Sunday, March 6, 2016

ಸ್ಕೂಟರ್ ಅವಘಡ ಸವಾರ ಸಾವು:

     ಹಾಸನ ಜಿಲ್ಲೆ ಕುಂಬ್ರಹಳ್ಳಿ ಗ್ರಾಮದ ನಿವಾಸಿ ಕೆ.ಪಿ. ದಯಾನಂದ ಎಂಬವರು ತನ್ನ ಮಗಳ ಮದುವೆಗೆ ನೆಂಟರನ್ನು ಕರೆಯುವ ಸಲುವಾಗಿ ದಿನಾಂಕ 04/03/2016 ರಂದು ಸಮಯ 02:00 ಗಂಟೆಗೆ ಬಾಣಾವಾರ ಗ್ರಾಮದ ರಾಜಪ್ಪರವರ ಮನೆಗೆ ತನ್ನ ಬಾಪ್ತು ಕೆಎ-46 ಈ-7882 ರ ಟಿ.ವಿ.ಎಸ್ ಎಕ್ಸಲ್ ಸ್ಕೂಟರನ್ನು ಚಾಲಿಸಿಕೊಂಡು ಹೋಗಿದ್ದು, ಅಲ್ಲಿಂದ ವಾಪಾಸ್ಸು ಹೊರಟು ಸಂಗಯ್ಯನಪುರ ಗ್ರಾಮದ ಬಳಿ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಸ್ತೆಯ ಎಡಭಾಗದ ದಿಬ್ಬಕ್ಕೆ ಡಿಕ್ಕಿಯಾಗಿ ಸದರಿಯವರು ಮೃತಪಟ್ಟಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟಕ್ಕೆ ಯತ್ನ ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ಹಾಲುಕೆನೆ ಗ್ರಾಮದ ನಿವಾಸಿ ಹೆಚ್.ಆರ್. ಪವನ ಎಂಬವರು ದಿನಾಂಕ 5-3-2016 ರಂದು ಕಾಜೂರು ಹೊಳೆಯಿಂದ ಅಕ್ರಮವಾಗಿ ಮರಳನ್ನು ತುಂಬಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾಸಂತೆ ಪೊಲೀಸರು ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿ ಮಲ್ಲೆಂಗಡ ಮಿಟ್ಟು ಮಾಚಯ್ಯ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು 4-3-2016 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.