Wednesday, March 23, 2016

ಅಕ್ರಮ ಮರಳು ಕಳ್ಳಸಾಗಾಣೆ, ಪ್ರಕರಣ ದಾಖಲು:

    ಅಕ್ರಮವಾಗಿ ಮರಳನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ವ್ಯಕ್ತಿವ ವಿರುದ್ದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 22.03.2016 ರಂದು ಸಮಯ 04.30 ಎ.ಎಂಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಜನಾರ್ಧನ ಹಳ್ಳಿ ಗ್ರಾಮದಲ್ಲಿರುವ ಹೇಮಾವತಿ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್ ನಲ್ಲಿ ಮರಳನ್ನು ತುಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವೃದ್ದೆ:
    ವಿರಾಜಪೇಟೆ ತಾಲೂಕು ನಾಲ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಉಮ್ಮವ್ವ (88) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-3-2016 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟರ್ ಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

    ಕುಶಾಲನಗರದ ಬಾಪೂಜಿ ಬಡಾವಣೆ ನಿವಾಸಿ ವೆಂಕಟೇಶ್ ಎಂಬವರು ದಿನಾಂಕ 19-3-2016 ರಂದು ಕುಶಾಲನಗರದಿಂದ ಮಡಿಕೇರಿಗೆ ತಮ್ಮ ಸ್ಕೂಟರ್ ನಲ್ಲಿ ತಮ್ಮ ಮಗಳೊಂದಿಗೆ ಹೋಗುತ್ತಿದ್ದಾಗ ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಕೂಕಟ್ ಸವಾರ ವೆಂಟೇಶ ಮತ್ತು ಅವರ ಮಗಳಿಗೆ ತೀವ್ರ ತರಹದ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ಕಲಾರೆ ಗ್ರಾಮದ ನಿವಾಸಿ ಶ್ರೀಮತಿ ಅರ್ಶಿಯ ರವರಿಗೆ ಆಕೆಯ ಪತಿ ಸಾದಿಕ್ ಪಾಷಾ ಮತ್ತು ಅತ್ತೆ ಅಖ್ತಾರ್ ಬಾನು ರವರುಗಳು ತವರು ಮನೆಯಿಂದ ಒಂದು ಲಕ್ಷ ರೂ. ಹಣವನ್ನು ತರುವಂತೆ ಪ್ರತಿ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ದಿನಾಂಕ 19-3-2016 ರಂದು ಫಿರ್ಯಾದಿ ಶ್ರೀಮತಿ ಅರ್ಶಿಯರವರು ತಮ್ಮ ತವರು ಮನೆಯಿಂದ ಹಣ ತಾರದೇ ಇರುವ ಕಾರಣಕ್ಕೆ ಆಕೆಯ ಪತಿ ಸಾದಿಕ್ ಪಾಷಾ ಮತ್ತು ಅತ್ತೆ ಅಖ್ತಾರ್ ಬಾನು ರವರುಗಳು ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.