Friday, March 11, 2016

ವಿಪರೀತ ಮದ್ಯಪಾನ ವ್ಯಕ್ತಿ ಸಾವು:
       ಗೋಣಿಕೊಪ್ಪ ನಗರದ ನಿವಾಸಿ ತಮಿಳರ ಸಿದ್ದು ಎಂಬವರ ತಂದೆ ಪ್ರಾಯ ಸುಮಾರು 45 ವರ್ಷದ ಕೃಷ್ಣ ಎಂಬುವವರು ಗೋಣಿಕೊಪ್ಪ ನಗರದಲ್ಲಿ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು ಇವರಿಗೆ ದಿನಂಪ್ರತಿ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 09/03/2016 ರಂದು ಲೋಡಿಂಗ್ ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಾರದೇ ಉಮಾ ಮಹೇಶ್ವರಿ ದೇವಸ್ಥಾನದ ಪಕ್ಕದ ಸಿಮೆಂಟ್ ಅಂಗಡಿಯ ಹಿಂಭಾಗದಲ್ಲಿ ಮಲಗಿದ್ದವರು ಮೃತ ಪಟ್ಟಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

      ದಿನಾಂಕ 10.03.2016 ರಂದು ಸಮಯ 02.00 ಎ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಎಸ್.ಎಸ್ ರವಿಕಿರಣ್ ಪಿಎಸ್ಐರವರು ಆರೋಪಿಯಾದ ಹೇಮಗಿರೀಶ್ ಎಂಬವರು ತಮ್ಮ ಬಾಪ್ತು ಕೆಎ-12 ಬಿ-2982 ರ ಮಿನಿ ಟಿಪ್ಪರ್ ನಲ್ಲಿ ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೇ ಮರಳನ್ನು ಕಳವು ಮಾಡಿ ಟಿಪ್ಪರಿನಲ್ಲಿ ತುಂಬಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಶನಿವಾರಸಂತೆ ನಗರದ ಸಂತೆಮಾಳದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಗೆ ಕಾರು ದಿಕ್ಕಿ:

      ಮೋಟಾರ್ ಸೈಕಲ್ ಗೆ ಕಾರೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 9-3-2016 ರಂದು ಪೊನ್ನಂಪೇಟೆ ನಗರದ ನಿವಾಸಿ ವಿ.ವಿ. ಸುನಿಲ್ ಎಂಬವರು ತನ್ನ ಬಾಪ್ತು ಕೆಎ-12-ಎಲ್-7190 ರ ಬೈಕಿನಲ್ಲಿ ಪೊನ್ನಂಪೇಟೆ ಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುತ್ತಿರುವಾಗ್ಗೆ ಕೈಕೇರಿ ಲಯನ್ಸ್ ಶಾಲೆಯ ಹತ್ತಿರ ತಲುಪುವಾಗ್ಗೆ ಎದುರುಗಡೆಯಿಂದ ಕೆಎಲ್-46-ಎಂ-5579 ಸಿಪ್ಟ್ ಕಾರಿನ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುನಿಲ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಬಿದ್ದು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೀಗ ಒಡೆದು ಚಿನ್ನಾಭರಣ ಕಳವು:

    ಮನೆಯ ಹಿಂಬಾಗಿಲ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ವಿರಾಜಪೇಟೆ ಹತ್ತಿದ ಪಾಲೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರದಹ್ದಿನ ಪಾಲಂಗಾಲ ಗ್ರಾಮದ ನಿವಾಸಿ ಮೇಚುರ ಡಿ. ಚೇತನ್ ರವರು ದಿನಾಂಕ: 10-03-16ರಂದು ಅವರ ತಂದೆ ದೇವಯ್ಯ ಹಾಗೂ ತಾಯಿ ಕಾವೇರಮ್ಮ, ರವ ರೊಂದಿಗೆ ಸಮಯ ಬೆಳಿಗ್ಗೆ 10-30ಗಂಟೆಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೋಟದಲ್ಲಿ ಕಾಳುಮೆಣಸು ಕುಯ್ಯ ಲೆಂದು ಮನೆಗೆ ಬೀಗ ಹಾಕಿ ಹೋಗಿದ್ದು, ಸಮಯ 11-30ಎ.ಎಂ.ಗೆ ಫಿರ್ಯಾದಿ ಚೇತನ್ ರವರು ನೀರು ಕುಡಿಯಲು ಮನೆಗೆ ಬಂದಾಗ ಮನೆಯ ಹಿಂಭಾಗ ಬಾಗಿಲಿನ ಬೀಗವು ಮುರಿದು ಕೆಳಗೆ ಬಿದ್ದಿದ್ದು, ಒಂದು ಬಾಗಿಲು ತೆರೆದಿದ್ದು,ಒಳಗೆ ಸದ್ದು ಕೇಳಿದಾಗ ಪಿರ್ಯಾದಿ ಯವರು ಯಾರು ಮನೆಯ ಒಳಗೆ ಎಂದು ಕೇಳುವಾಗ ಒಬ್ಬ ಆಸಾಮಿಯು ಮಲಗುವ ಕೋಣೆಯಿಂದ ಹೊರಗೆ ಬಂದು ಪಿರ್ಯಾದಿಯವರನ್ನು ದೂಡಿಕೊಂಡು ಓಡಿ ಹೋಗಿದ್ದು, ಮಲಗುವ ಕೋಣೆಗೆ ಹೋಗಿ ನೋಡಿ ದಾಗ ಸದರಿ ಆಸಾಮಿಯು ಗಾಡ್ರೇಜ್ ಬಾಗಿಲನ್ನು ಹಾಗೂ ಲಾಕರ್ ಬಾಗಿಲನ್ನು ತೆರೆದು ಸದರಿ ಲಾಕರ್ ನಲ್ಲಿಟ್ಟಿದಂತಹ ಒಂದು ಪವನಿನ ಒಂದು ಚೈನ್, 3/4 ಪವನಿನ ಒಂದು ರಿಂಗ್ ಹಾಗೂ 1/4 ಪವನಿನ ಒಂದು ಉಂಗುರ ವನ್ನು ಹಾಗೂ ಪರ್ಸಿನಲ್ಲಿದ್ದ 500/- ರೂಗಳ ಎರಡು ನೋಟುಗಳನ್ನು ಕಳವು ಮಾಡಿಕೊಂಡು ಹೋಗಿ ರುವುದಾಗಿ ಸದರಿ ಚಿನ್ನಾಭರಣ ಹಾಗೂ ಹಣದ ಒಟ್ಟು ಮೌಲ್ಯ 35,000/- ರೂಗಳು ಆಗಬಹು ದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜು, ಪೊಲೀಸ್ ದಾಳಿ:

     ಅಕ್ರಮ ಜೂಜು ಅಡ್ಡೆಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಮುಳ್ಳೂರು ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕ ಮರವೊಂದರ ಕೆಳಗೆ ಕೆಲವು ವ್ಯಕ್ತಿಗಳು ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿದ್ದುದವರ ಮೇಲೆ ಶನಿವಾರಸಂತೆ ಪೊಲೀಸರು ಪಿ.ಎಸ್.ಐ. ಎಸ್.ಎಸ್. ರವಿಕಿರಣ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆರ.
 

Vartika Katiyar, IPS

Thursday, March 10, 2016ವ್ಯಕ್ತಿ ಕಾಣೆ ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ಸರದಹ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಸೌಮ್ಯ ಎಂಬವರ ಗಂಡ ದೇವ (27) ಎಂಬವರು ದಿನಾಂಕ 05-03-2016 ರಂದು ಸಮಯ 6 ಪಿ.ಎಂ. ಗೆ ಅಮತ್ತಿ ಹೊಸೂರು ಗ್ರಾಮಕ್ಕೆ ಹೋಗಿದ್ದು, ಅಲ್ಲಿಂದ ನೆಲ್ಲಿಹುದಿಕೇರಿಗೆ ಬಂದಿದ್ದು, ನೆಲ್ಲಿಹುದಿಕೇರಿಯಿಂದ ಎಲ್ಲಿಗೋ ಹೋಗಿದ್ದು, ಇದುವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮರಣ:

     ದಿನಾಂಕ 6-3-2016 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ಸ್ಕೂಟರ್ ಮತ್ತು ಟಾಟಾ ಏಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಅಣ್ಣಪ್ಪ ಎಂಬವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್, ಆಸ್ಪತ್ರೆಗೆ ದಾಖಲುಪಡಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 8-3-2016 ರಂದು ಮೃತಪಟ್ಟಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹತೋಟಿ ತಪ್ಪಿ ಮಗುಚಿಕೊಂಡ ಲಾರಿ ಇಬ್ಬರಿಗೆ ಗಾಯ:

    ದಿನಾಂಕ 09.03.2016 ರಂದು ಬೆಳಿಗ್ಗೆ 04-50 ಸಮಯದಲ್ಲಿ ಮಡಿಕೇರಿ ತಾಲೋಕು, ಬೋಯಿಕೇರಿ ಇಬ್ನಿವಳವಾಡಿ ಗ್ರಾಮದ ನಿವಾಸಿ ಕೆ.ಕೆ.ತುಳಸೀದಾಸ್ ರವರು ತಮ್ಮ ಮನೆಯಲ್ಲಿದ್ದ ಸಮಯದಲ್ಲಿ ಮಡಿಕೇರಿ ಕಡೆಯಿಂದ ಕೆಎ-01 ಡಿ-8068ರ ಲಾರಿ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದು ಕೆ.ಕೆ.ತುಳಸೀದಾಸ್ ರವರ ಮನೆಯ ಬಳಿ ಲಾರಿಯು ಹತೋಟಿ ತಪ್ಪಿ ಮಗುಚಿಕೊಂಡು ಮನೆ ಹಾಗೂ ಅವರ ಪಕ್ಕದ ಎಂ.ಕೆ.ಖಾದರ್ ರವರ ಮನೆಯ ಮುಂಭಾಗದ ಶೀಟಿಗೆ ಢಿಕ್ಕಿಪಡಿಸಿ ಜಖಂ ಉಂಟಾಗಿದ್ದು, ಲಾರಿಯಲ್ಲಿದ್ದ ರಘುಪತಿ ಹಾಗೂ ಶಿವರಾಮ್ ರವರಿಗೆ ಗಾಯಗಳಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.