Friday, April 29, 2016

ಮನೆಯ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

        ದಿನಾಂಕ 28.04.2016 ರಂದು ಸಮಯ 10:15 ಗಂಟೆಗೆ ಫಿರ್ಯಾದಿ ಕೆ.ಡಿ. ಆನಂದ ಎಂಬವರು ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಗ್ರಾಮದಲ್ಲಿರುವ ತಮ್ಮ ಮನೆಯ ವೆರಾಂಡದಲ್ಲಿ ಮಲಗಿಕೊಂಡಿರುವಾಗ ಆರೋಪಿಗಳಾದ ಗೋಣಿಮರೂರು ಗ್ರಾಮದ ನೀಲಮ್ಮ ಮತ್ತು ದಿಲೀಪ್ ಎಂಬವರು ಅಲ್ಲಿಗೆ ಬಂದು ನೀನು ಏಕೆ ಇಲ್ಲಿ ಮಲಗಿದ್ದೀಯಾ ಈ ಮನೆ ನನಗೆ ಸೇರಿದ್ದು ಎಂದು ಹೇಳಿ ಅವಾಚ್ಯ ಶಬ್ದಗಳಿಂದಿ ಬೈದು ಆರೋಪಿಗಳು ಕಬ್ಬಿಣದ ರಾಡಿನಿಂದ ಫಿರ್ಯಾದಿ ಆನಂದನವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ ಪ್ರಕರಣ ದಾಖಲು:

        ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದ ನಿವಾಸಿ ಪಿರ್ಯಾದಿ ಕೆ.ಯು. ಕಾರ್ಯಪ್ಪ ನವರ ತಂಗಿಯ ಗಂಡ ಟಿ.ಕೆ.ರಮೇಶ್ @ ಕರುಂಬಯ್ಯ ರವರು ದಿನಾಂಕ 28/04/2016 ರಂದು ಬೆಳಿಗ್ಗೆ 9.00 ಗಂಟೆಗೆ ಮನೆಯಿಂದ ಮೂರ್ನಾಡುವಿಗೆ ಮೋಟಾರ್ ಸೈಕಲ್ ನಂ. ಕೆಎ-02-ಈಬಿ-1861 ನ್ನು ಸರ್ವೀಸ್ ಗೆ ಕೊಟ್ಟು ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪ್ರಾಪ್ತ ಹುಡುಗಿ ಕಾಣೆ, ಅಪಹರಣ ಶಂಕೆ:

    ಮಡಿಕೇರಿ ತಾಲೂಕು ಕೊಳಕೇರಿ ಗ್ರಾಮದ ನಿವಾಸಿ ಎಂ.ಸಿ. ಬೆಳ್ಯಪ್ಪ ಎಂಬವರ ಮಗಳು ಮಗಳು 17 ವರ್ಷ ಪ್ರಾಯದ ಎ.ಬಿ ವಸಂತಿ ಎಂಬವಳು ನಾಪೋಕ್ಲುವಿನಲ್ಲಿ ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದು ದಿನಾಂಕ 27-04-2016 ರಂದು ಬೆಳಗ್ಗೆ 09-30 ಗಂಟೆಗೆ ಮನೆಯಿಂದ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತೇನೆಂದು ಹೇಳಿ ಹೋದವಳು ಸಂಜೆಯಾದರೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಇವಳನ್ನು ನೆಲಜಿ ಗ್ರಾಮದ ದೀಕ್ಷಿತ್ ಎಂಬವನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಅಪಘಾತ, ಮಹಿಳೆ ಸಾವು:

     ಕುಶಾಲನಗರ ಗ್ರಾಮಾಂತರ ಠಾಣಾ ಸರದಹದ್ದಿನ ತೊಂಡೂರು ಗ್ರಾಮದ ನಿವಾಸಿ ಹರಿಪ್ರಸಾದ್ ಎಂಬವರ ಪತ್ನಿ ಶ್ರೀಮತಿ ರಶ್ಮಿ ಎಂಬವರು ಕುಶಾಲನಗರದ ಮಂಡೋವಿ ಮೊಟಾರ್ಸ್ ಗೆ ಕೆಲಸದ ಸಲುವಾಗಿ ತೊಂಡೂರು ಗ್ರಾಮದ ತಮ್ಮ ಮನೆಯಿಂದ ದಿನಾಂಕ 28-4-2016 ರಂದು ಬೆಳಿಗ್ಗೆ 8.45 ಗಂಟೆಗೆ ತಮ್ಮ ಬಾಪ್ತು ಕೆಎ 12 ಎಲ್ 5917 ರ ಡಿಯೋ ಸ್ಕೂಟರಿನಲ್ಲಿ ಕುಶಾಲನಗರಕ್ಕೆ ಬರುತ್ತಿರುವಾಗ್ಗೆ ಸುಮಾರು 8.55 ಗಂಟೆ ಸಮಯಕ್ಕೆ ಆನೆಕಾಡುವಿನ ಇಳಿಜಾರು ರಸ್ತೆಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಶ್ಮಿಯವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ರಶ್ಮಿಯವರ ತಲೆ, ಕಾಲು, ಕೈ ಹಾಗೂ ಶರೀರದ ಇತರ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಮಡಿಕೇರಿಯ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಮಾರ್ಗ ಮದ್ಯೆ ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪ್ರಾಪ್ತೆಯ ಮೇಲೆ ಯುವಕನಿಂದ ಅತ್ಯಾಚಾರ:
     ಸೋಮವಾರಪೇಟೆ ಠಾಣಾ ಸರಹದ್ದಿನ ಯಲಕನೂರು ಹೊಸಳ್ಳಿ ಗ್ರಾಮದ ನಿವಾಸಿ ಫಿರ್ಯಾದಿ ಜೆ.ಕೆ. ನಂಜ ಎಂಬವರ ಮಗಳು ಶಾಲಿನಿ ಪ್ರಾಯ 16 ವರ್ಷ ಈಕೆ ಹುಟ್ಟಂದಿನಿಂದಲೂ ಮಾತು ಬಾರದೆ ಮೂಗಿಯಾಗಿದ್ದು ದಿನಾಂಕ 26.04.2016 ರಂದು ಶಾಲಿನಿ ಒಬ್ಬಳೆ ಮನೆಯಲ್ಲಿರುವಾಗ ಹೊಸಳ್ಳಿ ಕಾಲೋನಿಯ ಅವರ ಸಂಬಂಧಿ ಮನು ಎಂಬುವವನು ಶಾಲಿನಿಯನ್ನು ಎತ್ತಿಕೊಂಡು ಪಕ್ಕದ ಕಾಡಿಗೆ ಹೋಗಿ ಬಲತ್ಕಾರದಿಂದ ಅತ್ಯಾಚಾರ ಮಾಡಿರುವುದಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.