Tuesday, March 8, 2016

ಬೈಕ್ ಅಪಘಾತ ಹಿಂಬದಿ ಸವಾರ ಸಾವು:

     ಬೈಕೊಂದು ಅಪಘಾತಕ್ಕೀಡಾಗಿ  ಹಿಂಬದಿ ಸವಾರ ಸಾವನಪ್ಪಿದ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.  ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಹಿಪ್ಪುಗಳಲೆ ಬೆಸೂರು ಗ್ರಾಮದ ನಿವಾಸಿ ಹೆಚ್.ಇ. ಸುರೇಶ ಎಂಬವರು ದಿನಾಂಕ 6-3-2016 ರಂದು ಹೊಳೆನರಸಿಪುರ ತಾಲೋಕು ಹಳ್ಳಿಮೈಸೂರು ವಾಸಿ ಕವಿ ಎಂಬವರೊಂದಿಗೆ ಮೋಟಾರ್ ಸೈಕಲ್ ನಲ್ಲಿ  ಪ್ರಯಾಣಿಸುತ್ತಿದ್ದಾಗ ಹೆಬ್ಬಾಲೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಸವಾರ ಬೈಕಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮೋಟಾರ್ ಸೈಕಲ್ ರಸ್ತೆ ಮೇಲೆ ಮಗುಚಿ ಬಿದ್ದ ಪರಿಣಾಮ ಹಿಂಬದಿ ಸವಾರ ಕವಿಯವರು ತೀವ್ರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 7-3-2016 ರಂದು ಸದರಿಯವರು ಸಾವನಪ್ಪಿದ್ದು ಕುಶಾನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಗೆ ಟಾಟಾ ಏಸ್ ಡಿಕ್ಕಿ ಸವಾರನಿಗೆ ಗಾಯ:
     ಕುಶಾಲನಗರದ ಮಾರುತಿ ಬಡಾವಣೆ ನಿವಾಸಿ ಎಸ್.ಎಸ್. ದರ್ಶನ್ ರವರು ದಿನಾಂಕ 6-3-2016 ರಂದು ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ  ಎಂ.ಸಿ. ಸೋಮಯ್ಯ ಎಂಬವರು ಚಲಾಯಿಸುತ್ತಿದ್ದ ಟಾಟಾ ಏಸ್ ವಾಹನ  ಡಿಕ್ಕಿಯಾದ ಪರಿಣಾಮ ಸದರಿ ಎಸ್.ಎಸ್. ದರ್ಶನ್ ರವರು  ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ ಸವಾರರಿಬ್ಬರಿಗೆ ಗಾಯ:
     ಅತೀ ವೇಗದ ಚಾಲನೆಯ ಪರಿಣಾಮ ಮೋಟಾರ್ ಸೈಕಲ್ ಕಾರಿಗೆ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 5-3-2016 ರಂದು ಸುಳ್ಯ ನಿವಾಸಿ ಸತ್ಯಪ್ರಸಾದ್ ಎಂಬವರು ತಮ್ಮ ಬಾಪ್ತು ಕಾರಿನಲ್ಲಿ  ಸುಳ್ಯದಿಂದ ಮೈಸೂರಿಗೆ ಕೆಲಸ ನಿಮಿತ್ತ ಹೋಗುತ್ತಿದ್ದಾಗ  ಮಡಿಕೇರಿ ಸಮೀಪದ ಕಾಟಕೇರಿ ಎಂಬಲ್ಲಿ ತಲುಪಿದಾಗಿ ಎದುರುಗಡೆಯಿಂದ ಬಂದ ಮೋಟಾರ್ ಸೈಕಲ್ ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಸವಾರ ಮತ್ತು ಹಿಂಬದಿ ಸವಾರ  ಅಬ್ದುಲ್ ವಾಹಿದ್ ಹಾಗೂ ಹಿಂಬದಿ ಸವಾರ ಇಮ್ತಿಯಾಜ್ ರವರುಗಳಿಗೆ ಗಾಯಗಳಾಗಿ  ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು,  ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತೋಟದಿಂದ ಮರ ಕಡಿದು ಸಾಗಿಸುತ್ತಿದ್ದ ವೇಳೆ ವ್ಯಕ್ತಿಗಳಿಂದ ಹಲ್ಲೆ:
     ಸರಕಾರದ ಪರವಾನಗಿ ಪಡೆದು ಜಾಗದಿಂದ ಮರಗಳನ್ನು ಕಟಾವು ಮಾಡಿ ಸಾಗಿಸುತ್ತಿದ್ದ  ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.  ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆತ್ತುಕಾಯದಲ್ಲಿರುವ ನಧೀರ್ ಎಂಬವರಿಗೆ ಸೇರಿದ ಜಾಗದಿಂದ ಸರಕಾರನ ಅನುಮತಿ ಪಡೆದು ಜಾಗದಲ್ಲಿದ್ದ ರಬ್ಬರ್ ಮರಗಳನ್ನು ಕಡಿದು ಮಡಿಕೇರಿಯ ಟಿ.ಕೆ, ಕಾಶಿ ಕಾವೇರಪ್ಪ ಎಂಬವರು ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳಾದ ಸಾಬು, ಸಾಜಿ, ಬಿಜು ಮ್ಯಾಥ್ಯೂರವರುಗಳು ಕೆಲವು ಜನರನ್ನು  ಕರೆದುಕೊಂಡು  ಅಕ್ರಮಕೂಟ ಸೇರಿ ಕಾಶಿ ಕಾವರೇರಪ್ಪನವರನ್ನು ತಡೆದು ಅವಾಚ್ಯವಾಗಿ ನಿಂದಿಸಿ  ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ  ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.