Friday, April 8, 2016

ಹಸಿ ಕರಿಮೆಣಸು ಕಳ್ಳತನ:

     ಸೋಮಾರಪೇಟೆ ತಾಲೂಕು ದೊಡ್ಡಮಳ್ತೆ ಗ್ರಾಮದ ನಿವಾಸಿ ರಾಖಿ ಎಂಬವರಿಗೆ ಸೇರಿದ ತೋಟದಿಂದ ಸುಮಾರು 15 ದಿನಗಳಿಂದ ಮೆಣಸಿನ ಬಳ್ಳಿಯಲ್ಲಿ ಸ್ವಲ್ಪ ಸ್ವಲ್ಪ ಹಸಿ ಕರಿ ಮೆಣಸನ್ನು ಕದ್ದು ಕುಯ್ಯುತಿದ್ದು ದಿನಾಂಕ 6-4-16 ರಂದು ಪಿರ್ಯಾದಿ ರಾಖಿರವರು ತೋಟಕ್ಕೆ ಹೋದಾಗ ಅರೋಪಿ ಗಣೇಶ್ ಎಂಬ ವ್ಯಕ್ತಿ ಕರಿ ಮೆಣಸನ್ನು ಕದ್ದು ಕುಯ್ಯುತ್ತಿದ್ದು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಕಳವು ಮಾಲಿನ ಮೌಲ್ಯ 20 ಸಾವಿರ ಆಗುತ್ತದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾಗುವುದಾಗಿ ವಂಚಿಸಿ ಅತ್ಯಾಚಾರ:

    ಮಡಿಕೇರಿ ನಗರ ಮಲ್ಲಿಕಾರ್ಜುನ ನಗರ ನಿವಾಸಿ ಪಿರ್ಯಾದಿ ರಾಧಮಣಿರವರು 2003-04 ರಲ್ಲಿ ಸಮಾಜ ಕಲ್ಯಾಣ ಇಲಾಖೆ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಆರೋಪಿ ವಿರೂಪಾಕ್ಷ ರೈ ಎಂಬವರು ಸಹ ಸದರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಆರೋಪಿಯು ಪಿರ್ಯಾದಿಯವರನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ, ಪರಿಶಿಷ್ಟ ಜಾತಿ ಎಂದು ತಿಳಿದೂ ಸಹ ದೈಹಿಕ ಸಂಪರ್ಕ ಮಾಡಿ ಮದುವೆಯಾಗದೆ ಮೋಸ ಮಾಡಿರುತ್ತಾನೆಂದು ಈ ಮೊದಲು ನೀಡಿದ ದೂರಿಗೆ ಮಡಿಕೇರಿ ನಗರ ಠಾಣೆಯಲ್ಲಿ ಮೊ ಸಂ 99/2013 ರಂತೆ ಪ್ರಕರಣ ದಾಖಲುಗೊಂಡು ಸಿ ಸಿ ಸಂ 26/2014 ರಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಯು ಪಿರ್ಯಾದಿಯವರನ್ನು ಕೇಸು ವಾಪಾಸು ಪಡೆದುಕೊಂಡರೆ ಮದುವೆಯಾಗುವುದಾಗಿ ನಂಬಿಸಿ, ಲೋಕ ಅದಾಲತ್ ನಲ್ಲಿ ದಿ: 16-8-2014 ರಂದು ರಾಜಿ ತೀರ್ಮಾನವಾಗಿರುತ್ತದೆ. ನಂತರ ದಿ: 03-01-2016 ರಂದು ಪಿರ್ಯಾದಿಯವರು ತನ್ನ ಸ್ನೇಹಿತೆ ಕಾವ್ಯಳೊಂದಿಗೆ ಮಡಿಕೇರಿಯಲ್ಲಿದ್ದು ಆರೋಪಿಯನ್ನು ಈ ಬಗ್ಗೆ ಕೇಳಿದಾಗ ಆರೋಪಿಯು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಪ್ರವೇಶ ಹಲ್ಲೆ:

     ದಿನಾಂಕ 06.04.16 ರಂದು ಸಮಯ ರಾತ್ರಿ 8:30 ಪಿ.ಎಂ ಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಜಂಬೂರು ಗ್ರಾಮದ ನಿವಾಸಿ ಪಿರ್ಯಾದಿ ಜೂರಾ ಎಸ್. ಮತ್ತು ಅವರ ಅಣ್ಣ ಖಾಲಿದ್‌ರವರು ಮನೆಯಲ್ಲಿರುವಾಗ್ಗೆ ಪ್ರತಾಪ್‌ರವರು ಮನೆಯ ಒಳಗಡೆ ಹೋಗಿ ಪಿರ್ಯಾದಿಯವರನ್ನು ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಹೇಳಿ ಪಿರ್ಯಾದಿಯವರನ್ನು ಬೈದು, ಕುತ್ತಿಗೆಯನ್ನು ಹಿಡಿದು ಎಳೆದಾಡಿ ಕೈಯಲ್ಲಿದ್ದ ರಾಡಿನಿಂದ ಬಲ ಕೈ, ಎಡ ಕೈ ಮತ್ತು ಬಲಭಾಗದ ತಲೆಗೆ, ಹಣೆಗೆ ಎರಡು ಕಾಲುಗಳ ಮಂಡಿಗೆ ಹೊಡೆದು ಗಾಯ ಪಡಿಸಿದ್ದು, ಪಿರ್ಯಾದಿಯ ಅಣ್ಣ ಖಾಲಿದ್‌ರವರಿಗೆ ಮರದ ಕಾವು ಇರುವ ಗುದ್ದಲಿಯಿಂದ ಎಡ ಪಕ್ಕೆಲುಬಿಗೆ ಭಾಗಕ್ಕೆ ಹೊಡೆದು ಗಾಯಪಡಿಸಿದ್ದು ವಿಜು ಎಂಬವರು ಸಹ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.