Monday, April 4, 2016

ಆಸ್ತಿ ವಿಚಾರದಲ್ಲಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನ:
     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆ-ತಾಯಿಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ನಾಪೋಕ್ಲು ಠಾಣಾ ಸರಹದ್ದಿನ ಚೇಲವಾರ ಗ್ರಾಮದ ನಿವಾಸಿ ಸುಂದರ ಎಂಬವರು ದಿನಾಂಕ 2-4-2016 ರಂದು ರಾತ್ರಿ ತನಗೆ ನೀಡಿದ ಆಸ್ತಿಯಲ್ಲಿ ಮೋಸಮಾಡಲಾಗಿದೆ ಎಂದು ಹೇಳಿ ತನ್ನ ತಂದೆ ಮುತ್ತಮ್ಮಯ್ಯ ಹಾಗು ಅವರ ಪತ್ನಿ ಕಾವೇರಮ್ಮನವರ ಮೇಲೆ ಕತ್ತಿಯಿಂದ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿಸಿದ್ದು, ಅಲ್ಲದೆ ಕೆಲಸದಾಳು ರತ್ನಮ್ಮ ರವರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Vartika Katiyar, IPS

Sunday, April 3, 2016


ಪಾದಚಾರಿಗೆ ಸ್ಕೂಟರ್ ಡಿಕ್ಕಿ, ಗಾಯ:

     ವಿರಾಜಪೇಟೆ ತಾಲೂಕು, ಕದನೂರು ಗ್ರಾಮದ ನಿವಾಸಿ ಎ.ಎನ್. ಸೋಮಯ್ಯನವರು ದಿನಾಂಕ 2-4-2016 ರಂದು ಸಮಯ 1-30 ಪಿ.ಎಂ. ಗೆ ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿ ಬಳಿ ರಸ್ತೆ ದಾಟುವಾಗ ಕೆಎ-12-ಹೆಚ್-9289ರ ಹೋಂಡಾ ಆಕ್ಟೀವಾ ಸ್ಕೂಟರ್ ಚಾಲಕ ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎ.ಎನ್. ಸೋಮಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ನಡೆದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು

     ದಿನಾಂಕ 01/04/2016 ರಂದು ಸಮಯ 15.20 ಗಂಟೆಗೆ ಹಾಕತ್ತೂರು ಗ್ರಾಮದ ನಿವಾಸಿ ಪಿರ್ಯಾದಿ ಬಿ.ಬಿ. ಹರೀಶ್ ರೈ ರವರ ವಾಹನ ಮತ್ತು ಆರೋಪಿ ರಶೀದ್ ರವರ ವಾಹನದ ನಡುವೆ ಹಾಕತ್ತೂರು ಬಳಿಯ ಬಕ್ಕ ಎಂಬಲ್ಲಿ ಸಣ್ಣ ಅಪಘಾತವಾಗಿದ್ದು ಈ ಸಂಬಂಧ ಉಭಯ ಕಡೆಯವರು ರಾಜೀ ಮಾಡಿಕೊಂಡು ಜೀಪು ಚಾಲಕ ರಶೀದ್ ಎಂಬವವರು ಜೀಪಿನ ಮಾಲೀಕ ಜೋಸೆಫ್ ರವರು ಪಿರ್ಯಾದಿಯವರಿಗೆ ಜಖಂ ಆಗಿರುವ ವ್ಯಾನನ್ನು ಸರಿಪಡಿಸಿಕೊಡುತ್ತೇನೆಂದು ಹೇಳಿ ಮಾರುತಿ ವ್ಯಾನಿನಲ್ಲಿ ಬರುತ್ತಿರುವಾಗ ನೆಲ್ಲಿಹುದಿಕೇರಿ ಸೇತುವೆ ದಾಟಿ ಸ್ವಲ್ಪ ಮುಂದೆ ವರ್ಕ್ಸ್ ಶಾಪ್ ಬಳಿ ಫಿರ್ಯಾದಿಯವರ ಕಾರನ್ನು ತಡೆದು ವರ್ಕ್ಸ್ ಶಾಪ್ ಬಳಿ ಹಾಕುವಂತೆ ತಿಳಿಸಿ ವರ್ಕ್ಸ್ ಶಾಪ್ ಬಳಿ ನಿಂತಿರುವಾಗ ಒಬ್ಬ ವ್ಯಕ್ತಿ ಕಾರಿನ ಬಾಗಿಲನ್ನು ತೆಗೆದು ಪಿರ್ಯಾದಿಗೆ ಕೈಯಿಂದ ಹೊಡೆದು ಜೊತೆಯಲ್ಲಿದ್ದ ಷರೀಪ್, ಸೈನುದ್ದೀನ್ @ ಸೈಯದ್ ಆಲಿ ಎಂಬುವವರು ಪಿರ್ಯಾದಿಯ ಹೊಟ್ಟೆಯ ಭಾಗಕ್ಕೆ ಒದ್ದು ಕೈಯಿಂದ ಮುಖಕ್ಕೆ ಬೆನ್ನಿಗೆ ಗುದ್ದಿ ಟೀ ಶರ್ಟ್ ನ್ನು ಹರಿದು ಹಾಕಿ ಆಗ ಅಲ್ಲಿಯೇ ಇದ್ದ ರಶೀದ್ ಎಂಬುವವರು ಪಿರ್ಯಾದಿಗೆ ದೊಣ್ಣೆಯಿಂದ ತಲೆಯ ಭಾಗಕ್ಕೆ ಹೊಡೆದು ಆತನ ಎಡಗೈಯನ್ನು ತಿರುಚಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.