Saturday, March 5, 2016

ವ್ಯಾಪಾರದ ವಿಷಯದಲ್ಲಿ ಜಗಳ ಚಾಕುವಿನಿಂದ ತಿವಿದು ವ್ಯಕ್ತಿಯ ಕೊಲೆಗೆ ಯತ್ನ:

     ಸಿದ್ದಾಪುರ ಠಾಣಾ ವ್ಯಾಪ್ತಿಯ ಅರೆಕಾಡು ನಿವಾಸಿ ಫಿರ್ಯಾದಿ ಪಿ.ಎಂ. ಯೂಸುಪ್ ರವರು ದಿನಾಂಕ 4-3-2016 ರಂದು ಸಂಜೆ 06-45 ಮಸೀದಿಯಿಂದ ಹೊರಗಡೆ ಬರುತ್ತಿರುವಾಗ್ಗೆ ಪಿ.ಹೆಚ್. ಯೂಸೆಫ್ ನು ಪಿರ್ಯಾದಿ ಅಣ್ಣ ಅಬೂಬಕರ್ ನೊಂದಿಗೆ ಮೆಣಸು ವ್ಯಾಪಾರ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ಪಿರ್ಯಾದಿಯವರು ಹೋಗಿ ತಡೆಯಲು ಹೋದಾಗ ಪಿ.ಹೆಚ್. ಯೂಸೆಫ್ ನು ಚಾಕುವಿನಿಂದ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದ್ದು, ಅಲ್ಲೇ ಇದ್ದ ಪಿ.ಹೆಚ್. ಯೂಸೆಫ್ ನ ಅಕ್ಕ ಕೂಡ ಕೈಯನ್ನು ಹಿಡಿದು ಎಳೆದಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅವಘಡ , ಹಿಂಬದಿ ಸವಾರ ಸಾವು:

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ದಿನಾಂಕ 5-3-2016 ರಂದು ಬೆಳಗಿನ ಜಾವ 2-30 ಗಂಟೆಗೆ ದರ್ಶನ್ ಎಂಬವರು ಕಿರಣ್ ಎಂಬವರೊಂದಿಗೆ ವಿರಾಜಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರೊಂದನ್ನು ಹಿಂದಿಕ್ಕಲು ಹೋಗಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಮೋಟಾರ್ ಸೈಕಲ್ ನ ಹಿಂಬದಿ ಸವಾರ ಕಿರಣ ಬೈಕ್ ನಿಂದ ಎಸೆಯಲ್ಪಟ್ಟು ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿ ಗಂಭೀರ ಗಾಯಗೊಂಡು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯಿಂದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನ:

      ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ಶ್ರೀಮತಿ ನವನೀತಾ ಎಂಬವರು ದಿನಾಂಕ 04.03.2016 ರಂದು ಸಮಯ 19.30 ಗಂಟೆಗೆ ಮೈಸೂರಮ್ಮ ಕಾಲೋನಿಯಲ್ಲಿರುವ ಪಂಪ್ ಹೌಸ್ ಗೆ ಬೀಗ ಹಾಕಿ ಬರುವಾಗ ಆರೋಪಿ ರಾಜೇಶ್ ಎಂಬುವವರು ಅವರ ಕಾರಿನಲ್ಲಿದ್ದು, ಅವರು ಶ್ರೀಮತಿ ನವಾನೀತಾರವರ ಹತ್ತಿರ ಹೋಗಿ ಅವರ ಬಲಕೈ ಯನ್ನು ಹಿಡಿದು ಎಳೆದು ಕಾರಿಗೆ ಹತ್ತುವಂತೆ ಹೇಳಿ ಮಾನಭಂಗ ಮಾಡುವ ಉದ್ದೇಶದಿಂದ ಎದೆಯನ್ನು ಬಟ್ಟೆ ಸಮೇತ ಹಿಡಿದು ಎಳೆದಾಡಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದು ಅದೇ ಸಮಯಕ್ಕೆ ನವನೀತಾರವರ ತಂದೆ ಮ್ಯಾಥ್ಯೂ ರವರು ನಡೆದುಕೊಂಡು ಅಲ್ಲಿಗೆ ಬಂದಿದ್ದು ಅವರ ಮೇಲೆ ಆರೋಪಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯನ್ನು ಚೂರಿಯಿಂದ ತಿವಿದು ಕೊಲೆಗೆ ಯತ್ನ:

      ದಿನಾಂಕ 04/03/2016 ರಂದು ಸಮಯ 10-30 ಪಿ. ಎಂ ಗೆ ಮೈಸೂರಮ್ಮ ಕಾಲೋನಿ ವಾಸಿ ವಿ ಎಸ್ ರಾಜೇಶ್ ಎಂಬುವವರು ದಿನಾಂಕ 4-3-2016 ರಂದು 10.30 ಗಂಟೆಗೆ ಗಿರೀಶ್ಎಂಬುವವರ ಜಾಗದಲ್ಲಿ ಬರುವಾಗ ಅದೇ ಗ್ರಾಮದ ನಿವಾಸಿ ಫಿಲಿಪೋಸ್ ಮ್ಯಾಥ್ಯೂ ಹಾಗೂ ಇನ್ನೊಬ್ಬ ಪಂಪ್ ಹೌಸ್ ಒಳಗಿರುವುದನ್ನು ಗಮನಿಸಿ ಅವರನ್ನು ವಿಚಾರ ಮಾಡಿದಾಗ ಮ್ಯಾಥ್ಯೂರವರು ನೀನು ಯಾವ ಸದಸ್ಯ ಎಂದುನಿಂದಿಸಿ ರಾಜೇಶ್ ರವರಲ್ಲಿದ್ದ ಮೋಬೈಲನ್ನುಕಿತ್ತುಕೊಂಡು ರಸ್ತೆಗೆ ಎಸೆದುನಂತರ ಅವರ ಸ್ಕೂಟರಿನಲ್ಲಿ ಮನೆಗೆ ಹೋಗಿ ಅವರ ಮಗಳನ್ನ ಕರೆದುಕೋಂಡು ಬಂದು ಇಬ್ಬರು ಸೇರಿ ಅವಾಚ್ಯ ಶಬ್ಧಗಳಿಂದ ಬೈದು ಕಲ್ಲಿನಿಂದ ಹೊಡೆದು ಸಾಯಿಸುತ್ತೆವೆ ಎಂದು ಎದೆಭಾಗಕ್ಕೆ ಹೊಡೆದು ನಂತರ ನಿಮ್ಮ ಮೇಲೆ ಮಗಳನ್ನು ಮಾನ ಭಂಗ ಮಾಡಲು ಬಂದರು ಎಂದು ದೂರು ನೀಡುತ್ತೆವೆಂದು ಹೇಳಿ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪ್ರಾಪ್ತ ಹುಡುಗಿ ಕಾಣೆ:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕ ಭಂಡಾರದ ನಿವಾಸಿಯಾದ ಸಿ.ಹೆಚ್ ಯೊಗೇಶ್ ರವರ ಮಗಳಾದ ಕುಮಾರಿ ಜಯಶ್ರೀ ಪ್ರಾಯ 16 ವರ್ಷದವಳು ಕೊಡ್ಲಿಪೇಟೆ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 27.02.2016 ರಂದು ಎಂದಿನಂತೆ ಬೆಳಿಗ್ಗೆ 08.30 ಎ.ಎಂಗೆ ಮನೆಯಿಂದ ಕಾಲೇಜಿಗೆ ಪರೀಕ್ಷೆಯನ್ನು ಬರೆಯಲು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾಳೆಂದು ದಿನಾಂಕ 4-3-2016 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.