರಂದು ಸುಳ್ಯ ನಿವಾಸಿ ಸತ್ಯಪ್ರಸಾದ್ ಎಂಬವರು ತಮ್ಮ ಬಾಪ್ತು ಕಾರಿನಲ್ಲಿ  ಸುಳ್ಯದಿಂದ ಮೈಸೂರಿಗೆ ಕೆಲಸ ನಿಮಿತ್ತ ಹೋಗುತ್ತಿದ್ದಾಗ  ಮಡಿಕೇರಿ ಸಮೀಪದ ಕಾಟಕೇರಿ ಎಂಬಲ್ಲಿ ತಲುಪಿದಾಗಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲ್ ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಸವಾರ ಮತ್ತು ಹಿಂಬದಿ ಸವಾರ  ಅಬ್ದುಲ್ ವಾಹಿದ್ ಹಾಗೂ ಹಿಂಬದಿ ಸವಾರ ಇಮ್ತಿಯಾಜ್ ರವರುಗಳಿಗೆ ಗಾಯಗಳಾಗಿ  ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು,  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತೋಟದಿಂದ ಮರ ಕಡಿದು ಸಾಗಿಸುತ್ತಿದ್ದ ವೇಳೆ ವ್ಯಕ್ತಿಗಳಿಂದ ಹಲ್ಲೆ:
     ಸರಕಾರದ ಪರವಾನಗಿ ಪಡೆದು ಜಾಗದಿಂದ ಮರಗಳನ್ನು ಕಟಾವು ಮಾಡಿ ಸಾಗಿಸುತ್ತಿದ್ದ  ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.  ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆತ್ತುಕಾಯದಲ್ಲಿರುವ ನಧೀರ್ ಎಂಬವರಿಗೆ ಸೇರಿದ ಜಾಗದಿಂದ ಸರಕಾರನ ಅನುಮತಿ ಪಡೆದು ಜಾಗದಲ್ಲಿದ್ದ ರಬ್ಬರ್ ಮರಗಳನ್ನು ಕಡಿದು ಮಡಿಕೇರಿಯ ಟಿ.ಕೆ, ಕಾಶಿ ಕಾವೇರಪ್ಪ ಎಂಬವರು ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳಾದ ಸಾಬು, ಸಾಜಿ, ಬಿಜು ಮ್ಯಾಥ್ಯೂರವರುಗಳು ಕೆಲವು ಜನರನ್ನು  ಕರೆದುಕೊಂಡು  ಅಕ್ರಮಕೂಟ ಸೇರಿ ಕಾಶಿ ಕಾವರೇರಪ್ಪನವರನ್ನು ತಡೆದು ಅವಾಚ್ಯವಾಗಿ ನಿಂದಿಸಿ  ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ  ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Sunday, March 6, 2016

ಸ್ಕೂಟರ್ ಅವಘಡ ಸವಾರ ಸಾವು:

     ಹಾಸನ ಜಿಲ್ಲೆ ಕುಂಬ್ರಹಳ್ಳಿ ಗ್ರಾಮದ ನಿವಾಸಿ ಕೆ.ಪಿ. ದಯಾನಂದ ಎಂಬವರು ತನ್ನ ಮಗಳ ಮದುವೆಗೆ ನೆಂಟರನ್ನು ಕರೆಯುವ ಸಲುವಾಗಿ ದಿನಾಂಕ 04/03/2016 ರಂದು ಸಮಯ 02:00 ಗಂಟೆಗೆ ಬಾಣಾವಾರ ಗ್ರಾಮದ ರಾಜಪ್ಪರವರ ಮನೆಗೆ ತನ್ನ ಬಾಪ್ತು ಕೆಎ-46 ಈ-7882 ರ ಟಿ.ವಿ.ಎಸ್ ಎಕ್ಸಲ್ ಸ್ಕೂಟರನ್ನು ಚಾಲಿಸಿಕೊಂಡು ಹೋಗಿದ್ದು, ಅಲ್ಲಿಂದ ವಾಪಾಸ್ಸು ಹೊರಟು ಸಂಗಯ್ಯನಪುರ ಗ್ರಾಮದ ಬಳಿ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಸ್ತೆಯ ಎಡಭಾಗದ ದಿಬ್ಬಕ್ಕೆ ಡಿಕ್ಕಿಯಾಗಿ ಸದರಿಯವರು ಮೃತಪಟ್ಟಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟಕ್ಕೆ ಯತ್ನ ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ಹಾಲುಕೆನೆ ಗ್ರಾಮದ ನಿವಾಸಿ ಹೆಚ್.ಆರ್. ಪವನ ಎಂಬವರು ದಿನಾಂಕ 5-3-2016 ರಂದು ಕಾಜೂರು ಹೊಳೆಯಿಂದ ಅಕ್ರಮವಾಗಿ ಮರಳನ್ನು ತುಂಬಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾಸಂತೆ ಪೊಲೀಸರು ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿ ಮಲ್ಲೆಂಗಡ ಮಿಟ್ಟು ಮಾಚಯ್ಯ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು 4-3-2016 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Saturday, March 5, 2016

ವ್ಯಾಪಾರದ ವಿಷಯದಲ್ಲಿ ಜಗಳ ಚಾಕುವಿನಿಂದ ತಿವಿದು ವ್ಯಕ್ತಿಯ ಕೊಲೆಗೆ ಯತ್ನ:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಅರೆಕಾಡು ನಿವಾಸಿ ಫಿರ್ಯಾದಿ ಪಿ.ಎಂ. ಯೂಸುಪ್ ರವರು ದಿನಾಂಕ 4-3-2016 ರಂದು ಸಂಜೆ 06-45 ಮಸೀದಿಯಿಂದ ಹೊರಗಡೆ ಬರುತ್ತಿರುವಾಗ್ಗೆ ಪಿ.ಹೆಚ್. ಯೂಸೆಫ್ ನು ಪಿರ್ಯಾದಿ ಅಣ್ಣ ಅಬೂಬಕರ್ ನೊಂದಿಗೆ ಮೆಣಸು ವ್ಯಾಪಾರ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ಪಿರ್ಯಾದಿಯವರು ಹೋಗಿ ತಡೆಯಲು ಹೋದಾಗ ಪಿ.ಹೆಚ್. ಯೂಸೆಫ್ ನು ಚಾಕುವಿನಿಂದ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದ್ದು, ಅಲ್ಲೇ ಇದ್ದ ಪಿ.ಹೆಚ್. ಯೂಸೆಫ್ ನ ಅಕ್ಕ ಕೂಡ ಕೈಯನ್ನು ಹಿಡಿದು ಎಳೆದಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅವಘಡ , ಹಿಂಬದಿ ಸವಾರ ಸಾವು:

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ದಿನಾಂಕ 5-3-2016 ರಂದು ಬೆಳಗಿನ ಜಾವ 2-30 ಗಂಟೆಗೆ ದರ್ಶನ್ ಎಂಬವರು ಕಿರಣ್ ಎಂಬವರೊಂದಿಗೆ ವಿರಾಜಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರೊಂದನ್ನು ಹಿಂದಿಕ್ಕಲು ಹೋಗಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಮೋಟಾರ್ ಸೈಕಲ್ ನ ಹಿಂಬದಿ ಸವಾರ ಕಿರಣ ಬೈಕ್ ನಿಂದ ಎಸೆಯಲ್ಪಟ್ಟು ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿ ಗಂಭೀರ ಗಾಯಗೊಂಡು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯಿಂದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನ:

      ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಶ್ರೀಮತಿ ನವನೀತಾ ಎಂಬವರು ದಿನಾಂಕ 04.03.2016 ರಂದು ಸಮಯ 19.30 ಗಂಟೆಗೆ ಮೈಸೂರಮ್ಮ ಕಾಲೋನಿಯಲ್ಲಿರುವ ಪಂಪ್ ಹೌಸ್ ಗೆ ಬೀಗ ಹಾಕಿ ಬರುವಾಗ ಆರೋಪಿ ರಾಜೇಶ್ ಎಂಬುವವರು ಅವರ ಕಾರಿನಲ್ಲಿದ್ದು, ಅವರು ಶ್ರೀಮತಿ ನವಾನೀತಾರವರ ಹತ್ತಿರ ಹೋಗಿ ಅವರ ಬಲಕೈ ಯನ್ನು ಹಿಡಿದು ಎಳೆದು ಕಾರಿಗೆ ಹತ್ತುವಂತೆ ಹೇಳಿ ಮಾನಭಂಗ ಮಾಡುವ ಉದ್ದೇಶದಿಂದ ಎದೆಯನ್ನು ಬಟ್ಟೆ ಸಮೇತ ಹಿಡಿದು ಎಳೆದಾಡಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದು ಅದೇ ಸಮಯಕ್ಕೆ ನವನೀತಾರವರ ತಂದೆ ಮ್ಯಾಥ್ಯೂ ರವರು ನಡೆದುಕೊಂಡು ಅಲ್ಲಿಗೆ ಬಂದಿದ್ದು ಅವರ ಮೇಲೆ ಆರೋಪಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯನ್ನು ಚೂರಿಯಿಂದ ತಿವಿದು ಕೊಲೆಗೆ ಯತ್ನ:

      ದಿನಾಂಕ 04/03/2016 ರಂದು ಸಮಯ 10-30 ಪಿ. ಎಂ ಗೆ ಮೈಸೂರಮ್ಮ ಕಾಲೋನಿ ವಾಸಿ ವಿ ಎಸ್ ರಾಜೇಶ್ ಎಂಬುವವರು ದಿನಾಂಕ 4-3-2016 ರಂದು 10.30 ಗಂಟೆಗೆ ಗಿರೀಶ್ಎಂಬುವವರ ಜಾಗದಲ್ಲಿ ಬರುವಾಗ ಅದೇ ಗ್ರಾಮದ ನಿವಾಸಿ ಫಿಲಿಪೋಸ್ ಮ್ಯಾಥ್ಯೂ ಹಾಗೂ ಇನ್ನೊಬ್ಬ ಪಂಪ್ ಹೌಸ್ ಒಳಗಿರುವುದನ್ನು ಗಮನಿಸಿ ಅವರನ್ನು ವಿಚಾರ ಮಾಡಿದಾಗ ಮ್ಯಾಥ್ಯೂರವರು ನೀನು ಯಾವ ಸದಸ್ಯ ಎಂದುನಿಂದಿಸಿ ರಾಜೇಶ್ ರವರಲ್ಲಿದ್ದ ಮೋಬೈಲನ್ನುಕಿತ್ತುಕೊಂಡು ರಸ್ತೆಗೆ ಎಸೆದುನಂತರ ಅವರ ಸ್ಕೂಟರಿನಲ್ಲಿ ಮನೆಗೆ ಹೋಗಿ ಅವರ ಮಗಳನ್ನ ಕರೆದುಕೋಂಡು ಬಂದು ಇಬ್ಬರು ಸೇರಿ ಅವಾಚ್ಯ ಶಬ್ಧಗಳಿಂದ ಬೈದು ಕಲ್ಲಿನಿಂದ ಹೊಡೆದು ಸಾಯಿಸುತ್ತೆವೆ ಎಂದು ಎದೆಭಾಗಕ್ಕೆ ಹೊಡೆದು ನಂತರ ನಿಮ್ಮ ಮೇಲೆ ಮಗಳನ್ನು ಮಾನ ಭಂಗ ಮಾಡಲು ಬಂದರು ಎಂದು ದೂರು ನೀಡುತ್ತೆವೆಂದು ಹೇಳಿ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪ್ರಾಪ್ತ ಹುಡುಗಿ ಕಾಣೆ:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕ ಭಂಡಾರದ ನಿವಾಸಿಯಾದ ಸಿ.ಹೆಚ್ ಯೊಗೇಶ್ ರವರ ಮಗಳಾದ ಕುಮಾರಿ ಜಯಶ್ರೀ ಪ್ರಾಯ 16 ವರ್ಷದವಳು ಕೊಡ್ಲಿಪೇಟೆ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 27.02.2016 ರಂದು ಎಂದಿನಂತೆ ಬೆಳಿಗ್ಗೆ 08.30 ಎ.ಎಂಗೆ ಮನೆಯಿಂದ ಕಾಲೇಜಿಗೆ ಪರೀಕ್ಷೆಯನ್ನು ಬರೆಯಲು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾಳೆಂದು ದಿನಾಂಕ 4-3-2016 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, March 4, 2016

ಯುವತಿ ಕಾಣೆ, ಪ್ರಕರಣ ದಾಖಲು:

         ಶ್ರೀಮಂಗಲ ಠಾಣಾ ಸರಹದ್ದಿನ ತೂಚಮಕೇರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮ ಎಂಬವರ ಹಿರಿಯ ಮಗಳು 19 ವರ್ಷ ಪ್ರಾಯದ ಡೀನಾಳು ಗೋಣಿಕೊಪ್ಪಲುವಿನ ಎಸ್.ಕುಮಾರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಈಗ್ಗೆ 3 ದಿನಗಳಿಂದ ಅಕೆಗೆ ಅರೋಗ್ಯ ಸರಿ ಇಲ್ಲದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲಿಯೆ ಇದ್ದು, ದಿನಾಂಕ 02/03/2016 ರಂದು ಎಂದಿನಂತೆ ಊಟ ಮಾಡಿ ರಾತ್ರಿ ಮಲಗಿದ್ದವಳು ಸಮಯ 12 ಗಂಟೆ ನಂತರ ಮನೆಯಿಂದ ಕಾಣೆಯಾಗಿದ್ದು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, ಗುಂಡುಹೊಡೆದುಕೊಂಡು ವ್ಯಕ್ತಿಯ ಆತ್ಮಹತ್ಯೆ:
    
     ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಭಾಗಮಂಡಲ ಠಾಣಾ ಸರದಹದ್ದಿನ ಚೇರಂಗಾಲ ಗ್ರಾಮದ ನಿವಾಸಿ ತಿಮ್ಮಯ್ಯ ಎಂಬವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 3-3-2016 ರಂದು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂಟಿನಳಿಗೆಯ ಕೋವಿಯಿಂದ ಸ್ವತ: ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ವಿಮಲರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ದಾಳಿ ಇಬ್ಬರು ಮಹಿಳೆಯರ ದುರ್ಮರಣ:

     ಕಾಫಿ ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಿಬ್ಬರು ಮಹಿಳೆ ಮೇಲೆ ಕಾಡಾನೆಯೊಂದು ದಾಳಿನಡೆಸಿದ ಪರಿಣಾಮ ಇಬ್ಬರೂ ಸಾವನಪ್ಪಿದ ಘಟನೆ ಪಾಲಿಬೆಟ್ಟದ ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ದಿನಾಂಕ 03-03-2016 ರಂದು ಸಮಯ 12.05 ಪಿ.ಎಂ.ಗೆ ಪಾಲಿಬೆಟ್ಟದ ಮಟ್ಟಪರಂಬು ಟಾಟಾ ಎಸ್ಟೇಟ್ ಬ್ಲಾಕ್ ನಂ. 24 ರಲ್ಲಿ ಪ್ರಾಯ 50 ವರ್ಷದ ರಾಜಿ ಹಾಗೂ ಪ್ರಾಯ 46 ವರ್ಷದ ಭಾಗ್ಯ ಎಂಬುವವರು ಕೂಲಿಕೆಲಸ ಮಾಡಿಕೊಂಡಿದ್ದಾಗ ದುಬಾರೆ ಎಸ್ಟೇಟ್‌‌ನಿಂದ ಒಮ್ಮೆಲೆ ಒಂದು ಕಾಡಾನೆಯು ತೋಟದೊಳಗೆ ನುಗ್ಗಿ ತೋಟದಲ್ಲಿ ಕರಿಮೆಣಸನ್ನು ಆಯುತ್ತಿದ್ದ ರಾಜಿ ಮತ್ತು ಭಾಗ್ಯರವರ ಮೇಲೆ ಧಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರೂ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, March 3, 2016

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ:

     ಯುವಕನೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಪರಿಣಾಮ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿರಾಜಪೇಟೆ ಸಮೀಪದ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗಮರೂರು ಗ್ರಾಮದ ನಿವಾಸಿ ಹೆಚ್.ಎಂ. ರಘು ಎಂಬವರ ಮಗಳಾದ 17 ವರ್ಷ ಪ್ರಾಯದ ಅಶ್ವಿನಿ ಎಂಬಾಕೆಯನ್ನು ಅದೇ ಗ್ರಾಮದ ನಿವಾಸಿ ಕಂದ ಎಂಬವರ ಮಗ ಗಿರೀಶ ಎಂಬಾತ 2-3 ವರ್ಷಗಳಿಂದ ಪೀತಿಸುತ್ತಿರುವುದಾಗಿಯೂ ಈ ವಿಚಾರ ಅವರುಗಳ ತಂದೆ-ತಾಯಿಯವರಿಗೆ ತಿಳಿದು ಅಶ್ವಿನಿಯನ್ನು ಮದುವೆಯಾಗುವುದಾಗಿ ತೀರ್ಮಾನಿಸಿಕೊಂಡು ಬಳಿಕ ಸದರಿ ಅಶ್ವಿನಿಯನ್ನು ನಂಬಿಸಿ ಗಿರೀಶನು ಆಕೆಯ ಮೇಲೆ 3-4 ಬಾರಿ ಅತ್ಯಾಚಾರವೆಸಗಿದ್ದು, ಇದೀಗ ಸದರಿ ಗಿರೀಶ ಅಶ್ವಿನಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಸದರಿ ಅಶ್ವಿನಿಯು ದಿನಾಂಕ 1-3-2016 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ನೀರಿನ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ಪಿರ್ಯಾದಿ ಶ್ರೀ ಸಂಜಯ್ ರವರು ನಗರ ಸಭಾ ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 29-2-2016 ರಂದು ಸಮಯ ಬೆಳಿಗ್ಗೆ 07.45 ಗಂಟೆಗೆ ಇವರು ರಾಜರಾಜೇಶ್ವರಿ ನಗರಕ್ಕೆ ನೀರು ಸರಬರಾಜು ಮಾಡಲು ಹೋಗುತ್ತಿದ್ದಾಗ ರಜಾಕ್ ಎಂಬುವವರ ಪತ್ನಿ ಆಟೋ ರಿಕ್ಷಾವನ್ನು ತೊಳೆಯುತ್ತಿದ್ದನ್ನು ಕಂಡು ತೊಳೆಯಬಾರದೆಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ರಜಾಕ್ ಎಂಬುವವರು ಅಲ್ಲಿಗೆ ಬಂದು ಸಂಜಯ್ ರವರಿಗೆ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮ ಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಿಟಾಚಿ ಸಾಗಿಸುತ್ತಿದ್ದ ಲಾರಿ ಅಪಘಾತ, ಇಬ್ಬರ ಸಾವು, ಚಾಲಕನಿಗೆ ಗಂಭೀರ ಗಾಯ:

      ಹಿಟಾಚಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಇಬ್ಬರು ಸಾವನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಮೇಕೇರಿಯಲ್ಲಿ ನಡೆದಿದೆ. ದಿನಾಂಕ 02/03/2015 ರಂದು ಫಿರ್ಯಾದಿ ಮಡಿಕೇರಿ ತಾಲೋಕು ಹೆರವನಾಡು ಗ್ರಾಮದ ನಿವಾಸಿ ನವೀನ್ ಕುಮಾರ್ ರವರು ಕೊಂಡಂಗೇರಿಯಲ್ಲಿ ಹೊಸ ಕೆರೆ ತೆಗೆಯುವ ಕೆಲಸಕ್ಕಾಗಿ ತಮಿಳುನಾಡಿನಿಂದ ಬಾಡಿಗೆಗೆ ತಂದಿದ್ದ ಹಿಟಾಚಿಯನ್ನು ವಾಪಸ್ಸು ಕಳುಹಿಸುವ ಸಲುವಾಗಿ ಲಾರಿ ನಂ TN-27-X0627 ರಲ್ಲಿ ಹಿಟಾಚಿಯನ್ನು ಲೋಡ್‌ ಮಾಡಿ ಬೆಳಿಗ್ಗೆ 11.15 ಗಂಟೆಗೆ ಕೊಂಡಂಗೇರಿಗೆ ಕಳುಹಿಸಿದ್ದು ಸದರಿ ಲಾರಿಗೆ ಅಯ್ಯನಾರ್‌ ಎಂಬುವವರು ಚಾಲಕರಾಗಿದ್ದು ಅವರ ಜೊತೆ ನವೀನ್ ಕುಮಾರ್ ರವರಿಗೆ ಸೇರಿದ ಕೂರ್ಗ್ ಅರ್ಥ್ ಮೂವರ್ಸ್ ಸಂಸ್ಥೆಯ ಯೊಗೇಶ್‌ ಹಾಗೂ ಹಿಟಾಚಿ ಅಪರೇಟರ್‌ ಗೋವಿಂದನ್‌ ಎಂಬುವವರು ಲಾರಿಯಲ್ಲಿ ಹೋಗಿದ್ದು. ಸಮಯ ಸುಮಾರು 11.30 ಗಂಟೆಗೆ ಮೇಕೇರಿಯ ವೆಂಕಟೇಶ್ವರ ರೆಸಿಡೆನ್ಸಿ ರೆಸಾರ್ಟ್‌ ನ ಬಳಿ ತಿರುವು ರಸ್ತೆಯಲ್ಲಿ ಲಾರಿ ಅಪಘಾತಕ್ಕೀಡಾಗಿದ್ದು ಲಾರಿಯಲ್ಲಿದ್ದ ಗೋವಿಂದ ಹಾಗೂ ಯೊಗೇಶ್‌ ತೀವ್ರ ಗಾಯಗೊಂಡು ಲಾರಿಯೊಳಗೆ ಸಿಕ್ಕಿಕೊಂಡು ಮೃತಪಟ್ಟಿದ್ದು. ಲಾರಿ ಚಾಲಕ ಆಯ್ಯನಾರ್‌ ಗಂಬೀರವಾಗಿ ಗಾಯಗೊಂಡು ಅವರನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  

Wednesday, March 2, 2016

ಅಕ್ರಮ ಜೂಜಾಟ, ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾದಿಕಾರಿಯವರಿಗೆ ದೊರೆತ ಮಾಹಿತಿ ಬಂದ ಮೇರೆಗೆ ಸದರಿಯವರಯ ಸಿಬ್ಬಂದಿಯೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ಹಂಪಾಪುರ ಗ್ರಾಮದ ಹೇಮಾವತಿ ನದಿಯ ಬಳಿ ಸಮಯ 12.30 ಪಿ.ಎಂಗೆ ದಾಳಿ ಮಾಡಿ ಇಸ್ಪೀಟ್ ಜೂಜಾಡುತ್ತಯಿದ್ದ ಆರೋಪಿಗಳಾದ ಶಂಕರ, ಶಿವ, ಕುಮಾರ, ಆನಂದ ಮತ್ತು ಮುರುಗನ್ ಎಂಬವರನ್ನು ಬಂಧಿಸಿದ ಅವರಿಂದ ಜೂಜಾಟಕ್ಕೆ ಬಳಸಿದ ರೂ.2070/- ಗಳನ್ನು ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಕ್ರ,ಮ ಮರಳು ಸಾಗಾಟಕ್ಕೆ ಯತ್ನ ಪ್ರಕರಣ ದಾಖಲು:

    ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಕಾವೇರಿ ಹೊಳೆಯಿಂದ ಆರೋಪಿಗಳಾದ ಶಿವರಾಂ ತಂದೆ ನಾಗರಾಜು ಪ್ರಾಯ 32 ವರ್ಷ ಲಾರಿ ಚಾಲಕ ಅಮ್ಮತ್ತಿ ಒಂಟಿಯಂಗಡಿ ವಿರಾಜಪೇಟೆ ತಾಲೂಕು ಮತ್ತು ಕೆ ಎ ಸಲಿಂ ತಂದೆ ಜೆ ಎ ಹಂಸ ಕೊಂಡಂಗೇರಿ ಇವರುಗಳು ಅಕ್ರಮವಾಗಿ ಮರಳು ತೆಗೆದು ಕೆ ಎ 12 ಎ 2190 ನೊಂದಣಿ ಸಂಖ್ಯೆಯ ಮಿಲಿ ಲಾರಿ ತುಂಬಿಸಿ ಮಾರಾಟಮಾಡಲು ಪ್ರಯತ್ನ ಪಡುತ್ತಿದ್ದವರನ್ನು ಪತ್ತೆ ಹಚ್ಚಿದ ಸಿದ್ದಾಪುರ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಅಕ್ರಮ ಮರಳು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಟಿ.ವಿ. ಧಾರವಾಹಿಯಲ್ಲಿ ಜನಾಂಗಕ್ಕೆ ಅವಹೇಳನ:

    ಕೊಡಗಿನಲ್ಲಿ ನೆಲೆಸಿರುವ ಐರಿ ಜನಾಂಗಕ್ಕೆ ಚಂದನ ವಾಹಿನಿಯಲ್ಲಿ ಪ್ರವಾಸವಾಗುವ ಧಾರವಾಹಿಯೊಂದರಲ್ಲಿ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದಿನಾಂಕ 21-02-2016 ರಂದು ಚಂದನ ಟಿ.ವಿಯ 6ನೇ ಸಂಚಿಕೆಯಲ್ಲಿ ಪ್ರಸರವಾದ “ನಗ್ಗ ಕೊಡವ “ ಧಾರವಾಯಿಯಲ್ಲಿ ಐರಿ ಜನಂಗವನ್ನು ಅವಹೇಳನಕಾರಿ ಅಯಿಂಗ ಕೊಡವಳ, ಅವ ಐರಿ, ಐರಿಯಾ ಎಂದು ನಮೂದಿಸಿದ್ದು ಅಲ್ಲದೇ ಐರಿ ಮಹಿಳೆಯ ಡುಪನ್ನು ಸಹ ಕೀಳಾಗಿ ತೋರಿಸಿದ್ದು ಇದು ಐರಿ ಸಮಾಜದವರ ಮನಸ್ಸಿಗೆ ನೋವಾಗಿದ್ದು, ಐರಿ ಸಮಜವನ್ನು ಕೀಳಾಗಿ ಚಿತ್ರಿಸಿ ಪ್ರಸಾರ ಮಾಡಿರುತ್ತಾರೆಂದು ಆರೋಪಿಸಿ ಮಲ್ಲತಂಡ ರಮೇಶ್ ಅಧ್ಯಕ್ಷರು ಕೊಡವ ಐರಿ ಸಮಾಜ ಮೂರ್ನಾಡು ಗ್ರಾಮ ಕೊಡಗು ಜಿಲ್ಲೆ ಇವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Tuesday, March 1, 2016

ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು:

 ಬೆಂಗಳೂರಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರದಲ್ಲಿ ನೆಲೆಸಿರುವ ಹೆಚ್.ಎ ಬಾಬು ಎಂಬವರು ತಮ್ಮ ಸಂಬಂಧಿಕರ ಮನೆಯಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ದಿನಾಂಕ 28-2-2016 ರಂದು ರಾತ್ರಿ 9-00 ಗಂಟೆಗೆ ಕರ್ಣಂಗೇರಿ ಗ್ರಾಮದ ಬಸ್ಸು ತಂಗುದಾಣದ ಪಕ್ಕ ನಿಂತಿರುವಾಗ ಯಾವುದೋ ವಾಹನವೊಂದು ಅವರಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಅವರನ್ನು ಸಾಗಿಸುವಾಗ ದಾರಿಮದ್ಯೆ ಮೃತಪಟ್ಟಿರುತ್ತಾರೆ. ಈ ಸಂಬಂಧ ಮೃತ ಬಾಬುರವರ ಮಗಳಾದ ಬಿ. ಸುಮ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರರ ನಿರ್ಲಕ್ಷ್ಯ, ಹಾನಿಗೊಳಗಾದ ದೂರವಾಣಿ ಕೇಬಲ್:

     ದಿನಾಂಕ 25-1-2016 ರಂದು ಗುತ್ತಿಗೆದಾರರಾದ ಅಯ್ಯಣ್ಣ ಎಂಬವರು ಪೊನ್ನಂಪೇಟೆ ಠಾಣಾ ಸರದಹದ್ದಿನ ಕೂರ್ಗ್ ಸ್ಪೋರ್ಟ್ಸ್ ಕ್ಲಬ್‌ನ ಮುಂಭಾಗದಲ್ಲಿ ಚರಂಡಿ ಹಾಗೂ ರಸ್ತೆ ರಿಪೇರಿ ಸಂಬಂಧ ಭೂಮಿಯನ್ನು ಜೆ.ಸಿ.ಬಿಯಿಂದ ಅಗೆಸಿರುವುದರಿಂದ 100 ಪೇರ್ ನ 15 ಮೀಟರ್ ತಾಮ್ರದ ದೂರವಾಣಿ ಕೇಬಲ್ ಹಾನಿಗೊಳಗಾಗಿ ನಷ್ಟವಾಗಿದ್ದು ಇದರಿಂದ 30 ದೂರವಾಣಿ ಹಾಗೂ ಇಂಟರ್‌ನೇಟ್ ಸೇವೆಗಳು ಸ್ಥಗಿತಗೊಂಡಿದ್ದು ಸರ್ಕಾರಿ ಸೊತ್ತಾದ ದೂರವಾಣಿ ಕೇಬಲ್ ಹಾನಿಮಾಡಿ ನಷ್ಟಪಡಿಸಿರುತ್ತಾರೆಂದು ಸಿ.ಪಿ ರವೀಂದ್ರ ಸಬ್ ಡಿವಿಜನಲ್ ಇಂಜಿನಿಯರ್, ಬಿಎಸ್ಎನ್ಎಲ್ ಗೋಣಿಕೊಪ್ಪ ಇವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.