Wednesday, May 25, 2016

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ:

      ದಿನಾಂಕ23/05/2016 ರಂದು ರಾತ್ರಿ 9;00 ಗಂಟೆಗೆ ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿ ಗ್ರಾಮದ ನಿವಾಸಿ ಪಣಿ ಎರವರ ಗಣೇಶ ಎಂಬವರು ಚಿಪ್ಪ ಎಂಬುವವನಿಗೆ ನೀಡಿದ್ದ ತನ್ನ ಬಾಪ್ತು ರೇಡಿಯೋವನ್ನು ಕೊಡು ಎಂದು ವಿಚಾರದಲ್ಲಿ ಕೋಪಗೊಂಡ ಚಿಪ್ಪ ಕತ್ತಿಯಿಂದ ಗಣೇಶರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಸ್ತಿ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

    ಆಸ್ತಿ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ಚೆಟ್ಟಳ್ಳಿ ನಡೆದಿದೆ. ಕೆ. ಚೆಟ್ಟಳ್ಳಿ ಗ್ರಾಮದ ನಿವಾಸಿ ರಮೇಶ್ ಎಂಬವರು ದಿನಾಂಕ 23-5-2016 ರಂದು ತಮ್ಮ ಬಾಪ್ತು ಕೆ.ಚೆಟ್ಟಳ್ಳಿಯಲ್ಲಿ ಇರುವ ಕಾಫಿ ತೋಟದಲ್ಲಿ ಇದ್ದಾಗ ನಮ್ಮ ಪಕ್ಕದ ತೋಟದ ಪೆರಿಯ ಸ್ವಾಮಿ ರವರೊಂದಿಗೆ ಸಮಯ 5.00 ಪಿ.ಎಂ ಗೆ ಆಸ್ತಿ ಮಾರಟದ ವಿಚಾರದಲ್ಲಿ ಮತುಕತೆ ನಡೆದಿದ್ದು, ಇದೇ ವಿಚಾರದಲ್ಲಿ ಸಮಯ 9.00 ಪಿ.ಎಂ ಗೆ ಪೆರಿಯ ಸ್ವಾಮಿಯ ಮಕ್ಕಳಾದ ಕರ್ಪಯ್ಯ ಮತ್ತು ಸುರೇಂದ್ರರವರು ರಮೇಶ್ ರವರರೊಂದಿಗೆ ಆಸ್ತಿ ಮಾರಟದ ವಿಚಾರದಲ್ಲಿ ಜಗಳ ಕತ್ತಿಯಿಂದ ಮತ್ತು ದೊಣ್ಣಯಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಲ್ಲಿಸಿದ್ದ ಕಾರಿಗೆ ಇಬ್ಬರು ವ್ಯಕ್ತಿಗಳಿಂದ ಬೆಂಕಿ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಮ್ಮೆತ್ತಾಳ್ ಗ್ರಾಮದ ನಿವಾಸಿ ಕೆ.ಟಿ.ಅನುಕೂಲ್ ಎಂಬವರು ದಿನಾಂಕ 23/05/2016 ರಂದು ಮಕ್ಕಂದೂರು ಗ್ರಾಮದ ತಮ್ಮ ಸ್ಹೇಹಿತರಾದ ತೀರ್ಥರವರ ಮನೆಗೆ ತಮ್ಮ ಬಾಪ್ತು ಕಾರು ನಂ ಕೆಎ 01 ಎಂಸಿ 2075 ರ ಕಾರಿನಲ್ಲಿ ಹೋಗಿದ್ದು ಕಾರನ್ನು ಎಂ.ಎಸ್‌ ಡಾರರವರ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿ ಅವರಿಗೆ ವಿಚಾರವನ್ನು ತಿಳಿಸಿ ಹೋಗಿದ್ದು ಸಮಯ ಸುಮಾರು 1.30 ಎ,ಎಂಗೆ ಹೆಚ್.ಆರ್‌ ವಸಂತ ಹಾಗೂ ಎಂ.ಎಸ್‌ ಶಿವಣ್ಣ ನವರು ಸದರಿ ಕಾರಿಗೆ ಬೆಂಕಿ ಹಚ್ಚಿದ್ದು ಪರಿಣಾಮವಾಗಿ ಸದರಿ ಸಂಪೂಣಱವಾಗಿ ಸುಟ್ಟುಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.