Friday, April 29, 2016

ಮನೆಯ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

        ದಿನಾಂಕ 28.04.2016 ರಂದು ಸಮಯ 10:15 ಗಂಟೆಗೆ ಫಿರ್ಯಾದಿ ಕೆ.ಡಿ. ಆನಂದ ಎಂಬವರು ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದಲ್ಲಿರುವ ತಮ್ಮ ಮನೆಯ ವೆರಾಂಡದಲ್ಲಿ ಮಲಗಿಕೊಂಡಿರುವಾಗ ಆರೋಪಿಗಳಾದ ಗೋಣಿಮರೂರು ಗ್ರಾಮದ ನೀಲಮ್ಮ ಮತ್ತು ದಿಲೀಪ್ ಎಂಬವರು ಅಲ್ಲಿಗೆ ಬಂದು ನೀನು ಏಕೆ ಇಲ್ಲಿ ಮಲಗಿದ್ದೀಯಾ ಈ ಮನೆ ನನಗೆ ಸೇರಿದ್ದು ಎಂದು ಹೇಳಿ ಅವಾಚ್ಯ ಶಬ್ದಗಳಿಂದಿ ಬೈದು ಆರೋಪಿಗಳು ಕಬ್ಬಿಣದ ರಾಡಿನಿಂದ ಫಿರ್ಯಾದಿ ಆನಂದನವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ ಪ್ರಕರಣ ದಾಖಲು:

        ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದ ನಿವಾಸಿ ಪಿರ್ಯಾದಿ ಕೆ.ಯು. ಕಾರ್ಯಪ್ಪ ನವರ ತಂಗಿಯ ಗಂಡ ಟಿ.ಕೆ.ರಮೇಶ್ @ ಕರುಂಬಯ್ಯ ರವರು ದಿನಾಂಕ 28/04/2016 ರಂದು ಬೆಳಿಗ್ಗೆ 9.00 ಗಂಟೆಗೆ ಮನೆಯಿಂದ ಮೂರ್ನಾಡುವಿಗೆ ಮೋಟಾರ್ ಸೈಕಲ್ ನಂ. ಕೆಎ-02-ಈಬಿ-1861 ನ್ನು ಸರ್ವೀಸ್ ಗೆ ಕೊಟ್ಟು ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಹುಡುಗಿ ಕಾಣೆ, ಅಪಹರಣ ಶಂಕೆ:

    ಮಡಿಕೇರಿ ತಾಲೂಕು ಕೊಳಕೇರಿ ಗ್ರಾಮದ ನಿವಾಸಿ ಎಂ.ಸಿ. ಬೆಳ್ಯಪ್ಪ ಎಂಬವರ ಮಗಳು ಮಗಳು 17 ವರ್ಷ ಪ್ರಾಯದ ಎ.ಬಿ ವಸಂತಿ ಎಂಬವಳು ನಾಪೋಕ್ಲುವಿನಲ್ಲಿ ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದು ದಿನಾಂಕ 27-04-2016 ರಂದು ಬೆಳಗ್ಗೆ 09-30 ಗಂಟೆಗೆ ಮನೆಯಿಂದ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತೇನೆಂದು ಹೇಳಿ ಹೋದವಳು ಸಂಜೆಯಾದರೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಇವಳನ್ನು ನೆಲಜಿ ಗ್ರಾಮದ ದೀಕ್ಷಿತ್ ಎಂಬವನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಅಪಘಾತ, ಮಹಿಳೆ ಸಾವು:

     ಕುಶಾಲನಗರ ಗ್ರಾಮಾಂತರ ಠಾಣಾ ಸರದಹದ್ದಿನ ತೊಂಡೂರು ಗ್ರಾಮದ ನಿವಾಸಿ ಹರಿಪ್ರಸಾದ್ ಎಂಬವರ ಪತ್ನಿ ಶ್ರೀಮತಿ ರಶ್ಮಿ ಎಂಬವರು ಕುಶಾಲನಗರದ ಮಂಡೋವಿ ಮೊಟಾರ್ಸ್ ಗೆ ಕೆಲಸದ ಸಲುವಾಗಿ ತೊಂಡೂರು ಗ್ರಾಮದ ತಮ್ಮ ಮನೆಯಿಂದ ದಿನಾಂಕ 28-4-2016 ರಂದು ಬೆಳಿಗ್ಗೆ 8.45 ಗಂಟೆಗೆ ತಮ್ಮ ಬಾಪ್ತು ಕೆಎ 12 ಎಲ್ 5917 ರ ಡಿಯೋ ಸ್ಕೂಟರಿನಲ್ಲಿ ಕುಶಾಲನಗರಕ್ಕೆ ಬರುತ್ತಿರುವಾಗ್ಗೆ ಸುಮಾರು 8.55 ಗಂಟೆ ಸಮಯಕ್ಕೆ ಆನೆಕಾಡುವಿನ ಇಳಿಜಾರು ರಸ್ತೆಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಶ್ಮಿಯವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ರಶ್ಮಿಯವರ ತಲೆ, ಕಾಲು, ಕೈ ಹಾಗೂ ಶರೀರದ ಇತರ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಮಡಿಕೇರಿಯ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಮಾರ್ಗ ಮದ್ಯೆ ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪ್ರಾಪ್ತೆಯ ಮೇಲೆ ಯುವಕನಿಂದ ಅತ್ಯಾಚಾರ:
     ಸೋಮವಾರಪೇಟೆ ಠಾಣಾ ಸರಹದ್ದಿನ ಯಲಕನೂರು ಹೊಸಳ್ಳಿ ಗ್ರಾಮದ ನಿವಾಸಿ ಫಿರ್ಯಾದಿ ಜೆ.ಕೆ. ನಂಜ ಎಂಬವರ ಮಗಳು ಶಾಲಿನಿ ಪ್ರಾಯ 16 ವರ್ಷ ಈಕೆ ಹುಟ್ಟಂದಿನಿಂದಲೂ ಮಾತು ಬಾರದೆ ಮೂಗಿಯಾಗಿದ್ದು ದಿನಾಂಕ 26.04.2016 ರಂದು ಶಾಲಿನಿ ಒಬ್ಬಳೆ ಮನೆಯಲ್ಲಿರುವಾಗ ಹೊಸಳ್ಳಿ ಕಾಲೋನಿಯ ಅವರ ಸಂಬಂಧಿ ಮನು ಎಂಬುವವನು ಶಾಲಿನಿಯನ್ನು ಎತ್ತಿಕೊಂಡು ಪಕ್ಕದ ಕಾಡಿಗೆ ಹೋಗಿ ಬಲತ್ಕಾರದಿಂದ ಅತ್ಯಾಚಾರ ಮಾಡಿರುವುದಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, April 28, 2016

ಅಣ್ಣನ ಮೇಲೆ ತಂಗಿಯಿಂದ ಹಲ್ಲೆ:

     ದಿನಾಂಕ 27-4-2016.ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯಲ್ಲಿ ವಾಸವಾಗಿರುವ ಟಿ.ಎನ್. ರವಿಚಂದ್ರ ಎಂಬವರ ಮೇಲೆ ಅವರ ತಂಗಿ ಶ್ರೀಮತಿ ಅಮುದ ಎಂಬಾಕೆ ತನ್ನ ವೈಯಕ್ತಿಕ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಂಗಿ ಮೇಲೆ ಅಣ್ಣನಿಂದ ಹಲ್ಲೆ:

     ದಿನಾಂಕ 27-4-2016.ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಅಮುದ ಎಂಬವರ ಮೇಲೆ ಆಕೆಯ ಸಹೋದರ ಟಿ.ಎನ್. ರವಿಚಂದ್ರ ಅಮುದಳ ವೈಯಕ್ತಿಕ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದನ ಕರು ಕಳವು ಮಾಡಿ ಸಾಗಾಟ:

    ದಿನಾಂಕ 27-4-2016 ರಂದು ವಿರಾಜಪೇಟೆ ತಾಲೂಕು ನಿಟ್ಟೂರು ಗ್ರಾಮದ ನಿವಾಸಿಯಾದ ಫಿರ್ಯಾದಿ ಕಾಡ್ಯಮಾಡ ಕೆ. ಪೂಣಚ್ಚ ಎಂಬವರು ಕುಟುಂಬದವರೊಂದಿಗೆ ಕೋಟೂರು ಗ್ರಾಮದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದು ಅದೇ ಸಮಯದಲ್ಲಿ ಕುಂಬಾರಕಟ್ಟೆ ಕಾಲೋನಿ ಬಳಿ ನಿಟ್ಟೂರು ಗ್ರಾಮದ ವಾಸಿ ವಿ.ಟಿ.ಲೋಕೇಶ್‌ @ ಅಣ್ಣಯ್ಯರವರು ಫಿರ್ಯಾದಿಯವರಿಗೆ ಸೇರಿದ ಹಸು ಮತ್ತು ಹೋರಿ ಕರುವನ್ನು ಕಳ್ಳತನ ಮಾಡಿಕೊಂಡು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದವನನ್ನು ಪತ್ತೆ ಹಚ್ಚಿ ಆರೋಪಿನ್ನು ಠಾಣೆಗೆ ಒಪ್ಪಿಸುವ ಮೂಲಕ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರು ಮತ್ತು ಮ್ಯಾಕ್ಸಿ ಕ್ಯಾಬ್ ಮುಖಾಮುಖಿ 6 ಮಂದಿಗೆ ಗಾಯ: 

     ದಿನಾಂಕ 25-04-2016ರಂದು ಪಿರ್ಯಾದಿ ಮೈಸೂರು ನಗರದ ನಿವಾಸಿ ಎನ್. ರಮೇಶ ಕುಮಾರ್ ರವರು ತಮ್ಮ ಬಾಪ್ತು ಕೆ ಎ 05 ಸಿ 6201ರಲ್ಲಿ ಸ್ನೆಹಿತರೊಂದಿಗೆ ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಹೋಟೆಲಿಗೆ ಬಂದು ಮದುವೆ ಮುಗಿಸಿ ವಾಪಾಸ್ಸು ಹೋಗುತ್ತಿರುವಾಗ್ಗೆ ಸಮಯ 03:45 ಪಿ ಎಂ ಗೆ ಕುಶಾಲನಗರದ ಆರ್ ಎಂ ಸಿ ಬಳಿ ಇರುವ ಬಿ ಎಸ್ ಆರ್ ಸೈಕಲ್ ಶಾಪ್ ನ ಮುಂಬಾಗ ತಲುಪುವಾಗ್ಗೆ ಕೊಪ್ಪ ಕಡೆಯಿಂದ ಮಹೇಂದ್ರ ಮ್ಯಾಕ್ಸಿ ಕ್ಯಾಬ್ ವಾಹನವನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ವಾಹನವು ಜಖಂಗೊಂಡಿದ್ದು , ವಾಹನದಲ್ಲಿದ್ದ ಸ್ನೇಹಿತರಾದ ಷಣ್ಮುಗಂ, ಮುನಿಸ್ವಮಿ, ಮೆಹರುನ್ನೀಸಾ , ಉಸ್ಮಾಭಾನು , ಪುಟ್ಟಮ್ಮ ಮತ್ತು ಶಾಂತಮ್ಮ ರವರಿಗೆ ರಕ್ತಗಾಯವಾಗಿದ್ದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, April 27, 2016

ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ  
                  ಹಣದ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಮಡಿಕೇರಿ ತಾಲೂಕಿನ ಯು. ಚೆಂಬು ಗ್ರಾಮದಲ್ಲಿ ನಡೆದಿದೆ. ದಿನಾಂಕ 21/04/2016ರಂದು ಯು.ಚೆಂಬು ನಿವಾಸಿ ವೀರಪ್ಪ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿ ಗಣೇಶ ಎಂಬವರು ಹಣದ ವಿಚಾರಕ್ಕೆ ಜಗಳವಾಡಿ ವೀರಪ್ಪನವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕತ್ತು ಕುಯ್ದು ಅಪರಿಚಿತ ವ್ಯಕ್ತಿಯ ಹತ್ಯೆ 
                 ಕತ್ತು ಕುಯ್ದು ಅಪರಿಚಿತ ವ್ಯಕ್ತಿಯ ಹತ್ಯೆ ಮಾಡಿರುವ ಘಟನೆ ಭಾಗಮಂಡಲ ಬಳಿಯ ತಲಕಾವೇರಿಯಲ್ಲಿ  ನಡೆದಿದೆ. ಹಾಕತ್ತೂರು ಬಳಿಯ ಹುಲಿತಾಳ ನಿವಾಸಿ ದಯಾನಂದ ಎಂಬವರು ದಿನಾಂಕ 26/04/2016ರಂದು ತಲಕಾವೇರಿಯ ದೇವಾಲಯಕ್ಕೆ ಸಂಬಂಧಿಸಿದ ಬಾವಿಗೆ ಮೋಟಾರನ್ನು ಆಳವಡಿಸುವ ಸಲುವಾಗಿ ಅವರ ವಾಹನದಲ್ಲಿ ಹೋಗಿ ಮೋಟಾರನ್ನು ಭಾವಿಯ ಬಳಿ ತೆಗೆದುಕೊಂಡು ವಿಶ್ವನಾಥ ಎಂಬವರೊಂದಿಗೆ ಅರಣ್ಯದೊಳಗೆ ಹೋಗುತ್ತಿರುವಾಗ ಅರಣ್ಯದೊಳಗೆ ಓರ್ವ ಅಪರಿಚಿತ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಕತ್ತು ಕುಯ್ದು ಕೊಲೆ ಮಾಡಿದ್ದು, ಹೆಣವನ್ನು ಕಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, April 23, 2016

ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ ದುಷ್ಕರ್ಮಿಗಳು:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಅತ್ತೂರು ನಲ್ಲೂರು ಗ್ರಾಮದಲ್ಲಿರುವ ಮತ್ತಿಕಾಡು ಎಸ್ಟೇಟ್ ನಲ್ಲಿ ಇರುವ ನೀರಿನ ಟ್ಯಾಂಕ್ ನಲ್ಲಿ ಯಾರೋ ದುಷ್ಕರ್ಮಿಗಳು ವಿಷವನ್ನು ಬೆರೆಸಿರುತ್ತಾರೆಂದು ಮತ್ತಿಕಾಡು ಎಸ್ಟೇಟ್ ನಲ್ಲಿ ವಾಸವಾಗಿರುವ ಎಸ್.ಪಿ. ಚೆಂಗಪ್ಪ ನವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ, ವ್ಯಕ್ತಿ ಮೇಲ್ ಹಲ್ಲೆ ಕೊಲೆ ಬೆದರಿಕೆ:

    ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡಬ್ಬೂರು ಗ್ರಾಮದ ನಿವಾಸಿ ಸಿ.ಜೆ. ಚೇತನ್ ಎಂಬವರು ದಿನಾಂಕ 22.04.2016 ರಂದು ಬಸವೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಾಸ್ಸು ಮನೆಗೆ ಹೋಗಲು ದೇವಸ್ಥಾನದ ಮುಂಭಾಗಕ್ಕೆ ಬರುತ್ತಿದ್ದಾಗ ಸಮಯ 09:30 ಗಂಟೆಗೆ ವೇಳೆಯಲ್ಲಿ ದೊಡ್ಡಬ್ಬೂರು ಗ್ರಾಮದ ಸಮರ್ಥ ಎಂಬುವವನು ನೀನು ಕಳೆದ ಸಾರಿ ಗಲಾಟೆ ಮಾಡಿದ್ದೀಯಾ ಈ ಸಾರಿ ಗಲಾಟೆ ಮಾಡು ನೋಡೋಣ ಎಂದು ಹಳೆಯ ದ್ವೇಶದಿಂದ ಸಮರ್ಥ ಫಿರ್ಯಾದಿಯವರಿಗೆ ಕೈಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಜೊತೆಯಲ್ಲಿದ್ದ ರಕ್ಷಿತ್, ಸುಬ್ಬಯ್ಯ, ಸಂಜಿತ್ ರವರು ದೊಣ್ಣೆಯಿಂದ ಫಿರ್ಯಾದಿಯವರ ಶರೀರಕ್ಕೆ ಹೊಡೆದು ಬಿಡಿಸಲು ಬಂದ ಚಂದ್ರರವರಿಗೂ ಸಹ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹುಡುಗಿ ಕಾಣೆ, ಪ್ರಕರಣ ದಾಖಲು:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಾರ್ಮಾಡು ಗ್ರಾಮದ ನಿವಾಸಿ ಹೆಚ್.ಡಿ. ಕುಮಾರ್ ಎಂಬವರ ಮಗಳು 22 ವರ್ಷ ಪ್ರಾಯದ ಹೇಮಾ ಎಂಬಾಕೆ ದಿನಾಂಕ 21-4-2016 ರಂದು ಅಮ್ಮತ್ತಿ ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಿಬರುವುದಾಗಿ ಹೇಳಿ ಹೋಗಿದ್ದು, ಅಲ್ಲಿಂದ ಕೃಷ್ಣ ಎಂಬಾತನೊಂದಿಗೆ ಹೋಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅವಘಡ ಮಹಿಳೆಗೆ ಗಾಯ:

     ದಿನಾಂಕ 18-04-2016 ರಂದು ಪಿರ್ಯಧಿ ವೆಂಕಟೇಶ್ ರೈ ರವರ ತಮ್ಮ ಗಣೇಶ್ ರೈ ರವರು ಅವರ ಬಾಪ್ತು ಕೆಎ-12-ಎನ್-8457 ರ ಆಟ್ಟೋ ಕಾರಿನಲ್ಲಿ ಗೀತಾಜೀ ರೈ, ಸ್ವಾತಿಜೀ ರೈ, ಮತ್ತು ಶ್ವೇತಜೀ ರೈ ರವರೋಂದಿಗೆ ಅವರ ನೆಂಟರ ಮನೆ ಸುಳ್ಳಕ್ಕೆ ಹೋಗಿ ದಿನಾಂಕ 19-04-2016 ರಂದು ಸುಳ್ಳದಿಂದ ವಾಪಸ್ಸು ಮನೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 6.30 ಗಂಟೆಯಲ್ಲಿ ಮಡಿಕೇರಿ ಬಳಿಯ ದೇವರಕೊಲ್ಲಿಯಲ್ಲಿ ಕಾರನ್ನು ಕಾರಿನ ಚಾಲಕ ಗಣೇಶ್ ರೈ ಅತೀವೇಗ ಹಾಗೂ ಅಜಾಗರುಕತೆಯಿಂದ ಓಡಿಸಿದ ಪರಿಣಾಮ ಕಾರು ರಸ್ತೆಯ ಬದಿಯ ಚರಂಡಿಗೆ ಬಿದ್ದು ಕಾರು ಜಖಂಗೊಂಡು, ಕಾರಿನಲ್ಲಿ ಇದ್ದ ಗೀತಾಜೀ ರೈ ರವರ ಎಡ ಕೈ ರಟ್ಟೆಗೆ ಗಾಯವಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Vartika Katiyar, IPS

Friday, April 22, 2016


ವಿನಾಕಾರಣ ಮಹಿಳೆ ಮೇಲೆ ಹಲ್ಲೆ:

     ಮಹಿಳೆಯೊಬ್ಬರು ಬಿಂದಿಗೆಯಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಇನ್ನೊಬ್ಬ ಮಹಿಳೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊನ್ನಂಪೇಟೆ ಠಾಣಾ ಸರದಹ್ದಿನ ನಲ್ಲೂರು ಗ್ರಾಮದ ದೂಪದ ಕೊಲ್ಲಿ ಎಂಬಲ್ಲಿ ವಾಸವಾಗಿರುವ ಎಂ.ಆರ್. ಸುಚಿತ್ರಾ ಎಂಬವರು ದಿನಾಂಕ 19-4-2016 ರಂದು ಅವರ ನಿವಾಸದ ಹತ್ತಿರದ ಪಂಪ್ ಹೌಸ್ ನಿಂದ ಬಿಂದಿಗೆಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ಎಂ.ಕೆ. ಲಕ್ಷ್ಮಿ ಎಂಬವರು ವಿನಾಕಾರಣ ಸುಚಿತ್ರಾರವನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:

    ಮೂರ್ಚೆರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಸೀಮೆಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನನಕೋಟೆ ಗ್ರಾಮದ ನಿವಾಸಿ ಶ್ರೀಮತಿ ಹೆಚ್. ಹೆಚ್. ಶಾಂತಿ ಎಂಬವರ ಮಗ ಸುಬಾಷ್ @ ಸಿದ್ದಪ್ಪ ಮೂರ್ಛೆ ರೋಗದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-4-2016 ರಂದು ತನ್ನ ವಾಸದ ಮನೆಯೊಳಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ತೆಗೆದು ನಗ ನಾಣ್ಯ ಕಳವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗುರು ಗ್ರಾಮದ ನಿವಾಸಿ ಅರಮಣಮಾಡ ಟಿ. ಸುರೇಶ ಎಂಬವರ ಮನೆಗೆ ದಿನಾಂಕ 20-4-2016 ರ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬಾಗಿಲಿಗೆ ಹಾಕಿದ ಬೀಗವನ್ನು ತರೆದು ಒಳಗೆ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ಹಾಗು 80 ಕೆ.ಜಿ. ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ:

    ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದಲ್ಲಿ ವಾಸವಾಗಿರುವ ಪುಚ್ಚಿಮಾಡ ಅಯ್ಯಪ್ಪನವರ ಲೈನುಮನೆಯಲ್ಲಿ ವಾಸವಾಗಿರುವ ಚುಬ್ಬಿ ಎಂಬಾಕೆಯ ಮಗಳು 26 ವರ್ಷದ ಬೋಜಿ ಎಂಬಾಕೆಯು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, April 21, 2016

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ,
ಸಿದ್ದಾಪುರ ಠಾಣಾ ಸರದಹ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಜಾಬೀರ್ ಆಲಿ ಎಂಬವರು ದಿನಾಂಕ 20/04/2016 ರಂದು ಕೂಲಿ ಕೆಲಸಮಾಡಿಕೊಂಡು ವಾಪಸ್ಸು ಮನೆಗೆ ಬರುತ್ತಿರುವಾಗ್ಗೆ ನೆಲ್ವತೇಕ್ರೆ ಗ್ರಾಮದ ಮಸೀದಿಯ ಬಳಿ ಬರುತ್ತಿರುವಾಗ್ಗೆ ಶಂಷೀರ್ ಬಿ.ಎ ಹಾಗು ಅಕ್ಬರ್ ಎಂಬವರು ಫಿರ್ಯಾದಿ ಜಾಬೀರ್ ರವರನ್ನು ತಡೆದು ನಿಲ್ಲಿಸಿ ಅವಾಷಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಶವ ಪತ್ತೆ ಕಾಡಾನೆ ದಾಳಿ ಶಂಕೆ:
     ಸಿದ್ದಾಪುರ ಠಾಣಾ ಸರಹದ್ದಿನ ಟಾಟಾ ಕಾಫಿ ತೋಟದ ಮಟ್ಟಪರಂಬು ಡಿವಿಜನ್ ನಿವಾಸಿ 38 ವರ್ಷ ಪ್ರಾಯದ ರಂಗಸ್ವಾಮಿ ಎಂಬವರು ದಿನಾಂಕ 11/4/2016 ಮಡಿಕೇರಿ ಜಿಲ್ಲಾಸ್ಪತ್ರೆಗೆ ತನ್ನ ಸಂಬಂಧಿಕರನ್ನು ನೋಡಲು ಹೋಗಿ ನಂತರ ಮನೆಗೆ ಹೋಗದೆ ಕಾಣೆಯಾಗಿದ್ದು ದಿನಾಂಕ 20/4/2016 ಎಮ್ಮೆಗುಂಡಿ ತೋಟದಲ್ಲಿ ಸದರಿಯವರ ಮೃತ ದೇಹ ಪತ್ತೆಯಾಗಿದ್ದು, ಸದರಿ ಮೃತದೇಹದ ಎರಡು ಕಾಲಿನ ತೊಡೆಯಲ್ಲಿ ಸುಮಾರು ಒಂದು ಅಡಿ ಉದ್ದದ ಗಾಯವಾಗಿದ್ದು, ಸದರಿಯವರು ದಿನಾಂಕ: 11/4/2016 ರಂದು ಇವರು ಸಿದ್ದಾಪುರದಿಂದ ಮಟ್ಟಪರುಂಬುಗೆ ನಡೆದುಕೊಂಡು ಹೋಗುವಾಗ ಕಾಡಾನೆ ದಾಳಿಗೆ ಸಿಲುಕಿ ಮೃತ ಪಟ್ಟಿರುವ ಸಾಧ್ಯತೆಗಳಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ತಾಯಿಮೇಲೆ ಮಗನಿಂದ ಹಲ್ಲೆ:
     ದಿನಸಿ ಸಾಮಾನು ತರಲು ಹೇಳಿದ ಕಾರಣಕ್ಕೆ ಮಗ ತನ್ನ ತಾಯಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಭಾಗಮಂಡಲ ಠಾಣಾ ಸರಹದ್ದಿನ ಚೇರಂಗಾಲ ಗ್ರಾಮದ ನಿವಾಸಿ ಶ್ರೀಮತಿ ಬೊಳ್ಳಮ್ಮ (82) ಇವರ ಮೇಲೆ ತನ್ನ ಮಗ ರೋಹಿತ್ ಎಂಬಾತ ದಿನಸಿ ಸಾಮಾಗ್ರಿಗಳನ್ನು ತರುವ ಬಗ್ಗೆ ಹಣದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.

 ಆಸ್ತಿ ವಿಚಾರ, ವ್ಯಕ್ತಿಯ ಕೊಲೆಗೆ ಯತ್ನ:
        ದಿನಾಂಕ 20-04-2016 ರಂದು ಸಮಯ 17.30 ಗಂಟೆಗೆ ಗೋಣಿಕೊಪ್ಪ ಪೊಲೀಸ್‌‌ ಠಾಣಾ ಸರಹದ್ದಿನ ಹಾತೂರು ಗ್ರಾಮದ ವಿ.ಎಸ್. ರಾಮಚಂದ್ರರವರ ಮನೆಯ ಬಳಿ ಆಸ್ತಿಯ ಸರ್ವೆ ಕಾರ್ಯದಲ್ಲಿ ಇರುವಾಗ್ಗೆ ಆರೋಪಿ ವಿ.ಡಿ.ದಿನೇಶ ಹಾಗು ವಿ.ಡಿ. ದೀಕ್ಷತ್ರವರುಗಳು ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, April 20, 2016

ವಾಹನ ಅಪಘಾತ ವ್ಯಕ್ತಿ ಸಾವು:

     ದಿನಾಂಕ 18/04/2016 ರಂದು ಸಮಯ 12.00 ಗಂಟೆಗೆ ಫಿರ್ಯಾದಿ ಕೃಷ್ಣ ಮತ್ತು ಅವರ ಮಾವನವರಾದ ನಾಗರಸ್ವಾಮಿ ಯವರು ತಿತಿಮತಿಯ ಚೈನ್ ಗೇಟ್ ಕಡೆಯಿಂದ ದೇವಮ್ಮಚ್ಚಿ ಕಡೆಗೆ ಸಾರ್ವಜನಿಕ ರಸ್ತೆಯ ಎಡಬಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂಬಾಗದಿಂದ ಅಂದರೆ ಹುಣಸೂರು ಕಡೆಯಿಂದ ಕೆಎ-53 ಎಂ 9678 ರ ಸ್ಕಾರ್ಪಿಯೋ ವಾಹನವನ್ನು ಅದರ ಚಾಲಕ ಆರೋಪಿ ಪ್ರಕಾಶ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮಾವನವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ರಸ್ತೆಯ ಎಡಬಾಗದ ಫೂಟ್ ಪಾತ್ ನಲ್ಲಿ ಬಿದ್ದಾಗ ಅವರ ತಲೆಯ ಬಾಗಕ್ಕೆ ಪೆಟ್ಟಾಗಿ ತಲೆ, ಮೂಗು, ಬಾಯಿಂದ ರಕ್ತ ಬರುತ್ತಿದ್ದು, ಚಿಕಿತ್ಸೆ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲುಮಾಡಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲುಮಾಡಿದ್ದು ಸದರಿಯವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vartika Katiyar, IPS

Tuesday, April 19, 2016


ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು:

      ಸೋಮವಾರಪೇಟೆ ತಾಲೋಕು ಬಿಳಿಗೇರಿ ಗ್ರಾಮದ ನಿವಾಸಿ ಪಿರ್ಯಾದಿ ಕಂಡ್ರತಂಡ ಜಗನ್ ಎಂಬವರ ಮಗ ಮಂಜು, ರವರು ಸುಮಾರು 8 ತಿಂಗಳಿನಿಂದ ವಿರಾಜ ಪೇಟೆ ನಗರದ ಪಂಜರುಪೇಟೆ ನಿವಾಸಿ ದರ್ಶನ್ ರವರ ಮನೆಯಲ್ಲಿ ವಾಸವಿದ್ದು, ದಿನಾಂಕ 18-04-16ರಂದು ಪಿರ್ಯಾದಿಯವರ ಮಗ ದರ್ಶನ್, ಕಂಡ್ರತಂಡ ಜಗನ್, ಚೇತನ್ ರವರುಗಳು ಅರಮೇರಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಮರನ್ನು ಕಡಿದು ಬೀಸಿಸುವ ಸಂದರ್ಭದಲ್ಲಿ ಮರದ ಕೊಂಬೆಯೊಂದು ಮಂಜುರವರ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಕಳವು:

    ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿ ವಾಸವಾಗಿರುವ ಎಂ. ಕಣ್ಣನ್ ಎಂಬವರು ದಿನಾಂಕ 16.04.2016 ರಂದು ಸ್ವಂತ ಕೆಲಸದ ನಿಮಿತ್ತ, ಶನಿವಾರಸಂತೆ ನಗರಕ್ಕೆ ತಮ್ಮ ಬಾಪ್ತು ಕೆಎ-55 ಹೆಚ್- 9936ರ ಪಲ್ಸರ್ ಬೈಕಿನಲ್ಲಿ ಬಂದಿದ್ದು ಸಮಯ 03.30 ಪಿ.ಎಂಗೆ ಶನಿವಾರಸಂತೆ ನಗರದ ಬಿ.ಎಸ್ ಎನ್ ಎಲ್ ಕಚೇರಿಯ ಹತ್ತಿರ ನಿಲ್ಲಿಸಿ ಹೋಗಿ ಕೆಲಸ ಮೂಗಿಸಿ ವಾಪಾಸ್ಸು ಸಮಯ 04.30 ಪಿ.ಎಂಗೆ ಬಂದು ನೋಡುವಾಗ್ಗೆ ನಿಲ್ಲಿಸಿದ ಪಲ್ಸರ್ ಬೈಕ್ ಕಂಡು ಬಾರದೇ ಇದ್ದು ಸದರಿ ಮೋಟಾರ್ ಸೈಕನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, April 18, 2016

ಧರ್ಮದ ಬಗ್ಗೆ ಪೇಸ್ ಬುಕ್ ನಲ್ಲಿ ಅವಹೇಳನ:

     ಹಿಂದೂ ಧರ್ಮದ ಬಗ್ಗೆ ವ್ಯಕ್ತಿಯೊಬ್ಬರು ತನ್ನ ಪೇಸ ಬುಕ್ ನಲ್ಲಿ ಅವಹೇಳನಕಾರಿಯಾಗಿ ಭಾವಚಿತ್ರಗಳನ್ನು ಮತ್ತು ಬರಹಗಳನ್ನು ಹಾಕಿರುವ ಘಟನೆ ವರದಿಯಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಹುಮಾಯುನ್ ಬೇಗ್ ಎಂಬವರ ಮಗ 23 ವರ್ಷದ ರಹೀಂ ಬೇಗ್ ಎಂಬ ವ್ಯಕ್ತಿಯು ತನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ಹಿಂದು ಧರ್ಮ, ಆರ್.ಎಸ್.ಎಸ್. ಹಾಗೂ ಹಿಂದು ಪರ ಸಂಘಟನೆಯ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಗಳು ಹಾಗೂ ಬಾವಚಿತ್ರಗಳನ್ನು ಒಳಗೊಂಡ ಪೋಸ್ಟ್ ಗಳನ್ನು ಹಾಕಿದ್ದು, ಇದರಿಂದ ಹಿಂದು ದಾರ್ಮಿಕ ಬಾವನೆಗಳಿಗೆ ದಕ್ಕೆ ಉಂಟು ಮಾಡಿ ಕೋಮು ಸಾಮರಸ್ಯವನ್ನು ಕದಡುವ ಹುನ್ನಾರದಿಂದ ಅಂತರ್ ಜಾಲದಲ್ಲಿ ಈ ರೀತಿಯ ಪೋಸ್ಟ್ ಗಳನ್ನು ಪ್ರಸರಿಸಿ ಅವಹೇಳನ ಮಾಡಿದ್ದು ಅಲ್ಲದೆ ದಾರ್ಮಿಕ ಬಾವನೆಗಳಿಗೆ ದಕ್ಕೆ ಉಂಟು ಮಾಡಿ ಕೋಮು ಸಾಮರಸ್ಯವನ್ನು ಕದಡುವ ಹುನ್ನಾರದಿಂದ ಅಂತರ್ ಜಾಲದಲ್ಲಿ ಪೋಸ್ಟ್ ಗಳನ್ನು ಹಾಕಿರುವುದಾಗಿ ನೀಡಿದ ದೂರನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ದಾಡುತ್ತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿ, ಗಾಯ:

      ದಿನಾಂಕ 16.04.2016 ರಂದು ಸಮಯ 09.30 ಎ.ಎಂ.ಗೆ ಪಿರ್ಯಾದಿ ಟಿ.ಎ. ಅಶ್ರಫ್ ರವರು ವಿರಾಜಪೇಟೆಯಿಂದ ಅಮ್ಮತ್ತಿಯ ಕಡೆಗೆ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ತಿಂಡಿ ತಿನ್ನಲು ಅಮತ್ತಿಯ ರಸ್ತೆಯಲ್ಲಿ ಅಯ್ಯಪ್ಪ ದೇವಸ್ಥಾನದ ರಸ್ತೆಯ ಬದಿಯಲ್ಲಿರುವ ಹಿಂದೂಸ್ತಾನ್ ಹೋಟೆಲ್ ಬಳಿ ಲಾರಿಯನ್ನು ನಿಲ್ಲಿಸಿ ತಿಂಡಿ ತಿಂದು ನಂತರ ಅಡ್ಡ ದಾಡುತ್ತಿರುವಾಗ್ಗೆ, ಅಮ್ಮತ್ತಿಯ ಕಡೆಯಿಂದ ಮೋಟಾರು ಸೈಕಲ್ ನಂಬರ್ ಕೆಎ-04-ಇಯು-8349 ರ ಚಾಲಕ ಮೋಟಾರು ಸೈಕಲನ್ನು ಅತೀವೇಗದಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ, ಪಿರ್ಯಾದಿಯವರ ಎಡಕಾಲಿನ ಮಂಡಿಯ ಕೆಳಗೆ ಡಿಕ್ಕಿಪಡಿಸಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಬಿದ್ದು ಪ್ರಜ್ಞೆಕಳೆದುಕೊಂಡ ಮಹಿಳೆ:

     ಮಡಿಕೇರಿಯ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನೀಲಾವತಿರವರು ದಿ: 16-4-2016 ರಂದು ಸಮಯ ಮದ್ಯಾಹ್ನ 1.15 ಗಂಟೆಗೆ ಕೆ.ಎಸ್.ಆರ್ ಟಿ ಸಿ ಬಸ್ಸು ಸಂ ಕೆಎ-19-ಎಪ್-2987 ರ ಬಸ್ಸಿನಲ್ಲಿ ಆನೆಕಾಡಿನಿಂದ ಮಡಿಕೇರಿಯ ಅರಣ್ಯ ಭವನದ ಬಳಿ ಬಂದು ಬಸ್ಸಿನಿಂದ ಇಳಿಯಲು ಎದ್ದು ಬರುವಾಗ ಆಯತಪ್ಪಿ ಕೆಳಗೆ ಬಿದ್ದು ಪೆಟ್ಟಾಗಿದ್ದು, ಪ್ರಜ್ಞಾಹೀನರಾಗಿದ್ದು, ಬಸ್ಸಿನ ಚಾಲಕ ಬಸ್ಸನ್ನು ನಿರ್ಲಕ್ಷ್ಯತೆ ಮತ್ತು ದುಡುಕುತನದಿಂದ ಚಾಲಿಸಿದ್ದರಿಂದ ಈ ಘಟನೆ ಸಂಭವಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, April 17, 2016

ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ರಾಮನವಮಿ ಆಚರಣೆ ಪ್ರಕರಣ ದಾಖಲು:
     ದಿನಾಂಕ 15.04.2016 ರಂದು ರಾಮನವಮಿ ಪ್ರಯುಕ್ತ ಸೋಮವಾರಪೇಟೆ ಪಟ್ಟಣದಲ್ಲಿ ಯಾವುದೇ ಸಂಘಟನೆಗಳು ಸಭಾ ಕಾರ್ಯಕ್ರಮ ನಡೆಸದಂತೆ ಹಾಗೂ ಸಿಡಿಮದ್ದುಗಳನ್ನು ಸಿಡಿಸದಂತೆ ಮಾನ್ಯ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆರವರ ನಿರ್ಬಂಧಿತ ಆದೇಶವಿದ್ದರೂ ಸಹ ದೇವಾಲಯದ ಅಧ್ಯಕ್ಷರು ಮತ್ತು ಇತರರು ಆದೇಶವನ್ನು ಉಲ್ಲಂಘಿಸಿ ದಿನಾಂಕ 15.04.2016 ರಂದು ಸಂಜೆ 06:30 ಗಂಟೆಗೆ ಸೋಮವಾರಪೇಟೆ ನಗರದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಆರೋಪಿಗಳು ರಾಮನವಮಿ ಪ್ರಯುಕ್ತ ಸಭಾ ಕಾರ್ಯಕ್ರಮ ಆಯೋಜಿಸಿಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಹಾಗೂ ಸಿಡಿಮದ್ದು ಸಿಡಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು:
     ವಿರಾಜಪೇಟೆ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಶ್ರೀಮತಿ ಶಿವಮ್ಮ ಎಂಬವರ ಮಗ ತಿಮ್ಮಯ್ಯ ಎಂಬ ವ್ಯಕ್ತಿ ದಿನಾಂಕ 16-4-2016 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಟಿ.ಶೆಟ್ಟಿಗೇರಿ ಗ್ರಾಮದ ಕೆ.ಕೆ.ಆರ್. ಹೊಳೆಯಲ್ಲಿ ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಕಾಂಕ್ರೀಟ್ ಪಿಲ್ಲರ್ ಬಿದ್ದು ವ್ಯಕ್ತಿ ಸಾವು:
ಮಡಿಕೇರಿ ನಗರದ ಮಹದೇವ ಪೇಟೆಯಲ್ಲಿ ದಿನಾಂಕ 16-4-2016 ರಂದು ಸಮಯ 16-30 ಗಂಟೆಯಲ್ಲಿ ಕುಮಾರ ಎಂಬ ವ್ಯಕ್ತಿ ರಸ್ತೆಯ ಬದಿಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಹಾರೆಯಿಂದ ಕಟ್ಟಡದ ಪಿಲ್ಲರ್ ನ್ನು ಮೀಟುತ್ತಿದ್ದಾಗ ಆಕಸ್ಮಿಕವಾಗಿ ಸದರಿ ಕುಮಾರನ ಮೇಲೆ ಬಿದ್ದು ತೀವ್ರವಾಗಿ ಗಾಯಕೊಂಡು ಸಾವನಪ್ಪಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Posted by Vartika Katiyar, IPS at 5.14 PM
Saturday, April 16, 2016

ವ್ಯಾಪಾರದಲ್ಲಿ ನಷ್ಟ, ಮಹಿಳೆ ಆತ್ಮಹತ್ಯೆ:

    ಕರಿಮೆಣಸು ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕು ಯಡವಾರೆ ಗ್ರಾಮದ ನಿವಾಸಿ ಪ್ರೇಮ ಎಂಬವರು ಕರಿಮೆಣಸು ವ್ಯಾಪಾರಮಾಡುತ್ತಿದ್ದು, ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಬೇಸತ್ತು ಸದರಿ ಪ್ರೇಮರವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಕಳ್ಳಬಟ್ಟಿ ತಯಾರು ವ್ಯಕ್ತಿ ಮೇಲೆ ಪ್ರಕರಣ ದಾಖಲು:

ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಡಿಕೇರಿ ತಾಲೋಕು ಪಿ.ಪೆರಾಜೆ ಗ್ರಾಮದ ನಿವಾಸಿ ಮಾಧವ ನಾಯ್ಕ ಎಂಬವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಸುಮಾರು 15 ಲೀ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟಕ್ಕೆ ಸಂಗ್ರಹಿಸಿಟ್ಟಿದನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪತ್ತೆಹಚ್ಚಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

    ಸ್ನಾನ ಮಾಡಲು ಹೋದವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ. ಕೇರಳದ ಕ್ಯಾಲಿಕಟ್ ನಿವಾಸಿ ಮೋಹನ್ ದಾಸ್ ಎಂಬ ವ್ಯಕ್ತಿ ದಿನಾಂಕ 15-4-2016 ರಂದು ಪೆರುಂಬಾಡಿಯಲ್ಲಿರುವ ಕೆರೆಯಲ್ಲಿ ಸ್ನಾನ ಮಾಡುವ ಸಲುವಾಗಿ ಕೆರೆಗೆ ಇಳಿದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತರಿಂದ ಮನೆಗೆ ಅಕ್ರಮ ಪ್ರವೇಶ, ವ್ಯಕ್ತಿ ಮೇಲೆ ಹಲ್ಲೆ:

    ಮಡಿಕೇರಿ ನಗರದ ಸುದರ್ಶನ ಬಡಾವಣೆ ನಿವಾಸಿ ಪಿರ್ಯಾದಿ ರಮೇಶ್‌ ರವರು ಜಿಲ್ಲಾ ವಿಮಾ ಅಧಿಕಾರಿಯಾಗಿದ್ದು, ಅವರ ಪತ್ನಿ ಕುಂಞಮ್ಮ ರವರು ಮಡಿಕೇರಿಯ ತಹಶೀಲ್ದಾರ್‌ ಆಗಿ ಕರ್ತವ್ಯ ಮಾಡುತ್ತಿದ್ದು ದಿನಾಂಕ 15-04-2016 ರಂದು ಪಿರ್ಯಾದಿಯವರು ಮನೆಯಲ್ಲಿದ್ದಾಗ ಮದ್ಯಾಹ್ನ 12.00 ಗಂಟೆಗೆ ಮನೆಯ ಕಾಲಿಂಗ್‌ ಬೆಲ್‌ ಶಬ್ದ ವಾದಾಗ ಮನೆಯ ಮುಂಬಾಗಿಲನ್ನು ತೆರೆದ ಸಮಯದಲ್ಲಿ ಯಾರೋ ಇಬ್ಬರು ದುಷ್ಕರ್ಮಿಗಳು ಪಿರ್ಯಾದಿಯವರನ್ನು ತಳ್ಳಾಡಿಕೊಂಡು ಮನೆಯ ಮುಂಭಾಗದ ಕೋಣೆಗೆ ಹೋಗಿ ಕೈ ಮುಷ್ಟಿಯಿಂದ ತಲೆಯ ಭಾಗಕ್ಕೆ ಹಾಗು ಮುಖದ ಭಾಗಕ್ಕೆ ಗುದ್ದಿ, ಪಿರ್ಯಾದಿಯವರ ಮುಖಕ್ಕೆ ಪ್ಲಾಸ್ಟರ್‌ನಿಂದ ಸುತ್ತಿದಲ್ಲದೆ ಎರೆಡು ಕೈಗಳನ್ನು ಬೆನ್ನಿನ ಹಿಂಬಾಗಕ್ಕೆ ತಂದು ಪ್ಲಾಸ್ಟರ್‌ನಿಂದ ಸುತ್ತಿ ಕಟ್ಟಿ ಹಾಕಿ ತೆರಳಿದ್ದು, ಫಿರ್ಯಾದಿಯವರ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Sunday, April 10, 2016

 ಕೆಲಸ ಬಿಟ್ಟು ಹೋದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

      ವಿರಾಜಪೇಟೆ ತಾಲೂಕು ನಡಿಕೇರಿ ಗ್ರಾಮದ ನಿವಾಸಿ ಫಿರ್ಯಾಧಿ ಪಣಿಎರವರ ರಾಜು ಎಂಬವರು ಟಿ ಶಟ್ಟಗೇರಿ ಗ್ರಾಮದ ಮಾಣೀರ ವಿಜಯ ಹಾಗು ಮಾಣೀರ ಸೋಮಣ್ಣ ಎಂಬವರ ಮನೆಯಲ್ಲಿ 3 ತಿಂಗಳಿನಿಂದ ಕೊಲಿ ಕೆಲಸ ಮಾಡುತ್ತಿದ್ದು ಅಲ್ಲಿರಲು ಫಿರ್ಯಾದಿಗೆ ಇಷ್ಟ ಇಲ್ಲದಿದ್ದರಿಂದ, ದಿನಾಂಕ 08-04-2016 ರಂದು ರಾತ್ರಿ ಆರೋಫಿಗಳಾದ ಮಾಣೀರ ವಿಜಯ ಹಾಗು ಮಾಣೀರ ಸೋಮಣ್ಣ ಎಂಬವರಿಗೆ ತಿಳಿಸಿ ಆಟೋ ತಂದು ಫೀರ್ಯಾಧಿಯ ಸಾಮಾನುಗಳನ್ನು ಅದರಲ್ಲಿ ತುಂಬಿಕೊಂಡು ಮೊದಲು ಕೆಲಸ ಮಾಡುತ್ತಿದ್ದ ನಡಿಕೇರಿ ಗ್ರಾಮದ ಕಳ್ಳಿಚಂಡ ಗೋಕುಲರವರ ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಟಿ ಶಟ್ಟಗೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕಾರಿನಲ್ಲಿ ಬಂದು ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಮನೆಯಿಂದ ಹೋದರೆ ಕೊಲೆ ಮಾಡುವುದಾಗಿ ಫಿರ್ಯಾಧಿಗೆ ಕೊಲೆ ಬೆದರಿಕೆ ಹಾಕಿ ಪೋನ್‌ ಮಾಡದಂತೆ ಮೊಬೈಲ್‌ ಕಿತ್ತುಕೊಂಡು 1 ನೇ ಆರೋಪಿ ಕಭ್ಬಿಣದ ರಾಡಿನಿಂದಲೂ 2 ನೇ ಆರೋಪಿ ದೊಣ್ಣೆಯಿಂದಲೂ ಹಲ್ಲೆ ನಡೆಸಿ ಕೈಕಾಲುಗಳನ್ನು ಕಟ್ಟಿ ಕಾರಿನ ಡಿಕ್ಕಿಗೆ ಹಾಕಿಕೊಂಡು ಅವರ ಮನೆಗೆ ತಂದು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ಅಮಲಿನಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ:

     ಗಂಡ-ಹೆಂಡತಿಬಳಿಬ್ಬರು ಮದ್ಯಸೇವಿಸಿ ಜಗಳವಾಡಿ, ಹೆಂಡತಿ ಮನೆ ಬಿಟ್ಟು ಹೋದ ವಿಚಾರದಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರೀಮಂಗಲ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದಲ್ಲಿ ವಾಸವಾಗಿರುವ ಪಣಿಎರವರ ಕಾವಲ ಮತ್ತು ಆತನ ಪತ್ನಿ ಕಾವ್ಯ ಮದ್ಯವನ್ನು ಸೇವಿಸಿ ಇಬ್ಬರೂ ಪರಸ್ಪರ ಜಗಳವಾಡಿಕೊಂಡಿದ್ದು, ತರುವಾಯ ಪತ್ನಿ ಬೇರೆಕಡೆ ಕೆಲಸಕ್ಕೆ ಹೋಗುತ್ತೇನೆಂದು ತನ್ನ ಮಗುವಿನೊಂದಿಗೆ ಹೋಗಿದ್ದು, ಈ ವಿಚಾರದಲ್ಲಿದ್ದ ಪತಿ ಕುಡಿದ ಅಮಲಿನಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 9, 2016

ಹಣದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:

      ಸೋಮವಾರಪೇಟೆ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಸುರೇಶ ಎಂಬವು ದಿನಾಂಕ 8-4-2016 ರಂದು ಸಮಯ 08.30ಪಿ.ಎಂಗೆ ತ್ಯಾಗರಾಜ್ ಕಾಲೋನಿಯ ಸ್ಕೂಲ್ ಮುಂಭಾಗದ ಬೋರ್ ವೆಲ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿಯಾದ ಸಣ್ಣಯ್ಯನು ಅರ್ಜೆಂಟ್ ಒಂದು ಫೊನ್ ಮಾಡಬೇಕು ಎಂದು ಫೋನ್ ಕೊಡು ಎಂದು ಪಿರ್ಯಾದಿಯವರಿಂದ ಫೋನ್ ಪಡೆದುಕೊಂಡು ನೀನು ಕೊಡಬೇಕಾದ ರೂ 100/- ಹಣವನ್ನು ಕೊಡು ನಿನ್ನನ್ನು ಬಿಡುವುದಿಲ್ಲವೆಂದು ಹೇಳಿ ರಸ್ತೆಯಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ತೆಗೆದು ತಲೆಯ ಭಾಗಕ್ಕೆ ಹೋಡೆದು ನೋವುಂಟು ಪಡಿಸಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ನಾಲ್ವರಿಂದ ಹಲ್ಲೆ:

     ಮಡಿಕೇರಿ ತಾಲೂಕು ಬೆಟ್ಟಗೇರಿ ಗ್ರಾಮದ ನಿವಾಸಿ ಫಿರ್ಯಾದಿ ಹೆಚ್.ಟಿ. ಉದಯ ಎಂಬವರು ದಿನಾಂಕ 07.04.2016 ರಂದು ಸಮಯ 06:30 ಪಿ.ಎಂ.ಗೆ ಬೆಟ್ಟಗೇರಿ ಗ್ರಾಮದ ಅಭುದ್ ಖಾಧರ್ ರವರ ಅಂಗಡಿ ಹತ್ತಿರ ನಿಂತುಕೊಂಡಿರುವಾಗ್ಗೆ ಅಲ್ಲಿಗೆ ಆರೋಪಿ ಫಾರೂಕ್ ಎಂಬ ವ್ಯಕ್ತಿ ಬಂದು ಪಿರ್ಯಾದಿಯನ್ನು ಕುರಿತು ನೀನು ಬಾಡಿಗೆಗೆ ಕರೆದರೆ ಬರಲಿಲ್ಲ ನೀನು ಬರದೆ ಹೋದರೆ ನಿನ್ನ ಅಪ್ಪನಂತವರು ಬರುತ್ತಾರೆ ಎಂದು ಜಗಳ ಮಾಡಿದ್ದು , ಅದೇ ವೇಳೆಗೆ ಅಲ್ಲಿಗೆ ಬಂದ ಹಮೀದ್, ಬಷೀರ್, ಹಸಿಭ್ ರವರು ಬಂದು ಫಾರೂಕ್ ಜೊತೆ ಸೇರಿಕೊಂಡು ಏಕಾ ಏಕಿ ಪಿರ್ಯಾದಿಯನ್ನು ದಾರಿ ತಡೆದು ಕೈಯಿಂದ ಹೊಡೆದು ಕೆಳಕ್ಕೆ ಬೀಳಿಸಿ ಕಾಲಿನಿಂದ ಎದೆಗೆ ಹಾಗು ದೇಹದ ಇತರ ಭಾಗಗಳಿಗೆ ಒದ್ದು ನೋವನ್ನುಂಟುಮಾಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ದಾರಿ ತಡೆದು ಹಲ್ಲೆ, ಕೊಲೆ ಬೆದರಿಕೆ:

     ದಿನಾಂಕ 07.04.2016 ರಂದು ಸಮಯ 07:30 ಪಿ.ಎಂ.ಗೆ ಮಡಿಕೇರಿ ತಾಲೂಕು ಬೆಟ್ಟಗೇರಿ ಗ್ರಾಮದ ನಿವಾಸಿ ಬಷೀರ್ ಎಂಬವರ ಕೋಳಿ ಅಂಗಡಿಗೆ ಆರೋಪಿ ಹೆಚ್.ಟಿ.ಉದಯ್‌ ಬಂದು ಅಂಗಡಿಯಲ್ಲಿ ಕೆಲಸ ಮಾಡುವ ಫಾರೂಕ್‌ನ ಬಳಿ ಕೋಳಿ ಮಾಂಸ ಸಾಲ ಕೇಳಿದ್ದು ಸಾಲ ಕೊಡಲು ಸಾಧ್ಯವಿಲ್ಲ ಎಂದು ಆತ ಹೇಳಿದ್ದಕ್ಕೆ ಅವನೊಂದಿಗೆ ಜಗಳ ತೆಗೆದಿದ್ದು ಫಾರೂಕನು ಈ ವಿಚಾರವನ್ನು ಪಿರ್ಯಾದಿ ಬಷೀರ್ ರವರಿಗೆ ತಿಳಿಸಲು ಹೋಗುತ್ತಿದ್ದಾಗ ಆರೋಪಿ ಉದಯನು ಫಾರೂಕನನ್ನು ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದು ಈ ವಿಚಾರವನ್ನು ಸಾಹುಕಾರ ಮತ್ತು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. .


Friday, April 8, 2016

ಹಸಿ ಕರಿಮೆಣಸು ಕಳ್ಳತನ:

     ಸೋಮಾರಪೇಟೆ ತಾಲೂಕು ದೊಡ್ಡಮಳ್ತೆ ಗ್ರಾಮದ ನಿವಾಸಿ ರಾಖಿ ಎಂಬವರಿಗೆ ಸೇರಿದ ತೋಟದಿಂದ ಸುಮಾರು 15 ದಿನಗಳಿಂದ ಮೆಣಸಿನ ಬಳ್ಳಿಯಲ್ಲಿ ಸ್ವಲ್ಪ ಸ್ವಲ್ಪ ಹಸಿ ಕರಿ ಮೆಣಸನ್ನು ಕದ್ದು ಕುಯ್ಯುತಿದ್ದು ದಿನಾಂಕ 6-4-16 ರಂದು ಪಿರ್ಯಾದಿ ರಾಖಿರವರು ತೋಟಕ್ಕೆ ಹೋದಾಗ ಅರೋಪಿ ಗಣೇಶ್ ಎಂಬ ವ್ಯಕ್ತಿ ಕರಿ ಮೆಣಸನ್ನು ಕದ್ದು ಕುಯ್ಯುತ್ತಿದ್ದು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಕಳವು ಮಾಲಿನ ಮೌಲ್ಯ 20 ಸಾವಿರ ಆಗುತ್ತದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾಗುವುದಾಗಿ ವಂಚಿಸಿ ಅತ್ಯಾಚಾರ:

    ಮಡಿಕೇರಿ ನಗರ ಮಲ್ಲಿಕಾರ್ಜುನ ನಗರ ನಿವಾಸಿ ಪಿರ್ಯಾದಿ ರಾಧಮಣಿರವರು 2003-04 ರಲ್ಲಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಆರೋಪಿ ವಿರೂಪಾಕ್ಷ ರೈ ಎಂಬವರು ಸಹ ಸದರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಆರೋಪಿಯು ಪಿರ್ಯಾದಿಯವರನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ, ಪರಿಶಿಷ್ಟ ಜಾತಿ ಎಂದು ತಿಳಿದೂ ಸಹ ದೈಹಿಕ ಸಂಪರ್ಕ ಮಾಡಿ ಮದುವೆಯಾಗದೆ ಮೋಸ ಮಾಡಿರುತ್ತಾನೆಂದು ಈ ಮೊದಲು ನೀಡಿದ ದೂರಿಗೆ ಮಡಿಕೇರಿ ನಗರ ಠಾಣೆಯಲ್ಲಿ ಮೊ ಸಂ 99/2013 ರಂತೆ ಪ್ರಕರಣ ದಾಖಲುಗೊಂಡು ಸಿ ಸಿ ಸಂ 26/2014 ರಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಯು ಪಿರ್ಯಾದಿಯವರನ್ನು ಕೇಸು ವಾಪಾಸು ಪಡೆದುಕೊಂಡರೆ ಮದುವೆಯಾಗುವುದಾಗಿ ನಂಬಿಸಿ, ಲೋಕ ಅದಾಲತ್ ನಲ್ಲಿ ದಿ: 16-8-2014 ರಂದು ರಾಜಿ ತೀರ್ಮಾನವಾಗಿರುತ್ತದೆ. ನಂತರ ದಿ: 03-01-2016 ರಂದು ಪಿರ್ಯಾದಿಯವರು ತನ್ನ ಸ್ನೇಹಿತೆ ಕಾವ್ಯಳೊಂದಿಗೆ ಮಡಿಕೇರಿಯಲ್ಲಿದ್ದು ಆರೋಪಿಯನ್ನು ಈ ಬಗ್ಗೆ ಕೇಳಿದಾಗ ಆರೋಪಿಯು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಪ್ರವೇಶ ಹಲ್ಲೆ:

     ದಿನಾಂಕ 06.04.16 ರಂದು ಸಮಯ ರಾತ್ರಿ 8:30 ಪಿ.ಎಂ ಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಜಂಬೂರು ಗ್ರಾಮದ ನಿವಾಸಿ ಪಿರ್ಯಾದಿ ಜೂರಾ ಎಸ್. ಮತ್ತು ಅವರ ಅಣ್ಣ ಖಾಲಿದ್‌ರವರು ಮನೆಯಲ್ಲಿರುವಾಗ್ಗೆ ಪ್ರತಾಪ್‌ರವರು ಮನೆಯ ಒಳಗಡೆ ಹೋಗಿ ಪಿರ್ಯಾದಿಯವರನ್ನು ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಹೇಳಿ ಪಿರ್ಯಾದಿಯವರನ್ನು ಬೈದು, ಕುತ್ತಿಗೆಯನ್ನು ಹಿಡಿದು ಎಳೆದಾಡಿ ಕೈಯಲ್ಲಿದ್ದ ರಾಡಿನಿಂದ ಬಲ ಕೈ, ಎಡ ಕೈ ಮತ್ತು ಬಲಭಾಗದ ತಲೆಗೆ, ಹಣೆಗೆ ಎರಡು ಕಾಲುಗಳ ಮಂಡಿಗೆ ಹೊಡೆದು ಗಾಯ ಪಡಿಸಿದ್ದು, ಪಿರ್ಯಾದಿಯ ಅಣ್ಣ ಖಾಲಿದ್‌ರವರಿಗೆ ಮರದ ಕಾವು ಇರುವ ಗುದ್ದಲಿಯಿಂದ ಎಡ ಪಕ್ಕೆಲುಬಿಗೆ ಭಾಗಕ್ಕೆ ಹೊಡೆದು ಗಾಯಪಡಿಸಿದ್ದು ವಿಜು ಎಂಬವರು ಸಹ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, April 6, 2016

ವಸತಿ ಗೃಹದಲ್ಲಿ ವ್ಯಕ್ತಿ ಯ ಆತ್ಮಹತ್ಯೆ:

      ಕುಶಾಲನಗರ ಠಾಣಾ ಸರಹದ್ದಿನ ಕುಶಾಲನಗರ ನಗರದ ಪರಂಪರ ಲಾಡ್ಜ್ನಲ್ಲಿ ದಿನಾಂಕ 4-4-2016 ರಂದು ಬೆಂಗಳೂರು ಮೂಲದ ವ್ಯಕ್ತಿ 43 ವರ್ಷ ಪ್ರಾಯದ ಗಣೇಶ ಎಂಬವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ವಿಸಾ ನೀಡಿ ವ್ಯಕ್ತಿಗೆ ವಂಚನೆ:


     ದಿನಾಂಕ 03-05-2015 ರಿಂದ 11-05-2015 ರ ಮಧ್ಯದ ಅವಧಿಯಲ್ಲಿ ಆರೋಪಿತ ಪ್ರಜೀವ್ ಪ್ರಕಾಶ್, ಕಡಪುರಂ, ಕ್ರೆಸೆಂಟ್ ಶಾಲೆ ಹತ್ತಿರ, ಅಜನೂರ್ಮ ಕಾಂಞಂಕಾಡ್, ಎಂಬವರು ನಾಪೋಕ್ಲು ನಿವಾಸಿ ಫಿರ್ಯಾದಿ ಶ್ರೀಮತಿ ಡಿ.ಪಿ. ಶಾಂತಿ ಎಂಬವರ ಮಗನಿಗೆ ವಿದೇಶದಲ್ಲಿ ನೌಕರಿ ಕೊಡಿಸುವ ಸಲುವಾಗಿ ಫಿರ್ಯಾದಿಯವರಿಂದ ಹಣವನ್ನು ಪಡೆದುಕೊಂಡು ವೀಸಾವನ್ನು ಕೊಡಿಸಿ ಫಿರ್ಯಾದಿ ಮಗನನ್ನು ವಿದೇಶದಲ್ಲಿ ಸ್ಟೋರ್ ಕೀಪರ್ ಕೆಲಸಕ್ಕಾಗಿ ಕಳುಹಿಸಿ ಕೊಟ್ಟಿದ್ದು, ವಿದೇಶಕ್ಕೆ ಹೋಗುವ ಸಲುವಾಗಿ ಫಿರ್ಯಾದಿಯ ಮಗ ಬಾಂಬೆಗೆ ಹೋದಾಗ ಆರೋಪಿಯು ಕಳುಹಿಕೊಟ್ಟಿರುವ ವೀಸಾವು ನಕಲಿ ಎಂದು ತಿಳಿದು ಬಂದ ಮೇರೆಗೆ ಫಿರ್ಯಾದಿಯ ಮಗ ವಾಪಾಸು ತನ್ನ ಊರಿಗೆ ಬಂದಿದ್ದು, ಆರೋಪಿ ನಕಲಿ ವಿಸಾವನ್ನು ನೀಡುವ ಮೂಲಕ ಫಿರ್ಯಾದಿಯ ಮಗನನ್ನು ವಂಚಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾ ಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಂಡಿಯ ಹಣ ಕಳವು ಮಾಡಿ ವಂಚನೆ:

     ದಿನಾಂಕ 26-02-2016 ಮತ್ತು 29-02-2016 ರ ವರೆಗೆ ನಡೆದ ಎಮ್ಮೆಮಾಡು ಉರೂಸ್ ಜಾತ್ರೆಯ ಸಮಯದಲ್ಲಿ ಭಂಡಾರದ ಹುಂಡಿಗೆ ಭಕ್ತಾದಿಗಳು ಹಾಕಿರುವ ರೂ.20,43,000/- ಹಣವನ್ನು ಆರೋಪಿ ಎಮ್ಮೆಮಾಡು ಗ್ರಾಮದ ನಿವಾಸಿ ಹ್ಯಾರೀಸ್ ಎಂಬವರು ಯಾವುದೇ ಲೆಕ್ಕವನ್ನು ಬರೆಯದೆ ತೆಗೆದುಕೊಂಡು ಹೋಗಿರುವುದಲ್ಲದೆ ದಿನಾಂಕ 01-03-2016 ರಂದು ಬೆಳಗ್ಗೆ 6-30 ಆರೋಪಿಯು ಇತರರೊಂದಿಗೆ ಎಮ್ಮೆಮಾಡು ದರ್ಗಾಕ್ಕೆ ಬಂದು ಹುಂಡಿಯಲ್ಲಿರುವ ಹಣವನ್ನು ಯಾವುದೇ ಲೆಕ್ಕವನ್ನು ಬರೆಯದೆ ಕದ್ದುಕೊಂಡು ಹೋಗಿ ಕಮಿಟಿಗೆ ಮೋಸ ಮತ್ತು ವಂಚನೆಯನ್ನು ಮಾಡಿರುವುದಾಗಿ ಮಾನ್ಯ ಮಡಿಕೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಂಎಫ್‌‌ಸಿ ನ್ಯಾಯಾಲಯದಲ್ಲಿ ದಾಖಲಿಸಿದ ಪಿಸಿ ನಂ. 83/16 ರ ಖಾಸಗಿ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯ ದಾರಿ ತಡೆದು ಹಲ್ಲೆ:

      ದಿನಾಂಕ 4/4/2016 ರಂದು ಸಮಯ ಸಂಜೆ 5:00 ಗಂಟೆಗೆ ಗೋಣಿಕೊಪ್ಪ ಠಾಣಾ ಸರಹದ್ದಿನ ಸೀಗೆತೋಡು ಗ್ರಾಮದ ನಿವಾಸಿ ವಿ.ಈ. ಸುಮಿತ ಎಂಬವರು ಶಾಲೆ ಮುಗಿಸಿ ತನ್ನ ತಾಯಿ ಮನೆಗೆ ಹೋಗುತ್ತಿರುವಾಗ್ಗೆ ಫಿರ್ಯಾದಿಯ ಗಂಡ ಆರೋಪಿ ವಿ.ಟಿ. ಸುರೇಶ ತನ್ನ ಸ್ವಂತ ವಾಹನವಾದ ಹೀರೋ ಹೊಂಡ ಬೈಕಿನಲ್ಲಿ ಬಂದು ಚಡ್ ಖಾನ್ ಬಜಾರ್ ಹತ್ತಿರ ಇರುವ ಮೆಡಿಕಲ್ಸ್ ಎದುರು ಫಿರ್ಯಾದಿಯ ದಾರಿ ತಡೆದು ವಿನಾಃ ಕಾರಣ ಜಗಳ ತೆಗೆದು ತಾಳಿ ಕೊಡು ಅವ್ಯಾಚ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಕೂಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೌಟುಂಬಿಕ ಜಗಳ ವ್ಯಕ್ತಿಯ ಆತ್ಮಹತ್ಯೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಹೊದೂರು ಗ್ರಾಮದ ನಿವಾಸಿ 39 ವರ್ಷ ಪ್ರಾಯದ ಸುರೇಶ ಎಂಬವರು ದಿನಾಂಕ 5-4-2016 ರಂದು ರಾತ್ರಿ ತನ್ನ ಪತ್ನಿ ಮತ್ತು ಮಗಳೊಂದಿಗೆ ಜಗಳ ನಡೆದ ವಿಚಾರದಲ್ಲಿ ಬೇಸತ್ತು, ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, April 5, 2016

ಚೀಟಿ ಹಣದ ವಿಚಾರದಲ್ಲಿ ಮಹಿಳೆ ಮೇಲೆ ಹಲ್ಲೆ:

ದಿನಾಂಕ 01.04.16 ರಂದು ಬೆಳಿಗ್ಗೆ 7:00 ಗಂಟೆಗೆ ಸೋಮವಾರಪೇಟೆ ತಾಲೂಕು ಹಾನಗಲ್ಲು ಗ್ರಾಮದ ನಿವಾಸಿ ಪಿರ್ಯಾದಿ ವನಜಾಕ್ಷಿ ಎಂಬವರು ಅಂಗನವಾಡಿಯಲ್ಲಿ ಸಂಘದ ಮಿಟಿಂಗ್ ಅನ್ನು ಮುಗಿಸಿಕೊಂಡು ದೇವಸ್ಥಾನದ ಹತ್ತಿರ ಹೋಗುತ್ತಿರುವಾಗ್ಗೆ ಚೀಟಿಯ ಹಣದ ವಿಚಾರದಲ್ಲಿ ರಂಗಮಣಿ, ಹರೀಶ, ನವೀನ ಮತ್ತು ರವಿಯವರು ಪಿರ್ಯಾದಿಯವರಿಗೆ ಕೈಯಿಂದ ಹೊಡೆದು ನೋವು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

 ವಿರಾಜಪೇಟೆ ನಗರದ ಅರಸು ನಗರದ ನವಾಸಿ ಆರ್. ಮುನೇಶ ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 4-4-2016 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದಾಮಿನಿಂದ ಕರಿಮೆಣಸು ಕಳವು:

 ಸೋಮವಾರಪೇಟೆ ತಾಲೂಕು ನಾಕೂರು ಶಿರಂಗಾಲ ಗ್ರಾಮದ ನಿವಾಸಿ ಎನ್.ಬಿ. ಗಣೇಶ ಎಂಬವರಿಗೆ ಸೇರಿದ ನಾಕೂರು ಶಿರಂಗಾಲ ಗ್ರಾಮದಲ್ಲಿರುವ ಕಾಫಿ ತೋಟದ ಗೋಡೌನ್ ನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸನ್ನು ಯಾರೀ ಕಳ್ಳರು ದಿನಾಂಕ 03.04.2016ರಂದು ರಾತ್ರಿ ಗೋಡೌನಿನ ಹೆಂಚುಗಳನ್ನು ತೆಗೆದು ಒಳಗೆ ಪ್ರವೇಶಿಸಿ 400 ಚೀಲದ ಪೈಕಿ 12 ಚೀಲದಷ್ಟು ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ:

ದಿನಾಂಕ 2-3-2016 ರಂದು 07-00 ಪಿ.ಎಂಗೆ ವಿರಾಜಪೇಟೆ ತಾಲೂಕು ಕಾರ್ಮಾಡು ಗ್ರಾಮದ ನಿವಾಸಿ ರವಿ ಎಂಬವರ ಅಕ್ಕನ ಮಗ ವಿನೋದ ಎಂಬ ವ್ಯಕ್ತಿ ಕೆಎ 01 ಎಇ 9278 ರ ವಾಹನದಲ್ಲಿ ಬೆಂಗಳೂರಿನಿಂದ ಜನರನ್ನು ಕುಶಾಲನಗರ ಕೃಷಿ ಮೇಳಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳವು ಪ್ರಕರಣ ದಾಖಲು:

ಕುಟ್ಟ ಠಾಣಾ ಸರಹದ್ದಿನ ಪೂಜೆಕಲ್ಲು ನಿವಾಸಿ ಪಿ. ಶಂಕರ ಎಂಬವರು ದಿನಾಂಕ 3-4-2016 ರ ರಾತ್ರಿ ವೇಳೆಯಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವರ ಮನೆಗೆ ಯಾರರೋ ಕಳ್ಳರು ನುಗ್ಗಿ ಪ್ಯಾಂಟಿನಲ್ಲಿಟ್ಟದ್ದ 35,000 ರೂ. ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, April 4, 2016

ಆಸ್ತಿ ವಿಚಾರದಲ್ಲಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನ:
     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆ-ತಾಯಿಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ನಾಪೋಕ್ಲು ಠಾಣಾ ಸರಹದ್ದಿನ ಚೇಲವಾರ ಗ್ರಾಮದ ನಿವಾಸಿ ಸುಂದರ ಎಂಬವರು ದಿನಾಂಕ 2-4-2016 ರಂದು ರಾತ್ರಿ ತನಗೆ ನೀಡಿದ ಆಸ್ತಿಯಲ್ಲಿ ಮೋಸಮಾಡಲಾಗಿದೆ ಎಂದು ಹೇಳಿ ತನ್ನ ತಂದೆ ಮುತ್ತಮ್ಮಯ್ಯ ಹಾಗು ಅವರ ಪತ್ನಿ ಕಾವೇರಮ್ಮನವರ ಮೇಲೆ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿಸಿದ್ದು, ಅಲ್ಲದೆ ಕೆಲಸದಾಳು ರತ್ನಮ್ಮ ರವರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Vartika Katiyar, IPS

Sunday, April 3, 2016


ಪಾದಚಾರಿಗೆ ಸ್ಕೂಟರ್ ಡಿಕ್ಕಿ, ಗಾಯ:

     ವಿರಾಜಪೇಟೆ ತಾಲೂಕು, ಕದನೂರು ಗ್ರಾಮದ ನಿವಾಸಿ ಎ.ಎನ್. ಸೋಮಯ್ಯನವರು ದಿನಾಂಕ 2-4-2016 ರಂದು ಸಮಯ 1-30 ಪಿ.ಎಂ. ಗೆ ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿ ಬಳಿ ರಸ್ತೆ ದಾಟುವಾಗ ಕೆಎ-12-ಹೆಚ್-9289ರ ಹೋಂಡಾ ಆಕ್ಟೀವಾ ಸ್ಕೂಟರ್ ಚಾಲಕ ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎ.ಎನ್. ಸೋಮಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ನಡೆದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು

     ದಿನಾಂಕ 01/04/2016 ರಂದು ಸಮಯ 15.20 ಗಂಟೆಗೆ ಹಾಕತ್ತೂರು ಗ್ರಾಮದ ನಿವಾಸಿ ಪಿರ್ಯಾದಿ ಬಿ.ಬಿ. ಹರೀಶ್ ರೈ ರವರ ವಾಹನ ಮತ್ತು ಆರೋಪಿ ರಶೀದ್ ರವರ ವಾಹನದ ನಡುವೆ ಹಾಕತ್ತೂರು ಬಳಿಯ ಬಕ್ಕ ಎಂಬಲ್ಲಿ ಸಣ್ಣ ಅಪಘಾತವಾಗಿದ್ದು ಈ ಸಂಬಂಧ ಉಭಯ ಕಡೆಯವರು ರಾಜೀ ಮಾಡಿಕೊಂಡು ಜೀಪು ಚಾಲಕ ರಶೀದ್ ಎಂಬವವರು ಜೀಪಿನ ಮಾಲೀಕ ಜೋಸೆಫ್ ರವರು ಪಿರ್ಯಾದಿಯವರಿಗೆ ಜಖಂ ಆಗಿರುವ ವ್ಯಾನನ್ನು ಸರಿಪಡಿಸಿಕೊಡುತ್ತೇನೆಂದು ಹೇಳಿ ಮಾರುತಿ ವ್ಯಾನಿನಲ್ಲಿ ಬರುತ್ತಿರುವಾಗ ನೆಲ್ಲಿಹುದಿಕೇರಿ ಸೇತುವೆ ದಾಟಿ ಸ್ವಲ್ಪ ಮುಂದೆ ವರ್ಕ್ಸ್ ಶಾಪ್ ಬಳಿ ಫಿರ್ಯಾದಿಯವರ ಕಾರನ್ನು ತಡೆದು ವರ್ಕ್ಸ್ ಶಾಪ್ ಬಳಿ ಹಾಕುವಂತೆ ತಿಳಿಸಿ ವರ್ಕ್ಸ್ ಶಾಪ್ ಬಳಿ ನಿಂತಿರುವಾಗ ಒಬ್ಬ ವ್ಯಕ್ತಿ ಕಾರಿನ ಬಾಗಿಲನ್ನು ತೆಗೆದು ಪಿರ್ಯಾದಿಗೆ ಕೈಯಿಂದ ಹೊಡೆದು ಜೊತೆಯಲ್ಲಿದ್ದ ಷರೀಪ್, ಸೈನುದ್ದೀನ್ @ ಸೈಯದ್ ಆಲಿ ಎಂಬುವವರು ಪಿರ್ಯಾದಿಯ ಹೊಟ್ಟೆಯ ಭಾಗಕ್ಕೆ ಒದ್ದು ಕೈಯಿಂದ ಮುಖಕ್ಕೆ ಬೆನ್ನಿಗೆ ಗುದ್ದಿ ಟೀ ಶರ್ಟ್ ನ್ನು ಹರಿದು ಹಾಕಿ ಆಗ ಅಲ್ಲಿಯೇ ಇದ್ದ ರಶೀದ್ ಎಂಬುವವರು ಪಿರ್ಯಾದಿಗೆ ದೊಣ್ಣೆಯಿಂದ ತಲೆಯ ಭಾಗಕ್ಕೆ ಹೊಡೆದು ಆತನ ಎಡಗೈಯನ್ನು ತಿರುಚಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, April 2, 2016

ವಿಪರೀತ ಮದ್ಯಪಾನದಿಂದ ನಿತ್ರಾಣಗೊಂಡು ವ್ಯಕ್ತಿ ಸಾವು:

    ವಿರಾಜಪೇಟೆ ತಾಲೋಕು ಕಾನೂರು ಗ್ರಾಮದ ನಿವಾಸಿ ಶ್ರೀಮತಿ ಪಣಿಎರವರ ಬೋಜಿ ಎಂಬವರ ಪತಿ ಬೊಕ್ಕರವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ದಿ:31.3.16 ರಂದು ವಿಪರೀತ ಮದ್ಯಪಾನ ನಿತ್ರಾಣಗೊಂಡಿದ್ದವರನ್ನು ಚಿಕಿತ್ಸೆಗಾಗಿ ಬಾಳೆಲೆ, ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿ: 31.3.16 ರ ಸಂಜೆ 7:10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದಾಮಿಗೆ ನುಗ್ಗಿ ಪ್ಲೈವುಡ್ ಸಾಮಾಗ್ರಿಗಳ ಕಳವು:

     ಕುಶಾಲನಗರ ಠಾಣಾ ಸರಹದ್ದಿನ ಹೌಸಿಂಗ್ ಬೋರ್ಡ್ ನಿವಾಸಿ ರಾಜುರಾಮ್ ಎಂಬುವರಿಗೆ ಸೇರಿದ ಕುಶಾಲನಗರದ ಐಬಿ ರಸ್ತೆಯಲ್ಲಿರುವ ಗೋದಾಮಿನ ಹಿಂಭಾಗದ ವೆಂಟಿಲೇಟರ್ ಕಿಟಕಿಯ ಗಾಜು ಒಡೆದು ಅದರ ಮೂಲಕ ಯಾರೋ ಕಳ್ಳರು ಗೋದಾಮಿನ ಒಳ ಪ್ರವೇಶಿಸಿ 4 ಪ್ಲೈವುಡ್ ಡೋರ್ ಗಳು ಮತ್ತು 15 ಪ್ಲೈವುಡ್ ಶೀಟುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು. ಸದರಿ ಶೀಟುಗಳ ಬೆಲೆ ರೂ. 21,000 ಆಗಬಹುದು. ಈ ಕಳ್ಳತನದ ಬಗ್ಗೆ ಗೋದಾಮಿನ ಪಕ್ಕದ ಗ್ಲಾಸ್ ಹೌಸ್ ನಲ್ಲಿ ಕೆಲಸ ಮಾಡಿಕೊಂಡಿರುವ ರಮೇಶ ಎಂಬಾತನ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹಣದ ವಿಚಾರದಲ್ಲಿ ಜಾತಿಯನ್ನು ನಿಂದಿಸಿ ಹಲ್ಲೆ: 

    ದಿನಾಂಕ 30-3-2016 ರಂದು ವಿರಾಜಪೇಟೆ ತಾಲೂಕು, ಹೆಗ್ಗಳ ಗ್ರಾಮದ ನಿವಾಸಿ ಪಿರ್ಯಾದಿ ರಾಜೇಶ್ಯವರು ಮದುವೆ ಕಾರ್ಯಕ್ಕೆಂದು ವಿರಾಜಪೇಟೆ ನಗರದ ಕಾವೇರಿ ಕಲ್ಯಾಣ ಮಂಟಪಕ್ಕೆ ಬಂದಿದ್ದು ಅಲ್ಲಿಗೆ ಬಂದಿದ್ದ ಹೆಗ್ಗಳ ಗ್ರಾಮದವರಾದ ಅಮ್ಮಚಾಳಿಯಂಡ ಪೂವಯ್ಯ ರಾಜ, ಮತ್ತು ಅವರ ಮಕ್ಕಳಾದ ರಜಿನಿ, ಡಾಲಿರವರು ಸೇರಿಕೊಂಡು ಪಿರ್ಯಾದಿಯವರು ಕೇಳಿಕೊಂಡಿದ್ದ ಸಾಲದ ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು ಅಲ್ಲದೆ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ದಿನಾಂಕ 31-03-2016 ರಂದು ಮಡಿಕೇರಿ ತಾಲೂಕು ಬಲಮುರಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ರಮ್ಯ ಎಂಬವರ ಗಂಡ ಮುನಿಮಾರಯ್ಯನವರು ವಿಪರೀತ ಮದ್ಯಪಾನ ಮಾಡಿ ಕಾವೇರಿ ಹೊಳೆಯನ್ನು ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮಹಿಳೆ ಅಪಹರಣ ಪ್ರಕರಣ ದಾಖಲು:

     ಸೋಮವಾರಪೇಟೆ ತಾಲೂಕು ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಪಿರ್ಯಾದಿ ಶ್ರೇಯಸ್ ಎಂಬವರು ದಿನಾಂಕ 22-02-2016 ರಂದು ಯಲಕನೂರು ಗ್ರಾಮದ ಸ್ಪೂರ್ತಿ ಎಂಬವಳನ್ನು ಮದುವೆಯಾಗಿದ್ದು ದಿನಾಂಕ 31-03-2016 ರಂದು ಮನೆಯಲ್ಲಿದ್ದು ರಾತ್ರಿಯ ಉಟ ಮಾಡಿ ಮಲಗಿದ್ದು, ಬೆಳಿಗ್ಗೆ 6-00 ಗಂಟೆ ಎದ್ದು ನೋಡಿದಾಗ ಹೆಂಡತಿ ಮನೆಯಲ್ಲಿ ಕಾಣಲಿಲ್ಲ. ಆಕೆಯು ಒಂದು ಕಪ್ಪಬಣ್ಣದ ಕೆ.ಎ-04 ಪಿ. 6469 ಎಸ್ಟೀಮ್ ಕಾರಿನಲ್ಲಿ ಅಭಿ ಮತ್ತು ಸೋಮವಾರಪೇಟೆಯಲ್ಲಿ ಹೇರ್ ಕಟ್ಟಿಂಗ್ ಶಾಫ್ ಇಟ್ಟುಕೊಂಡಿರುವ ಶಿವು ಹಾಗು ಇನ್ನೊಬ ವ್ಯಕ್ತಿಯೊಂದಿಗೆ ಆಕೆಗೆ ಮದುವೆ ಸಮಯದಲ್ಲಿ ಮಾಡಿಸಿದ ಮತ್ತು ಉಡುಗೊರೆ ಸಿಕ್ಕಿದ್ದ ಒಟ್ಟು 800 ಗ್ರಾಂ ಚಿನ್ನದ ಆಭರಣಗಳು ಮತ್ತು ಕೊಠಡಿಯಲ್ಲಿ ಇದ್ದ ಸುಮಾರು 2 ಲಕ್ಷದಷ್ಟು ಹಣದೊಂದಿಗೆ ಹೋಗಿದ್ದು ಆಕೆಯನ್ನು ಮೇಲ್ಕಾಣಿಸಿದ ವ್ಯಕ್ತಿಗಳು ಪುಸಲಾಯಿಸಿ ಕಿಡ್ನಾಪ್ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

Friday, April 1, 2016

ಅನಾರೋಗ್ಯದ ಕಾರಣ ಮಹಿಳೆ ಆತ್ಮಹತ್ಯೆ:

     ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೋಮವಾರಪೇಟೆ ತಾಲೂಕು ಕುಂಬೂರು ಗ್ರಾಮದ ನಿವಾಸಿ ಶ್ರೀಮತಿ ದೇವಕ್ಕಿ ಎಂಬವರು ಕೆಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜಿಗುಪ್ಸೆಗೊಂಡು ದಿನಾಂಕ 30-3-2016 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಬ್ಯಾನರ್ ಕಟ್ಟಿದ ವಿಚಾರದಲ್ಲಿ 4ಜನರಿದ್ದ ಗುಂಪಿನಿಂದ ವ್ಯಕ್ತಿ ಮೇಲೆ:

     ಸೋಮವಾರಪೇಟೆ ನಗರದ ನಿವಾಸಿ ಎಸ್.ಎಂ.ಅಮಾಯುನ್ ಬೇಗ್ ದಿನಾಂಕ 30.03.2016 ರಂದು ಸಂಜೆ 07:00 ಗಂಟೆಗೆ ಆತನ ಸ್ನೇಹಿತರೊಂದಿಗೆ ದಿನಾಂಕ 31.03.2016 ರಂದು ನಡೆಯುವ ಉರೂಸ್ ಸಂಬಂಧ ಬ್ಯಾನರ್‌ನ್ನು ದರ್ಗಾ ಮುಂಭಾಗದಲ್ಲಿ ಕಟ್ಟಿದ್ದು ನಂತರ ಉರೂಸ್ ಕಾರ್ಯ ಮುಗಿಸಿ ವಾಪಾಸ್ಸು ಸಮಯ 09:45 ಗಂಟೆಗೆ ಮನಗೆ ಹೋಗುತ್ತಿದ್ದಾಗ ಬ್ಯಾನರ್‌ನ್ನು ಒಬ್ಬ ವ್ಯಕ್ತಿ ಕೀಳುತ್ತಿದ್ದು ಏಕೆ ಕೀಳುತ್ತಿದ್ದೀಯಾ ಎಂದು ಕೇಳುತ್ತಿದ್ದಾಗ ಸುವಿಧ್ ಹೋಟೆಲ್ ಕಡೆಯಿಂದ ನಾಲ್ಕೈದು ಹುಡುಗರು ಸೇರಿ ಬಂದು ಫಿರ್ಯಾದಿ ಮೇಲೆ ಹಲ್ಲೆ ಮಾಡಿ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ:

     ಸೋಮವಾರಪೇಟೆ ತಾಲ್ಲೂಕು ಬಜೆಗುಂಡಿ ಗ್ರಾಮದ ನಿವಾಸಿ ಎಂ.ಕೆ. ದೇವದಾಸ್ ಎಂಬವರು ದಿನಾಂಕ 31.03.2016 ರಂದು ರಾತ್ರಿ 08:15 ಗಂಟೆಗೆ ಮನೆಯ ಹತ್ತಿರದ ಅಂಗಡಿಗೆ ಹೋಗಿದ್ದು ಅಲ್ಲಿ ಅವರ ಅಣ್ಣನ ಮಗನಾದ ದಿನೇಶ್‌ನೊಂದಿಗೆ ಮಾತನಾಡಿಕೊಂಡಿರುವಾಗ್ಗೆ ಅಂಗಡಿ ಬಳಿ ಇರುವ ಮಾರಿಯಮ್ಮ ದೇವಸ್ಥಾನದ ಪಕ್ಕದಲ್ಲಿ ನಿಂತಿದ್ದ ವಿಜಯ್ , ಡಾನ್‌ರವಿ , ಅಭಿ, ಕುಂಙುಕುಟ್ಟಿ ರವರು ಅಲ್ಲಿಗೆ ಬಂದು ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾಋಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಗೆ ಲಾರಿ ಡಿಕ್ಕಿ:

      ದಿನಾಂಕ 31-3-2016 ರಂದು ಪ್ರಭಾಕರ ಎಂಬವರು ತಮ್ಮ ಬಾಪ್ಸು ಮೋಟಾರ್ ಸೈಕಲ್ ನಲ್ಲಿ ಸಿದ್ದಾಪುರ ಕಡೆಯಿಂದ ಪಿರಿಯಾಪಟ್ಟಣ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ಜಖಂಗೊಂಡು ಸವಾರ ಪ್ರಭಾಕರರವರಿಗೆ ಗಾಯವಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ