Saturday, May 7, 2016

ವ್ಯಕ್ತಿಯ ಮೇಲೆ ಮತ್ತೊಬ್ಬನಿಂದ ಹಲ್ಲೆ:

      ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ನ್ಯೂ ಮುನಿಲಿಪಾಲಿಟಿ ನಿವಾಸಿ ಪಿರ್ಯಾದಿ ಅನ್ಸರ್ ಎಂಬವರು ದಿನಾಂಕ 30-4-2016 ರಂದು ಮಸೀದಿಯ ಮುಂಭಾಗದ ರಸ್ತೆಯಲ್ಲಿತೆರಳುತ್ತಿರುವಾಗ್ಗೆ ಆರೋಪಿ ಅಸೀಪ್ ಎಂಬವರು ಅನ್ಸರ್ ರವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿರುತ್ತಾರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ವ್ಯಕ್ತಿ ಹಲ್ಲೆ, ಕೊಲೆ ಬೆದರಿಕೆ:

      ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆ ಗ್ರಾಮದ ನಿವಾಸಿಯಾದ ಅಸೀಫ್ ಎಂಬವರು ದಿನಾಂಕ 30.04.2016ರಂದು ಬೆಳಿಗ್ಗೆ ಸಮಯ 07.00 ಗಂಟೆಯ ಸಮಯದಲ್ಲಿ ಅವರ ಮನೆಯ ಹತ್ತಿರ ಆರೋಪಿ ಅನ್ಸರ್ ೆಂಬಾತ ಬಂದು ಅಸೀಫ್ ನವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಅವರ ಹೆಂಡತಿ ಮತ್ತು ಮಕ್ಕಳಿಗೆ ಹೀನಾ ಮಾನವಾಗಿ ಬೈಯ್ದಿರುವುದಾಗಿದೆ ಅಲ್ಲದೆ ನೀನು ಹಾಸನಕ್ಕೆ ಬಾ ನಿನ್ನ ಕೈ ಕಾಲು ಕಡಿಸುತ್ತೇನೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆಯನ್ನು ಹಾಕಿರುವುದಾಗಿನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಣದ ವಿಚಾರದಲ್ಲಿ ವ್ಯಕ್ತಿಗೆ ವಂಚನೆ:

      ಮಡಿಕೇರಿ ನಗರ ನಿವಾಸಿ ಫಿರ್ಯಾದಿ ಪೂವಣ್ಣ ಎಂಬವರು 2014ರಲ್ಲಿ ಮಾಚಯ್ಯ ಎಂಬವರಿಂದ 10ಲಕ್ಷ ರೂಗಳನ್ನು ಸಾಲವಾಗಿ ಪಡೆದುಕೊಂಡು ಅದಕ್ಕೆ 4 ಖಾಲಿ ಚೆಕ್ ಗಳನ್ನು ಆದಾರವಾಗಿ ನೀಡಿದ್ದು, ದಿನಾಂಕ 3-11-2014 ರಂದು ಪಿರ್ಯಾದಿಯವರು ತಾವು ಪಡೆದ ಸಾಲದ ಹಣ 12.5 ಲಕ್ಷ ಗಳನ್ನು ಮಾಚಯ್ಯನವರಿಗೆ ವಾಪಾಸು ನೀಡಿರುತ್ತಾರೆ. ಆದಾಗ್ಯು ಸದರಿ ಮಾಚಯ್ಯನವರು ಪುನ: ಹಣಕ್ಕಾಗಿ ಫಿರ್ಯಾದಿಯಿಂದ ಪಡೆದ ಚೆಕ್ ನಲ್ಲಿ 30 ಲಕ್ಷ ಹಣವನ್ನು ನಮೂದಿಸಿ ಮಡಿಕೇರಿ ನ್ಯಾಯಾಲಯದಲ್ಲಿ ಫಿರ್ಯಾದಿ ವಿರುದ್ದ ಖಾಸಗಿ ದೂರನ್ನು ನೀಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.