Wednesday, March 16, 2016

ವ್ಯಕ್ತಿಯ ದಾರಿ ತಡೆದು ಕೊಲೆಗೆ ಯತ್ನ:

      ಸೋಮವಾರಪೇಟೆ ತಾಲೂಕು ಐಗೂರು ಗ್ರಾಮದ ನಿವಾಸಿ ಪಿರ್ಯಾದಿ ಎಸ್. ಭರತ್ ಮತ್ತು ಇತರರು ಕೆಎ 09 ಜೆಡ್ 6767 ಕಾರಿನಲ್ಲಿ ದಿನಾಂಕ 14/03/2016 ರಂದು ಸಮಯ 09:30 ಪಿ ಎಂ ಗೆ ಯಡವಾರೆ ಗ್ರಾಮದ ಇಬ್ರಾಹಿಂ ರವರ ಅಂಗಡಿಯ ಹತ್ತಿರ ಬರುತ್ತಿರುವಾಗ್ಗೆ ಐಗೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ರಾಯ್ ಯಡವನಾಡು ಗ್ರಾಮದ ವರದ ಮತ್ತು ಕಾಜೂರು ಗ್ರಾಮದ ವಿಶ್ವನಾಥರವರು ಅಲ್ಟೋ ಕಾರು ಮತ್ತು ಮಾರುತಿ ಓಮಿನಿ ಕಾರಿನಲ್ಲಿ ಬಂದು ಪಿರ್ಯಾದಿಯವರನ್ನು ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ‘ ನಿನ್ನನ್ನು ಕೊಚ್ಚಿ ಕೊಲೆ ಮಾಡುತ್ತೇನೆ’ ಎಂದು ಹೇಳಿ ರಾಯ್ ರವರು ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ಹಾಗು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು:

     ದಿನಾಂಕ 15/03/16 ರಂದಉ ಕಲ್ಕಂದೂರು ಗ್ರಾಮದ ನಿವಾಸಿ ರಮೇಶ ಎಂಬವರು ಅಕ್ರಮವಾಗಿ ಮರಳನ್ನು ಕದ್ದು ಟಿಪ್ಪರ್ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಶಾಂತಳ್ಳಿ ಗ್ರಾಮದ ಕಾಲೇಜ್ ಮುಂದೆ ಸೋಮವಾಋಪೇಟೆ ಪೊಲೀಸರು ದಾಳಿಮಾಡಿ ಕೆಎ 12 ಬಿ 0241 ರ ಮರಳು ತುಂಬಿದ ಲಾರಿಯನ್ನು ಅಮಾನತ್ತು ಪಡಿಸಿಕೊಂಡಿದ್ದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿನಿಗೆ ವ್ಯಾನ್ ಡಿಕ್ಕಿ:

     ಮೂರ್ನಾಡುವಿನ ಕೊಡಂಬೂರು ಗ್ರಾಮದ ನಿವಾಸಿ ಎಂ.ಸಿ. ಕುಮಾರ್ ಎಂಬವರ ಮಗಳಾದ ಅಂತಿಮ ವರ್ಷ ಬಿ.ಎ. ವಿದ್ಯಾರ್ಥಿ ಎಂ.ಕೆ. ಭವಾನಿ ಎಂಬವರು ದಿನಾಂಕ 11-3-2016 ರಂದು 4-45 ಪಿ.ಎಂ. ಗೆ ಮಡಿಕೇರಿಯ ಕಾರ್ಯಪ್ಪ ಕಾಲೇಜಿನಿಂದ ಹೋಗುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಠಾಣೆಯ ಮುಂದುಗಡೆ ಮಾರುತಿ ವ್ಯಾನೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆಗೆ ಯತ್ನ:

     ವಿರಾಜಪೇಟೆ ತಾಲ್ಲುಕು, ಕಣ್ಣಂಗಾಲ ಗ್ರಾಮದ ನಿವಾಸಿ ಫಿರ್ಯಾದಿ ವಿ.ಸಿ. ಕಾಳಪ್ಪ, ನವರು ದಿನಾಂಕ 14-32-2016 ರಂದು ಕಂಡಂಗಾಲ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಆರೋಪಿಗಳಾದ ವಿ. ಪ್ರಕಾಶ ಮತ್ತು ವಿ.ಎ. ವೆಂಕಟೇಶ ರವರುಗಳು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯನ್ನು ಬೀಸಿ ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ನಾಪೋಕ್ಲು ಠಾಣಾ ಸರಹದ್ದಿನ ಚೆಯ್ಯಂಡಾಣೆ ಗ್ರಾಮದ ನಿವಾಸಿ ಶಾಂತಪ್ಪ ರೈ ಎಂಬವರು ದಿನಾಂಕ 13-03-2016 ರಂದು ರಾತ್ರಿ 8-30 ಗಂಟೆಗೆ ಪಿಕ್‌ಅಪ್ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಆನಂದ ಎಂಬ ವ್ಯಕ್ತಿಯು ಕೊಡಲಿಕ್ಕಿರುವ ಸಾಲದ ಹಣದ ವಿಚಾರದಲ್ಲಿ ಆರೋಪಿಗಳಾದ   ಹರೀಶ, ಆನಂದ, ಕಿಶು, ಗಣಪತಿ ಮತ್ತು ಸತೀಶ ರವರುಗಳು ಮಾರುತಿ ಓಮ್ನಿಯಲ್ಲಿ ಬಂದಉ ದಾರಿ ತಡೆದು ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.