Thursday, March 17, 2016
ಹುಡುಗ ಕಾಣೆ:


      ನಾಪೋಕ್ಲು ಠಾಣಾ ಸರಹದ್ದಿನ ಅಜ್ಜಿಮುಟ್ಟ ಗ್ರಾಮದ ನಿವಾಸಿ ಎಂ.ಎ. ಸಂಷುದ್ದೀನ್ ಎಂಬವರ ಮಗ ಎಂ.ಎಸ್. ಇಶ್ರಾದ್ (20) ಎಂಬಾತ ಕಾಸರುಗೋಡುವಿನ ಮೊಹಿಮಾತ್ ಅರಬ್ಬಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಎಮ್ಮೆಮಾಡು ಉರೂಸ್ ಗೆ ಬಂದಿದ್ದು ದಿನಾಂಕ 6-3-2016 ರಂದು ಕಾಸರಗೋಡಿಗೆ ಹೋಗುತ್ತೇನೆಂದು ಹೇಳಿ ಹೋದವನು ಕಾಸರಗೋಡಿಗೆ ಹೋಗದೆ ಕಾಣೆಯಾಗಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ ಇಬ್ಬರಿಗೆ ಗಾಯ:

     ದಿ: 15-3-2016 ರಂದು ಸಂಜೆ ಪಿರ್ಯಾದಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಅರ್ಷದ್ ಹಾಗೂ ಶಿಯಾಬ್ ಮೋಟಾರ್ ಸೈಕಲ್ ನಂ ಕೆ.ಎಲ್. 58ಇ 5410 ರಲ್ಲಿ ಟಾಟಾ ಕಾಫೀ ವಸತಿ ಗೃಹದಿಂದ ಪಾಲಿಬೆಟ್ಟ ಬಸ್ ನಿಲ್ದಾಣದ ಹತ್ತಿರ ಬರುತ್ತಾ ಟಾಟಾ ಕಾಫಿ ತೋಟದ ಗೇಟಿನ ಬಳಿ ಮುಂಭಾಗದ ರಸ್ತೆಗೆ ತಲುಪುವಾಗ್ಗೆ ಆರೋಪಿ ಶಿಯಾಬ್ ಮೋಟಾರ್ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗೂರೂಕತೆಯಿಂದ ಚಾಲನೆ ಮಾಡಿ ಟಾಟಾ ಕಾಫಿ ತೋಟದ ಗೇಟಿನ ಪಕ್ಕದಲ್ಲಿ ಕಟ್ಟೆಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕೀಯ ಹಿನ್ನೆಲೆ ವ್ಯಕ್ತಿಗೆ ಕೊಲೆ ಬೆದರಿಕೆ:

      ದಿನಾಂಕ 15-03-2016 ರಂದು ಸಮಯ 16-00 ಗಂಟೆಗೆ ಶನಿವಾರಸಂತೆ ಠಾಣಾ ಸರಹದ್ದಿನ ಹಂಡ್ಲಿ ಗ್ರಾಮದ ನಿವಾಸಿ ಫಿರ್ಯಾದಿ ಲಕ್ಷ್ಮಿಕಾಂತ್ ಎಂಬವರು ಶನಿವಾರಸಂತೆಯ ಗುಡುಗಳಲೆಯಲ್ಲಿರುವ ಮಲ್ನಾಡ್ ಕಬ್ಬಿಣದ ಅಂಗಡಿಯ ಎದುರು ತಮ್ಮ ಸ್ನೇಹಿತ ಪ್ರದೀಪ್ ರವರೊಂದಿಗೆ ಮಾತನಾಡಿಕೊಂಡು ನಿಂತುಕೊಂಡಿರುವಾಗ್ಗೆ ಮೇಲ್ಕಂಡ ಆರೋಪಿ ಆದಿತ್ಯ ಎಂಬವರು ತನ್ನ ಬಾಫ್ತು ಹೋಂಡಾ ಸಿಟಿ ಕಾರಿನಲ್ಲಿ ಅಲ್ಲಿಗೆ ಬಂದು ಫಿರ್ಯಾದಿಯವರನ್ನು ಉದ್ದೇಶಿಸಿ ‘’ ನೀನು ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸಹಾಯ ಮಾಡದೇ ಬಿ.ಜೆ.ಪಿ ಯವರೊಂದಿಗೆ ಸೇರಿ ಮೆರೆಯುತ್ತಿದ್ದೀಯಾ ‘’ ಎಂದು ಹೇಳಿ ಆರೋಪಿಯು ತನ್ನ ಕಾರಿನಲ್ಲಿದ್ದ ಪಿಸ್ತೂಲನ್ನು ತೋರಿಸಿ ಫಿರ್ಯಾದಿಯವರಿಗೆ ಬೆದರಿಸಿದ್ದು, ಅಲ್ಲೇ ಅಂಗಡಿಯ ಮುಂದೆ ಇದ್ದ ಕಬ್ಬಿಣದ ರಾಡಿನಿಂದ ಫಿರ್ಯಾದಿಯವರ ಬಲಗೈ ಅಂಗೈಗೆ ಹಾಗೂ ಬಲ ಮಂಡಿಯ ಹತ್ತಿರ ಹೊಡೆದು ಅಲ್ಲದೆ ಪಿಸ್ತೂಲಿನಿಂದ ಗುಂಡು ಹೊಡೆದು ಕಲ್ಲುವುದಾಗಿ’’ ಬೆದರಿಕೆ ಹಾಕಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.