Tuesday, May 3, 2016

ಮೋಟಾರ್ ಸೈಕಲ್ ಪರಸ್ಪರ ಡಿಕ್ಕಿ:

     ದಿನಾಂಕ 2-5-2016 ರಂದು ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮದ ನಿವಾಸಿ ಪಿರ್ಯಾದಿ ಎಂ.ಆರ್. ಶಫಿಕ್ ಹಾಗೂ ಅವರ ತಮ್ಮ ಷಫೀರ್ ರವರು ಕೆಎ12ಎಲ್1583 ರ ಮೋಟಾರ್ ಸೈಕಲ್ಲಿನಲ್ಲಿ ಸಿದ್ದಾಪುರದಿಂದ ವಿರಾಜಪೇಟೆ ಕಡೆಗೆ ಬರುತ್ತಿರುವಾಗ್ಗೆ ಸಮಯ ಸುಮಾರು 6.30 ಪಿ.ಎಂ ಗೆ ವಿನಾಯಕ ನಗರದ ಹತ್ತಿರ ಎದುರು ಗಡೆಯಿಂದ ಬಂದ ಮೋಟಾರ್ ಸೈಕಲ್ ನಂ ಕೆಎ 12ಎಲ್ 7917 ರಲ್ಲಿ ಮೂರು ಜನ ಬರುತ್ತಿದ್ದು ಸದ್ರಿ ಮೋಟಾರ್ ಸೈಕಲ್ಲನ್ನು ಅದರ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ಲಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಕೆಳಗೆ ಬಿದ್ದು ನೋವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ದೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು:

      ದಿನಾಂಕ 02/05/2016 ರಂದು ಸಮಯ 17.45 ಗಂಟೆಗೆ ಫಿರ್ಯಾದಿ ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್ ಎಂಬವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಟಿ.ಎ. ಮಹೇಶ್ ಎಂಬವರು ಠಾಣಾ ಮೊ.ಸಂ: 57/2016 ಕಲಂ 379 ಐಪಿಸಿ ರೆ.ವಿ 4, 21 ಎಂ.ಎಂ.ಆರ್.ಡಿ ಕಾಯ್ದೆ ಪ್ರಕರಣದಲ್ಲಿ ಆರೋಫಿಯಾಗಿದ್ದು, ಸದರಿಯವರ ಲಾರಿಯನ್ನು ಪ್ರಕರಣವೊಂದರಲ್ಲಿ ಅಮಾನತ್ತು ಪಡಿಸಿಕೊಂಡಿದ್ದು ಅದರ ದಾಖಲಾತಿ ಸಂಬಂಧ ಸದರಿ ಆರೋಪಿಯು ದಾಂಧಲೆ ಮಾಡಿ ಸರ್ಕಾರಿ ಕಛೇರಿಯಲ್ಲಿ ಉದ್ದಟತನದಿಂದ ವರ್ತಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ, ಮಹಿಳೆ ಆತ್ಮಹತ್ಯೆ:

    ವಿರಾಜಪೇಟೆ ತಾಲೂಕು ಬೂದಿಮಾಳ ಹೆಗ್ಗಳ ಗ್ರಾಮದ ನಿವಾಸಿ ಪಿರ್ಯಾದಿ ಪಿ.ಎ. ವಿನೋದ್ ಎಂಬವರ ತಾಯಿ ತಿಲೋತ್ತಮೆ ರವರು ದಿ: 13-02-2016 ರಂದು ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಾಡಿದಲ್ಲೂ ಪತ್ತೆಯಾಗದ್ದರಿಂದ ದಿ:15-02-2016 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸದರಿ ಕಾಣೆಯಾದ ಮಹಿಳೆಯ ಮೃತ ದೇಹವು ಮಂಡೆಪಂಡ ಸುಜಾ ಕುಶಾಲಪ್ಪರವರ ತೊಟದ ಪಕ್ಕದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸದರಿ ಮಹಿಳೆಯು ಅನಾರೋಗ್ಯ ದಿಂದ ನರಳುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆಂದು ಮೃತ ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯಿಂದ ಮಹಿಳೆಯ ಮಾನಭಂಗ ಮತ್ತು ಕೊಲೆಗೆ ಯತ್ನ:

     ನಾಕೋಕ್ಲು ಠಾಣಾ ಸರಹದ್ದಿನ ಅಜ್ಜಿಮುಟ್ಟ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಶೀಲಾ ಎಂಬವರು ದಿನಾಂಕ 2-5-2016 ರಂದು 11-30 ಗಂಟೆ ಸಮಯದಲ್ಲಿ ಕಾವೇರಿ ನದಿಗೆ ಬಟ್ಟೆ ತೊಳೆಯಲು ಹೋಗಿ ಬಟ್ಟೆ ತೊಳೆಯುತ್ತಿದ್ದಾಗ ನನ್ನ ಹಿಂದಿನಿಂದ ಶಬ್ದ ಕೇಳಿ ತಿರುಗಿ ನೋಡಿದಾಗ ಒಬ್ಬ ಅಪರಿಚಿತ ಅಸ್ಸಾಂನವರಂತೆ ಕಾಣುವ ವ್ಯಕ್ತಿಯು ನಿಂತುಕೊಂಡಿದ್ದು, ಆತನು ಆಕೆಯೊಂದಿಗೆ ಸೆಕ್ಸ್ ಸೆಕ್ಸ್ ಎಂದು ಹೇಳಿ ಅವರ ಮೇಲೆ ಹಾರಿದ್ದು ಆಗ ಶೀಲಾರವರು ಆತನಿಂದ ತಪ್ಪಿಸಿ ಓಡಲು ಪ್ರಯತ್ನಿಸಿದಾಗ ಅವನು ಆಕೆಯನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ ಬಟ್ಟೆಯನ್ನು ಎಳೆದು ಹರಿದು ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೆ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vartika Katiyar, IPS

Monday, May 02, 2016


ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ.

    ವಿರಾಜಪೇಟೆ ತಾಲೂಕು ಬಾಳಾಜಿ ಗ್ರಾಮದ ನಿವಾಸಿ ಪಿರ್ಯಾದಿ ಶ್ರೀಮತಿ ಗೀತಾಳ ಗಂಡ ಪ್ರಾಯ 45ರ ರಾಜುರವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ಆತ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01-05-2016ರಂದು ಸಮಯ 06.00 ಗಂಟೆಗೆ ತಾನು ವಾಸವಾಗಿರುವ ಮನೆಯಲ್ಲಿ ಲೈಲಾನ್‌‌ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಸಾವು:

    ದಿನಾಂಕ 14-4-2016 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಕಾವೇರಿ ಕಾಲೇಜಿನ ನೀರು ಟ್ಯಾಂಕ್ ಹತ್ತಿರ ಸುಮಾರು 75 ರಿಂದ 80 ವರ್ಷ ವಯಸ್ಸಿನ ಅಪರಿಚಿತ ಹೆಂಗಸು ಬಂದು ಅನ್ನ ನೀರು ಇಲ್ಲದೆ ನಿತ್ರಾಣಗೊಂಡಿದ್ದು ಆಕೆಯನ್ನು ದುಂಡಳ್ಳಿ ಪಂಚಾಯ್ತಿಯ ಪಿ.ಡಿ.ಒ. ರವರು ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈಧ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಸದರಿ ಅಪರಿಚತ ಹೆಂಗಸು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-04-2016 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿದ್ದು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ರಸ್ತೆ ಬದಿಯಲ್ಲಿ ನಿಂತ ವ್ಯಕ್ತಿಗೆ ಬೈಕ್ ಡಿಕ್ಕಿ:

    ನಾಪೋಕ್ಲು ಠಾಣಾ ಸರಹದ್ದಿನ ನಾಪೋಕ್ಲು ನಗರದ ಸುನ್ನಿ ಮೊಹಿದ್ದೀನ್ ಜುಮಾ ಮಸೀದಿಯ ಮುಂದುಗಡೆ ಬೇತು ಗ್ರಾಮದ ನಿವಾಸಿ ಪಿ.ಎಂ. ಬಾದಷಾ ಎಂಬವರು ದಿನಾಂಕ 30-4-2016 ರಂದು 20-30 ಗಂಟೆಗೆ ನಿಂತುಕೊಂಡಿರುವಾಗ್ಗೆ ನಾಪೋಕ್ಲು ಬಸ್ ನಿಲ್ದಾಣದ ಕಡೆಯಿಂದ ಮನ್ಸೂರ್ ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪಿ.ಎಂ. ಬಾದಷಾ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಬಾದಷಾರವರು ಗಾಯಗೊಂಡಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.