Saturday, May 21, 2016

ಕಾಫಿ ತೋಟದಿಂದ ಸ್ಪ್ರಿಂಕ್ಲರ್‌ ಪೈಪ್‌ಗಳ ಕಳವು:

     ದಿನಾಂಕ 18.05.2016 ರಂದು ಸುಮಾರು 4.30 ಪಿಎಂಗೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಕಾಂಡನಕೊಲ್ಲಿ ದುರ್ಗಾದೇವಿ ಕಾಫಿ ಎಸ್ಟೇಟ್ನ ಅರೆಬಿಕಾ ಬ್ಲಾಕ್‌ನಲ್ಲಿಟ್ಟಿದ್ದ 09 ಅಲ್ಯೂಮೀನಿಯಂ ಸ್ಪ್ರಿಂಕ್ಲರ್‌ ಪೈಪ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ತೋಟದ ಮಾಲೀಕರಾದ ಪಿ.ಡಿ. ಗಣಪತಿ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪರಸ್ಪರ ಆಟೋ ರಿಕ್ಷಾಗಳ ಡಿಕ್ಕಿ ನಾಲ್ಕು ಮಂದಿಗೆ ಗಾಯ:

     ಹಾಸನ ಜಿಲ್ಲೆಯ ಹೇರೂರು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಚನ್ನಮ್ಮ ನವರು ತಮ್ಮ ಗಂಡ ರಾಜು, ಅಣ್ಣನ ಮಗ ತಾರೇಶ್, ಹಾಗೂ ಮಧನ್ ಕುಮಾರ್ ರವರುಗಳು ದಿನಾಂಕ 19-5-2016 ರಂದು ಶನಿವಾರಸಂತೆಗೆ ಮದುವೆ ಕಾರ್ಯಕ್ರಮಕ್ಕೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಎದುರುಗಡೆ ಯಿಂದ ಬಂದ ಗೂಡ್ಸ್ ಆಟೋ ರಿಕ್ಷಾವು ಆಟೋರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿಗೂ ಗಾಯಗಳಾಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳಿಂದ ವ್ಯಕ್ತಿಮೇಲೆ ಹಲ್ಲೆ:

    ಸೋಮವಾರಪೇಟೆ ಠಾಣಾ ಸರಹದ್ದಿನ ಕಕ್ಕೆಹೊಳೆ ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಬಿ.ವಿ. ಬಾಲಕೃಸ್ಣ ಎಂಬವರು ದಿನಾಂಕ 19-5-2016ರಂದು ಸಮಯ ರಾತ್ರಿ 9:30 ಗಂಟೆಗೆ ಸೋಮವಾರಪೇಟೆ ನಗರದ ಸಪಾಲಿ ಬಾರ್ ಗೆ ಊಟ ತರಲೆಂದು ಹೋಗಿ ಊಟವನ್ನು ಕಟ್ಟಿಸಿಕೊಂಡು ವಾಪಾಸ್ಸು ಕಾರಿಗೆ ಬಂದು ಕಾರನ್ನು ಸ್ಟಾಟ್ ಮಾಡಿ ಹಿಂದಕ್ಕೆ ತೆಗೆಯುತ್ತಿದ್ದಾಗ ಪಕ್ಕದಲ್ಲಿ ಕಲ್ಕಂದೂರು ಗ್ರಾಮದ ನಿಖಿಲ್ ರವರಿಗೆ ಸೇರಿದ ಪಿಕ್ ಅಪ್ ವಾಹನದಲ್ಲಿ ಕುಳಿತ್ತಿದ್ದ ವ್ಯಕ್ತಿ ಪಿಕ್ ಅಪ್ ವಾಹನದ ಬಾಗಿಲನ್ನು ತೆಗೆಯುವಾಗ ಪಿರ್ಯಾದಿಯವರು ಏಕೆ ನಿಮ್ಮ ಪಿಕ್ ಅಪ್ ವಾಹನದ ಬಾಗಿಲನ್ನು ತೆರೆಯುತ್ತಿದ್ದಿರಾ ಎಂದು ಹೇಳಿದಕ್ಕೆ ಸದರಿ ವ್ಯಕ್ತಿ ಬಿಯರ್ ಬಾಟಲಿಯಿಂದ ಫಿರ್ಯಾದಿ ತಲೆಗೆ ಮಾಡಿದ್ದು ಅಲ್ಲದೆ ಇನ್ನುಬ್ಬ ವ್ಯಕ್ತಿ ದೊಣ್ಣೆಯನ್ನು ತೋರಿಸಿ ಬೆದರಿಕೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವು:

    ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ಸೀತಮ್ಮ ಎಂಬವರ ಪತಿ ಮಳ್ಳಂದೀರ ಪುಟ್ಟಯ್ಯ ಎಂಬವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ದಿನಾಂಕ 19-5-2016 ರಂದು ತಮ್ಮ ತೋಟದಲ್ಲಿ ಕೆಲಸಕ್ಕೆ ಹೋಗಿದ್ದು ಸಾಯಂಕಾಲ ಮನೆಗೆ ಬರುತ್ತಿದ್ದಾದ ದಾರಿಯಲ್ಲಿ ಬಿದ್ದು ಮೃತಪಟ್ಟಿದ್ದು, ಸದರಿಯವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.