Tuesday, March 15, 2016

 ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಚಾಲಕನಿಗೆ ಗಾಯ:

     ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಮಲ್ಲಮಟ್ಟಿ ಎಂಬಲ್ಲಿ ಸಂಭವಿಸಿದೆ. . . ದಿನಾಂಕ: 13-03-16ರಂದು ಹೆಚ್.ಕೆ. ಲೋಕೇಶ ಎಂಬವರು ತಮ್ಮ ಬಾಪ್ತು ಕೆಎ.12.ಬಿ.1618ರ ಆಟೋ ರಿಕ್ಷಾದಲ್ಲಿ ಬೇತ್ರಿ ಕಡೆಯಿಂದ ವಿರಾಜಪೇಟೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು ರಾತ್ರಿ 10-30ಗಂಟೆಗೆ ಮಲ್ಲಮಟ್ಟಿ ಬಳಿ ತಲುಪುವಾಗ್ಗೆ, ವಿರಾಜಪೇಟೆ ಕಡೆಯಿಂದ ಕೆಎ.20.ಎಂ.5747ರ ಕಾರಿನ ಚಾಲಕನು ಸದ್ರಿ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಯವರ ತಲೆಗೆ ಹಾಗು ಶರೀರದ ಇತರೆ ಭಾಗಗಳಿಗೆ ರಕ್ತಗಾಯವಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿದ್ಯುತ್ ಸ್ಪರ್ಷ, ಕಾರ್ಮಿಕ ಸಾವು: 

     ವ್ಯಕ್ತಿಯೊಬ್ಬರು ಕರಿಮೆಣಸು ಕುಯ್ಯಲು ಅಲ್ಯುಮಿನಿಯಂ ಏಣಿ ಬಳಸುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಷ್ಪರ್ಷಗೊಂಡು ಸಾವಿಗೀಡಾದ ಘಟನೆ ನಡೆದಿದೆ. ದಿನಾಂಕ: 14-03-16ರಂದು ಕೇರಳ ರಾಜ್ಯದ ಇರಟ್ಟಿ ನಿವಾಸಿ ವರ್ಗೀಸ್ ಯಾನೆ ಬಾಬು (49) ರವರು ವಿರಾಜಪೇಟೆ ತಾಲ್ಲೂಕಿನ ಅರಮೇರಿ ಗ್ರಾಮದ ಕಳಂಚೇರಿ ಮಠದ ಕಾಫಿ ತೋಟಕ್ಕೆ ಒಳ್ಳೆಮೆಣಸನ್ನು ಕುಯ್ಯಲು ಮರಕ್ಕೆ ಅಲ್ಯುಮಿನಿಯಂ ಏಣಿ ಇಟ್ಟು ಹತ್ತಲು ಏಣಿಯನ್ನು ಮರಕ್ಕೆ ಇಡುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ವರ್ಶವಾಗಿ ಕೆಳಗೆ ಬಿದ್ದು ಸಾವನಪ್ಪಿದ್ದು ಈ ಸಂಬಂಧ ಮೃತರ ಮಗನಾದ ವಿಪಿನ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬೈಕ್ ಅಪಘಾತ, ಗಾಯಗೊಂಡ ಸವಾರ:

     ದಿನಾಂಕ 13-3-2016 ರಂದು ಆನಂದ ಎಂಬಾತ ತನ್ನ ಬಾಪ್ತು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕದನೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬಿದ್ದು ಸವಾರ ಆನಂದ ಗಾಯಗೊಂಡಿದ್ದು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಕಡಂಗ ಗ್ರಾಮದ ಮೈಲಾರಿ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ಕೊಲೆ ಬೆದರಿಕೆ:

    ದಿನಾಂಕ 13-03-2016 ರಂದು ಸಮಯ 5.30 ಗಂಟೆಗೆ ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಫಿರ್ತಾದಿ ಕಾಳಚಂಡ ದಿಲೀಪ್ ನವರು ಅವರ ತೋಟದಿಂದ ತಂದೆ ಕಾರ್ಯಪ್ಪ, ತಮ್ಮನಾಣ್ಣಯ್ಯ ರವರೊಂದಿಗೆ ಮನೆಗೆ ಹೋಗುತ್ತಿದ್ದಾಗ ಹಚ್ಚಿನಾಡು ಗ್ರಾಮದ ತಂಬುಕುತ್ತಿರ ಗಣೇಶ್ ಎಂಬವರು ಅವರ ಜೀಪು ನಂ ಕೆಎ-12-ಎಂ-1830 ಅನ್ನು ಫಿರ್ಯಾದಿಯವರ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ನನ್ನ ಮೇಲೆ ಮತ್ತು ನನ್ನ ಜೀಪಿನ ನಂಬರ್ ಅನ್ನು ಅರಣ್ಯ ಇಲಾಖೆಗೆ ಕೊಟ್ಟರೆ ನಿಮ್ಮನ್ನು ಕೊಲ್ಲುತ್ತೇನೆಂದು ಕೋವಿ ತೋರಿಸಿ ಬೆದರಿಕೆ ಹೊಡ್ಡಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ನಿವಾಸಿ ಬೋಳಿಯಂಡ್ರ ಎಸ್.ಪೂಣಚ್ಚ ಎಂಬವರ ಮಗಳಾದ ಧನ್ಯ(19) ಬಾಕೆ ದಿನಾಂಕ 13-03-16ರಂದು ರಾತ್ರಿ 9-30 ಗಂಟೆಗೆ ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿತ್ತಾಳೆಂದು ಫಿರ್ಯಾದಿ ಬಿ.ಎಸ್. ಪೂಣಚ್ಚನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದ ನಿವಾಸಿ ಎಂ.ಬಿ. ಚಂದ್ರು ಎಂಬವರ ಮಗ ಪ್ರವೀಣ ಎಂಬಾತನು ದಿನಾಂಕ 12-3-2016 ರಂದು ಕಿರಗೂರು ಗ್ರಾಮದ ಅಲೆಮಾಡ ಸುದೀರ್ ಎಂಬವರ ತೋಟಕ್ಕೆ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸದರಿಯಾತನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-3-2015 ರಂದು ಸದರಿ ಪ್ರವೀಣ ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.