Thursday, March 31, 2016

ಪಾದಚಾರಿಗೆ ಬೈಕ್ ಡಿಕ್ಕಿ ಗಾಯ:

     ಪಾದಚಾರಿಯೊಬ್ಬರಿಗೆ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಬಾಣಾವರ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಎಸ್.ಎನ್. ರಮೇಶ ಎಂಬವರು ದಿನಾಂಕ 30-03-2016 ರಂದು ಬೆಳಿಗ್ಗೆ ಸಮಯ 08.30 ಗಂಟೆಗೆ ಎಂದಿನಂತೆ ಕೆಲಸಕ್ಕೆ ಬಾಣಾವಾರ ಗ್ರಾಮದ ಶಿವಣ್ಣ ರವರ ಅಂಗಡಿಯ ಮುಂದೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಾಣಾವಾರ ಕಡೆಯಿಂದ ಕೆಎ-12, ಎಂ.ಬಿ-8001 ರ ಮಾರುತಿ ವ್ಯಾನ್‌ ಚಾಲಕನು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಸ್.ಎನ್. ರಮೇಶ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಾರ್ವಜನಿಕ ಸ್ಥಳ ವಿರೂಪ ಪ್ರಕರಣ ದಾಖಲು:


     ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಜಾಗದ ಸರಹದ್ದಿಗೆ ನಿರ್ಮಿಸಿದ ಕಪೌಂಡ್ ಗೆ ಕಾನೂನಿಗೆ ವಿರುದ್ಧವಾಗಿ ಬ್ಯಾನರ್ ಅನ್ನು ಕಟ್ಟಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿರುತ್ತಾರೆ ಹಾಗೂ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿರುವ ಕಾರಣ ಸೋಮವಾರಪೇಟೆ ಠಾಣಾಧಿಕಾರಿಯವರು ಆರೋಪಿಗಳಾದ ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಲ್ಲಿರುವ ಹನಫಿ ಜಾಮೀಯ ಮಸೀದಿಯ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿ ಪಟ್ಟಣ ಪಂಚಾಯಿತಿ ಸೋಮವಾರಪೇಟೆ ಇವರು ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.