Thursday, April 21, 2016

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ,
ಸಿದ್ದಾಪುರ ಠಾಣಾ ಸರದಹ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಜಾಬೀರ್ ಆಲಿ ಎಂಬವರು ದಿನಾಂಕ 20/04/2016 ರಂದು ಕೂಲಿ ಕೆಲಸಮಾಡಿಕೊಂಡು ವಾಪಸ್ಸು ಮನೆಗೆ ಬರುತ್ತಿರುವಾಗ್ಗೆ ನೆಲ್ವತೇಕ್ರೆ ಗ್ರಾಮದ ಮಸೀದಿಯ ಬಳಿ ಬರುತ್ತಿರುವಾಗ್ಗೆ ಶಂಷೀರ್ ಬಿ.ಎ ಹಾಗು ಅಕ್ಬರ್ ಎಂಬವರು ಫಿರ್ಯಾದಿ ಜಾಬೀರ್ ರವರನ್ನು ತಡೆದು ನಿಲ್ಲಿಸಿ ಅವಾಷಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಶವ ಪತ್ತೆ ಕಾಡಾನೆ ದಾಳಿ ಶಂಕೆ:
     ಸಿದ್ದಾಪುರ ಠಾಣಾ ಸರಹದ್ದಿನ ಟಾಟಾ ಕಾಫಿ ತೋಟದ ಮಟ್ಟಪರಂಬು ಡಿವಿಜನ್ ನಿವಾಸಿ 38 ವರ್ಷ ಪ್ರಾಯದ ರಂಗಸ್ವಾಮಿ ಎಂಬವರು ದಿನಾಂಕ 11/4/2016 ಮಡಿಕೇರಿ ಜಿಲ್ಲಾಸ್ಪತ್ರೆಗೆ ತನ್ನ ಸಂಬಂಧಿಕರನ್ನು ನೋಡಲು ಹೋಗಿ ನಂತರ ಮನೆಗೆ ಹೋಗದೆ ಕಾಣೆಯಾಗಿದ್ದು ದಿನಾಂಕ 20/4/2016 ಎಮ್ಮೆಗುಂಡಿ ತೋಟದಲ್ಲಿ ಸದರಿಯವರ ಮೃತ ದೇಹ ಪತ್ತೆಯಾಗಿದ್ದು, ಸದರಿ ಮೃತದೇಹದ ಎರಡು ಕಾಲಿನ ತೊಡೆಯಲ್ಲಿ ಸುಮಾರು ಒಂದು ಅಡಿ ಉದ್ದದ ಗಾಯವಾಗಿದ್ದು, ಸದರಿಯವರು ದಿನಾಂಕ: 11/4/2016 ರಂದು ಇವರು ಸಿದ್ದಾಪುರದಿಂದ ಮಟ್ಟಪರುಂಬುಗೆ ನಡೆದುಕೊಂಡು ಹೋಗುವಾಗ ಕಾಡಾನೆ ದಾಳಿಗೆ ಸಿಲುಕಿ ಮೃತ ಪಟ್ಟಿರುವ ಸಾಧ್ಯತೆಗಳಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ತಾಯಿಮೇಲೆ ಮಗನಿಂದ ಹಲ್ಲೆ:
     ದಿನಸಿ ಸಾಮಾನು ತರಲು ಹೇಳಿದ ಕಾರಣಕ್ಕೆ ಮಗ ತನ್ನ ತಾಯಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಭಾಗಮಂಡಲ ಠಾಣಾ ಸರಹದ್ದಿನ ಚೇರಂಗಾಲ ಗ್ರಾಮದ ನಿವಾಸಿ ಶ್ರೀಮತಿ ಬೊಳ್ಳಮ್ಮ (82) ಇವರ ಮೇಲೆ ತನ್ನ ಮಗ ರೋಹಿತ್ ಎಂಬಾತ ದಿನಸಿ ಸಾಮಾಗ್ರಿಗಳನ್ನು ತರುವ ಬಗ್ಗೆ ಹಣದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.

 ಆಸ್ತಿ ವಿಚಾರ, ವ್ಯಕ್ತಿಯ ಕೊಲೆಗೆ ಯತ್ನ:
        ದಿನಾಂಕ 20-04-2016 ರಂದು ಸಮಯ 17.30 ಗಂಟೆಗೆ ಗೋಣಿಕೊಪ್ಪ ಪೊಲೀಸ್‌‌ ಠಾಣಾ ಸರಹದ್ದಿನ ಹಾತೂರು ಗ್ರಾಮದ ವಿ.ಎಸ್. ರಾಮಚಂದ್ರರವರ ಮನೆಯ ಬಳಿ ಆಸ್ತಿಯ ಸರ್ವೆ ಕಾರ್ಯದಲ್ಲಿ ಇರುವಾಗ್ಗೆ ಆರೋಪಿ ವಿ.ಡಿ.ದಿನೇಶ ಹಾಗು ವಿ.ಡಿ. ದೀಕ್ಷತ್ರವರುಗಳು ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.