Tuesday, May 31, 2016

ಅಕ್ರಮ ಮದ್ಯ ಮಾರಾಟ ಪ್ರಕರಣ ದಾಲು:

       ದಿನಾಂಕ 30-05-2016 ರಂದು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾಡಗ ಗ್ರಾಮದ ಕಳ್ಳಂಗಡ ಗಣೇಶ ರವರ ಅಂಗಡಿ ಮುಂಭಾಗದ ನಾಲ್ಕೇರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಕೆ. ಶಶಿ ಎಂಬವರು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ರೂ 522.80 ಪೈಸೆ ಬೆಲೆಯ 90 ಎಂ.ಎಲ್. ನ 20 ಮದ್ಯ ತುಂಬಿದ ಪ್ಯಾಕೇಟ್ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ ಕುಟ್ಟ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪಿಸ್ತೂಲ್ ಕಳವು, ಪ್ರಕರಣ ದಾಖಲು:

     ಬಿ.ವೈ. ರವೀಂದ್ರ ಎಂಬವರು ಅರೆಕಾಡು ನಿವಾಸಿಯಾಗಿದ್ದು ಪೇರೂರು ಗ್ರಾಮದ ಬೊಟ್ಟೋಳಂಡ ಮಿಟ್ಟು ಚಂಗಪ್ಪ ರವರ ತೋಟದಲ್ಲಿ ವಿಸಿಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 30-5-2016 ರಂದು ಅರೆಕಾಡುವಿನಿಂದ ಪೇರೂರು ತೋಟಕ್ಕೆ 11-00 ಗಂಟೆಗೆ ತನ್ನ ಬಾಪ್ತು ಕೆಎ-12-ಪಿ-7684 ರ ಜೀಪನ್ನು ತೋಟದ ಬೇಲಿಯ ಬದಿಯಲ್ಲಿ ನಿಲ್ಲಿಸಿದ್ದು, ಜೀಪಿನ ಹಿಂದೆ ಬರುತ್ತಿದ್ದ ಹಿಟಾಚಿ ವಾಹನ ನಿಂತು ಹೋಗಿದ್ದರಿಂದ ಅದರ ಬಳಿ ಚಾಲಕನನ್ನು ಕರೆದುಕೊಂಡು ಹೋಗಿ ಕೇವಲ 5 ನಿಮಿಷದೊಳಗೆ ಜೀಪಿನ ಹತ್ತಿರ ಬಂದಾಗ ಜೀಪಿನೊಳಗಿಟ್ಟಿದ್ದ NPB PISTOL NO RP 107388/20020 ರ 5 ಕಾಟ್ರೇಜ್ ತುಂಬಿದ ಪಿಸ್ತೂಲನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹುಡುಗಿ ಕಾಣೆ:

     ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮನೆ ಗ್ರಾಮದ ನಿವಾಸಿ ಶ್ರೀಮತಿ ಚಂದ್ರಾವತಿ ಎಂಬವರ ಮಗಳು 19 ವರ್ಷ ಪ್ರಾಯದ ಹೆಚ್.ಎ. ಲಾವಣ್ಯ ಎಂಬಾಕೆ ದಿನಾಂಕ 29-5-2016 ರಂದು ರಾತ್ರಿ ಎಂದಿನಂಗೆ ಮಲಗಿಕೊಂಡಿದ್ದು, ರಾತ್ರಿ 2-00 ಗಂಟೆ ಸಮಯದಲ್ಲಿ ನೋಡಿದಾಗ ಕಾಣೆಯಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ಫಿರ್ಯಾದಿ ಚಂದ್ರಾವತಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, May 27, 2016

ಕಾರು ಲಾರಿ ನಡುವೆ ಅಪಘಾತ ನಾಲ್ವರ ದುರ್ಮರಣ:

      ದಿನಾಂಕ 25-5-2015 ರಂದು ಸಮಯ 11-30 ಗಂಟೆಗೆ ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ಪಯ್ಯಾಳಿ ಗ್ರಾಮದ ನಿವಾಸಿ ಫಿರ್ಯಾದಿ ನಾದೀರ್ ಎಂ. ಎಂಬವರು ಮತ್ತು ಅವರ ಸ್ನೇಹಿತರಾದ ಜವಹಾರ್,ಸುಪೈದ್, ಜಲೀಲ್, ಆಶಿಕ್, ಮೀನಾಜ್, ಯಾಸಿನ್, ಶಫೀರ್, ಶಬ್ಬಾಸ್ ಹಾಗೂ ಕಾರಿನ ಚಾಲಕ ಸಾಜನ್ ರವರೊಂದಿಗೆ ಕಾರು ನಂಬರ್ ಕೆಎಲ್-18-ಬಿ-200 ರಲ್ಲಿ ವಿರಾಜಪೇಟೆ ಗಾಗಿ ಮೈಸೂರು-ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಮಾಕುಟ್ಟ ದಾಟಿ ಪೆರಂಬಾಡಿ ಕೆರೆಯ ಬಳಿ ದಿನಾಂಕ 26-5-2016 ರಂದು ಸಮಯ ಬೆಳಗಿನ ಜಾವ 3-00 ಎ.ಎಂ.ಗೆ ತಲಪುವಾಗ್ಗೆ ಎದುರುಗಡೆಯಿಂದ ಲಾರಿ ನಂಬರ್ ಕೆಎ-21-ಎ-5171 ರ ಚಾಲಕ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು, ಎರಡು ಲಾರಿಗಳಿಗೆ ಡಿಕ್ಕಿಪಡಿಸದ್ದು ಅಲ್ಲದೆ , ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಕಾರಿಗೂ ಸಹ ಡಿಕ್ಕಿಪಡಿಸಿ ಕಾರಿನ ಮೇಲೆ ಮಗುಚಿಕೊಂಡ ಪರಿಣಾಮ, ಕಾರಿನಲ್ಲಿದ್ದ ಆಶಿಕ್, ಮಿನಾಜ್ ಹಾಗೂ ಯಾಸಿನ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಲ್ಲದೆ ಫಿರ್ಯಾದಿ ಸೇರಿ 6 ಜನರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಫಿ ವ್ಯಾಪಾರಿ ನಾಪತ್ತೆ, ಪ್ರಕರಣ ದಾಖಲು:


     ನಾಪೋಕ್ಲು ಠಾಣಾ ಸರಹದ್ದಿನ ಕಡಂಗ ಗ್ರಾಮದ ನಿವಾಸಿ ಶ್ರೀಮತಿ ಹಸೀನಾ ಎಂಬವರ ಗಂಡ ಮುನೀರ್ ಎಂಬವರು ಕಾಫಿ ವ್ಯಾಪಾರ ಮಾಡುತ್ತಿದ್ದು ದಿನಾಂಕ 24-5-2016 ರಂದು ಬೆಳಿಗ್ಗೆ 11-00 ಗಂಟೆಗೆ ಸಲಾಂ ಎಂಬವರೊಂದಿಗೆ ಬೈಕಿನಲ್ಲಿ ಚೇಲಾವರ ಗ್ರಾಮಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ಶ್ರೀಮತಿ ಹಸೀನಾ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತು ಕುಯ್ದು ವ್ಯಕ್ತಿ ಕೊಲೆ:

     ಕೊಡಗು ಜಲ್ಲೆಯ ಅರಪಟ್ಟು ಗ್ರಾಮದ ನಿವಾಸಿ ಎಸ್.ಎಂ. ನಸೀರ್ ರವರ ಸಂಬಂಧಿಯಾದ ಮುನೀರ್ ಎಂಬುವರು ದಿನಾಂಕ 24-5-2016 ರಂದು ಬೆಳಿಗ್ಗೆ 11-00 ಗಂಟೆಗೆ ಸಲಾಂ ಎಂಬುವರೊಂದಿಗೆ ಬೈಕ್‍ನಲ್ಲಿ ಚೇಲಾವರದ ಕಡೆಗೆ ಹೋಗಿದ್ದು ನಂತರ ಸಲಾಂ ಒಬ್ಬನೆ ವಾಪಾಸ್ಸು ಬಂದಿದ್ದು ಮುನೀರ್ ಚೇಲಾವರದಿಂದ ಬಾರದೇ ಇರುವ ಕಾರಣ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮುನೀರನ ಹೆಂಡತಿ ಯವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾದ ಮುನೀರ್ ನನ್ನು ಹುಡುಕಿದಲ್ಲೂ ಸದರಿ ಸಲಾಂ ಮುನೀರ್ ನನ್ನು ಕಬ್ಬೆ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕತ್ತಿಯಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿ ಬೆಟ್ಟದಿಂದ ಕೆಳಗೆ ಎಸೆದಿರುವ ವಿಚಾರ ಸ್ವತ: ಸಲಾಂ ತಿಳಿಸಿದ್ದು, ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಮೈಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ:
     ನಾಪೋಕ್ಲು ಠಾಣಾ ಸರಹದ್ದಿನ ಕೋಕೇರಿ ಗ್ರಾಮದ ಚೆರುವಾಳಂಡ ಮಿಟ್ಟು ತಿಮ್ಮಯ್ಯ ರವರ ಲೈನು ಮನೆಯಲ್ಲಿ ವಾಸವಿರುವ ಫಿರ್ಯಾದಿ ಶ್ರೀಮತಿ ಲತಾ ರವರು, ಸುಮಾರು 4 ವರ್ಷದಿಂದ ಗಂಡ ಮತ್ತು ಮಕ್ಕಳೊಂದಿಗೆ ಮಿಟ್ಟುರವರ ಲೈನು ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದು ಗಂಡ ಸತೀಶನಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 24-05-2016 ರಂದು ಸದರಿಯವರು ವಿಪರೀತ ಮಧ್ಯಪಾನ ಮಾಡಿಕೊಂಡು ಬಂದು ರಾತ್ರಿ 8-00 ಗಂಟೆಗೆ ಅಂಗಳದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25-05-2016 ರಂದು ರಾತ್ರಿ 10-30 ಗಂಟೆಗೆ ಮೃತಪಟ್ಟಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.
Vartika Katiyar, IPS

Thursday, May 26, 2016


ಪತ್ನಿ ಮೇಲೆ ಗಂಡನಿಂದ ಹಲ್ಲೆ ಪ್ರಕರಣ ದಾಖಲು:

     ಮದ್ಯಪಾನ ಮಾಡಿ ತನ್ನ ಹೆಂಡತಿಗೆ ಕಿರುಕುಳ ನೀಡಿ ಹಲ್ಲೆನೆಸಿರುವ ಘಟನೆ ಮಡಿಕೇರಿ ಸಮೀಪದ ಮೇಘತ್ತಾಳು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಘತ್ತಾಳು ಗ್ರಾಮದ ನಿವಾಸಿ ಶ್ರೀಮತಿ ಕೆ.ಯು. ಮೋಹನಾಕ್ಷಿ ಎಂಬವರು ಸುಮಾರು 3-4 ವರ್ಷಗಳ ಹಿಂಡೆ ಮೇಘತ್ತಾಳು ಗ್ರಾಮದ ಪವನ್ ರವರನ್ನು ಮದುವೆಯಾಗಿದ್ದು ಆಕೆಯ ಗಂಡ ಪವನ್ ಪ್ರತಿದಿನವು ಕುಡಿದು ಬಂದು ಆಕೆಯೊಂದಿಗೆ ಜಗಳಮಾಡುತ್ತಿದ್ದು ಇದೇ ಕಾರಣದಿಂದ ಸದರಿ ಮೊಹನಾಕ್ಚಿ ನಾಲ್ಕು ತಿಂಗಳಿಂದ ತನ್ನ ತಂದೆ ಮನೆಯಲ್ಲಿ ಇದ್ದು ದಿನಾಂಕ 25-5-2016 ರಂದು ತನ್ನ ತಂದೆಯೊಂದಿಗೆ ತಮ್ಮ ಮನೆಗೆ ಹೋದ ಸಂದರ್ಭದಲ್ಲಿ ಆಕೆಯ ಗಂಡ ಪವನ್, ಮಾವ ದುದ್ರಪ್ಪ ಮತ್ತು ಅತ್ತೆ ನೀಲಮ್ಮನವರುಯ ಸೇರಿ ಫಿರ್ಯಾದಿ ಕೆ.ಯು. ಮೊಹನಾಕ್ಷಿ ಮತ್ತು ಆಕೆಯ ತಂದೆಯವರನ್ನು ತಡೆದು ಅವಾಚ್ಯ ಶಬ್ಬಗಳಿಂದ ಬೈದು ಕೈಗಳಿಂದ ಇಬ್ಬರ ಮೇಲೂ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನುತ್ತೀರ್ಣಗೊಂಡ ವಿದ್ಯಾರ್ಥಿ ಆತ್ಮಹತ್ಯೆ:

     ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಗೋಣಿಕೊಪ್ಪ ಠಾಣಾ ಸರಹದ್ದಿನ ಬಿ ಶೆಟ್ಟಿಗೇರಿ ಗ್ರಾಮದ ನಿವಾಸಿ ಪಿರ್ಯಾದಿ ನಂದಕುಮಾರ್ ಎಂಬವರ ಮಗ ಪ್ರಾಯ 19 ವರ್ಷದ ರಾಜಪ್ಪನು 2ನೇ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದ್ವಿತೀರ ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ಹಿನ್ನೆಲೆಯಲ್ಲಿ ಬೇಸರಗೊಂಡು ದಿನಾಂಕ 25-05-2016ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಮಯ 10,30 ಗಂಟೆಯಿಂದ 11.00 ಗಂಟೆಯ ಒಳಗೆ ವಾಸದ ಮನೆಯ ಮಲಗುವ ಕೋಣೆಯಲ್ಲಿ ಪ್ಯಾನ್‌‌ ಅಳವಡಿಸಲು ನಿರ್ಮಿಸಿದ ಕಬ್ಬಣಿದ ಕೊಂಡಿಗೆ ವೇಲ್‌‌ನಿಂದ ಕುತ್ತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಬೈಕ್ ಡಿಕ್ಕಿ ತೀವ್ರವಾಗಿ ಗಾಯಗೊಂಡ ಸವಾರ:

     ಚಲಿಸುತ್ತಿದ್ದ ಲಾರಿಗೆ ಹಿಂಬದಿಗೆ ಬೈಕ್ ಸವಾರನೋರ್ವ ಬೈಕ್ ಡಿಕ್ಕಿಪಡಿಸಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ನಡೆದಿದೆ. ದಕ್ಚಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ಚಂದ್ರಕಿರಣ್ ಎಂಬವರು 25-5-2016 ರಂದು ತಮ್ಮ ಈಚರ್ ಲಾರಿಯಲ್ಲಿ ಮಡಿಕೇರಿ ಯಿಂದ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಳೇಕಾಡು ಎಸ್ಟೇಟ್ ಹತ್ತಿರ ಆ್ಯಂಡಿ ಮೋಹನ್ ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾರೂಕತೆಯಿಂದ ಚಾಲಿಸಿಕೊಂಡು ಲಾರಿಯ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಆತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, May 25, 2016

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ:

      ದಿನಾಂಕ23/05/2016 ರಂದು ರಾತ್ರಿ 9;00 ಗಂಟೆಗೆ ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದ ನಿವಾಸಿ ಪಣಿ ಎರವರ ಗಣೇಶ ಎಂಬವರು ಚಿಪ್ಪ ಎಂಬುವವನಿಗೆ ನೀಡಿದ್ದ ತನ್ನ ಬಾಪ್ತು ರೇಡಿಯೋವನ್ನು ಕೊಡು ಎಂದು ವಿಚಾರದಲ್ಲಿ ಕೋಪಗೊಂಡ ಚಿಪ್ಪ ಕತ್ತಿಯಿಂದ ಗಣೇಶರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

    ಆಸ್ತಿ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ಚೆಟ್ಟಳ್ಳಿ ನಡೆದಿದೆ. ಕೆ. ಚೆಟ್ಟಳ್ಳಿ ಗ್ರಾಮದ ನಿವಾಸಿ ರಮೇಶ್ ಎಂಬವರು ದಿನಾಂಕ 23-5-2016 ರಂದು ತಮ್ಮ ಬಾಪ್ತು ಕೆ.ಚೆಟ್ಟಳ್ಳಿಯಲ್ಲಿ ಇರುವ ಕಾಫಿ ತೋಟದಲ್ಲಿ ಇದ್ದಾಗ ನಮ್ಮ ಪಕ್ಕದ ತೋಟದ ಪೆರಿಯ ಸ್ವಾಮಿ ರವರೊಂದಿಗೆ ಸಮಯ 5.00 ಪಿ.ಎಂ ಗೆ ಆಸ್ತಿ ಮಾರಟದ ವಿಚಾರದಲ್ಲಿ ಮತುಕತೆ ನಡೆದಿದ್ದು, ಇದೇ ವಿಚಾರದಲ್ಲಿ ಸಮಯ 9.00 ಪಿ.ಎಂ ಗೆ ಪೆರಿಯ ಸ್ವಾಮಿಯ ಮಕ್ಕಳಾದ ಕರ್ಪಯ್ಯ ಮತ್ತು ಸುರೇಂದ್ರರವರು ರಮೇಶ್ ರವರರೊಂದಿಗೆ ಆಸ್ತಿ ಮಾರಟದ ವಿಚಾರದಲ್ಲಿ ಜಗಳ ಕತ್ತಿಯಿಂದ ಮತ್ತು ದೊಣ್ಣಯಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಲ್ಲಿಸಿದ್ದ ಕಾರಿಗೆ ಇಬ್ಬರು ವ್ಯಕ್ತಿಗಳಿಂದ ಬೆಂಕಿ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಮ್ಮೆತ್ತಾಳ್ ಗ್ರಾಮದ ನಿವಾಸಿ ಕೆ.ಟಿ.ಅನುಕೂಲ್ ಎಂಬವರು ದಿನಾಂಕ 23/05/2016 ರಂದು ಮಕ್ಕಂದೂರು ಗ್ರಾಮದ ತಮ್ಮ ಸ್ಹೇಹಿತರಾದ ತೀರ್ಥರವರ ಮನೆಗೆ ತಮ್ಮ ಬಾಪ್ತು ಕಾರು ನಂ ಕೆಎ 01 ಎಂಸಿ 2075 ರ ಕಾರಿನಲ್ಲಿ ಹೋಗಿದ್ದು ಕಾರನ್ನು ಎಂ.ಎಸ್‌ ಡಾರರವರ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿ ಅವರಿಗೆ ವಿಚಾರವನ್ನು ತಿಳಿಸಿ ಹೋಗಿದ್ದು ಸಮಯ ಸುಮಾರು 1.30 ಎ,ಎಂಗೆ ಹೆಚ್.ಆರ್‌ ವಸಂತ ಹಾಗೂ ಎಂ.ಎಸ್‌ ಶಿವಣ್ಣ ನವರು ಸದರಿ ಕಾರಿಗೆ ಬೆಂಕಿ ಹಚ್ಚಿದ್ದು ಪರಿಣಾಮವಾಗಿ ಸದರಿ ಸಂಪೂಣಱವಾಗಿ ಸುಟ್ಟುಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, May 21, 2016

ಕಾಫಿ ತೋಟದಿಂದ ಸ್ಪ್ರಿಂಕ್ಲರ್‌ ಪೈಪ್‌ಗಳ ಕಳವು:

     ದಿನಾಂಕ 18.05.2016 ರಂದು ಸುಮಾರು 4.30 ಪಿಎಂಗೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಕಾಂಡನಕೊಲ್ಲಿ ದುರ್ಗಾದೇವಿ ಕಾಫಿ ಎಸ್ಟೇಟ್ನ ಅರೆಬಿಕಾ ಬ್ಲಾಕ್‌ನಲ್ಲಿಟ್ಟಿದ್ದ 09 ಅಲ್ಯೂಮೀನಿಯಂ ಸ್ಪ್ರಿಂಕ್ಲರ್‌ ಪೈಪ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ತೋಟದ ಮಾಲೀಕರಾದ ಪಿ.ಡಿ. ಗಣಪತಿ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪರಸ್ಪರ ಆಟೋ ರಿಕ್ಷಾಗಳ ಡಿಕ್ಕಿ ನಾಲ್ಕು ಮಂದಿಗೆ ಗಾಯ:

     ಹಾಸನ ಜಿಲ್ಲೆಯ ಹೇರೂರು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಚನ್ನಮ್ಮ ನವರು ತಮ್ಮ ಗಂಡ ರಾಜು, ಅಣ್ಣನ ಮಗ ತಾರೇಶ್, ಹಾಗೂ ಮಧನ್ ಕುಮಾರ್ ರವರುಗಳು ದಿನಾಂಕ 19-5-2016 ರಂದು ಶನಿವಾರಸಂತೆಗೆ ಮದುವೆ ಕಾರ್ಯಕ್ರಮಕ್ಕೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಎದುರುಗಡೆ ಯಿಂದ ಬಂದ ಗೂಡ್ಸ್ ಆಟೋ ರಿಕ್ಷಾವು ಆಟೋರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೂ ಗಾಯಗಳಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳಿಂದ ವ್ಯಕ್ತಿಮೇಲೆ ಹಲ್ಲೆ:

    ಸೋಮವಾರಪೇಟೆ ಠಾಣಾ ಸರಹದ್ದಿನ ಕಕ್ಕೆಹೊಳೆ ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಬಿ.ವಿ. ಬಾಲಕೃಸ್ಣ ಎಂಬವರು ದಿನಾಂಕ 19-5-2016ರಂದು ಸಮಯ ರಾತ್ರಿ 9:30 ಗಂಟೆಗೆ ಸೋಮವಾರಪೇಟೆ ನಗರದ ಸಪಾಲಿ ಬಾರ್ ಗೆ ಊಟ ತರಲೆಂದು ಹೋಗಿ ಊಟವನ್ನು ಕಟ್ಟಿಸಿಕೊಂಡು ವಾಪಾಸ್ಸು ಕಾರಿಗೆ ಬಂದು ಕಾರನ್ನು ಸ್ಟಾಟ್ ಮಾಡಿ ಹಿಂದಕ್ಕೆ ತೆಗೆಯುತ್ತಿದ್ದಾಗ ಪಕ್ಕದಲ್ಲಿ ಕಲ್ಕಂದೂರು ಗ್ರಾಮದ ನಿಖಿಲ್ ರವರಿಗೆ ಸೇರಿದ ಪಿಕ್ ಅಪ್ ವಾಹನದಲ್ಲಿ ಕುಳಿತ್ತಿದ್ದ ವ್ಯಕ್ತಿ ಪಿಕ್ ಅಪ್ ವಾಹನದ ಬಾಗಿಲನ್ನು ತೆಗೆಯುವಾಗ ಪಿರ್ಯಾದಿಯವರು ಏಕೆ ನಿಮ್ಮ ಪಿಕ್ ಅಪ್ ವಾಹನದ ಬಾಗಿಲನ್ನು ತೆರೆಯುತ್ತಿದ್ದಿರಾ ಎಂದು ಹೇಳಿದಕ್ಕೆ ಸದರಿ ವ್ಯಕ್ತಿ ಬಿಯರ್ ಬಾಟಲಿಯಿಂದ ಫಿರ್ಯಾದಿ ತಲೆಗೆ ಮಾಡಿದ್ದು ಅಲ್ಲದೆ ಇನ್ನುಬ್ಬ ವ್ಯಕ್ತಿ ದೊಣ್ಣೆಯನ್ನು ತೋರಿಸಿ ಬೆದರಿಕೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವು:

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಸೀತಮ್ಮ ಎಂಬವರ ಪತಿ ಮಳ್ಳಂದೀರ ಪುಟ್ಟಯ್ಯ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ದಿನಾಂಕ 19-5-2016 ರಂದು ತಮ್ಮ ತೋಟದಲ್ಲಿ ಕೆಲಸಕ್ಕೆ ಹೋಗಿದ್ದು ಸಾಯಂಕಾಲ ಮನೆಗೆ ಬರುತ್ತಿದ್ದಾದ ದಾರಿಯಲ್ಲಿ ಬಿದ್ದು ಮೃತಪಟ್ಟಿದ್ದು, ಸದರಿಯವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, May 13, 2016

ಹಣದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:
     ದಿನಾಂಕ 11-05-2016 ರಂದು ಪಿರ್ಯಾದಿ ಡಾಲಿ ಎಂಬವರು ಕುಶಾಲನಗರದ ಬಿ ಎಸ್ ಆರ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು ಕೊಪ್ಪದಲ್ಲಿ ಮಟ್ಟನ್ ಅಂಗಡಿ ಇಟ್ಟುಕೊಂಡಿರುವ ಮೀರ್ ಮೊಹಿದ್ದೀನ್ ರವರ ಮಗ ಜಬಿಬುಲ್ಲಾರವರಿಗೆ ಹಣ ಕೊಡಲು ಬಾಕಿ ಇದ್ದು, ಇದೇ ಕಾರಣಕ್ಕೆ ಸದರಿ ಜಬಿಬುಲ್ಲಾ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಾರ್ ಒಳಗೆ ಬಂದು ಪಿರ್ಯಾದಿಯನ್ನು ಕುರಿತು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಕತ್ತಿಯನ್ನು ಬೀಸಿದ ಪರಿಣಾಮ ಕತ್ತಿಯ ಹಿಂಬಾಗ ಪಿರ್ಯಾದಿಯ ಎಡಗೈ ಮಣಿಗಂಟಿಗೆ ತಾಗಿ ಚಿಕ್ಕ ಗಾಯವಾಗಿದ್ದು ಪುನಃ ಕತ್ತಿಯ ಹಿಂಬಾಗದಿಂದ ಪಿರ್ಯಾದಿಯ ಬಲಗಾಲಿನ ಮಂಡಿಯ ಕೆಳಗೆ ಹೊಡೆದಿದ್ದು, ಅಲ್ಲದೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದ ಕಾರಣ ಮಹಿಳೆ ಆತ್ಮಹತ್ಯೆ:

    ವಿರಾಜಪೇಟೆ ತಾಲೂಕು ಬಾಡಗ ಗ್ರಾಮದ ನಿವಾಸಿ 45 ವರ್ಷ ಪ್ರಾಯದ ಅಮ್ಮಣಿ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-5-2016 ರಂದು ಸಂಜೆ ವಿಷ ಪದಾರ್ಥವನ್ನು ಸೇವಿಸಿದ್ದು, ಆಕೆಯನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 12-5-2016 ರಂದು ಆಕೆ ಮೃತಪಟ್ಟಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ:

     ಮಡಿಕೇರಿ ತಾಲೂಕು ಕಾಲೂರು ಗ್ರಾಮದ ನಿವಾಸಿ ಚರ್ಮಣನಿಗೂ ಮತ್ತು ಕೋರಿನ ಸತೀಶ್ ರವರಿಗೂ ಸುಮರು 2 ವರ್ಷಗಳಿಂದ ಸೆಂದಿ ವಿಷಯಕ್ಕೆ ಸಂಬಂದಿಸಿದಂತೆ ದ್ವೇಶವಿದ್ದು, ದಿನಾಂಕ 06-05-2016 ರಂದು ಸೆಂಜೆ ಕೋರಿನ ಸತೀಶ್ ಮತ್ತು ಪೋನ್ನಚಟ್ಟಿರ ಮನು ರವರು ಚರ್ಮಣನೊಂದಿಗೆ ಜಗಳವಾಡಿ ಚರ್ಮಣನಿಗೆ ಹಲ್ಲೇ ನೇಡೆಸಿದ್ದು ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡು ಪ್ರಜ್ಞೆಯನ್ನು ಕಳೆದುಕೊಂಡಿದ್ದು, ಆತನನ್ನು ಮಡಿಕೇರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ವತ್ರೆ ದಾಖಲಿಸಲಾಗಿ ದಿನಾಂಕ 12/05/2016 ರಂದು ಗಾಯಾಳು ಚರ್ಮಣ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. 

ವ್ಯಕ್ತಿ ಮೇಲೆ ಇಬ್ಬರು ವ್ಯಕ್ತಿಗಳಿಂದ ಹಲ್ಲೆ, ಕೊಲೆಗೆ ಯತ್ನ:

    ದಿನಾಂಕ 11/05/2016 ರಂದು ಸಮಯ ರಾತ್ರಿ 8-00 ಗಂಟೆಗೆ ಗೋಣಿಕೊಪ್ಪ ನಗರದ ಸಂತೋಷ್ ಬಾರ್ ನ ಒಳಗೆ ಪಿರ್ಯಾದಿ ಗೋಣಿಕೊಪ್ಪ ನಗರದ ನಿವಾಸಿ ಜಕ್ರಿಯಾ ಎಂಬವರು ಧರ್ಮರಾಜ್ ರವರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಪ್ರವೀಣ ನು ಪಿರ್ಯಾದಿಯ ಮುಖಕ್ಕೆ ಸಿಗರೇಟು ಹೊಗೆ ಬಿಟ್ಟು ಜಗಳ ತೆಗೆದು ಮತ್ತೊಬ್ಬ ಆರೋಪಿ ಉದಯಕ್ ಕುಮಾರನು ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲಿಯಿಂದ ಹೊಡೆದು ಅವ್ಯಾಚ್ಯ ಶಬ್ದದಿಂದ ಬೈಯ್ದು ನಂತರ ಆರೋಪಿಗಳು ಪಿರ್ಯಾದಿಯನ್ನು ಕೆಎ12 ಎಂ 1057 ರ ಮಾರುತಿ ವ್ಯಾನಿನಲ್ಲಿ ಬಲವಂತವಾಗಿ ಎಳೆದು ಹಾಕಿಕೊಂಡು ದಾರಿಯುದ್ದಕ್ಕೂ ಹಲ್ಲೆ ಮಾಡಿ ಕಳತ್ಮಾಡು ರಸ್ತೆಯಲ್ಲಿ ಬಿಟ್ಟು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನೌಕರನಿಂದ ಹಣ ವಂಚನೆ, ಪ್ರಕರಣ ದಾಖಲು:

     ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದ ನಿವಾಸಿ ಕೆ.ಪಿ. ಮೋಹನ್ ಎಂಬವರು ನಾಪೋಕ್ಲುವಿನಲ್ಲಿ ಚಾಮುಂಡಿ ಪೆಟ್ರೋಲಿಯಮ್ಸ್‌ ಎನ್ನುವ ಹೆಸರಿನಲ್ಲಿ ಪೆಟ್ರೋಲ್ ಬಂಕ್‌ನ್ನು ನಡೆಸುತ್ತಿದ್ದು, ಪೆಟ್ರೋಲ್ ಬಂಕ್ನನ ಉಸ್ತುವಾರಿಗಾಗಿ ನವೀನ್‌ ಎನ್ನುವ ವ್ಯಕ್ತಿಯನ್ನು ಮ್ಯಾನೇಜರ್ ಆಗಿ ನೇಮಕ ಮಾಡಿದ್ದು, ಈತನು ಪೆಟ್ರೋಲ್ ಬಂಕ್‌ನ ಎಲ್ಲಾ ವ್ಯವಹಾರ, ತೈಲ ಮಾರಾಟದ ಲೆಕ್ಕಾಚಾರಗಳನ್ನು ನೋಡಿಕೊಳ್ಳುತ್ತಿದ್ದು, ತೈಲ ಮಾರಾಟದ ಲೆಕ್ಕಾಚಾರದ ಬಗ್ಗೆ ಮ್ಯಾನೇಜರ್ ನವೀನ್‌ನಲ್ಲಿ ವಿಚಾರಿಸಿದಾಗ ಆತನು ದಿನಾಂಕ 10-05-2016 ರಂದು ತೈಲ ಮಾರಾಟ ಲೆಕ್ಕಾಚಾರವನ್ನು ನೀಡುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಚಾರಿಸಲು ದಿನಾಂಕ 10-05-2016 ರಂದು ನವೀನ್‌ನಿಗೆ ದೂರವಾಣಿ ಕರೆ ಮಾಡಿದಾಗ ಆತನ ದೂರವಾಣಿ ಸ್ವಿಚ್‌ ಆಫ್ ಆದ ಕಾರಣ ಬಂಕ್‌ನ ಕಛೇರಿಗೆ ಬಂದು ಡ್ರಾಯರ್‌ನಲ್ಲಿ ನೋಡಿದಾಗ ಡ್ರಾಯರ್‌ನಲ್ಲಿಟ್ಟಿದ್ದ 3,27,000 ರೂ ಕಾಣೆಯಾಗಿದ್ದು, ನವೀನ್‌ನ ಮನೆಗೆ ಹೋಗಿ ನೋಡಿದಾಗ ಆತನು ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದು, ಸದರಿ ನವೀನ್ 3,27,000 ರೂಗಳನ್ನು ತೆಗೆದುಕೊಂಡು ಹೋಗಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Thursday, May 12, 2016

ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ವ್ಯಕ್ತಿ ಸಾವು:

     ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೊಕ್ಲು ಗ್ರಾಮದ ನಿವಾಸಿ ರಾಮದಾಸ್ ಎಂಬವರಿಗೆ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 11-5-2016 ರಂದು ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದು ಮನೆಯವರೊಂದಿಗೆ ಜಗಳ ಮಾಡಿ ಮತ್ತೆ ಮನೆಯಿಂದ ಹೊರಗಡೆ ಹೋಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರಿಗೆ ಮಿನಿ ಬಸ್ ಡಿಕ್ಕಿ ಇಬ್ಬರಿಗೆ ಗಾಯ:

     ದಿನಾಂಕ 11-05-2016 ರಂದು ಫಿರ್ಯಾದಿ ಡಾ: ತೀರ್ಥನಾಥ್ ರವರು ತಮ್ಮ ಬಾಪ್ತು ಕೆಎ-01-ಎಂಬಿ-2512 ರ ಕಾರಿನಲ್ಲಿ ತನ್ನ ಮಗ ಸನತ್, ತಮ್ಮ ಡಾ. ವೆಂಕಟೇಶ್, ಅಣ್ಣ ಪ್ರಕಾಶ್ ರವರ ಮಗ ಶಿವಪ್ರಸಾದ್ ಹಾಗೂ ಚಾಲಕ ಮಣಿಕಂಠ ರವರು ಸಮಯ 12.15 ಗಂಟೆಗೆ ಬೆಂಗಳೂರಿನಿಂದ ಹೋರಟು ಮಡಿಕೇರಿ ಮಾರ್ಗವಾಗಿ ಕಾಸರಗೋಡುವಿಗೆ ಹೋಗುತ್ತಿರುವಾಗ, ಮಡಿಕೇರಿ ಬಳಿಯ ದೇವರಕೋಲ್ಲಿ ಎಂಬಲ್ಲಿ ಎದರುನಿಂದ ಒಂದು ಮಿನಿ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ಕೊಂಡು ಬಂದು ಫಿರ್ಯಾದಿಯವರು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಕಾರು ಜಖಂಗೊಂಡು ಕಾರಿನಲ್ಲಿ ಇದ್ದ ಚಾಲಕ ಮಣಿಕಂಠ ಹಾಗೂ ಶಿವ ಪ್ರಸಾದ್ ರವರಿಗೆ ಗಾಯ ನೋವು ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಾಲಕನ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ:

     ದಿನಾಂಕ 11/05/2016 ರಂದು ಸಮಯ ಸಂಜೆ 05.15 ಗಂಟೆಗೆ ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಡಿಪೋದ ಬಳಿ ಪಿರ್ಯಾದಿ ಶ್ರೀ ವೀರೇಂದ್ರ ಕುಮಾರ್ ರವರು ಕೆ.ಎಸ್.ಆರ್.ಟಿಸಿ ಬಸ್ ನಂ ಕೆಎ-09-ಎಫ್-4391 ರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಸ್ಕೂಟರ್ ಒಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಬಸ್ ನ್ನು ತಡೆದು ನಿಲ್ಲಿಸಿ ಬಸ್ ಗೆ ಸೈಡ್ ಕೊಡಲು ಹಾರನ್ ಮಾಡಿದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಯವರನ್ನು ಬಸ್ ನಿಂದ ಕೆಳಗೆ ಇಳಿಸಿ ಹೆಲ್ಮೆಟ್ ನಿಂದ ಪಿರ್ಯಾದಿಯವರ ತಲೆಗೆ ಹಾಗೂ ಕೈ ಯಿಂದ ಶರೀರಕ್ಕೆ ಹೊಡೆದು ನೋವುಂಟು ಪಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, May 11, 2016

ಜೀವನದಲ್ಲಿ ಜಿಗುಪ್ಸೆ, ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವಿರಾಜಪೇಟೆ ತಾಲೂಕು ಬಾಳೆಲೆ ಗ್ರಾಮದ ಕೊಪ್ಪಲು ಎಂಬಲ್ಲಿ ವಾಸವಾಗಿರುವ ಎಂ.ಎಂ. ಸುಬ್ಬಯ್ಯ ಎಂಬವರ ಮಗ ದಿನೇಶ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-5-2016 ರಂದು ಯಾವುದೋ ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಪ್ಸಿ ಕೆಎಸ್ ಆರ್ ಟಿಸಿ ಬಸ್ಸಿಗೆ ಡಿಕ್ಕಿ ಯುವತಿ ಸಾವು:

     ದಿನಾಂಕ 10.05.2016 ರಂದು ಮೈಸೂರಿನ ನಿವಾಸಿ ಡಿವಿತ್‌ರಮೇಶ್‌ ಎಂಬವರು ತಮ್ಮ 6 ಮಂದಿ ಸ್ನೇಹಿತರೊಂದಿಗೆ ಪಿಬಿ 04 ವಿ 1695 ರ ಮಾರುತಿ ಜಿಪ್ಸಿ ಜೀಪಿನಲ್ಲಿ ಮಡಿಕೇರಿಗೆ ಬರುತ್ತಿರುವಾಗ್ಗೆ ಸಮಯ 11.30 ಗಂಟೆಗೆ ಕೆದಕಲ್‌ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಸ್ವಲ್ಪ ಮೇಲ್ಭಾಗದಲ್ಲಿ ತಲುಪುವಾಗ್ಗೆ ಸದರಿ ವಾಹನದ ಚಾಲಕ ಡಿವಿತ್ ರಮೇಶ ರವರು ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ 19 ಎಫ್‌ 3217 ರ ಕೆಎಸ್‌ಆರ್‌ಟಿಸಿ ಬಸ್ಸಿನ ಬಲಭಾಗಕ್ಕೆ ಡಿಕ್ಕಿಪಡಿಸಿ ಉಜ್ಜಿಕೊಂಡು ಮುಂದೆ ಹೋಗಿ ರಸ್ತೆಯಲ್ಲಿ ಪಲ್ಟಿಯಾಗಿದ್ದು ಜಿಪ್ಸಿ ವಾಹನದಲ್ಲಿದ್ದ ಚೈತ್ರಪೂರ್ಣಿಮ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು ವಾಹನದಲ್ಲಿದ್ದ ಉಳಿದ ಆರು ಜನರಿಗೂ ಗಾಯಗಳಾಗಿದ್ದು, ಅಪಘಾತವನ್ನು ವೀಕ್ಷಿಸಿದ ಎ.ಜೆ. ನಯಾಜ್ ಎಂಬವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಾಲ್ಕು ಮಂದಿಯಿಂದ ವ್ಯಕ್ತಿಯ ಮನೆಗೆ ಅಕ್ರಮ ಪ್ರವೇಶ, ಆಸ್ತಿ ಹಾನಿ, ಕೊಲೆ ಬೆದರಿಕೆ:

     ದಿನಾಂಕ 09-05-2016 ರಂದು ಸಮಯ 15-30 ಗಂಟೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದು ಆರ್ಜಿ ಗ್ರಾಮದ ಪಿರ್ಯಾದಿ ಚಂದಪ್ಪಂಡ ಪೂವಯ್ಯ @ ಕಸ್ತೂರಿ ಯವರೊಂದಿಗೆ ಆರೋಪಿತರಾದ ಪೂವಯ್ಯ, ಶೀಲ, ಅಪ್ಪಣ್ಣ ಮತ್ತು ಅನುಪಮ ರವರುಗಳು ದಾರಿಯ ವಿಚಾರದಲ್ಲಿ ಜಗಳ ತೆಗೆದು ಮನೆಯ ಅಂಗಳಕ್ಕೆ ಕತ್ತಿ ದೊಣ್ಣೆಯೊಂದಿಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಿಗೆ ಹಾಗೂ ಕಿಟಕಿ ಗೋಡೆಗಳಿಗೆ ಹೊಡೆದು ಬಾಗಿಲನ್ನು ಜಖಂ ಗೊಳಿಸಿದಲ್ಲದೇ ಕೊಲೆ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Tuesday, May 10, 2016

ಜೀಪು ಡಿಕ್ಕಿ ಮಹಿಳೆಗೆ ಗಾಯ:

   ಪೊನ್ನಂಪೇಟೆ ಠಾಣಾ ಸರಹದ್ದಿನ ಮಾಪಿಳ್ಳೆತೋಡು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಜೈಬುನ್ನೀಸ ಎಂಬವರು ದಿನಾಂಕ 08/05/2016 ರಂದು 19-00 ಗಂಟೆಗೆ ಮನೆಗೆ ಪೊನ್ನಂಪೇಟೆಗೆ ಹೋಗಿ ಕಾನ್ವೆಂಟ್ ಹತ್ತಿರ ಮುಖ್ಯರಸ್ತೆಯಲ್ಲಿ ತಲುಪಿದಾಗ ಶ್ರೀಮಂಗಲ ಕಡೆಯಿಂದ ಕೆ ಎ 20 ಎಂ 2353 ರ ಜೀಪನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸದರಿ ಜೈಬುನ್ನೀಸ ರವರ ಬಲಕಾಲಿಗೆ, ಎಡಕಾಲು ಮಂಡಿಗೆ ,ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಪಡಿಸಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೋದಾಮಿನಿಂದ ಕರಿಮೆಣ ಕಳವು:

   ಪಿರ್ಯಾದಿ ಬಿ. ರಮೇಶ್ ಎಂಬವರು ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಪಾಲೆಕಂಡ ಶೈಲ ದೇವಯ್ಯನವರ ತೋಟದಲ್ಲಿ ಸುಮಾರು 7 ವರ್ಷಗಳಿಂದ ರೈಟರ್ ಕೆಲಸ ಮಾಡಿಕೊಂಡಿದ್ದು ತೋಟದ ವಸತಿ ಗೃಹದಲ್ಲಿ ವಾಸವಿರುವುದಾಗಿದೆ. ದಿನಾಂಕ 8/5/2016 ರಂದು ಸಮಯ 11.45 ಪಿ ಎಂ ಗೆ ನಾಯಿ ಬೊಗಳುವ ಶಬ್ದ ಕೇಳಿ ಹೊರಗೆ ಬಂದು ನೋಡಲಾಗಿ 2 ಜನ ಗೋದಾಮಿನ ಬಳಿಯಿಂದ ಓಡಿ ಹೋಗಿದ್ದು ಒಬ್ಬನು ಗೋದಾಮಿನ ಹಂಚಿನ ಮೇಲಿನಿಂದ ಕೆಳಗೆ ಹಾರಿ ಓಡಿ ಹೋಗಿದ್ದು ಟಾರ್ಚ್ ಬಿಟ್ಟು ನೋಡಲಾಗಿ ಗೋದಾಮಿನ ಹಂಚುಗಳನ್ನು ಸರಿಸಿ ಪಕ್ಕಕ್ಕೆ ಇಟ್ಟಿರುವುದು ಕಂಡು ಬಂದಿರುತ್ತದೆ.ನಂತರ ಪಿರ್ಯಾದಿಯವರು ಸ್ಥಳದಲ್ಲೆ ಕಾದು ಕುಳಿತ್ತಿದ್ದು ದಿನಾಂಕ 9/5/2016 ರಂದು ಸಮಯ 4.00 ಎ ಎಂ ವೇಳೆಗೆ ಒಬ್ಬ ಆಸಾಮಿಯು ಗೋದಾಮಿನ ಒಳಗಿನಿಂದ ಹಂಚಿನ ಮುಲಕ ಹೊರಗೆ ದಾಟಿ ಮೇಲಿನಿಂದ ಜಿಗಿದಿದ್ದು ಆತನನ್ನು ಹಿಡಿದುಕೊಂಡು ಆತನ ಹೆಸರು ಕೇಳಲಾಗಿ ಮನು ಎಂದು ತಿಳಿಸಿದ್ದು ಮತ್ತೆ ಪರಿಶೀಲಿಸಲಾಗಿ ಸುಮಾರು 7000 ರೂ. ಮೌಲ್ಯದ ಕರಿಮೆಣಸು ಕಳ್ಳತನ ವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vartika Katiyar, IPS :19 PM

Monday, May 9, 2016

 ನಾಲ್ಕುಜನ ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯ ದಾರಿ ತಡೆದು ಹಲ್ಲೆ:

      ಮಡಿಕೇರಿ ನಗರದ ಕಾಲೇಜು ರಸ್ತೆ ವಿಳಾಸದಲ್ಲಿ ವಾಸವಾಗಿರುವ ಪಿರ್ಯಾದಿ ಮಹಮ್ಮದ್ ರವರು ಮಧ್ಯಾಹ್ನ 2 ಗಂಟೆಗೆ ಕಾಲೇಜು ರಸ್ತೆಯಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಕೆ.ಎಲ್-59-ಎಫ್-3047 ವಾಹನದಲ್ಲಿ ಬಂದಿದ್ದ 4 ಜನರು ಪಿರ್ಯಾದಿಯನ್ನು ಚುಡಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಅಲ್ಲದೇ ರಾಡಿನಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬೈಕ್ ಡಿಕ್ಕಿ ವ್ಯಕ್ತಿ ಸಾವು:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿದರೂರು ಗ್ರಾಮದ ನಿವಾಸಿಯಾದ ಶ್ರೀಮತಿ. ಕುಸುಮಾರವರ ತಂದೆ ಶಕುನಪ್ಪರವರು ದಿನಾಂಕ 8-5-2016 ರಂದು ಬೆಳಿಗ್ಗೆ ಶನಿವಾರಸಂತೆ ನಗರದ ಮುಸ್ತಾಫ್ ಹೊಟೇಲ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿ ಅಸೀಪ ಎಂಬವರು ತನ್ನ ಮೋಟಾರ್ ಸೈಕಲ್ ಕೆಎ-18 ಯು-5091ರ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಕುನಪ್ಪರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಅವರನ್ನು ಚಿಕಿತ್ಸೆಗಾಗಿ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾದೇ ಮೃತ ಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
Vartika Katiyar, IPS

Sunday, May 8, 2016

ಎಮ್ಮೆಗಳ ಕಳವು ಪ್ರಕರಣ ದಾಖಲು:
     ದಿನಾಂಕ 06-05-2016ರಂದು ರಾತ್ರಿ ಸಮಯ 12.30 ಗಂಟೆಗೆ ಗೋಣಿಕೊಪ್ಪ ಪೊಲೀಸ್‌‌ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಶ್ರೀ. ಜೆ.ಡಿ. ವಿನೋದ್‌‌ ರವರ ಬಾಪ್ತು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20,000/- ರೂ ಬೆಲೆ ಬಾಳುವ ಎರಡು ಎಮ್ಮೆಗಳನ್ನು ಆರೋಪಿಗಳಾದ ರಿಯಾಜ್ ತಂದೆ ಲೇಟ್ ಇಬ್ಯಾಹಿಂ ಪ್ರಾಯ 30 ವರ್ಷ ವಾಸ ಚೋಕಂಡಹಳ್ಳಿ ನಲುವತೋಕ್ಲು ಗ್ರಾಮ ಮತ್ತು ಮೊಹಮದ್ ಕೊಂಡಂಗೇರಿ ಇವರುಗಳು ಕಳ್ಳತನ ಮಾಡಿಕೊಂಡು ಹೋಗಿದ್ದನ್ನು ಕೈಕೇರಿ ಗ್ರಾಮದ ಕಳತ್ಮಾಡು ರಸ್ತೆಯಲ್ಲಿ ಫಿರ್ಯಾದಿ ಜೆ.ಡಿ. ವಿನೋದ್‌ರವರು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ವ್ಯಕ್ತಿಯ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ವಂಚನೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಅಂಜಗೇರಿ ಬೆಟ್ಟಗೇರಿ ಗ್ರಾಮದ ನಿವಾಸಿ ಪಿರ್ಯಾದಿ ಜಿ ಕೆ ಚಂದ್ರಯ್ಯ ರವರು ಸುಂಟಿಕೊಪ್ಪ ಕೆನಾರಾ ಬ್ಯಾಂಕ್ ನಲ್ಲಿ ಅಕೌಂಟ್ ನಂ 06688101015488 ರ ಖಾತೆ ಹೊಂದಿದ್ದು ದಿನಾಂಕ 15.02.16 ರಂದು ಸಮಯ 05.00 ಪಿಎಮ್ ಯಾರೋ ಒಬ್ಬ ವ್ಯಕ್ತಿ ಮೊಬೈಲ್ ನಂ 91-8407834209 ರಿಂದ ಕರೆ ಮಾಡಿ ನಾನು ಸುಂಟಿಕೊಪ್ಪ ಬ್ಯಾಂಕ್ ಮ್ಯಾನೇಜರು ಮಾತಾನಾಡುತ್ತಿರುವುದು ನಿಮ್ಮ ಎಟಿಎಮ್ ಕಾರ್ಡು ನ್ನು ರಿನಿವಲ್ ಮಾಡಬೇಕು ಇಲ್ಲದಿದ್ದರೆ ನಿಮ್ಮ ಅಕೌಂಟ್ ನಲ್ಲಿ ಹಣ ಕಟ್ಟಾಗುತ್ತದೆ ಹಾಗೂ ನಿಮ್ಮ ಎಟಿಎಮ್ ಕಾರ್ಡು ಕ್ಯಾನ್ಸಲ್ ಆಗುತ್ತದೆ ನಿಮ್ಮ ಎಟಿಎಮ್ ಕಾರ್ಡು ನಂ ಹೇಳಿ ಎಂದು ಹೇಳಿದ್ದು ಇದನ್ನು ನಂಬಿದ ಫಿರ್ಯಾದಿ ಅವರ ಎಟಿಎಂ ಕಾರ್ಡ್ ಮಾಹಿತಿಯನ್ನು ತಿಳಿಸಿದ್ದು, ಇದನ್ನು ಉಪಯೋಗಿಸಿ ಅಪರಿಚಿತ ವ್ಯಕ್ತಿ ಫಿರ್ಯಾದಿಯ ಬ್ಯಾಂಕ್ ಖಾತೆಯಿಂದ 49,000/- ರೂ.ಗಳನ್ನು ಡ್ರಾ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:

      ಸೋಮವಾರಪೇಟೆ ನಗರದ ನಿವಾಸಿ ಫಿರ್ಯಾದಿ ಬಿ.ಪಿ. ರಾಜುರವರು ಅರೆಯೂರು ಗ್ರಾಮದಲ್ಲಿ ನೆಲೆಸಿರುವ ಅವರ ತಂಗಿ ಜಾನಕಿಯವರಿಗೆ ಸೇರಿದ ಆಸ್ತಿಯನ್ನು ಫಿರ್ಯಾದಿಯವರ ಹೆಸರಿಗೆ ಜಿ.ಪಿ.ಎ ಮಾಡಿರುವುದರಿಂದ ಫಿರ್ಯಾಧಿಯವರು ನೋಡಿಕೊಳ್ಳುತ್ತಿದ್ದು ದಿನಾಂಕ 05.02.2016 ರಂದು ಸಂಜೆ 05:30 ಗಂಟೆಗೆ ಫಿರ್ಯಾದಿಯವರು ತಂಗಿಯ ತೋಟದ ಹತ್ತಿರ ಹೋಗುವುವಾಗ ಆರೋಪಿಗಳಾದ ಅರೆಯೂರು ಗ್ರಾಮದ ನಿವಾಸಿಗಳಾದ ನಾಗೇಶ್ ಮತ್ತು ಪ್ರೇಮ ರವರುಗಳು ದಾರಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಪರೀತ ಮದ್ಯ ಸೇವಿಸಿದ ಮಹಿಳೆ ಸಾವು:

     ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದ ನಿವಾಸಿ ಅಜ್ಜಮಾಡ ಕಾಳಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಫಿರ್ಯಾದಿ ಪಂಜರಿ ಎರವರ ಕಾಳ ಇವರ ಹೆಂಡತಿ ದಿನಾಂಕ 7-5-2016 ರಂದು ಕುರ್ಚಿಗ್ರಾಮದ ಪಾರೆಕಲ್ಲು ಎಂಬಲ್ಲಿ ರಾತ್ರಿ ಮಲಗಿದ್ದಾಗ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ವಶ ಆರೋಪಿ ವಿರುದ್ದ ಪ್ರಕರಣ:

 ದಿನಾಂಕ 7-5-2016 ರಂದು ಸಂಜೆ 04:00 ಗಂಟೆಗೆ ಕುಶಾಲನಗರ ಠಾಣಾಧಿಕಾರಿ ಶ್ರೀ ಅನೂಪ್ ಮಾದಪ್ಪ ರವರು ಕರ್ತವ್ಯ ನಿಮಿತ್ತ ಇಲಾಖಾ ಜೀಪಿನಲ್ಲಿ ಸಿಬ್ಬಂಧಿಯವರೊಂದಿಗೆ ಶಿರಂಗಾಲದ ಕಡೆಗೆ ಹೋಗುತ್ತಿದ್ದಾಗ ಅವರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಣಿವೆ ಗ್ರಾಮದ ಲಿಂಗರಾಜುರವರು ವಾಸ ಮಾಡುತ್ತಿರುವ ಮನೆಗೆ ಹೋಗಿ ದಾಳಿ ಮಾಡಿದಾಗ ಮನೆಯ ಕೊಟ್ಟಿಗೆಯಲ್ಲಿ 37 ಒರಿಜಿನಲ್ ಚಾಯಸ್ 90 ಎಂ.ಎಲ್. ನ ಪ್ಯಾಕೇಟುಗಳನ್ನು ಮಾರುತ್ತಿದ್ದು, ಅವರುಗಳನ್ನು ಆರೋಪಿಯಿಂದ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Saturday, May 7, 2016

ವ್ಯಕ್ತಿಯ ಮೇಲೆ ಮತ್ತೊಬ್ಬನಿಂದ ಹಲ್ಲೆ:

      ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ನ್ಯೂ ಮುನಿಲಿಪಾಲಿಟಿ ನಿವಾಸಿ ಪಿರ್ಯಾದಿ ಅನ್ಸರ್ ಎಂಬವರು ದಿನಾಂಕ 30-4-2016 ರಂದು ಮಸೀದಿಯ ಮುಂಭಾಗದ ರಸ್ತೆಯಲ್ಲಿತೆರಳುತ್ತಿರುವಾಗ್ಗೆ ಆರೋಪಿ ಅಸೀಪ್ ಎಂಬವರು ಅನ್ಸರ್ ರವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿರುತ್ತಾರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ವ್ಯಕ್ತಿ ಹಲ್ಲೆ, ಕೊಲೆ ಬೆದರಿಕೆ:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆ ಗ್ರಾಮದ ನಿವಾಸಿಯಾದ ಅಸೀಫ್ ಎಂಬವರು ದಿನಾಂಕ 30.04.2016ರಂದು ಬೆಳಿಗ್ಗೆ ಸಮಯ 07.00 ಗಂಟೆಯ ಸಮಯದಲ್ಲಿ ಅವರ ಮನೆಯ ಹತ್ತಿರ ಆರೋಪಿ ಅನ್ಸರ್ ೆಂಬಾತ ಬಂದು ಅಸೀಫ್ ನವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಅವರ ಹೆಂಡತಿ ಮತ್ತು ಮಕ್ಕಳಿಗೆ ಹೀನಾ ಮಾನವಾಗಿ ಬೈಯ್ದಿರುವುದಾಗಿದೆ ಅಲ್ಲದೆ ನೀನು ಹಾಸನಕ್ಕೆ ಬಾ ನಿನ್ನ ಕೈ ಕಾಲು ಕಡಿಸುತ್ತೇನೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆಯನ್ನು ಹಾಕಿರುವುದಾಗಿನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ವ್ಯಕ್ತಿಗೆ ವಂಚನೆ:

      ಮಡಿಕೇರಿ ನಗರ ನಿವಾಸಿ ಫಿರ್ಯಾದಿ ಪೂವಣ್ಣ ಎಂಬವರು 2014ರಲ್ಲಿ ಮಾಚಯ್ಯ ಎಂಬವರಿಂದ 10ಲಕ್ಷ ರೂಗಳನ್ನು ಸಾಲವಾಗಿ ಪಡೆದುಕೊಂಡು ಅದಕ್ಕೆ 4 ಖಾಲಿ ಚೆಕ್ ಗಳನ್ನು ಆದಾರವಾಗಿ ನೀಡಿದ್ದು, ದಿನಾಂಕ 3-11-2014 ರಂದು ಪಿರ್ಯಾದಿಯವರು ತಾವು ಪಡೆದ ಸಾಲದ ಹಣ 12.5 ಲಕ್ಷ ಗಳನ್ನು ಮಾಚಯ್ಯನವರಿಗೆ ವಾಪಾಸು ನೀಡಿರುತ್ತಾರೆ. ಆದಾಗ್ಯು ಸದರಿ ಮಾಚಯ್ಯನವರು ಪುನ: ಹಣಕ್ಕಾಗಿ ಫಿರ್ಯಾದಿಯಿಂದ ಪಡೆದ ಚೆಕ್ ನಲ್ಲಿ 30 ಲಕ್ಷ ಹಣವನ್ನು ನಮೂದಿಸಿ ಮಡಿಕೇರಿ ನ್ಯಾಯಾಲಯದಲ್ಲಿ ಫಿರ್ಯಾದಿ ವಿರುದ್ದ ಖಾಸಗಿ ದೂರನ್ನು ನೀಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, May 4, 2016

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಬಳಿಯ ಜೋಡುಪಾಲ ಗ್ರಾಮದಲ್ಲಿ ನಡೆದಿದೆ.  ದಿನಾಂಕ 03-05-2016 ರಂದು ಕೆ.ಎಸ್.ಆರ್.ಟಿ.ಸಿ ಬಸ್ಸು ನಂ ಕೆಎ-09-ಎಫ್-4612 ರಲ್ಲಿ ಚಾಲಕ ನಟೇಶ್‌ ಮತ್ತು ಯೋಗೇಶ್ ಎಂಬುವವರು ನಿರ್ವಹಕನಾಗಿ ರೂಟ್ ನಂ 90-91 ರಲ್ಲಿ ಮಂಗಳೂರಿನಿಂದ ಮಡಿಕೇರಿ ಕಡೆ ಬರುತ್ತಿರುವಾಗ ಸಮಯ ಸುಮಾರು 16.15 ಗಂಟೆಗೆ ಬಸ್ಸು ಜೋಡುಪಾಲ ಬಳಿ ಎದುರು ಕಡೆಯಿಂದ ಕೆಎ-21-ಎನ್-8153ರ ಕಾರನ್ನು ಅದರ ಚಾಲಕಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಟೇಶ್‌ರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರು ಜಖಂಗೊಂಡು, ಕಾರಿನಲ್ಲಿ ಇದ್ದ ನಾಲ್ಕು ಜನರಿಗೆ ಗಾಯ ನೋವಾಗಿರುವುದಾಗಿ  ನೀಡಿದ ದೂರಿನ ಮೇರೆಗ  ಮಡಿಕೇರಿ  ಗ್ರಾಮಾಂತರ ಪೊಲೀಸರು ಪ್ರಕರಣ  ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ.

ಅಪರಿಚಿತರಿಂದ ಮಹಿಳೆಯ ಹತ್ಯೆ
                  ಅಪರಿಚಿತರಿಂದ ಮಹಿಳೆಯೊಬ್ಬರ ಹತ್ಯೆಯಾದ ಘಟನೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 02/05/2016ರಂದು ರಾತ್ರಿ ವೇಳೆ ವೆಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ ಪಣಿ ಎರವರ ಅಪ್ಪು ಎಂಬವರ ತಾಯಿಯನ್ನು ಯಾರೋ ಅಪರಿಚಿತರು ಟಿ.ಶೆಟ್ಟಿಗೇರಿಯ ಶಾಲೆಯ ಆವರಣದಲ್ಲಿ ಹೊಡೆದು ಕೊಲೆ ಮಾಡಿರುವುದಾಗಿ ಅಪ್ಪುರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

Tuesday, May 3, 2016

ಮೋಟಾರ್ ಸೈಕಲ್ ಪರಸ್ಪರ ಡಿಕ್ಕಿ:

     ದಿನಾಂಕ 2-5-2016 ರಂದು ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮದ ನಿವಾಸಿ ಪಿರ್ಯಾದಿ ಎಂ.ಆರ್. ಶಫಿಕ್ ಹಾಗೂ ಅವರ ತಮ್ಮ ಷಫೀರ್ ರವರು ಕೆಎ12ಎಲ್1583 ರ ಮೋಟಾರ್ ಸೈಕಲ್ಲಿನಲ್ಲಿ ಸಿದ್ದಾಪುರದಿಂದ ವಿರಾಜಪೇಟೆ ಕಡೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು 6.30 ಪಿ.ಎಂ ಗೆ ವಿನಾಯಕ ನಗರದ ಹತ್ತಿರ ಎದುರು ಗಡೆಯಿಂದ ಬಂದ ಮೋಟಾರ್ ಸೈಕಲ್ ನಂ ಕೆಎ 12ಎಲ್ 7917 ರಲ್ಲಿ ಮೂರು ಜನ ಬರುತ್ತಿದ್ದು ಸದ್ರಿ ಮೋಟಾರ್ ಸೈಕಲ್ಲನ್ನು ಅದರ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ಲಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಕೆಳಗೆ ಬಿದ್ದು ನೋವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ದೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು:

      ದಿನಾಂಕ 02/05/2016 ರಂದು ಸಮಯ 17.45 ಗಂಟೆಗೆ ಫಿರ್ಯಾದಿ ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್ ಎಂಬವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಟಿ.ಎ. ಮಹೇಶ್ ಎಂಬವರು ಠಾಣಾ ಮೊ.ಸಂ: 57/2016 ಕಲಂ 379 ಐಪಿಸಿ ರೆ.ವಿ 4, 21 ಎಂ.ಎಂ.ಆರ್.ಡಿ ಕಾಯ್ದೆ ಪ್ರಕರಣದಲ್ಲಿ ಆರೋಫಿಯಾಗಿದ್ದು, ಸದರಿಯವರ ಲಾರಿಯನ್ನು ಪ್ರಕರಣವೊಂದರಲ್ಲಿ ಅಮಾನತ್ತು ಪಡಿಸಿಕೊಂಡಿದ್ದು ಅದರ ದಾಖಲಾತಿ ಸಂಬಂಧ ಸದರಿ ಆರೋಪಿಯು ದಾಂಧಲೆ ಮಾಡಿ ಸರ್ಕಾರಿ ಕಛೇರಿಯಲ್ಲಿ ಉದ್ದಟತನದಿಂದ ವರ್ತಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ, ಮಹಿಳೆ ಆತ್ಮಹತ್ಯೆ:

    ವಿರಾಜಪೇಟೆ ತಾಲೂಕು ಬೂದಿಮಾಳ ಹೆಗ್ಗಳ ಗ್ರಾಮದ ನಿವಾಸಿ ಪಿರ್ಯಾದಿ ಪಿ.ಎ. ವಿನೋದ್ ಎಂಬವರ ತಾಯಿ ತಿಲೋತ್ತಮೆ ರವರು ದಿ: 13-02-2016 ರಂದು ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಾಡಿದಲ್ಲೂ ಪತ್ತೆಯಾಗದ್ದರಿಂದ ದಿ:15-02-2016 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸದರಿ ಕಾಣೆಯಾದ ಮಹಿಳೆಯ ಮೃತ ದೇಹವು ಮಂಡೆಪಂಡ ಸುಜಾ ಕುಶಾಲಪ್ಪರವರ ತೊಟದ ಪಕ್ಕದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸದರಿ ಮಹಿಳೆಯು ಅನಾರೋಗ್ಯ ದಿಂದ ನರಳುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆಂದು ಮೃತ ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯಿಂದ ಮಹಿಳೆಯ ಮಾನಭಂಗ ಮತ್ತು ಕೊಲೆಗೆ ಯತ್ನ:

     ನಾಕೋಕ್ಲು ಠಾಣಾ ಸರಹದ್ದಿನ ಅಜ್ಜಿಮುಟ್ಟ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಶೀಲಾ ಎಂಬವರು ದಿನಾಂಕ 2-5-2016 ರಂದು 11-30 ಗಂಟೆ ಸಮಯದಲ್ಲಿ ಕಾವೇರಿ ನದಿಗೆ ಬಟ್ಟೆ ತೊಳೆಯಲು ಹೋಗಿ ಬಟ್ಟೆ ತೊಳೆಯುತ್ತಿದ್ದಾಗ ನನ್ನ ಹಿಂದಿನಿಂದ ಶಬ್ದ ಕೇಳಿ ತಿರುಗಿ ನೋಡಿದಾಗ ಒಬ್ಬ ಅಪರಿಚಿತ ಅಸ್ಸಾಂನವರಂತೆ ಕಾಣುವ ವ್ಯಕ್ತಿಯು ನಿಂತುಕೊಂಡಿದ್ದು, ಆತನು ಆಕೆಯೊಂದಿಗೆ ಸೆಕ್ಸ್ ಸೆಕ್ಸ್ ಎಂದು ಹೇಳಿ ಅವರ ಮೇಲೆ ಹಾರಿದ್ದು ಆಗ ಶೀಲಾರವರು ಆತನಿಂದ ತಪ್ಪಿಸಿ ಓಡಲು ಪ್ರಯತ್ನಿಸಿದಾಗ ಅವನು ಆಕೆಯನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ ಬಟ್ಟೆಯನ್ನು ಎಳೆದು ಹರಿದು ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೆ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vartika Katiyar, IPS

Monday, May 02, 2016


ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ.

    ವಿರಾಜಪೇಟೆ ತಾಲೂಕು ಬಾಳಾಜಿ ಗ್ರಾಮದ ನಿವಾಸಿ ಪಿರ್ಯಾದಿ ಶ್ರೀಮತಿ ಗೀತಾಳ ಗಂಡ ಪ್ರಾಯ 45ರ ರಾಜುರವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ಆತ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01-05-2016ರಂದು ಸಮಯ 06.00 ಗಂಟೆಗೆ ತಾನು ವಾಸವಾಗಿರುವ ಮನೆಯಲ್ಲಿ ಲೈಲಾನ್‌‌ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಸಾವು:

    ದಿನಾಂಕ 14-4-2016 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಕಾವೇರಿ ಕಾಲೇಜಿನ ನೀರು ಟ್ಯಾಂಕ್ ಹತ್ತಿರ ಸುಮಾರು 75 ರಿಂದ 80 ವರ್ಷ ವಯಸ್ಸಿನ ಅಪರಿಚಿತ ಹೆಂಗಸು ಬಂದು ಅನ್ನ ನೀರು ಇಲ್ಲದೆ ನಿತ್ರಾಣಗೊಂಡಿದ್ದು ಆಕೆಯನ್ನು ದುಂಡಳ್ಳಿ ಪಂಚಾಯ್ತಿಯ ಪಿ.ಡಿ.ಒ. ರವರು ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈಧ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಸದರಿ ಅಪರಿಚತ ಹೆಂಗಸು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-04-2016 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿದ್ದು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ರಸ್ತೆ ಬದಿಯಲ್ಲಿ ನಿಂತ ವ್ಯಕ್ತಿಗೆ ಬೈಕ್ ಡಿಕ್ಕಿ:

    ನಾಪೋಕ್ಲು ಠಾಣಾ ಸರಹದ್ದಿನ ನಾಪೋಕ್ಲು ನಗರದ ಸುನ್ನಿ ಮೊಹಿದ್ದೀನ್ ಜುಮಾ ಮಸೀದಿಯ ಮುಂದುಗಡೆ ಬೇತು ಗ್ರಾಮದ ನಿವಾಸಿ ಪಿ.ಎಂ. ಬಾದಷಾ ಎಂಬವರು ದಿನಾಂಕ 30-4-2016 ರಂದು 20-30 ಗಂಟೆಗೆ ನಿಂತುಕೊಂಡಿರುವಾಗ್ಗೆ ನಾಪೋಕ್ಲು ಬಸ್ ನಿಲ್ದಾಣದ ಕಡೆಯಿಂದ ಮನ್ಸೂರ್ ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪಿ.ಎಂ. ಬಾದಷಾ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಬಾದಷಾರವರು ಗಾಯಗೊಂಡಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, May 1, 2016

ಹಳೆ ದ್ವೇಷ, ವ್ಯಕ್ತಿ ಮೇಲೆ ಇಬ್ಬರಿಂದ ಹಲ್ಲೆ:

     ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ವಾಸವಾಗಿರುವ ಪಿರ್ಯಾದಿ ಅಬುಬಕರ್ ರವರು ಇಂಪೀರಿಯಲ್ ಸ್ಪೈಸಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಮೊದಲು ತನ್ನ ಹೆಂಡತಿಯ ತಂಗಿಯ ಗಂಡ ಇಬ್ರಾಹಿಂ ರವರೊಂದಿಗೆ ಕೆಲಸ ಮಾಡುತ್ತಿದ್ದರು. ಅಲ್ಲಿ ಸರಿಬಾರದ್ದರಿಂದ ಕೆಲಸ ಬಿಟ್ಟಿದ್ದು, ಈ ವಿಚಾರದಲ್ಲಿ ಆರೋಪಿಗಳು ಅಸಮಧಾನಗೊಂಡು ದ್ವೇಷದಿಂದ ದಿನಾಂಕ 30-4-2016 ರಂದು ಸಮಯ ಮದ್ಯಾಹ್ನ 12.00 ಗಂಟೆಗೆ ಅಂಗಡಿಯ ಎದುರಿಗೆ ಇರುವ ಕಾರು ಸ್ಟಾಂಡಿನ ಬಳಿ ಪಿರ್ಯಾದಿಯವರು ಹೋಗುತ್ತಿದ್ದಾಗ ಅಲ್ಲಿ ಹುಸೇನ್ ಹಾಗೂ ಆತನ ಮಗ ಸುಪೇಲ್ ಇದ್ದು, ಇವರು ಹಳೆ ದ್ವೇಷದಿಂದ ಪಿರ್ಯಾದಿಯ ಮೂಗಿನ ಭಾಗಕ್ಕೆ ಮತ್ತು ಎಡ ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಾನೂರು ಗ್ರಾಮದ ನಿವಾಸಿ ಸಜು @ ಪಾಲು (28) ಎಂಬ ವ್ಯಕ್ತಿ ದಿನಾಂಕ 29-4-16 ರಂದು ವಡ್ಡರಮಾಡುವಿನಲ್ಲಿರುವ ಹೊಳೆಯಲ್ಲಿ ಸ್ನೇಹಿತರೊಂದಿಗೆ ಹೋಗಿ ಹೋಳೆಯಲ್ಲಿ ಸ್ನಾನ ಮಾಡುತ್ತಿರುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vartika Katiyar, IPS

Saturday, April 30, 2016

ಮನೆ ಕಳುವು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚಟ್ಟಳ್ಳಿ ಫಾರಂ ನಲ್ಲಿ ವಾಸವಾಗಿರುವ ಪಾತೀಮಾ ಎಂಬವರ ಮನೆಯಿಂದ 45000 ರೂ ಬೆಲೆಬಾಳುವ ಚನ್ನಾಭರಣಗಳು ಕಳವು ಆಗಿದ್ದು, ಸದರಿ ಕಳ್ಳತನವನ್ನು ಅವರ ಸಂಬಂಧಿ ಹುಣಸೂರು ತಾಲೂಕಿನ ಹನಗೂಡು ನಿವಾಸಿ ನಹಿಂ ಎಂಬಾತ ದಿನಾಂಕ 31-1-2016 ರಂದು ಫಿರ್ಯಾದಿ ಪಾತೀಮಾರವರ ಮನೆಗೆ ಬಂದ ಸಂದಭದಲ್ಲಿ ಕಳವು ಮಾಡಿಕೊಂಡು ಹೋಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಹನ ಅಪಘಾತ, ಇಬ್ಬರಿಗೆ ಗಾಯ:

     ದಿನಾಂಕ 29-04-2016ರಂದು ಸಮಯ 08.45 ಗಂಟೆಗೆ ಪಿರ್ಯಾದಿ ಶ್ರೀ. ಮನೋಜ್‌‌ ಮಾಚಂಗಡ ರವರು ಅವರ ಬಾಪ್ತು ಬಜಾಜ್‌‌ ಪಲ್ಸ್‌ ರ್‌ ಮೋಟಾರ್‌‌ ಸೈಕಲ್‌‌ ನಂ ಕೆಎ12ಕೆ4026ರಲ್ಲಿ ಪರಶುರಾಮಾ ರಾವ್‌ರವರನ್ನು ಕೂರಿಸಿಕೊಂಡು ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪ ನಗರದ ಕಡೆಗೆ ಹೋಗುತ್ತಿರುವಾಗ್ಗೆ ಗೋಣಿಕೊಪ್ಪದ ಕಡೆ ಒಂದು ಟಾಟಾ ಮ್ಯಾಜಿಕ್‌‌ ಐರಿಸ್‌‌ ವಾಹನ ನಂ ಕೆಎ12ಎ9326ರನ್ನು ಹಿಂದುಕ್ಕಿ ಹೋಗುತ್ತಿರುವಾಗ್ಗೆ ಐರಿಸ್‌‌ ವಾಹನದ ಚಾಲಕ ಸುನಿಲ್‌‌ರವರು ವಾಹನವನ್ನು ದುಡುಕುತನದಿಂದ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಲಬದಿಗೆ ತಿರುಗಿಸಿದ ಪರಿಣಾಮ ಫಿರ್ಯಾದಿಯವರ ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿಗೆ ಹಾಗೂ ಹಿಂಬದಿ ಸವಾರ ಪರಶುರಾಮಾರಾವ್‌ರವರಿಗೆ ಗಾಯಾಗಳಾಗಿದ್ದು, ಮೋಟಾರ್‌‌ ಸೈಕಲ್‌‌ಗೆ ಜಖಂ ಅಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ, ಇಬ್ಬರಿಗೆ ಗಾಯ:

     ದಿನಾಂಕ 28-04-16ರಂದು ಸಮಯ 12-30 ಗಂಟೆಗೆ ಪಿರ್ಯಾದಿಯವರಾದ ಮುರಳೀಧರನ್ ತಳಿಪರಂಬು, ಕೇರಳಾ ಇವರು ತನ್ನ ಸ್ನೇಹಿತ ಬಾಬು ವರ್ಗೀಸ್ ಮತ್ತು ಮಹಮ್ಮದ್, ಎಂಬು ವವರು ವ್ಯಾಪಾರ ನಿಮಿತ್ತ ಕೇರಳ ರಾಜ್ಯದ ಇರಿಟಿ ಯಿಂದ ವಿರಾಜಪೇಟೆಗೆ ಗೆಳೆಯ ಸಜಿರವರ ವೇಗನಾರ್ ಕಾರ್ ಸಂ. ಕೆಎಲ್.59.8133ರ ಕಾರಿನಲ್ಲಿ ಬಾಬು ವರ್ಗೀಸ್, ರವರು ಸದರಿ ಕಾರನ್ನು ಚಾಲನೆ ಮಾಡಿಕೊಂಡು ವಿರಾಜಪೇಟೆಗೆ ಬರುತ್ತಿರುವಾಗ್ಗೆ, ಮಾಕುಟ್ಟ ರಸ್ತೆಯ ಆಂಜನೇಯ ದೇವಸ್ಥಾನದಿಂದ ಅಂದಾಜು 4 ಕಿ.ಮೀ. ಮುಂದೆ ಸಮಯ 14-00 ಗಂಟೆಗೆ ತಲುಪುವಾಗ್ಗೆ, ಎದುರುಗಡೆಯಿಂದ ಯಾವುದೋ ಬೈಕ್ ಬಂದಾಗ ಬಾಬು ವರ್ಗೀಸ್ ರವರು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ ತನ ದಿಂದ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಂಡಿಗೆ ಬೀಳಿಸಿದ ಪರಿಣಾಮ ಬಾಬು ವರ್ಗೀಸ್ ಮತ್ತು ಮಹಮ್ಮದ್ ರವರ ಕಾಲುಗಳಿಗೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.