Wednesday, March 30, 2016

ಮಹಿಳೆ ಕಾಣೆ:

    ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಮಣಜೂರು ಗ್ರಾಮದ ನಿವಾಸಿ ಪಿರ್ಯಾದಿ ನಂಜುಂಡಪ್ಪ ಎಂಬವರ ಅಳಿಯ ದಿನಾಂಕ 27/3/16 ರಂದು ರಾತ್ರಿ ಮದ್ಯಪಾನ ಮಾಡಿ ಬಂದು ಗಲಾಟೆ ಮಾಡಿದ್ದಲ್ಲದೇ ಮಾರನೇ ದಿನ ಪಂಚಾಯ್ತಿಗೆ ಕರೆಯಿಸಿ ಪಿರ್ಯಾದಿ ಮತ್ತು ಅವರ ಮನೆಯವರನ್ನು ನಿಂಧಿಸಿದ್ದರಿಂದ ಬೇಸರಗೊಂಡಿದ್ದ ಪಿರ್ಯಾದಿಯವರ ಪತ್ನಿ ಶ್ರೀಮತಿ ಸತ್ಯಮ್ಮರವರು ದಿನಾಂಕ 28/3/16 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಚುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:
     ವಿರಾಜಪೇಟೆ ತಾಲ್ಲೂಕು ದೇವನೂರು ಗ್ರಾಮದ ನಿವಾಸಿ ಹೆಚ್.ಸಿ. ರಾಜು ಎಂಬವರು ದಿನಾಂಕ 28-03-2016 ರಂದು ಸಮಯ 7.15 ಗಂಟೆಗೆ ತನ್ನ ಮನೆಯಲ್ಲಿ ರುವಾಗ್ಗೆ ಅದೇ ಊರಿನವರಾದ ಹೆಚ್.ಸಂತೋಷ್ ಎಂಬವರು ಅಲ್ಲಿಗೆ ಬಂದಿದ್ದು ಆತನನ್ನು ಏಕೆ ನೀನು ಬಂದೆ ಎಂದು ಕೇಳಿದ ವಿಚಾರದಲ್ಲಿ ಹೆಚ್.ಸಂತೋಷ್ ಫಿರ್ಯಾದಿ ಹೆಚ್.ಸಿ. ರಾಜುರವರೊಂದಿಗೆ ಜಗಳ ಮಾಡಿ ಅಲ್ಲೇ ಪಕ್ಕದ ಬೇಲಿಯಲ್ಲಿದ್ದ ಒಂದು ಕಾಡು ಮರದ ದೊಣ್ಣೆಯಿಂದ ಫಿರ್ಯಾದಿಯ ತಲೆಗೆ ಮತ್ತು ಎರಡು ಕೈಗಳಿಗೆ ಹಲ್ಲೆ ಮಾಡಿ ನೊವು ಪಡಿಸಿ ನಂತರ ಹೊಟ್ಟೆ ಭಾಗಕ್ಕೆ ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು ಸದರಿ ಹೆಚ್.ಸಿ. ರಾಜುರವರು ಚಿಕಿತ್ಸೆ ಸಂಬಂಧ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಹೇಳಿಕೆ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಗೆ ಇನೋವಾ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ದಿನಾಂಕ 29-03-2016 ರಂದು ಸಮಯ೨೨.೦೦ ಗಂಟೆಗೆ ಫಿರ್ಯಾದಿ ವೆಳ್ಳಸ್ವಾಮಿ ಎಂಬವರು ಸತ್ಯರಾಜುರವರ ಜೊತೆಯಲ್ಲಿ ಮೊಟಾರ ಸೈಕಲ ನಂ ಟಿಎನ್ 55ಎಸ್ ೦೦೯೧ರಲ್ಲಿ ಗೋಣಿಕೊಪ್ಪದಿಂದ ಶ್ರೀಮಂಗಲಕ್ಕೆ ಹೋಗುತ್ತಿರುವಾಗ್ಗೆ ಜೋಡುಬಿಟ್ಟಿ ಎಂಬಲ್ಲಿ ಎದುರಿನಿಂದ ಬಂದ ಇನೋವಾ ಕಾರ್ ವೊಂದು ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ವೆಳ್ಳಸ್ವಾಮಿ ಮತ್ತು ಸತ್ಯರಾಜುರವರು ಗಾಯಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

    ವಿರಾಜಪೇಟೆ ತಾಲ್ಲೂಕು ಕಡಂಗ ಗ್ರಾಮದ ನಿವಾಸಿ 33 ವರ್ಷ ಪ್ರಾಯದ ಕುಮಾರ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29-3-2016 ರಂದು ಅವರ ಸಂಬಂಧಿಕರಾದ ಫಿರ್ಯಾದಿ ಪುನೀತ್ ಎಂಬವರ ಮನೆಯಲ್ಲಿ ಯಾರೂ ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆನೆ ದಾಳಿ ವೃದ್ದೆಯ ಸಾವು:

    ಶನಿವಾರಸಂತೆ ಠಾಣಾ ಸರಹದ್ದಿನ ಬೆಂಬಳೂರು ಗ್ರಾಮದ ನಿವಾಸಿ ಶ್ರೀಮತಿ ಜಯಮ್ಮ (80) ರವರು ದಿನಾಂಕ 29-03-2016 ರಂದು ಬೆಳಗಿನ ಜಾವ ಮನೆಯ ಮುಂಬಾಗದಿಂದ ಹಿಂದಿನ ಭತ್ತದ ಕಣದವರೆಗೆ ಎಂದಿನಂತೆ ವಿಹಾರ ಮಾಡುತ್ತಿರುವಾಗ ಸಮಯ 07-05 ಗಂಟೆಗೆ ಜಯಮ್ಮ ನವರ ಮೇಲೆ ಆನೆಯೊಂದು ದಾಳಿ ಮಾಡಿದ್ದು ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಜಯಮ್ಮನವರು ಮೃತಪಟ್ಟಿರುತ್ತಾರೆ. ಈ ಸಂಬಂಧ ಮೃತರ ಸೊಸೆ ಶ್ರೀಮತಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.