Tuesday, March 1, 2016

ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು:

 ಬೆಂಗಳೂರಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರದಲ್ಲಿ ನೆಲೆಸಿರುವ ಹೆಚ್.ಎ ಬಾಬು ಎಂಬವರು ತಮ್ಮ ಸಂಬಂಧಿಕರ ಮನೆಯಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ದಿನಾಂಕ 28-2-2016 ರಂದು ರಾತ್ರಿ 9-00 ಗಂಟೆಗೆ ಕರ್ಣಂಗೇರಿ ಗ್ರಾಮದ ಬಸ್ಸು ತಂಗುದಾಣದ ಪಕ್ಕ ನಿಂತಿರುವಾಗ ಯಾವುದೋ ವಾಹನವೊಂದು ಅವರಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಅವರನ್ನು ಸಾಗಿಸುವಾಗ ದಾರಿಮದ್ಯೆ ಮೃತಪಟ್ಟಿರುತ್ತಾರೆ. ಈ ಸಂಬಂಧ ಮೃತ ಬಾಬುರವರ ಮಗಳಾದ ಬಿ. ಸುಮ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರರ ನಿರ್ಲಕ್ಷ್ಯ, ಹಾನಿಗೊಳಗಾದ ದೂರವಾಣಿ ಕೇಬಲ್:

     ದಿನಾಂಕ 25-1-2016 ರಂದು ಗುತ್ತಿಗೆದಾರರಾದ ಅಯ್ಯಣ್ಣ ಎಂಬವರು ಪೊನ್ನಂಪೇಟೆ ಠಾಣಾ ಸರದಹದ್ದಿನ ಕೂರ್ಗ್ ಸ್ಪೋರ್ಟ್ಸ್ ಕ್ಲಬ್‌ನ ಮುಂಭಾಗದಲ್ಲಿ ಚರಂಡಿ ಹಾಗೂ ರಸ್ತೆ ರಿಪೇರಿ ಸಂಬಂಧ ಭೂಮಿಯನ್ನು ಜೆ.ಸಿ.ಬಿಯಿಂದ ಅಗೆಸಿರುವುದರಿಂದ 100 ಪೇರ್ ನ 15 ಮೀಟರ್ ತಾಮ್ರದ ದೂರವಾಣಿ ಕೇಬಲ್ ಹಾನಿಗೊಳಗಾಗಿ ನಷ್ಟವಾಗಿದ್ದು ಇದರಿಂದ 30 ದೂರವಾಣಿ ಹಾಗೂ ಇಂಟರ್‌ನೇಟ್ ಸೇವೆಗಳು ಸ್ಥಗಿತಗೊಂಡಿದ್ದು ಸರ್ಕಾರಿ ಸೊತ್ತಾದ ದೂರವಾಣಿ ಕೇಬಲ್ ಹಾನಿಮಾಡಿ ನಷ್ಟಪಡಿಸಿರುತ್ತಾರೆಂದು ಸಿ.ಪಿ ರವೀಂದ್ರ ಸಬ್ ಡಿವಿಜನಲ್ ಇಂಜಿನಿಯರ್, ಬಿಎಸ್ಎನ್ಎಲ್ ಗೋಣಿಕೊಪ್ಪ ಇವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.