Friday, March 4, 2016

ಯುವತಿ ಕಾಣೆ, ಪ್ರಕರಣ ದಾಖಲು:

         ಶ್ರೀಮಂಗಲ ಠಾಣಾ ಸರಹದ್ದಿನ ತೂಚಮಕೇರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮ ಎಂಬವರ ಹಿರಿಯ ಮಗಳು 19 ವರ್ಷ ಪ್ರಾಯದ ಡೀನಾಳು ಗೋಣಿಕೊಪ್ಪಲುವಿನ ಎಸ್.ಕುಮಾರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಈಗ್ಗೆ 3 ದಿನಗಳಿಂದ ಅಕೆಗೆ ಅರೋಗ್ಯ ಸರಿ ಇಲ್ಲದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲಿಯೆ ಇದ್ದು, ದಿನಾಂಕ 02/03/2016 ರಂದು ಎಂದಿನಂತೆ ಊಟ ಮಾಡಿ ರಾತ್ರಿ ಮಲಗಿದ್ದವಳು ಸಮಯ 12 ಗಂಟೆ ನಂತರ ಮನೆಯಿಂದ ಕಾಣೆಯಾಗಿದ್ದು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, ಗುಂಡುಹೊಡೆದುಕೊಂಡು ವ್ಯಕ್ತಿಯ ಆತ್ಮಹತ್ಯೆ:
    
     ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಭಾಗಮಂಡಲ ಠಾಣಾ ಸರದಹದ್ದಿನ ಚೇರಂಗಾಲ ಗ್ರಾಮದ ನಿವಾಸಿ ತಿಮ್ಮಯ್ಯ ಎಂಬವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 3-3-2016 ರಂದು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂಟಿನಳಿಗೆಯ ಕೋವಿಯಿಂದ ಸ್ವತ: ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ವಿಮಲರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ದಾಳಿ ಇಬ್ಬರು ಮಹಿಳೆಯರ ದುರ್ಮರಣ:

     ಕಾಫಿ ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಿಬ್ಬರು ಮಹಿಳೆ ಮೇಲೆ ಕಾಡಾನೆಯೊಂದು ದಾಳಿನಡೆಸಿದ ಪರಿಣಾಮ ಇಬ್ಬರೂ ಸಾವನಪ್ಪಿದ ಘಟನೆ ಪಾಲಿಬೆಟ್ಟದ ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ದಿನಾಂಕ 03-03-2016 ರಂದು ಸಮಯ 12.05 ಪಿ.ಎಂ.ಗೆ ಪಾಲಿಬೆಟ್ಟದ ಮಟ್ಟಪರಂಬು ಟಾಟಾ ಎಸ್ಟೇಟ್ ಬ್ಲಾಕ್ ನಂ. 24 ರಲ್ಲಿ ಪ್ರಾಯ 50 ವರ್ಷದ ರಾಜಿ ಹಾಗೂ ಪ್ರಾಯ 46 ವರ್ಷದ ಭಾಗ್ಯ ಎಂಬುವವರು ಕೂಲಿಕೆಲಸ ಮಾಡಿಕೊಂಡಿದ್ದಾಗ ದುಬಾರೆ ಎಸ್ಟೇಟ್‌‌ನಿಂದ ಒಮ್ಮೆಲೆ ಒಂದು ಕಾಡಾನೆಯು ತೋಟದೊಳಗೆ ನುಗ್ಗಿ ತೋಟದಲ್ಲಿ ಕರಿಮೆಣಸನ್ನು ಆಯುತ್ತಿದ್ದ ರಾಜಿ ಮತ್ತು ಭಾಗ್ಯರವರ ಮೇಲೆ ಧಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರೂ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.