Thursday, April 28, 2016

ಅಣ್ಣನ ಮೇಲೆ ತಂಗಿಯಿಂದ ಹಲ್ಲೆ:

     ದಿನಾಂಕ 27-4-2016.ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯಲ್ಲಿ ವಾಸವಾಗಿರುವ ಟಿ.ಎನ್. ರವಿಚಂದ್ರ ಎಂಬವರ ಮೇಲೆ ಅವರ ತಂಗಿ ಶ್ರೀಮತಿ ಅಮುದ ಎಂಬಾಕೆ ತನ್ನ ವೈಯಕ್ತಿಕ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಂಗಿ ಮೇಲೆ ಅಣ್ಣನಿಂದ ಹಲ್ಲೆ:

     ದಿನಾಂಕ 27-4-2016.ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿಯಲ್ಲಿ ವಾಸವಾಗಿರುವ ಶ್ರೀಮತಿ ಅಮುದ ಎಂಬವರ ಮೇಲೆ ಆಕೆಯ ಸಹೋದರ ಟಿ.ಎನ್. ರವಿಚಂದ್ರ ಅಮುದಳ ವೈಯಕ್ತಿಕ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದನ ಕರು ಕಳವು ಮಾಡಿ ಸಾಗಾಟ:

    ದಿನಾಂಕ 27-4-2016 ರಂದು ವಿರಾಜಪೇಟೆ ತಾಲೂಕು ನಿಟ್ಟೂರು ಗ್ರಾಮದ ನಿವಾಸಿಯಾದ ಫಿರ್ಯಾದಿ ಕಾಡ್ಯಮಾಡ ಕೆ. ಪೂಣಚ್ಚ ಎಂಬವರು ಕುಟುಂಬದವರೊಂದಿಗೆ ಕೋಟೂರು ಗ್ರಾಮದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದು ಅದೇ ಸಮಯದಲ್ಲಿ ಕುಂಬಾರಕಟ್ಟೆ ಕಾಲೋನಿ ಬಳಿ ನಿಟ್ಟೂರು ಗ್ರಾಮದ ವಾಸಿ ವಿ.ಟಿ.ಲೋಕೇಶ್‌ @ ಅಣ್ಣಯ್ಯರವರು ಫಿರ್ಯಾದಿಯವರಿಗೆ ಸೇರಿದ ಹಸು ಮತ್ತು ಹೋರಿ ಕರುವನ್ನು ಕಳ್ಳತನ ಮಾಡಿಕೊಂಡು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದವನನ್ನು ಪತ್ತೆ ಹಚ್ಚಿ ಆರೋಪಿನ್ನು ಠಾಣೆಗೆ ಒಪ್ಪಿಸುವ ಮೂಲಕ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರು ಮತ್ತು ಮ್ಯಾಕ್ಸಿ ಕ್ಯಾಬ್ ಮುಖಾಮುಖಿ 6 ಮಂದಿಗೆ ಗಾಯ: 

     ದಿನಾಂಕ 25-04-2016ರಂದು ಪಿರ್ಯಾದಿ ಮೈಸೂರು ನಗರದ ನಿವಾಸಿ ಎನ್. ರಮೇಶ ಕುಮಾರ್ ರವರು ತಮ್ಮ ಬಾಪ್ತು ಕೆ ಎ 05 ಸಿ 6201ರಲ್ಲಿ ಸ್ನೆಹಿತರೊಂದಿಗೆ ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಹೋಟೆಲಿಗೆ ಬಂದು ಮದುವೆ ಮುಗಿಸಿ ವಾಪಾಸ್ಸು ಹೋಗುತ್ತಿರುವಾಗ್ಗೆ ಸಮಯ 03:45 ಪಿ ಎಂ ಗೆ ಕುಶಾಲನಗರದ ಆರ್ ಎಂ ಸಿ ಬಳಿ ಇರುವ ಬಿ ಎಸ್ ಆರ್ ಸೈಕಲ್ ಶಾಪ್ ನ ಮುಂಬಾಗ ತಲುಪುವಾಗ್ಗೆ ಕೊಪ್ಪ ಕಡೆಯಿಂದ ಮಹೇಂದ್ರ ಮ್ಯಾಕ್ಸಿ ಕ್ಯಾಬ್ ವಾಹನವನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ವಾಹನವು ಜಖಂಗೊಂಡಿದ್ದು , ವಾಹನದಲ್ಲಿದ್ದ ಸ್ನೇಹಿತರಾದ ಷಣ್ಮುಗಂ, ಮುನಿಸ್ವಮಿ, ಮೆಹರುನ್ನೀಸಾ , ಉಸ್ಮಾಭಾನು , ಪುಟ್ಟಮ್ಮ ಮತ್ತು ಶಾಂತಮ್ಮ ರವರಿಗೆ ರಕ್ತಗಾಯವಾಗಿದ್ದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.