Tuesday, March 29, 2016

ಮೂವರು ಅಪ್ರಾಪ್ತ ಮಕ್ಕಳು ಕಾಣೆ, ಪ್ರಕರಣ ದಾಖಲು:

     ಟ್ಯೂಷನ್ ಗೆ ಹೋಗಿದ್ದ ಇಬ್ಬರು ಅಪ್ರಾಪ್ತ ಹುಡುಗಿಯರು ಮತ್ತು ಒಬ್ಬ ಅಪ್ರಾಪ್ತ ಹುಡುಗ ಕಾಣೆಯಾಗಿರುವ ಘಟನೆ ಸೋಮವಾರಪೇಟೆ ನಗರದಿಂದ ವರದಿಯಾಗಿದೆ. ದಿನಾಂಕ 26-3-2016 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಸೋಮವಾರಪೇಟೆ ವಿಶ್ವೇಶ್ವರ ರಸ್ತೆಯ ವಾಸಿ ಫಿರ್ಯಾದಿ ಬಿ.ಪಿ ರಾಜುರವರ ಮಗಳಾದ 17 ವರ್ಷ ಪ್ರಾಯದ ಮಂಜುಶ್ರೀ, 11 ವರ್ಷ ಪ್ರಾಯದ ಪ್ರಸೀದ್‌, ಮತ್ತು ಫಿರ್ಯಾದಿಯವರ ಪಕ್ಕದ ಮನೆಯ 17 ವರ್ಷ ಪ್ರಾಯದ ಹರಿಣಿ ಸೋಮವಾರಪೇಟೆ ನಗರಕ್ಕದೆ ಟ್ಯೂಷನ್ ಗೆಂದು ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಕಳವು, ಪ್ರಕರಣ ದಾಖಲು:

     ಕಚೇರಿ ಹತ್ತಿರ ನಿಲ್ಲಿಸಿದ್ದ ಸ್ಕೂಟರ್ ವೊಂದು ಕಳವುವಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 27-03-2016 ರಂದು ಸಮಯ 16.15 ಗಂಟೆಗೆ ಫಿರ್ಯಾದಿ ಶ್ರೀಮತಿ ಹರಿಣಾಕ್ಷಿ, ಮುಖ್ಯೋಪಾದ್ಯಾಯರು, ಗೂನಡ್ಕ ಪ್ರೌಢಶಾಲೆ, ಇವರು ಕೆಲಸದ ನಿಮಿತ್ತ ಸ್ಕೂಟರ್‌‌ನ್ನು ತೆಗೆದುಕೊಂಡು ಕೊಯನಾಡಿನ ಅರಣ್ಯ ಕಛೇರಿ ಬಳಿ ನಿಲ್ಲಿಸಿ ಹೋಗಿದ್ದು, ಸುಮಾರು ¼ ಗಂಟೆ ಸಮಯ ಬಿಟ್ಟು ವಾಪಾಸ್ಸು ಬಂದು ನೋಡಿದಾಗ, ಸ್ಕೂಟರ್‌ ನಿಲ್ಲಿಸಿದ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಬೆಲೆ ರೂ.48,000/- ಆಗುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮರಳು ಸಂಗ್ರಹ, ಮಾರಾಟ:

     ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ವ್ಯಕ್ತಿಗಳ ವಿರುದ್ದ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿ.ಸಿ. ಚಂದ್ರನ್, ಕಂದಾಯ ನಿರೀಕ್ಷಕರು, ಬಾಳೆಲೆ ಹೋಬಳಿ ಇವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಬಗ್ಗೆ 1)ಅಡ್ಡೆಂಗಡ ಸಜನ್‌ 2)ಅಡ್ಡೆಂಗಡ ನವೀನ್‌ 3) ಅಡ್ಡಂಗಡ ಅರುಣ್‌ 4)ಅಡ್ಡೆಂಗಡ ವಿಷ್ಣು ಮತ್ತು ನಿಟ್ಟೂರು ಗ್ರಾಮದ 5) ಆಲೇಮಾಡ ಕಿರಣ್ ರವರುಗಳು ಬಾಳೆಲೆ ಹೋಬಳಿ ದೇವನೂರು ಗ್ರಾಮದ ಮಲ್ಲೂರು ಭಾಗದಲ್ಲಿ ಅಡ್ಡೆಂಗಡ ಕುಟುಂಬದ ಭೂಮಿ ಆಸ್ತಿನ ಹೊತ್ತಿನ ಲಕ್ಷ್ಮಣ ತೀರ್ಥ ನದಿಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ದಾಸ್ತಾನು ಮಾಡಿ ಕದ್ದು ಮಾರಾಟ ಮಾಡುತ್ತಿರುವ ಕೃತ್ಯದ ಬಗ್ಗೆ ಸ್ಥಳ ತನಿಖೆ ಮಹಜರಿನಿಂದ ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ದಿನಾಂಕ 28-3-2016 ರಂದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಕಾರು ಮಾರಾಟ ಮಾಡಿದ ವಿಚಾರದಲ್ಲಿ ಜಗಳ ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 28-3-2016 ರಂದು ಸಂಜೆ ಸಮಯ 7-00 ಗಂಟೆಗೆ ತಿತಿಮತಿ ಗ್ರಾಮದ ನಿವಾಸಿ ಪಿರ್ಯಾಧಿ ಪಿ.ಆರ್. ವಿನೋದ್ ರವರು ತಿತಿಮತಿ ನಗರದ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಇರುವಾಗ್ಗೆ ಅವರಿಗೆ ಕಾರು ಮಾರಾಟ ಮಾಡಿದ ವ್ಯಕ್ತಿಯಾದ ಮಣಿ ಎಂಬವರು ಅಲ್ಲಿಗೆ ಬಂದಿದ್ದು, ಮಣಿರವರಿಗೆ ನೀನು ಕೊಟ್ಟ ಕಾರು ಯಾವಾಗಲೂ ರಿಪೇರಿಯಾಗುತ್ತಿರುತ್ತದೆ ಎಂದು ಹೇಳಿದ್ದು ಇದರಿಂದ ಕೋಪಗೊಂಡ ಮಣಿರವರು ನಾನು ಕೊಟ್ಟ ಕಾರು ಚೆನ್ನಾಗೆ ಇದೆ ನಿನಗೆ ಓಡಿಸಲು ಗೊತ್ತಿಲ್ಲ ಎಂದು ಹೇಳಿ ಜಗಳ ಮಾಡಿ ನೀನು ಇಲ್ಲಿಯೇ ಇರು ಬರುತ್ತೇನೆ ಎಂದು ಹೇಳಿ ಹೋದವನು ಸಮಯ 7-30 ಪಿ.ಎಂ ಗೆ ಮಣಿ,ಮತ್ತು ಅಭಿ ಸತೀಶ್ ಹಾಗೂ ಇತರರನ್ನು ಅಲ್ಲಿಗೆ ಕರೆದುಕೊಂಡು ಬಂದು ಏಕಾಏಕಿ ಕಬ್ಬಿಣದ ರಾಡಿನಿಂದ ಮೂಗಿನ ಮೇಲ್ಬಾಗಕ್ಕೆ ಹೊಡೆದಿದ್ದು ಹಾಗೂ ಜೊತೆಯಲ್ಲಿ ಬಂದವರು ಕೈಯಿಂದ ಎದೆಯ ಭಾಗಕ್ಕೆ ಹಾಗೂ ಶರೀರಕ್ಕೆ ಹೊಡೆದು ನೋವು ಪಡಿಸಿದ್ದು ಪಿರ್ಯಾಧಿಯವರು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.