Friday, May 13, 2016

ಹಣದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:
     ದಿನಾಂಕ 11-05-2016 ರಂದು ಪಿರ್ಯಾದಿ ಡಾಲಿ ಎಂಬವರು ಕುಶಾಲನಗರದ ಬಿ ಎಸ್ ಆರ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು ಕೊಪ್ಪದಲ್ಲಿ ಮಟ್ಟನ್ ಅಂಗಡಿ ಇಟ್ಟುಕೊಂಡಿರುವ ಮೀರ್ ಮೊಹಿದ್ದೀನ್ ರವರ ಮಗ ಜಬಿಬುಲ್ಲಾರವರಿಗೆ ಹಣ ಕೊಡಲು ಬಾಕಿ ಇದ್ದು, ಇದೇ ಕಾರಣಕ್ಕೆ ಸದರಿ ಜಬಿಬುಲ್ಲಾ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಾರ್ ಒಳಗೆ ಬಂದು ಪಿರ್ಯಾದಿಯನ್ನು ಕುರಿತು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಕತ್ತಿಯನ್ನು ಬೀಸಿದ ಪರಿಣಾಮ ಕತ್ತಿಯ ಹಿಂಬಾಗ ಪಿರ್ಯಾದಿಯ ಎಡಗೈ ಮಣಿಗಂಟಿಗೆ ತಾಗಿ ಚಿಕ್ಕ ಗಾಯವಾಗಿದ್ದು ಪುನಃ ಕತ್ತಿಯ ಹಿಂಬಾಗದಿಂದ ಪಿರ್ಯಾದಿಯ ಬಲಗಾಲಿನ ಮಂಡಿಯ ಕೆಳಗೆ ಹೊಡೆದಿದ್ದು, ಅಲ್ಲದೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದ ಕಾರಣ ಮಹಿಳೆ ಆತ್ಮಹತ್ಯೆ:

    ವಿರಾಜಪೇಟೆ ತಾಲೂಕು ಬಾಡಗ ಗ್ರಾಮದ ನಿವಾಸಿ 45 ವರ್ಷ ಪ್ರಾಯದ ಅಮ್ಮಣಿ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-5-2016 ರಂದು ಸಂಜೆ ವಿಷ ಪದಾರ್ಥವನ್ನು ಸೇವಿಸಿದ್ದು, ಆಕೆಯನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 12-5-2016 ರಂದು ಆಕೆ ಮೃತಪಟ್ಟಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ:

     ಮಡಿಕೇರಿ ತಾಲೂಕು ಕಾಲೂರು ಗ್ರಾಮದ ನಿವಾಸಿ ಚರ್ಮಣನಿಗೂ ಮತ್ತು ಕೋರಿನ ಸತೀಶ್ ರವರಿಗೂ ಸುಮರು 2 ವರ್ಷಗಳಿಂದ ಸೆಂದಿ ವಿಷಯಕ್ಕೆ ಸಂಬಂದಿಸಿದಂತೆ ದ್ವೇಶವಿದ್ದು, ದಿನಾಂಕ 06-05-2016 ರಂದು ಸೆಂಜೆ ಕೋರಿನ ಸತೀಶ್ ಮತ್ತು ಪೋನ್ನಚಟ್ಟಿರ ಮನು ರವರು ಚರ್ಮಣನೊಂದಿಗೆ ಜಗಳವಾಡಿ ಚರ್ಮಣನಿಗೆ ಹಲ್ಲೇ ನೇಡೆಸಿದ್ದು ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡು ಪ್ರಜ್ಞೆಯನ್ನು ಕಳೆದುಕೊಂಡಿದ್ದು, ಆತನನ್ನು ಮಡಿಕೇರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ವತ್ರೆ ದಾಖಲಿಸಲಾಗಿ ದಿನಾಂಕ 12/05/2016 ರಂದು ಗಾಯಾಳು ಚರ್ಮಣ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. 

ವ್ಯಕ್ತಿ ಮೇಲೆ ಇಬ್ಬರು ವ್ಯಕ್ತಿಗಳಿಂದ ಹಲ್ಲೆ, ಕೊಲೆಗೆ ಯತ್ನ:

    ದಿನಾಂಕ 11/05/2016 ರಂದು ಸಮಯ ರಾತ್ರಿ 8-00 ಗಂಟೆಗೆ ಗೋಣಿಕೊಪ್ಪ ನಗರದ ಸಂತೋಷ್ ಬಾರ್ ನ ಒಳಗೆ ಪಿರ್ಯಾದಿ ಗೋಣಿಕೊಪ್ಪ ನಗರದ ನಿವಾಸಿ ಜಕ್ರಿಯಾ ಎಂಬವರು ಧರ್ಮರಾಜ್ ರವರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಪ್ರವೀಣ ನು ಪಿರ್ಯಾದಿಯ ಮುಖಕ್ಕೆ ಸಿಗರೇಟು ಹೊಗೆ ಬಿಟ್ಟು ಜಗಳ ತೆಗೆದು ಮತ್ತೊಬ್ಬ ಆರೋಪಿ ಉದಯಕ್ ಕುಮಾರನು ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲಿಯಿಂದ ಹೊಡೆದು ಅವ್ಯಾಚ್ಯ ಶಬ್ದದಿಂದ ಬೈಯ್ದು ನಂತರ ಆರೋಪಿಗಳು ಪಿರ್ಯಾದಿಯನ್ನು ಕೆಎ12 ಎಂ 1057 ರ ಮಾರುತಿ ವ್ಯಾನಿನಲ್ಲಿ ಬಲವಂತವಾಗಿ ಎಳೆದು ಹಾಕಿಕೊಂಡು ದಾರಿಯುದ್ದಕ್ಕೂ ಹಲ್ಲೆ ಮಾಡಿ ಕಳತ್ಮಾಡು ರಸ್ತೆಯಲ್ಲಿ ಬಿಟ್ಟು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನೌಕರನಿಂದ ಹಣ ವಂಚನೆ, ಪ್ರಕರಣ ದಾಖಲು:

     ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದ ನಿವಾಸಿ ಕೆ.ಪಿ. ಮೋಹನ್ ಎಂಬವರು ನಾಪೋಕ್ಲುವಿನಲ್ಲಿ ಚಾಮುಂಡಿ ಪೆಟ್ರೋಲಿಯಮ್ಸ್‌ ಎನ್ನುವ ಹೆಸರಿನಲ್ಲಿ ಪೆಟ್ರೋಲ್ ಬಂಕ್‌ನ್ನು ನಡೆಸುತ್ತಿದ್ದು, ಪೆಟ್ರೋಲ್ ಬಂಕ್ನನ ಉಸ್ತುವಾರಿಗಾಗಿ ನವೀನ್‌ ಎನ್ನುವ ವ್ಯಕ್ತಿಯನ್ನು ಮ್ಯಾನೇಜರ್ ಆಗಿ ನೇಮಕ ಮಾಡಿದ್ದು, ಈತನು ಪೆಟ್ರೋಲ್ ಬಂಕ್‌ನ ಎಲ್ಲಾ ವ್ಯವಹಾರ, ತೈಲ ಮಾರಾಟದ ಲೆಕ್ಕಾಚಾರಗಳನ್ನು ನೋಡಿಕೊಳ್ಳುತ್ತಿದ್ದು, ತೈಲ ಮಾರಾಟದ ಲೆಕ್ಕಾಚಾರದ ಬಗ್ಗೆ ಮ್ಯಾನೇಜರ್ ನವೀನ್‌ನಲ್ಲಿ ವಿಚಾರಿಸಿದಾಗ ಆತನು ದಿನಾಂಕ 10-05-2016 ರಂದು ತೈಲ ಮಾರಾಟ ಲೆಕ್ಕಾಚಾರವನ್ನು ನೀಡುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಚಾರಿಸಲು ದಿನಾಂಕ 10-05-2016 ರಂದು ನವೀನ್‌ನಿಗೆ ದೂರವಾಣಿ ಕರೆ ಮಾಡಿದಾಗ ಆತನ ದೂರವಾಣಿ ಸ್ವಿಚ್‌ ಆಫ್ ಆದ ಕಾರಣ ಬಂಕ್‌ನ ಕಛೇರಿಗೆ ಬಂದು ಡ್ರಾಯರ್‌ನಲ್ಲಿ ನೋಡಿದಾಗ ಡ್ರಾಯರ್‌ನಲ್ಲಿಟ್ಟಿದ್ದ 3,27,000 ರೂ ಕಾಣೆಯಾಗಿದ್ದು, ನವೀನ್‌ನ ಮನೆಗೆ ಹೋಗಿ ನೋಡಿದಾಗ ಆತನು ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದು, ಸದರಿ ನವೀನ್ 3,27,000 ರೂಗಳನ್ನು ತೆಗೆದುಕೊಂಡು ಹೋಗಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ