Thursday, March 3, 2016

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ:

     ಯುವಕನೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಪರಿಣಾಮ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿರಾಜಪೇಟೆ ಸಮೀಪದ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗಮರೂರು ಗ್ರಾಮದ ನಿವಾಸಿ ಹೆಚ್.ಎಂ. ರಘು ಎಂಬವರ ಮಗಳಾದ 17 ವರ್ಷ ಪ್ರಾಯದ ಅಶ್ವಿನಿ ಎಂಬಾಕೆಯನ್ನು ಅದೇ ಗ್ರಾಮದ ನಿವಾಸಿ ಕಂದ ಎಂಬವರ ಮಗ ಗಿರೀಶ ಎಂಬಾತ 2-3 ವರ್ಷಗಳಿಂದ ಪೀತಿಸುತ್ತಿರುವುದಾಗಿಯೂ ಈ ವಿಚಾರ ಅವರುಗಳ ತಂದೆ-ತಾಯಿಯವರಿಗೆ ತಿಳಿದು ಅಶ್ವಿನಿಯನ್ನು ಮದುವೆಯಾಗುವುದಾಗಿ ತೀರ್ಮಾನಿಸಿಕೊಂಡು ಬಳಿಕ ಸದರಿ ಅಶ್ವಿನಿಯನ್ನು ನಂಬಿಸಿ ಗಿರೀಶನು ಆಕೆಯ ಮೇಲೆ 3-4 ಬಾರಿ ಅತ್ಯಾಚಾರವೆಸಗಿದ್ದು, ಇದೀಗ ಸದರಿ ಗಿರೀಶ ಅಶ್ವಿನಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಸದರಿ ಅಶ್ವಿನಿಯು ದಿನಾಂಕ 1-3-2016 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ನೀರಿನ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ಪಿರ್ಯಾದಿ ಶ್ರೀ ಸಂಜಯ್ ರವರು ನಗರ ಸಭಾ ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 29-2-2016 ರಂದು ಸಮಯ ಬೆಳಿಗ್ಗೆ 07.45 ಗಂಟೆಗೆ ಇವರು ರಾಜರಾಜೇಶ್ವರಿ ನಗರಕ್ಕೆ ನೀರು ಸರಬರಾಜು ಮಾಡಲು ಹೋಗುತ್ತಿದ್ದಾಗ ರಜಾಕ್ ಎಂಬುವವರ ಪತ್ನಿ ಆಟೋ ರಿಕ್ಷಾವನ್ನು ತೊಳೆಯುತ್ತಿದ್ದನ್ನು ಕಂಡು ತೊಳೆಯಬಾರದೆಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ರಜಾಕ್ ಎಂಬುವವರು ಅಲ್ಲಿಗೆ ಬಂದು ಸಂಜಯ್ ರವರಿಗೆ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮ ಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಿಟಾಚಿ ಸಾಗಿಸುತ್ತಿದ್ದ ಲಾರಿ ಅಪಘಾತ, ಇಬ್ಬರ ಸಾವು, ಚಾಲಕನಿಗೆ ಗಂಭೀರ ಗಾಯ:

      ಹಿಟಾಚಿ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಇಬ್ಬರು ಸಾವನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಮೇಕೇರಿಯಲ್ಲಿ ನಡೆದಿದೆ. ದಿನಾಂಕ 02/03/2015 ರಂದು ಫಿರ್ಯಾದಿ ಮಡಿಕೇರಿ ತಾಲೋಕು ಹೆರವನಾಡು ಗ್ರಾಮದ ನಿವಾಸಿ ನವೀನ್ ಕುಮಾರ್ ರವರು ಕೊಂಡಂಗೇರಿಯಲ್ಲಿ ಹೊಸ ಕೆರೆ ತೆಗೆಯುವ ಕೆಲಸಕ್ಕಾಗಿ ತಮಿಳುನಾಡಿನಿಂದ ಬಾಡಿಗೆಗೆ ತಂದಿದ್ದ ಹಿಟಾಚಿಯನ್ನು ವಾಪಸ್ಸು ಕಳುಹಿಸುವ ಸಲುವಾಗಿ ಲಾರಿ ನಂ TN-27-X0627 ರಲ್ಲಿ ಹಿಟಾಚಿಯನ್ನು ಲೋಡ್‌ ಮಾಡಿ ಬೆಳಿಗ್ಗೆ 11.15 ಗಂಟೆಗೆ ಕೊಂಡಂಗೇರಿಗೆ ಕಳುಹಿಸಿದ್ದು ಸದರಿ ಲಾರಿಗೆ ಅಯ್ಯನಾರ್‌ ಎಂಬುವವರು ಚಾಲಕರಾಗಿದ್ದು ಅವರ ಜೊತೆ ನವೀನ್ ಕುಮಾರ್ ರವರಿಗೆ ಸೇರಿದ ಕೂರ್ಗ್ ಅರ್ಥ್ ಮೂವರ್ಸ್ ಸಂಸ್ಥೆಯ ಯೊಗೇಶ್‌ ಹಾಗೂ ಹಿಟಾಚಿ ಅಪರೇಟರ್‌ ಗೋವಿಂದನ್‌ ಎಂಬುವವರು ಲಾರಿಯಲ್ಲಿ ಹೋಗಿದ್ದು. ಸಮಯ ಸುಮಾರು 11.30 ಗಂಟೆಗೆ ಮೇಕೇರಿಯ ವೆಂಕಟೇಶ್ವರ ರೆಸಿಡೆನ್ಸಿ ರೆಸಾರ್ಟ್‌ ನ ಬಳಿ ತಿರುವು ರಸ್ತೆಯಲ್ಲಿ ಲಾರಿ ಅಪಘಾತಕ್ಕೀಡಾಗಿದ್ದು ಲಾರಿಯಲ್ಲಿದ್ದ ಗೋವಿಂದ ಹಾಗೂ ಯೊಗೇಶ್‌ ತೀವ್ರ ಗಾಯಗೊಂಡು ಲಾರಿಯೊಳಗೆ ಸಿಕ್ಕಿಕೊಂಡು ಮೃತಪಟ್ಟಿದ್ದು. ಲಾರಿ ಚಾಲಕ ಆಯ್ಯನಾರ್‌ ಗಂಬೀರವಾಗಿ ಗಾಯಗೊಂಡು ಅವರನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.