Friday, May 27, 2016

ಕಾರು ಲಾರಿ ನಡುವೆ ಅಪಘಾತ ನಾಲ್ವರ ದುರ್ಮರಣ:

      ದಿನಾಂಕ 25-5-2015 ರಂದು ಸಮಯ 11-30 ಗಂಟೆಗೆ ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ಪಯ್ಯಾಳಿ ಗ್ರಾಮದ ನಿವಾಸಿ ಫಿರ್ಯಾದಿ ನಾದೀರ್ ಎಂ. ಎಂಬವರು ಮತ್ತು ಅವರ ಸ್ನೇಹಿತರಾದ ಜವಹಾರ್,ಸುಪೈದ್, ಜಲೀಲ್, ಆಶಿಕ್, ಮೀನಾಜ್, ಯಾಸಿನ್, ಶಫೀರ್, ಶಬ್ಬಾಸ್ ಹಾಗೂ ಕಾರಿನ ಚಾಲಕ ಸಾಜನ್ ರವರೊಂದಿಗೆ ಕಾರು ನಂಬರ್ ಕೆಎಲ್-18-ಬಿ-200 ರಲ್ಲಿ ವಿರಾಜಪೇಟೆ ಗಾಗಿ ಮೈಸೂರು-ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಮಾಕುಟ್ಟ ದಾಟಿ ಪೆರಂಬಾಡಿ ಕೆರೆಯ ಬಳಿ ದಿನಾಂಕ 26-5-2016 ರಂದು ಸಮಯ ಬೆಳಗಿನ ಜಾವ 3-00 ಎ.ಎಂ.ಗೆ ತಲಪುವಾಗ್ಗೆ ಎದುರುಗಡೆಯಿಂದ ಲಾರಿ ನಂಬರ್ ಕೆಎ-21-ಎ-5171 ರ ಚಾಲಕ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು, ಎರಡು ಲಾರಿಗಳಿಗೆ ಡಿಕ್ಕಿಪಡಿಸದ್ದು ಅಲ್ಲದೆ , ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಕಾರಿಗೂ ಸಹ ಡಿಕ್ಕಿಪಡಿಸಿ ಕಾರಿನ ಮೇಲೆ ಮಗುಚಿಕೊಂಡ ಪರಿಣಾಮ, ಕಾರಿನಲ್ಲಿದ್ದ ಆಶಿಕ್, ಮಿನಾಜ್ ಹಾಗೂ ಯಾಸಿನ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಲ್ಲದೆ ಫಿರ್ಯಾದಿ ಸೇರಿ 6 ಜನರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಫಿ ವ್ಯಾಪಾರಿ ನಾಪತ್ತೆ, ಪ್ರಕರಣ ದಾಖಲು:


     ನಾಪೋಕ್ಲು ಠಾಣಾ ಸರಹದ್ದಿನ ಕಡಂಗ ಗ್ರಾಮದ ನಿವಾಸಿ ಶ್ರೀಮತಿ ಹಸೀನಾ ಎಂಬವರ ಗಂಡ ಮುನೀರ್ ಎಂಬವರು ಕಾಫಿ ವ್ಯಾಪಾರ ಮಾಡುತ್ತಿದ್ದು ದಿನಾಂಕ 24-5-2016 ರಂದು ಬೆಳಿಗ್ಗೆ 11-00 ಗಂಟೆಗೆ ಸಲಾಂ ಎಂಬವರೊಂದಿಗೆ ಬೈಕಿನಲ್ಲಿ ಚೇಲಾವರ ಗ್ರಾಮಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ಶ್ರೀಮತಿ ಹಸೀನಾ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತು ಕುಯ್ದು ವ್ಯಕ್ತಿ ಕೊಲೆ:

     ಕೊಡಗು ಜಲ್ಲೆಯ ಅರಪಟ್ಟು ಗ್ರಾಮದ ನಿವಾಸಿ ಎಸ್.ಎಂ. ನಸೀರ್ ರವರ ಸಂಬಂಧಿಯಾದ ಮುನೀರ್ ಎಂಬುವರು ದಿನಾಂಕ 24-5-2016 ರಂದು ಬೆಳಿಗ್ಗೆ 11-00 ಗಂಟೆಗೆ ಸಲಾಂ ಎಂಬುವರೊಂದಿಗೆ ಬೈಕ್‍ನಲ್ಲಿ ಚೇಲಾವರದ ಕಡೆಗೆ ಹೋಗಿದ್ದು ನಂತರ ಸಲಾಂ ಒಬ್ಬನೆ ವಾಪಾಸ್ಸು ಬಂದಿದ್ದು ಮುನೀರ್ ಚೇಲಾವರದಿಂದ ಬಾರದೇ ಇರುವ ಕಾರಣ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮುನೀರನ ಹೆಂಡತಿ ಯವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾದ ಮುನೀರ್ ನನ್ನು ಹುಡುಕಿದಲ್ಲೂ ಸದರಿ ಸಲಾಂ ಮುನೀರ್ ನನ್ನು ಕಬ್ಬೆ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕತ್ತಿಯಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿ ಬೆಟ್ಟದಿಂದ ಕೆಳಗೆ ಎಸೆದಿರುವ ವಿಚಾರ ಸ್ವತ: ಸಲಾಂ ತಿಳಿಸಿದ್ದು, ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಮೈಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ:
     ನಾಪೋಕ್ಲು ಠಾಣಾ ಸರಹದ್ದಿನ ಕೋಕೇರಿ ಗ್ರಾಮದ ಚೆರುವಾಳಂಡ ಮಿಟ್ಟು ತಿಮ್ಮಯ್ಯ ರವರ ಲೈನು ಮನೆಯಲ್ಲಿ ವಾಸವಿರುವ ಫಿರ್ಯಾದಿ ಶ್ರೀಮತಿ ಲತಾ ರವರು, ಸುಮಾರು 4 ವರ್ಷದಿಂದ ಗಂಡ ಮತ್ತು ಮಕ್ಕಳೊಂದಿಗೆ ಮಿಟ್ಟುರವರ ಲೈನು ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದು ಗಂಡ ಸತೀಶನಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ 24-05-2016 ರಂದು ಸದರಿಯವರು ವಿಪರೀತ ಮಧ್ಯಪಾನ ಮಾಡಿಕೊಂಡು ಬಂದು ರಾತ್ರಿ 8-00 ಗಂಟೆಗೆ ಅಂಗಳದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25-05-2016 ರಂದು ರಾತ್ರಿ 10-30 ಗಂಟೆಗೆ ಮೃತಪಟ್ಟಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.
Vartika Katiyar, IPS

Thursday, May 26, 2016


ಪತ್ನಿ ಮೇಲೆ ಗಂಡನಿಂದ ಹಲ್ಲೆ ಪ್ರಕರಣ ದಾಖಲು:

     ಮದ್ಯಪಾನ ಮಾಡಿ ತನ್ನ ಹೆಂಡತಿಗೆ ಕಿರುಕುಳ ನೀಡಿ ಹಲ್ಲೆನೆಸಿರುವ ಘಟನೆ ಮಡಿಕೇರಿ ಸಮೀಪದ ಮೇಘತ್ತಾಳು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಘತ್ತಾಳು ಗ್ರಾಮದ ನಿವಾಸಿ ಶ್ರೀಮತಿ ಕೆ.ಯು. ಮೋಹನಾಕ್ಷಿ ಎಂಬವರು ಸುಮಾರು 3-4 ವರ್ಷಗಳ ಹಿಂಡೆ ಮೇಘತ್ತಾಳು ಗ್ರಾಮದ ಪವನ್ ರವರನ್ನು ಮದುವೆಯಾಗಿದ್ದು ಆಕೆಯ ಗಂಡ ಪವನ್ ಪ್ರತಿದಿನವು ಕುಡಿದು ಬಂದು ಆಕೆಯೊಂದಿಗೆ ಜಗಳಮಾಡುತ್ತಿದ್ದು ಇದೇ ಕಾರಣದಿಂದ ಸದರಿ ಮೊಹನಾಕ್ಚಿ ನಾಲ್ಕು ತಿಂಗಳಿಂದ ತನ್ನ ತಂದೆ ಮನೆಯಲ್ಲಿ ಇದ್ದು ದಿನಾಂಕ 25-5-2016 ರಂದು ತನ್ನ ತಂದೆಯೊಂದಿಗೆ ತಮ್ಮ ಮನೆಗೆ ಹೋದ ಸಂದರ್ಭದಲ್ಲಿ ಆಕೆಯ ಗಂಡ ಪವನ್, ಮಾವ ದುದ್ರಪ್ಪ ಮತ್ತು ಅತ್ತೆ ನೀಲಮ್ಮನವರುಯ ಸೇರಿ ಫಿರ್ಯಾದಿ ಕೆ.ಯು. ಮೊಹನಾಕ್ಷಿ ಮತ್ತು ಆಕೆಯ ತಂದೆಯವರನ್ನು ತಡೆದು ಅವಾಚ್ಯ ಶಬ್ಬಗಳಿಂದ ಬೈದು ಕೈಗಳಿಂದ ಇಬ್ಬರ ಮೇಲೂ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನುತ್ತೀರ್ಣಗೊಂಡ ವಿದ್ಯಾರ್ಥಿ ಆತ್ಮಹತ್ಯೆ:

     ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಗೋಣಿಕೊಪ್ಪ ಠಾಣಾ ಸರಹದ್ದಿನ ಬಿ ಶೆಟ್ಟಿಗೇರಿ ಗ್ರಾಮದ ನಿವಾಸಿ ಪಿರ್ಯಾದಿ ನಂದಕುಮಾರ್ ಎಂಬವರ ಮಗ ಪ್ರಾಯ 19 ವರ್ಷದ ರಾಜಪ್ಪನು 2ನೇ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದ್ವಿತೀರ ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣ ಗೊಂಡ ಹಿನ್ನೆಲೆಯಲ್ಲಿ ಬೇಸರಗೊಂಡು ದಿನಾಂಕ 25-05-2016ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಮಯ 10,30 ಗಂಟೆಯಿಂದ 11.00 ಗಂಟೆಯ ಒಳಗೆ ವಾಸದ ಮನೆಯ ಮಲಗುವ ಕೋಣೆಯಲ್ಲಿ ಪ್ಯಾನ್‌‌ ಅಳವಡಿಸಲು ನಿರ್ಮಿಸಿದ ಕಬ್ಬಣಿದ ಕೊಂಡಿಗೆ ವೇಲ್‌‌ನಿಂದ ಕುತ್ತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಬೈಕ್ ಡಿಕ್ಕಿ ತೀವ್ರವಾಗಿ ಗಾಯಗೊಂಡ ಸವಾರ:

     ಚಲಿಸುತ್ತಿದ್ದ ಲಾರಿಗೆ ಹಿಂಬದಿಗೆ ಬೈಕ್ ಸವಾರನೋರ್ವ ಬೈಕ್ ಡಿಕ್ಕಿಪಡಿಸಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ನಡೆದಿದೆ. ದಕ್ಚಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ಚಂದ್ರಕಿರಣ್ ಎಂಬವರು 25-5-2016 ರಂದು ತಮ್ಮ ಈಚರ್ ಲಾರಿಯಲ್ಲಿ ಮಡಿಕೇರಿ ಯಿಂದ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಳೇಕಾಡು ಎಸ್ಟೇಟ್ ಹತ್ತಿರ ಆ್ಯಂಡಿ ಮೋಹನ್ ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾರೂಕತೆಯಿಂದ ಚಾಲಿಸಿಕೊಂಡು ಲಾರಿಯ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಆತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.