Tuesday, March 22, 2016

ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರ:
    ವ್ಯಕ್ತಿ ಯೊಬ್ಬರು ಅಪ್ರಾಪ್ತ ಸಾಕು ಮಗಳ ಮೇಲೆ ಅತ್ಯಾಚಾರ ಮಾಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದ ಮುಕ್ಕಾಟಿರ ವಿಕ್ಕಿ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಚಿತ್ರ ಎಂಬವರು ತನ್ನ ರವಿಯ ಅಕ್ಕನ ಮಗಳನ್ನು 1 ವರ್ಷವಾದಗಿನಿಂದಲೇ ಸಾಕುತ್ತಿದ್ದು ಇದೀಗ ಆ ಮಗು ಕಾವ್ಯಳಿಗೆ 11 ವರ್ಷ ಪ್ರಾಯವಾಗಿದ್ದು ದಿನಾಂಕ 21-3-2016 ರಂದು ಫಿರ್ಯಾದಿ ಶ್ರೀಮತಿ ಚಿತ್ರ ರವರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆಕೆಯ ಗಂಡ ರವಿ ಕಾವ್ಯಳನ್ನು ತೋಟಕ್ಕೆ ಸೌದೆಗೆಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದು, ಈ ಸಂಬಂಧ ಆತನ ಪತ್ನಿ ಫಿರ್ಯಾದಿ ಶ್ರೀಮತಿ ಚಿತ್ರ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ :

     ಸೋಮವಾರಪೇಟೆ ತಾಲೂಕು ಕುಸುಬೂರು ಗ್ರಾಮದ ನಿವಾಸಿ ಪಿರ್ಯಾದಿ ಕೆ.ಪಿ. ಹರೀಶ್ ಎಂಬವರು ದಿನಾಂಕ 21-3-2016 ರಂದು ಸಂಜೆ 6.40 ಗಂಟೆಗೆ ತನ್ನ ಹೆಂಡತಿ ತೀರ್ಥ ರವರೊಂದಿಗೆ ಕುಸುಬೂರಿನ ತೋಟಕ್ಕೆ ಅವರ ಜೀಪಿನಲ್ಲಿ ಹೋಗಿ ವಾಪಾಸ್ಸು ಮನೆಗೆ ಬರುತ್ತಿದ್ದಾಗ ಕೆ ಸಿ ಹೂವಯ್ಯ ರವರು ಹಳೇ ದ್ವೇಶದಿಂದ ಅವರ ಹಳೆ ಮನೆಯ ಹತ್ತಿರ ಬಂದು ಫಿರ್ಯಾದಿಯ ಜೀಪನ್ನು ತಡೆದು ವಿನಃ ಕಾರಣ ಅವಾಚ್ಯವಾಗಿ ಬೈದು ಕತ್ತಿಯಿಂದ ಕೊಚ್ಚಿ ಹಾಕುತ್ತೇನೆ ಎಂದು ಹೇಳಿ, ಕತ್ತಿಯನ್ನು ತೆಗೆದು ಬೀಸಿದ್ದು ಪರಿಣಾಮವಾಗಿ ಜೀಪಿನ ಬಾಗಿಲಿಗೆ ಹಾನಿಯಾಗಿದ್ದು ಅಲ್ಲದೆ ಜೀಪಿಗೆ ಕಲ್ಲು ತೂರಿ ಜಖಂ ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರಿಗೆ ಮಿನಿ ಲಾರಿ ಡಿಕ್ಕಿ ಸವಾರನ ದುರ್ಮರಣ:

      ದಿನಾಂಕ 21.03.2016 ರಂದು ಪಿರ್ಯಾದಿಯವರ ತಮ್ಮ ಸುಂಟಿಕೊಪ್ಪದ ಕಾನ್ ಬೈಲ್ ನಿವಾಸಿ ಕೆ.ಎನ್.ಲೋಕನಾಥ ಎಂಬವರು ಸ್ವಂತ ಕೆಲಸದ ನಿಮಿತ್ತ ತಮ್ಮ ಬಾಪ್ತು KA 12 Q 1708ರ ಹೋಂಡಾ ಆಕ್ಟಿವಾದಲ್ಲಿ ಕುಶಾಲನಗರಕ್ಕೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 1.00 ಗಂಟೆಗೆ ಕೊಡಗರಹಳ್ಳಿ ಗ್ರಾಮದ ಕಬ್ಬಿಣ ಕೆಲಸ ಮಾಡುವವರ ಮನೆಯ ಮುಂಭಾಗ ತಲುಪುವಾಗ ಎದುರುಗಡೆಯಿಂದ ಬಂದ KL 14 N 9284 ರ 407 ಮಿನಿ ಲಾರಿಯ ಚಾಲಕನು ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಂಡಾ ಆಕ್ಟಿವಾ ಕ್ಕೆ ಡಿಕ್ಕಿಪಡಿಸಿದ ಪರಿಣಾಮ ಚಾಲನೆ ಮಾಡುತ್ತಿದ್ದ ಲೋಕನಾಥರವರ ತಲೆ ಹಾಗೂ ಮೈಕೈಗೆಲ್ಲಾ ಗಾಯಗಳಾಗಿ ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.