Monday, March 28, 2016

ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆಗೆ ಯತ್ನ:

     ದಿನಾಂಕ 27.03.2016 ರಂದು ಸಮಯ 01:00 .ಎಂಗೆ ಸೋಮವಾರಪೇಟೆ ತಾಲೂಕು ಜಂಬೂರು ಗ್ರಾಮದ ಫಿರ್ಯಾಧಿ ಎಂ.ಇ. ಶಬೀರ್ ಎಂಬವರು ಅವರ ಸಹೋದರ ಸಮೀರ್ ರವರ ಕಾರಿನಲ್ಲಿ ಮಡಿಕೇರಿಗೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಸಮಯ 03:30 ಪಿ.ಎಂಗೆ ಅವರ ಮನೆಯ ಹತ್ತಿರ ರಸ್ತೆಯಲ್ಲಿ ಕಾರನ್ನು ಮನೆಗೆ ತಿರುಗಿಸಲು ಇಂಡಿಕೇಟರ್ ಹಾಕಿ ಮನೆ ಕಡೆ ತಿರುಗಿಸುವಾಗ ಹಿಂದಿನಿಂದ ಬಂದ ಇಬ್ಬರು ಆಟೋ ಚಾಲಕರು ಆಟೋ ನಿಲ್ಲಿಸಿ ಅದರಲ್ಲಿ ದ್ದ ಶರಣು, ತೀರ್ಥಕುಮಾರ್, ಹರೀಶ, ಶಿವದಾಸ್ ಬವರು ಫಿರ್ಯಾದಿಯವರ ಬಳಿ ಬಂದು ಸಿಗ್ನಲ್ ಹಾಕಲು ಆಗುವುದಿಲ್ಲವಾ ಎಂದಾಗ ನಾನು ಸ್ವಾರಿ ನಾನು ಇಂಡಿಕೇಟರ್ ಹಾಕಿದ್ದೆ ನೀವು ಸರಿಯಾಗಿ ಗಮನಿಸಿಲ್ಲ ಎಂದಿದ್ದು ಅಷ್ಟರಲ್ಲಿ ಅವರೆಲ್ಲರೂ ಏಕಾಏಕಿ ಫಿರ್ಯಾದಿಯವರನ್ನು ಕಾರಿನಿಂದ ಹೊರಗೆ ಎಳೆದು ಆಟೋದಿಂದ ಕತ್ತಿ ದೊಣ್ಣೆ, ಕಬ್ಬಿಣದ ರಾಡು ಕತ್ತಿ ತೆಗೆದುಕೊಂಡು ಬಂದು ಅದರಲ್ಲಿ ಒಬ್ಬಾತ ಕತ್ತಿಯಿಂದ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾಧಿಯವರ ತಲೆಯ ಎಡ ಭಾಗಕ್ಕೆ ಕಡಿದು ಗಾಯಗೊಳಿಸಿದ್ದು ಉಳಿದ ಮೂವರು ರಾಡು ಮತ್ತು ದೊಣ್ಣೆಯಿಂದ ಹೊಡೆದಿರುರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ಸು ಚಾಲಕನ ಮೇಲೆ ಹಲ್ಲೆ:

     ಫಿರ್ಯಾದಿ ರಂಗಸ್ವಾಮಿಯವರು ಕೆ.ಎಸ್.ಆರ್.ಟಿ.ಸಿ. ಚಾಲಕನಾಗಿದ್ದು, ಧರ್ಮಸ್ಥಳ ಡಿಪೋದ ಮಡಿಕೇರಿ-ಧರ್ಮಸ್ಥಳ ಮಾರ್ಗದ ಬಸ್ಸಿನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ದಿನಾಂಕ: 27-03-2016 ರಂದು ಬೆಳಿಗ್ಗೆ 06-30 ಗಂಟೆಗೆ ಎಂದಿನಂತೆ ಕೆ.ಎಸ್.ಆರ್.ಟಿ.ಸಿ. ಬಸ್ಸು ನಂ:ಕೆಎ-19 ಎಫ್-2955ರಲ್ಲಿ ಬಸವರಾಜು ಎಂಬ ಕಂಡಕ್ಟರ್ ನೊಂದಿಗೆ ಧರ್ಮಸ್ಥಳದಿಂದ ಹೊರಟು ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು 10-30 ಎ.ಎಂ.ಗೆ ಜೋಡುಪಾಲ ಎಂಬಲ್ಲಿ ತಲುಪುವಾಗ್ಗೆ ಮುಂಭಾಗದಲ್ಲಿ ಕಾಸರಗೋಡುವಿನಿಂದ ಮಡಿಕೇರಿ ಕಡೆಗೆ ಕೆಎ-19ಸಿ2333 ಸಂಖ್ಯೆಯ “ಸುಶ್ಮಿತಾ” ಎಂಬ ಖಾಸಗಿ ಬಸ್ಸು ಹೋಗುತ್ತಿದ್ದು, ಅದನ್ನು ಹಿಂದಿಕ್ಕಿಕೊಂಡು ಮುಂದೆ ಹೋಗಿದ್ದು, ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಖಾಸಗಿ ಬಸ್ಸಿನ ಮುಂದೆ ಹೋಗಿ ನಿಲ್ಲಿಸಿದ ಸಂದರ್ಭದಲ್ಲಿ ಖಾಸಗಿ ಬಸ್ಸಿನ ಚಾಲಕ, ಕಂಡಕ್ಟರ್ ಮತ್ತು ಕ್ಲೀನರ್ ಮೂವರು ಬಸ್ಸಿನಿಂದ ಇಳಿದು ಬಂದು ಫಿರ್ಯಾದಿಯವರಿಗೆ ಬಸ್ಸಿನಿಂದ ಇಳಿಯುವಂತೆ ತಿಳಿಸಿ, ಬಸ್ಸಿನಿಂದ ಕೆಳಗೆ ಎಳೆದು ನಮ್ಮ ಬಸ್ಸಿಗೆ ಬರುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೀರಾ ಎಂದು ಹೇಳಿ ಕೈಗಳಿಂದ ಶರೀರದ ಭಾಗಗಳಿಗೆ ಹೊಡೆದು ನೋವುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅನಾರೋಗ್ಯ ದಿಂದ ಬೇಸತ್ತ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ:

     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲುಹುದಿಕೇರಿ ಗ್ರಾಮದ ನಿವಾಸಿ ಆರ್.ಎಂ. ಅನಿಲ್ ಎಂಬವರ ಸಹೋದರ 28 ವರ್ಷ ಪ್ರಾಯದ ಗಿರೀಶ ಎಂಬಾತ ಅನಾರೋಗ್ಯದಿಂದ ಬಳಲುತ್ತಿದ್ದ, ದಿನಾಂಕ 27-3-2016 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಮೈಮೇಲೆ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 26-03-2016 ರಂದು ಸಮಯ 9-30 ಪಿ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿಳಹ ಗ್ರಾಮದ ವಾಸಿ ಪವನ್ ರವರಿಗೆ ಶನಿವಾರಸಂತೆಯ ಅಚ್ಚು ಎಂಬವನು ಮೊಬೈಲಿನಲ್ಲಿ ಯಾರೊಂದಿಗೋ ಕೆಟ್ಟ ಬಾಷೆಯಲ್ಲಿ ಮಾತನಾಡುತ್ತಿದ್ದು, ಇದನ್ನು ಕೇಳಿದ ವಿಚಾರದಲ್ಲಿ ಸದರಿ ಅಚ್ಚು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಪನವ್ ರವರನ್ನು ಬೈದು ಅಲ್ಲಿಗೆ ಬಂದ ಫಿರ್ಯಾದಿ ಪವನ್ ರವರ ಅಣ್ಣ ಕರ್ಣ, ತಂದೆ ನಾಗಯ್ಯ, ತಾಯಿ ನಿಂಗಮ್ಮ ರವರಿಗೆ ಅಚ್ಚು ದೊಣ್ಣೆಯಿಂದ ಹೊಡೆದು ನೋವುಪಡಿಸಿದ್ದು, ಈ ಸಂಬಂಧ ಪವನ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.