Tuesday, May 10, 2016

ಜೀಪು ಡಿಕ್ಕಿ ಮಹಿಳೆಗೆ ಗಾಯ:

   ಪೊನ್ನಂಪೇಟೆ ಠಾಣಾ ಸರಹದ್ದಿನ ಮಾಪಿಳ್ಳೆತೋಡು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಜೈಬುನ್ನೀಸ ಎಂಬವರು ದಿನಾಂಕ 08/05/2016 ರಂದು 19-00 ಗಂಟೆಗೆ ಮನೆಗೆ ಪೊನ್ನಂಪೇಟೆಗೆ ಹೋಗಿ ಕಾನ್ವೆಂಟ್ ಹತ್ತಿರ ಮುಖ್ಯರಸ್ತೆಯಲ್ಲಿ ತಲುಪಿದಾಗ ಶ್ರೀಮಂಗಲ ಕಡೆಯಿಂದ ಕೆ ಎ 20 ಎಂ 2353 ರ ಜೀಪನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಸದರಿ ಜೈಬುನ್ನೀಸ ರವರ ಬಲಕಾಲಿಗೆ, ಎಡಕಾಲು ಮಂಡಿಗೆ ,ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಪಡಿಸಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೋದಾಮಿನಿಂದ ಕರಿಮೆಣ ಕಳವು:

   ಪಿರ್ಯಾದಿ ಬಿ. ರಮೇಶ್ ಎಂಬವರು ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಪಾಲೆಕಂಡ ಶೈಲ ದೇವಯ್ಯನವರ ತೋಟದಲ್ಲಿ ಸುಮಾರು 7 ವರ್ಷಗಳಿಂದ ರೈಟರ್ ಕೆಲಸ ಮಾಡಿಕೊಂಡಿದ್ದು ತೋಟದ ವಸತಿ ಗೃಹದಲ್ಲಿ ವಾಸವಿರುವುದಾಗಿದೆ. ದಿನಾಂಕ 8/5/2016 ರಂದು ಸಮಯ 11.45 ಪಿ ಎಂ ಗೆ ನಾಯಿ ಬೊಗಳುವ ಶಬ್ದ ಕೇಳಿ ಹೊರಗೆ ಬಂದು ನೋಡಲಾಗಿ 2 ಜನ ಗೋದಾಮಿನ ಬಳಿಯಿಂದ ಓಡಿ ಹೋಗಿದ್ದು ಒಬ್ಬನು ಗೋದಾಮಿನ ಹಂಚಿನ ಮೇಲಿನಿಂದ ಕೆಳಗೆ ಹಾರಿ ಓಡಿ ಹೋಗಿದ್ದು ಟಾರ್ಚ್ ಬಿಟ್ಟು ನೋಡಲಾಗಿ ಗೋದಾಮಿನ ಹಂಚುಗಳನ್ನು ಸರಿಸಿ ಪಕ್ಕಕ್ಕೆ ಇಟ್ಟಿರುವುದು ಕಂಡು ಬಂದಿರುತ್ತದೆ.ನಂತರ ಪಿರ್ಯಾದಿಯವರು ಸ್ಥಳದಲ್ಲೆ ಕಾದು ಕುಳಿತ್ತಿದ್ದು ದಿನಾಂಕ 9/5/2016 ರಂದು ಸಮಯ 4.00 ಎ ಎಂ ವೇಳೆಗೆ ಒಬ್ಬ ಆಸಾಮಿಯು ಗೋದಾಮಿನ ಒಳಗಿನಿಂದ ಹಂಚಿನ ಮುಲಕ ಹೊರಗೆ ದಾಟಿ ಮೇಲಿನಿಂದ ಜಿಗಿದಿದ್ದು ಆತನನ್ನು ಹಿಡಿದುಕೊಂಡು ಆತನ ಹೆಸರು ಕೇಳಲಾಗಿ ಮನು ಎಂದು ತಿಳಿಸಿದ್ದು ಮತ್ತೆ ಪರಿಶೀಲಿಸಲಾಗಿ ಸುಮಾರು 7000 ರೂ. ಮೌಲ್ಯದ ಕರಿಮೆಣಸು ಕಳ್ಳತನ ವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vartika Katiyar, IPS :19 PM

Monday, May 9, 2016

 ನಾಲ್ಕುಜನ ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯ ದಾರಿ ತಡೆದು ಹಲ್ಲೆ:

      ಮಡಿಕೇರಿ ನಗರದ ಕಾಲೇಜು ರಸ್ತೆ ವಿಳಾಸದಲ್ಲಿ ವಾಸವಾಗಿರುವ ಪಿರ್ಯಾದಿ ಮಹಮ್ಮದ್ ರವರು ಮಧ್ಯಾಹ್ನ 2 ಗಂಟೆಗೆ ಕಾಲೇಜು ರಸ್ತೆಯಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಕೆ.ಎಲ್-59-ಎಫ್-3047 ವಾಹನದಲ್ಲಿ ಬಂದಿದ್ದ 4 ಜನರು ಪಿರ್ಯಾದಿಯನ್ನು ಚುಡಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಅಲ್ಲದೇ ರಾಡಿನಿಂದ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬೈಕ್ ಡಿಕ್ಕಿ ವ್ಯಕ್ತಿ ಸಾವು:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿದರೂರು ಗ್ರಾಮದ ನಿವಾಸಿಯಾದ ಶ್ರೀಮತಿ. ಕುಸುಮಾರವರ ತಂದೆ ಶಕುನಪ್ಪರವರು ದಿನಾಂಕ 8-5-2016 ರಂದು ಬೆಳಿಗ್ಗೆ ಶನಿವಾರಸಂತೆ ನಗರದ ಮುಸ್ತಾಫ್ ಹೊಟೇಲ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿ ಅಸೀಪ ಎಂಬವರು ತನ್ನ ಮೋಟಾರ್ ಸೈಕಲ್ ಕೆಎ-18 ಯು-5091ರ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಕುನಪ್ಪರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡು ಅವರನ್ನು ಚಿಕಿತ್ಸೆಗಾಗಿ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾದೇ ಮೃತ ಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
Vartika Katiyar, IPS

Sunday, May 8, 2016

ಎಮ್ಮೆಗಳ ಕಳವು ಪ್ರಕರಣ ದಾಖಲು:
     ದಿನಾಂಕ 06-05-2016ರಂದು ರಾತ್ರಿ ಸಮಯ 12.30 ಗಂಟೆಗೆ ಗೋಣಿಕೊಪ್ಪ ಪೊಲೀಸ್‌‌ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಶ್ರೀ. ಜೆ.ಡಿ. ವಿನೋದ್‌‌ ರವರ ಬಾಪ್ತು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20,000/- ರೂ ಬೆಲೆ ಬಾಳುವ ಎರಡು ಎಮ್ಮೆಗಳನ್ನು ಆರೋಪಿಗಳಾದ ರಿಯಾಜ್ ತಂದೆ ಲೇಟ್ ಇಬ್ಯಾಹಿಂ ಪ್ರಾಯ 30 ವರ್ಷ ವಾಸ ಚೋಕಂಡಹಳ್ಳಿ ನಲುವತೋಕ್ಲು ಗ್ರಾಮ ಮತ್ತು ಮೊಹಮದ್ ಕೊಂಡಂಗೇರಿ ಇವರುಗಳು ಕಳ್ಳತನ ಮಾಡಿಕೊಂಡು ಹೋಗಿದ್ದನ್ನು ಕೈಕೇರಿ ಗ್ರಾಮದ ಕಳತ್ಮಾಡು ರಸ್ತೆಯಲ್ಲಿ ಫಿರ್ಯಾದಿ ಜೆ.ಡಿ. ವಿನೋದ್‌ರವರು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ವ್ಯಕ್ತಿಯ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ವಂಚನೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಅಂಜಗೇರಿ ಬೆಟ್ಟಗೇರಿ ಗ್ರಾಮದ ನಿವಾಸಿ ಪಿರ್ಯಾದಿ ಜಿ ಕೆ ಚಂದ್ರಯ್ಯ ರವರು ಸುಂಟಿಕೊಪ್ಪ ಕೆನಾರಾ ಬ್ಯಾಂಕ್ ನಲ್ಲಿ ಅಕೌಂಟ್ ನಂ 06688101015488 ರ ಖಾತೆ ಹೊಂದಿದ್ದು ದಿನಾಂಕ 15.02.16 ರಂದು ಸಮಯ 05.00 ಪಿಎಮ್ ಯಾರೋ ಒಬ್ಬ ವ್ಯಕ್ತಿ ಮೊಬೈಲ್ ನಂ 91-8407834209 ರಿಂದ ಕರೆ ಮಾಡಿ ನಾನು ಸುಂಟಿಕೊಪ್ಪ ಬ್ಯಾಂಕ್ ಮ್ಯಾನೇಜರು ಮಾತಾನಾಡುತ್ತಿರುವುದು ನಿಮ್ಮ ಎಟಿಎಮ್ ಕಾರ್ಡು ನ್ನು ರಿನಿವಲ್ ಮಾಡಬೇಕು ಇಲ್ಲದಿದ್ದರೆ ನಿಮ್ಮ ಅಕೌಂಟ್ ನಲ್ಲಿ ಹಣ ಕಟ್ಟಾಗುತ್ತದೆ ಹಾಗೂ ನಿಮ್ಮ ಎಟಿಎಮ್ ಕಾರ್ಡು ಕ್ಯಾನ್ಸಲ್ ಆಗುತ್ತದೆ ನಿಮ್ಮ ಎಟಿಎಮ್ ಕಾರ್ಡು ನಂ ಹೇಳಿ ಎಂದು ಹೇಳಿದ್ದು ಇದನ್ನು ನಂಬಿದ ಫಿರ್ಯಾದಿ ಅವರ ಎಟಿಎಂ ಕಾರ್ಡ್ ಮಾಹಿತಿಯನ್ನು ತಿಳಿಸಿದ್ದು, ಇದನ್ನು ಉಪಯೋಗಿಸಿ ಅಪರಿಚಿತ ವ್ಯಕ್ತಿ ಫಿರ್ಯಾದಿಯ ಬ್ಯಾಂಕ್ ಖಾತೆಯಿಂದ 49,000/- ರೂ.ಗಳನ್ನು ಡ್ರಾ ಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:

      ಸೋಮವಾರಪೇಟೆ ನಗರದ ನಿವಾಸಿ ಫಿರ್ಯಾದಿ ಬಿ.ಪಿ. ರಾಜುರವರು ಅರೆಯೂರು ಗ್ರಾಮದಲ್ಲಿ ನೆಲೆಸಿರುವ ಅವರ ತಂಗಿ ಜಾನಕಿಯವರಿಗೆ ಸೇರಿದ ಆಸ್ತಿಯನ್ನು ಫಿರ್ಯಾದಿಯವರ ಹೆಸರಿಗೆ ಜಿ.ಪಿ.ಎ ಮಾಡಿರುವುದರಿಂದ ಫಿರ್ಯಾಧಿಯವರು ನೋಡಿಕೊಳ್ಳುತ್ತಿದ್ದು ದಿನಾಂಕ 05.02.2016 ರಂದು ಸಂಜೆ 05:30 ಗಂಟೆಗೆ ಫಿರ್ಯಾದಿಯವರು ತಂಗಿಯ ತೋಟದ ಹತ್ತಿರ ಹೋಗುವುವಾಗ ಆರೋಪಿಗಳಾದ ಅರೆಯೂರು ಗ್ರಾಮದ ನಿವಾಸಿಗಳಾದ ನಾಗೇಶ್ ಮತ್ತು ಪ್ರೇಮ ರವರುಗಳು ದಾರಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಪರೀತ ಮದ್ಯ ಸೇವಿಸಿದ ಮಹಿಳೆ ಸಾವು:

     ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದ ನಿವಾಸಿ ಅಜ್ಜಮಾಡ ಕಾಳಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಫಿರ್ಯಾದಿ ಪಂಜರಿ ಎರವರ ಕಾಳ ಇವರ ಹೆಂಡತಿ ದಿನಾಂಕ 7-5-2016 ರಂದು ಕುರ್ಚಿಗ್ರಾಮದ ಪಾರೆಕಲ್ಲು ಎಂಬಲ್ಲಿ ರಾತ್ರಿ ಮಲಗಿದ್ದಾಗ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ವಶ ಆರೋಪಿ ವಿರುದ್ದ ಪ್ರಕರಣ:

 ದಿನಾಂಕ 7-5-2016 ರಂದು ಸಂಜೆ 04:00 ಗಂಟೆಗೆ ಕುಶಾಲನಗರ ಠಾಣಾಧಿಕಾರಿ ಶ್ರೀ ಅನೂಪ್ ಮಾದಪ್ಪ ರವರು ಕರ್ತವ್ಯ ನಿಮಿತ್ತ ಇಲಾಖಾ ಜೀಪಿನಲ್ಲಿ ಸಿಬ್ಬಂಧಿಯವರೊಂದಿಗೆ ಶಿರಂಗಾಲದ ಕಡೆಗೆ ಹೋಗುತ್ತಿದ್ದಾಗ ಅವರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಣಿವೆ ಗ್ರಾಮದ ಲಿಂಗರಾಜುರವರು ವಾಸ ಮಾಡುತ್ತಿರುವ ಮನೆಗೆ ಹೋಗಿ ದಾಳಿ ಮಾಡಿದಾಗ ಮನೆಯ ಕೊಟ್ಟಿಗೆಯಲ್ಲಿ 37 ಒರಿಜಿನಲ್ ಚಾಯಸ್ 90 ಎಂ.ಎಲ್. ನ ಪ್ಯಾಕೇಟುಗಳನ್ನು ಮಾರುತ್ತಿದ್ದು, ಅವರುಗಳನ್ನು ಆರೋಪಿಯಿಂದ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.